ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೩೧ ನೇ ಸಾಲು:
*'''ಪದಬಂಧು''' ` 2013ರ ಅಕ್ಟೋಬರ್ ತಿಂಗಳಿನಲ್ಲಿ ಅ.ನಾ.ಪ್ರಹ್ಲಾದರಾವ್ ಅವರ ಅಭಿನಂದನಾ ಸಮಾರಂಭದಲ್ಲಿ ಹೊರ ತಂದ ಸಂಭಾವನಾಗ್ರಂಥ. ಕವಿಗಳಾದ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಡಾ.ದೊಡ್ಡರಂಗೇಗೌಡ; ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್; ಲೇಖಕರಾದ ಜಾಣಗೆರೆ ವೆಂಕಟರಾಮಯ್ಯ, ನಾರಾಯಣ ರಾಯಚೂರ್; ಚಲನಚಿತ್ರರಂಗದ ದಿಗ್ಗಜರಾದ ಕೆ.ಎಸ್.ಎಲ್.ಸ್ವಾಮಿ, ಎಸ್.ಶಿವರಾಮ್, ನಾಗಾಭರಣ, ವಿ.ಮನೋಹರ್, ಕೆ.ಕಲ್ಯಾಣ್; ಪತ್ರಕರ್ತರಾದ ವೆಂಕಟನಾರಾಯಣ, ಖಾದ್ರಿ ಅಚ್ಚುತನ್, ಎ.ಎಸ್.ನಾರಾಯಣರಾವ್; ಗಾಯಕರಾದ ಶ್ರೀಮತಿ ಚಂದ್ರಿಕಾ ಗುರುರಾಜ್, ಕಿಕ್ಕೇರಿ ಕೃಷ್ಣಮೂರ್ತಿ ಮುಂತಾದ ಹಿರಿಯರು, ಸ್ನೇಹಿತರು, ಕುಟುಂಬ ಸದಸ್ಯರೂ ಸೇರಿದಂತೆ ಸುಮಾರು 80 ಮಂದಿ ಅ.ನಾ.ಪ್ರಹ್ಲಾದರಾವ್ ಅವರ ವ್ಯಕ್ತ್ತಿತ್ವವನ್ನು ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಕೆ.ಆರ್.ನರಸಿಂಹನ್, ಕರ್ನಾಟಕ ಗ್ಯಾಜೆಟಿಯರ್ನ ನಿವೃತ್ತ ಹಿರಿಯ ಸಂಪಾದಕರಾದ ಎಸ್.ಎ.ಜಗನ್ನಾಥ ಹಾಗೂ ಹಿರಿಯ ಪತ್ರಕರ್ತರಾದ ವೈ.ಜಿ.ಗಿರಿಶಾಸ್ತ್ರಿ ಸಂಪಾದಕೀಯ ಮಂಡಳಿಯಲ್ಲಿರುತ್ತಾರೆ.
*'''ಶಾಂತಾ ಹುಬ್ಳೀಕರ್''' ರಾಷ್ಟ್ರೋತ್ಥಾನ ಪರಿಷತ್ತು 2014ರಲ್ಲಿ ಹೊರ ತಂದ 50 ಹೊತ್ತಿಗೆಗಳ `ಭಾರತ ಭಾರತಿ' ಪುಸ್ತಕಮಾಲೆಯಲ್ಲಿ ಅ.ನಾ.ಪ್ರಹ್ಲಾದರಾವ್ ಅವರು 20ನೆಯ ಶತಮಾನದ 30-40ರ ದಶಕದಲ್ಲಿ ಹಿಂದಿ ಹಾಗೂ ಮರಾಠಿ ಚಲನಚಿತ್ತರಂಗದಲ್ಲಿ ಪ್ರಖ್ತಾತಗೊಂಡಿದ್ದ ನಟಿ ಕನ್ನಡತಿ ಶಾಂತಾ ಹುಬ್ಳೀಕರ್ ಅವರನ್ನು ಕುರಿತಂತೆ ಕಿರು ಪುಸ್ತಕ ರಚಿಸಿದ್ಧಾರೆ.
*ದಣಿವಿಲ್ಲದ ಧಣಿ: ಬಿ.ಆರ್.ಪಂತುಲು '''ಕನ್ನಡದ ಮೇರು ನಿರ್ದೇಶಕ, ನಿರ್ಮಾಪಕ, ನಟ ಬಿ.ಆರ್.ಪಂತುಲು ಅವರನ್ನು ಕುರಿತಂತೆ ಲೇಖಕ ಅ.ನಾ.ಪ್ರಹ್ಲಾದರಾವ್ ರಚಿಸಿರುವ `ದಣಿವಿಲ್ಲದ ಧಣಿ` ಪುಸ್ತಕವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ್ದು. ದಿನಾಂಕ 15.11.206ರಂದುಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ . ಖ್ಯಾತ ಕಲಾವಿದೆ ಪದ್ಮಶ್ರಿ ಡಾ. ಭಾರತಿ ವಿಷ್ಣುವರ್ಧನ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಲೇಖಕ, ಪತ್ರಕರ್ತ   ಶ್ರೀ ಜೋಗಿ (ಗಿರೀಶ್ ರಾವ್) ಪುಸ್ತಕ ಕುರಿತು ಮಾತನಾಡಿದರು. ನಿವೃತ್ತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಶಿಕ್ಷಣ ತಜ್ಞ ವೋಡೆ ಕೃಷ್ಣ ಪಾಲ್ಗೊಂಡಿದ್ದರು.'''
* '''ಅ.ನಾ.ಪ್ರಹ್ಲಾದರಾವ್ ರಚಿಸಿರುವ ತಲಾ 100 ಪದಬಂಧಗಳನ್ನು ಹೊಂದಿದ, ಮೆದುಳಿಗೆ ಕಸರತ್ತು ನೀಡುವ ವಿಭಿನ್ನವಾದ 5 ಪದಬಂಧ ಪುಸ್ತಕಗಳು 2017ರ ಜನವರಿ 16 ಬಿಡುಗಡೆಗೊಂಡವು. ಬೆಂಗಳೂರಿನ ಬಸವನಗುಡಿ ಬಿ.ಪಿ.ವಾಡಿಯ ರಸ್ತೆಯಲ್ಲಿರುವ ವಾಡಿಯ ಸಭಾಂಗಣದಲ್ಲಿ ಸುಪ್ರಸಿದ್ಧ ಕವಿಗಳಾದ ಪ್ರೊ.ದೊಡ್ಡರಂಗೇಗೌಡ ಅವರು ವಸಂತ ಪ್ರಕಾಶನ ಸಂಸ್ಥೆ ಹೊರತಂದ ಪದಸಂಪದ, ಪದವ್ಯೂಹ, ಪದಜಾಲ, ಪದಜಗ ಮತ್ತು ಪದರಂಗ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಪ್ರಸಿದ್ಧ ವಿಮರ್ಶಕರಾದ ಡಾ.ಜಿ.ಬಿ.ಹರೀಶ್ ಪದಬಂಧ ಪುಸ್ತಕಗಳನ್ನು ಕುರಿತು ಮಾತನಾಡಿದರು. ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ ಅವರು ಸಮಾರಂಭದ ಅಧ್ಯಕ್ಷತೆವಹಿಸಿದ್ದರು.'''
==ಪ್ರಶಸ್ತಿ ಪುರಸ್ಕಾರಗಳು==
ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ `ಪ್ರಜಾರತ್ನ`, `ಪದಬಂಧಬ್ರಹ್ಮ`, `ಪದಬಂಧಸಾಮ್ರಾಟ್` ಮುಂತಾದ ಬಿರುದುಗಳನ್ನು ನೀಡಿವೆ. `ವಿಶ್ವೇಶ್ವರಯ್ಯಪ್ರಶಸ್ತಿ`, `ಕರುನಾಭೂಷಣ` `ಕರ್ನಾಟಕ ವಿಭೂಷಣ` ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿಗಳೇ ಅಲ್ಲದೆ ಪ್ರತಿಷ್ಠಿತ `ಆರ್ಯಭಟ`, ಬೆಂಗಳೂರು ಮಹಾನಗರಪಾಲಿಕೆ ಕೊಡಮಾಡುವ `ಕೆಂಪೇಗೌಡ ಪ್ರಶಸ್ತಿ` `ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸದ್ಬಾವನ ಪ್ರಶಸ್ತಿ, `ಶ್ರೀಕಾಣ್ವಶ್ರೀ`, `ಶಿಂಷಾಶ್ರೀ` `ಬೆಂಗಳೂರು ರತ್ನ`, `ಹಂಸರತ್ನ` ಮುಂತಾದ ಪ್ರಶಸ್ತಿಗಳು ಸಂದಿವೆ.
*'''ಅನಾಪ್ರ ಅರವತ್ತು''': ವಿಶ್ವ ಇಂದು `ಪದಬಂಧ ಶತಮಾನೊತ್ಸವ` ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕನ್ನಡದ ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ 60 ವಸಂತಗಳನ್ನು ದಾಟಿ ಮುನ್ನಡಿ ಇಟ್ಟಿದ್ದಾರೆ. ಕನ್ನಡ ಪತ್ರಿಕೆಗಳಿಗೆ ಕಳೆದ 30 ವರ್ಷಗಳಿಂದ ಪದಬಂಧ ಸಿದ್ಧಪಡಿಸುತ್ತಾ ಬಂದಿರುವ ಅ.ನಾ.ಪ್ರಹ್ಲಾದರಾವ್ ಇಲ್ಲಿಯವರೆವಿಗೂ 40,000 ಪದಬಂಧಗಳನ್ನು ರಚಿಸಿದ್ದು, ಇವುಗಳಿಗಾಗಿ ಸುಮಾರು 12 ಲಕ್ಷ ಸುಳುಹುಗಳನ್ನು ನೀಡಿದ್ದ್ದಾರೆ. ಈ ಸಂಬಂಧ 2013ರ ಅಕ್ಟೋಬರ್ 7 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನದ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಪದಬಂಧ ಕಮ್ಮಟ, ಸಂಜೆ ಅನಾಪ್ರ ರಚಿಸಿದ ಗೀತೆಗಳ ಗಾಯನ, ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆ, ಸಂಭಾವನಾಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಪಂಚದಲ್ಲಿ ಮೊದಲ `ಪದಬಂಧ ಶತಮಾನೋತ್ಸವ` ಆಚರಿಸುತ್ತಿರುವ ಹೆಗ್ಗಳಿಕೆ ಕನ್ನಡಿಗರದು. ಕವಿ, ವಿಧಾನ ಪರಿಷತ್ ಸದಸ್ಯರಾದ ಪ್ರೊ.ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಲನಚಿತ್ರ ನಿರ್ದೇಶಕ ನಾಗಣ್ಣ, ಚಲನಚಿತ್ರ ಸಾಹಿತಿಗಳಾದ ವಿ.ಮನೋಹರ್ ಮುಖ್ಯ ಅತಿಥಿಗಳಾಗಿದ್ದರು. ಸಂಜೆ 5 ಗಂಟೆಗೆ ಅನಾಪ್ರ ವಿರಚಿತ ಗೀತೆಗಳನ್ನು ಎಲ್.ಎನ್.ಶಾಸ್ತ್ರಿ, ಚಂದ್ರಿಕಾ ಗುರುರಾಜ್, ಆಕಾಂಕ್ಷ ಬಾದಾಮಿ, ಹೇಮಾಪ್ರಸಾದ್, ಅನುಪಮಾರಾವ್, ರಮ್ಯ ಹಾಡಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ `ಅನಾಪ್ರ ಅರವತ್ತು` ಸಂಭಾವನಾಗ್ರಂಥ `ಪದಬಂಧು` ಬಿಡುಗಡೆ ಮಾಡಿದರು. ಲೋಕಸಭಾ ಸದಸ್ಯರಾದ ಅನಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳು ಬಿಡುಗಡೆಗೊಂಡವು. `ಪದಕ್ರೀಡೆ` `ಪದಲೋಕ` `ಪ್ರಾಣಪದಕ` ಮತ್ತು `ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಪುಸ್ತಕಗಳನ್ನು ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್, ನಿರ್ಮಾಪಕ-ನಟ ಎಸ್.ಶಿವರಾಂ ಮತ್ತು ಚಲನಚಿತ್ರ ನಿರ್ದೇಶಕ ನಾಗಾಭರಣ ಲೋಕಾರ್ಪಣೆ ಮಾಡಿದರು.
* ಕನ್ನಡದಲ್ಲಿ ೩೦33 ಸಾವಿರ ಪದಬಂಧ ರಚಿಸಿ ದಾಖಲೆ ಮಾಡಿರುವ ಅ.ನ.ಪ್ರಹ್ಲಾದ್‌ರಾವ್‌ ಅವರ ಹೆಸರನ್ನು ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರಿಸಲಾಗಿದೆ. ಈವರೆಗೆ ಅತಿಹೆಚ್ಚು ಪದಬಂಧ ರಚಿಸಿರುವ ಹಿನ್ನೆಲೆಯಲ್ಲಿ ಅ.ನ.ಪ್ರಹ್ಲಾದ್‌ರಾವ್‌ ಅವರಿಗೆ ಈ ಗೌರವ ಸಂದಿದೆ.<ref>[http://www.udayavani.com/kannada/news/23685/%E0%B2%B2%E0%B2%BF%E0%B2%AE%E0%B3%8D%E0%B2%95%E0%B2%BE-%E0%B2%AC%E0%B3%81%E0%B2%95%E0%B3%8D%E2%80%8C-%E0%B2%86%E0%B2%AB%E0%B3%8D-%E0%B2%B0%E0%B3%86%E0%B2%95%E0%B2%BE%E0%B2%B0%E0%B3%8D%E0%B2%A1%E0%B3%8D%E2%80%8C%E0%B2%97%E0%B3%86-%E0%B2%AA%E0%B3%8D%E0%B2%B0%E0%B2%B9%E0%B3%8D%E0%B2%B2%E0%B2%BE%E0%B2%A6%E0%B2%B0%E0%B2%BE%E0%B2%B5%E0%B3%8D%E2%80%8C#rGqGE1BA0zsv0I1l.99 ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಪ್ರಹ್ಲಾದರಾವ್‌ - ಉದಯವಾಣಿ,೨೩ಜನವರಿ೨೦೧೫]</ref> ಮತ್ತು <[(http://www.limcabookofrecords.in/record-detail.aspx?rid=1027]> 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕಗಳಲ್ಲಿ ಸತತವಾಗಿ ಇವರ ಹೆಸರು ಸೇರ್ಪಡೆಗೊಂಡಿರುವುದು ವಿಶೇಷವಾಗಿದೆ.
==ಹೊರಸಂಪರ್ಕಗಳು==
*http://www.thehindubusinessline.com/2001/05/14/stories/101444g3.htm
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ