ಶ್ರೀ. ನಾರಾಯಣ ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
 
ಹಾಗೆ ಅವರು ಶುರುಮಾಡಿದ ಮೊಟ್ಟಮೊದಲ, ಲಿಂಗ ಪ್ರತಿಷ್ಠಾಪನೆ ೧೮೮೮ ರಲ್ಲಿ, ಅರವೀಪುರಂ ಎಂಬ ಪ್ರದೇಶದಲ್ಲಿ ನಡೆಯಿತು. ೧೯೨೧ ರಲ್ಲಿ ಮತ್ತೊಂದು ಹೊಸ ವಿಧಾನವನ್ನು ಜನರ ಸಮ್ಮುಖದಲ್ಲಿ ತಂದರು. ಸಮಾಜದ ವರ್ಗಗಳನ್ನೆಲ್ಲಾ ಒಂದೆಡೆ ಸೇರಿಸಿ, 'ಮಿಶ್ರ ಭೋಜನ,' ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ವೀರಸಂತನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಸಹೋದರ ಸಮ್ಮೇಳನ ದ ಏರ್ಪಾಡಿನ ಮೂಲಕ ಸಾಧ್ಯವಾಯಿತು. ಅಸ್ಪೃಷ್ಯರನ್ನು ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಂಘಟಿಸಿ, ಪರೋಪಕಾರವೇ ತಮ್ಮ ಜೀವನದ ಧ್ಯೇಯವೆಂದು ಸಾರಿದರು. ಕೆಲವರು ಮತಾಂತರ, ಇದಕ್ಕೆ ಸಮಾಧಾನವೆನ್ನುವ ಮಾತಾಡಿದರು. ಆದರೆ, ನಾರಾಯಣರು, ಇದಕ್ಕೆ ಒಪ್ಪಲಿಲ್ಲ. ಆಲ್ವಾಯಿಯೆಂಬಲ್ಲಿ , ಫೆಬ್ರವರಿ, ೧೯೨೪ ರಲ್ಲಿ, ೨ ದಿನಗಳ ಸರ್ವಧರ್ಮಗಳ ಸಮ್ಮೇಳನ ವನ್ನು ಆಯೋಜಿಸಿದರು. ನಾರಾಯಣಗುರುಗಳಿಗೆ ಬ್ರಹ್ಮ ವಿದ್ಯಾಲಯವೆಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ, ಸರ್ವಧರ್ಮಗಳ ಬಗ್ಗೆ, ಅಧ್ಯಯನ ಮಾಡುವ ಒಂದು ಅಭಿಯಾನವನ್ನು ಪ್ರಾರಂಭಿಸಬೇಕೆಂಬ ಮಹದಾಶೆಯಿತ್ತು. ಆದರೆ, ಅದು, ಅವರ ಜೀವಿತದಲ್ಲಿ ಸಾಕಾರಗೊಳ್ಳಲಿಲ್ಲ. ಗುರುಗಳ ಮರಣದ ಬಳಿಕ, ಅವರ ಹಿಂಬಾಲಕರು ಆ ಕನಸನ್ನು ಸಾಕಾರಗೊಳಿಸಿದರು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸಮಾಡಿ ಅಪಾರ ಅನುಭವಗಳನ್ನು ಹೊಂದಿ ಹೋದೆಡೆಯಲ್ಲೆಲ್ಲಾ ವಿಶ್ವ ಮಾನವತ್ವವನ್ನು ಬೋಧಿಸಿದರು. ಸನ್ಯಾಸಿಗಳು, ಮಹರ್ಷಿಗಳ ಜೊತೆಗೆ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ಹೇಳುತ್ತಿದ್ದ ವಾಕ್ಯಗಳು ಇಂದಿಗೂ ಅತ್ಯಂತ ಅರ್ಥಗರ್ಭಿತವಾಗಿವೆ. " ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು ; ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ" ಆದ್ದರಿಂದ ದೇಶಸೇವೆ, ಮತ್ತು ಈಶಸೇವೆಗಳ ಸಮನ್ಯವೇ ನಮ್ಮ ಗುರಿಯಾಗಿರಬೇಕೆಂದು ತಮ್ಮ ಜೀವನದುದ್ದಕ್ಕೂ ಒತ್ತಿ-ಒತ್ತಿ ಹೇಳುತ್ತಿದ್ದರು.<ref>{{cite web|title=Stamps 1947-2000|url=http://postagestamps.gov.in/Stamps_List.aspx|website=Postage Stamps|publisher=India Post|accessdate=7 June 2015}}</ref><ref>{{cite web|title=All registered stamps issued by Sri Lanka: LK032.09|url=http://www.wnsstamps.post/en/stamps/LK032.09|website=Universal Postal Union|accessdate=12 May 2015}}</ref>
 
==ಶಿವಗಿರಿ ಮತ್ತು ನಾರಾಯಣ ಗುರುಗಳು==
 
ವರ್ಕಲ ಬೆಟ್ಟಗಳನ್ನು `ಶಿವಗಿರಿ' ಎಂದು ಕರೆಯಲಾಗುತ್ತದೆ. ವರ್ಕಲ ತ್ರಿವೇಂದ್ರಂನಿಂದ ಉತ್ತರಕ್ಕೆ ೨೦ ಮೈಲುಗಳ್ಷ್ಟು ದೂರವಿರುವ ಕರಾವಳಿ ತೀರದ ಪಟ್ಟಣವಾಗಿದೆ. ಷಿವಗಿರಿಯು ಶಿವ ಮತ್ತು ಶಕ್ತಿಗೆ ಅಂದರೆ ಶಾರದಾ ದೇವಿಗೆ ಅರ್ಪಿತವಾಗಿರುವ ಪವಿತ್ರ ಕ್ಷೇತ್ರ. ಗುರುಗಳು ದಕ್ಷಿಣ ಕಾಶಿಯಾದ ವರ್ಕಲಕ್ಕೆ ಬಂದು ೧೯೦೪ರಲ್ಲಿ ಧಾರ್ಮಿಕ ಮಠವೊಂದನ್ನು ಸ್ಥಾಪಿಸಿದರು. ಎಸ್. ಎನ್. ಡಿ. ಪಿ. ಸ್ಥಾಪಿಸಿದ ೧೮ ವರ್ಷಗಳ ನಂತರ ೧೯೧೨ರಲ್ಲಿ ಶಿವಗಿರಿಯಲ್ಲಿ ಶಾರದಾ ದೇವಸ್ಥಾನವನ್ನು ಸ್ಥಾಪಿಸಿದರು. ಗುರುಗಳಿಗೆ ಎಲ್ಲ ಸಮುದಾಯದಿಂದ ಶಿಷ್ಯರಿದ್ದರು. ಹರಿಜನರೂ ಕೂಡಾ ಗೀತೆಯ ಶ್ಲೋಕಗಳನ್ನು ಪಠಿಸಬಹುದಿತ್ತು. ಉಪನಿಷತ್ತುಗಳನ್ನು ಪಠಿಸಬಹುದಿತ್ತು; ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬಹುದಿತ್ತು. ಗುರುಗಳ ದೃಷ್ಟಿಯಲ್ಲಿ ಬಡವರ, ದುರ್ಬಲರ ಸೇವೆಯೇ ದೇವರ ಸೇವೆಯಾಗಿತ್ತು. ಎಸ್. ಎನ್. ಡಿ. ಪಿ. ಯನ್ನು ಬಸವಣ್ಣನ ಅನುಭವ ಮಟಪಕ್ಕೆ ಹೋಲಿಸಬಹುದಾಗಿದೆ.
 
==ಗುರುಗಳು ಮತ್ತು ಅದ್ವೈತ ಆಶ್ರಮ==
 
ಗುರುಗಳು ಶಿವಗಿರಿಯನ್ನು ಸ್ಥಾಪಿಸಿದ ಮೇಲೆ ಅಲವೇಯಿಗೆ ವಾಸ್ತವ್ಯವನ್ನು ಬದಲಾಯಿಸಿ ಅದನ್ನು ಪ್ರಧಾನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದರು. ಅವರ ಶ್ರೇಷ್ಠ ಗುರುಗಳಾದ ಶಂಕರಾಚಾರ್ಯರ ನೆನಪಿಗೆ ಅಲವೇಯಿಯಲ್ಲಿ ೧೯೧೩ರ್ಲ್ಲಿ ಅದ್ವೈತ ಆಶ್ರಮವನ್ನು ಸ್ಥಾಪಿಸಿದರು. ಅಲವೇಯಿ ಅದ್ವೈತ ಆಶ್ರಮವು ಸಂಸ್ಕೃತ ಮತ್ತು ಅದ್ವೈತ ತತ್ವ ಶಾಸ್ತ್ರವನ್ನು ಪ್ರಚಾರಪಡಿಸುವ ಮತ್ತು ಅಭ್ಯಸಿಸುವ ಕೇಂದ್ರವಾಯಿತು. ಗುರುಗಳು ೧೯೧೨ರಷ್ಟೊತ್ತಿಗೆ ತಮ್ಮ ಮುಖ್ಯ ಕಚೇರಿಯನ್ನು ಬದಲಾಯಿಸಿದರು. ಅವರು ಇನ್ನೂ ಮುಂದೆ ಉತ್ತರಕ್ಕೆ ಅಲೆದಾಡಿದರು. ಹಲವಾರು ತಾಸುಗಳ ಪ್ರವಾಸದ ನಂತರ ಕೇಪ್ ಕೊಮೋರಿನಿಂದ ಮಂಗಳೂರವರೆಗೆ ಅವರು ಎಲ್ಲವರಿಂದ ಗುರು ಎಂದು ಗೌರವಿಸಲ್ಪಟ್ಟರು. ಅವರು ಅಲವೇಯಿಯನ್ನು ತಮ್ಮ ವಾಸ ಸ್ಥಾನವನ್ನಾಗಿ ಮಾಡಿಕೊಡರು. ನದೀ ತೀರದಲ್ಲಿ ಒಣಗಿದ ತಾಳೆ ಗರಿಗಳಿಂದ ಮಾಡಿದ ಸರಳ ಮಾಡಿನಡಿಯಲ್ಲಿ ಅವರು ಪುನ್ಃ ಧ್ಯಾನದಲ್ಲಿ ಮಗ್ನರಾದರು.
 
==ನಾರಾಯಣ ಗುರುಗಳೌ ಮತ್ತು ಸಾಮಾಜಿಕ ಸುಧಾರಣೆಗಳು==
 
ಅಧ್ಯಾತ್ಮಿಕ ಸಾಧನೆಯಾದ ಬ್ರಹ್ಮನ್- ಆತ್ಮನ್ ಸಾಕ್ಷಾತ್ಕಾರದ ನಂತರವೂ ಗುರುಗಳು ಮಾನವ ಜನಾಂಗದ ಉನ್ನತಿಗಾಗಿ ಸಮಾಜ ಸೇವೆಯನ್ನು ಕೈಗೆತ್ತಿಕೊಂಡರು. ಎಸ್. ಎನ್. ಡಿ. ಪಿ. ಯ ಯೋಗಂ ಸಂಸ್ಥೆಯು ಶಿಕ್ಷಣ ಮತ್ತು ಗುರುಗಳ ಸಿದ್ಧಾಂತವಾದ ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವುದು, ಉತ್ತಮಿಸುವುದು, ವಿಶೇಷವಾಗಿ ಮೂಲ್ಭೂತಮಾನವ ಹಕ್ಕುಗಳ ಸಂರಕ್ಷಣೆಗಾಗಿ ಅಸ್ಪ್ರಶ್ಯತಾ ನಿರ್ಮೂಲ ಮಾಡುವುದು ಈ ಮುಂತಾದ ಗುರಿಗಳನ್ನು ಇಟ್ಟುಕೊಂಡಿತ್ತ್ರು. ಮೊದಲನೆಯದಾಗಿ ತನ್ನು ಆಧ್ಯಾತ್ಮಿಕ ಜ್ನಾನವನ್ನು ಶ್ರೀಮಂತಗೊಳಿಸಿಕೊಳ್ಖುವುದು ಮತ್ತು ಅದನ್ನು ಜನರ ಕಲ್ಯಾಣಭಿವೃದ್ಧಿಗಾಗಿ ಬಳಸಿಕೊಳ್ಳುವುದು. ಎರಡನೆಯ ಹೆಜ್ಜೆಯೆಂದರೆ ಜನರೊಂದಿಗೆ ವ್ಯಕ್ತಿಗತ ಸಂಪರ್ಕವನ್ನು ಹೊಂದಿರುವುದು. ನೊಂದ ಜನರ ಹೃದಯಗಳನ್ನು ಸಾಂತ್ವನದ ಮಾತುಗ್ಳಿಂದ ತಣಿಸುವುದು, ಅವರ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು.
ಕೊನೆಯದಾಗಿ ಅವರೆ ಚ್ಟುವಟಿಕೆಗಳು ಎಸ್. ಎನ್. ಡಿ. ಪಿ. ಯೋಗಮ್ ಮತ್ತು ಅಧ್ಯಾತ್ಮಿಕ ಅರಸುವಿಕೆಯಲ್ಲಿ ತೊಡಗಿರುವ ಶಿಷ್ಯರ ಆಮಂತ್ರಣಕ್ಕೆ ಸೀಮಿತಗೊಂಡವು. ೧೮೮೪ ರಿಂದ ೧೯೦೪ರವರೆಗೆ ಗುರುಗಳು ಅರುವಿಪ್ಪುರಮ್ ನ್ಲ್ಲಿ ವಾಸ್ತವ್ಯ ಹೂಡಿದರು. ಈ ಅವಧಿಯಲ್ಲಿಯೇ ಎಸ್. ಎನ್. ಡಿ. ಪಿ. ಯೋಗಮ್ ಸ್ಥಾಪನೆಯಾಯಿತು. ಯೋಗಮ್ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಳಿತಕ್ಲೂಳಗಾದ ಜನರ ಶಕ್ತಿಶಾಲಿ ದನಿಯಾಯಿತು. ಗುರುಗಳು ದುರ್ಬಲ ವರ್ಗದವರ ಏಳ್ಗೆಗೆ ಅದರಲ್ಲೂ ಹರಿಜನರ ಏಳ್ಘೆಗಾಗಿ ಸಮಾಜ ಸುಧಾರಕರಿಗೆ ಸರಿಯಾದ ನಿರ್ದೇಶನಗಳನ್ನು ನೀಡಿ ಉನ್ನತ ಆದರ್ಶಗಳನ್ನು ಪ್ರಚಾರ ಮಾಡಲು ಪ್ರೇರಣೆ ನೀಡಿದರು. ಬೋಡಕರಿಗೆ ಶಿಕ್ಷಣ, ಧರ್ಮ, ನೀತಿ ತತ್ವಗಳು ನೀತಿ, ನಿಯಮಗಳು, ಪದ್ಧತಿಗಳು ಉದ್ದಿಮೆ ಇವುಗಳ ಬಗ್ಗೆ ಒತ್ತು ನೀಡುವಂತೆ ಸೂಚಿಸಲಾಯಿತು. ಗುರುಗಳ ಸ್ಂದೇಶ ಹೀಗಿದೆ:` ಶಿಕ್ಷಣ ಪ್ಡೆಯಿರಿ; ನೀವು ಸ್ವತಂತ್ರರಾಗುತ್ತೀರಿ. ಸಂಘಟಿತರಾಗಿರಿ; ನೀವು ಬಲಿಷ್ಟರಾಗುತ್ತೀರಿ. ಔದ್ಯೋಗಿಕವಾಗಿಉದ್ದಿಮೆಗಳನ್ನು ಸ್ಥಾಪಿಸಿ; ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಗುರುಗಳು ತಾವು ಉದ್ದೇಶಿಸಿರುವ ಸಮಾಜ ಸುಧಾರಣೆ ಜನರಿಗೆ ತಲುಪುವಂತೆ `ವಿವೇಕೋದಯಮ್' ಎಂಬ ಮಾಸಿಕ ಪತ್ರಿಕೆಯನ್ನು ಹೊರತರುವಂತೆ ಸೂಚಿಸಿದರು. ೧೬ನೆ ಒಕ್ಟೋಬರ್ ೧೯೦೫ ರಂದು ಪರವುರ್ ನ್ ಸಭಯಲ್ಲಿ ಅಧ್ಯಕ್ಷತೆ ವಹಿಸಿ ಮದುವೆಯ ಸಮಾರಂಭಕ್ಕೆ ಕೆಲ್ವು ಹೊಸ ನಡೆಗಳನ್ನು ಪರಿಚಯಿಸಿದರು. ಮತ್ತು `ತಾಳಿಕೆಟ್ಟು', `ತಿರ್ಂಡು ಕಲ್ಯಾಣಮ್', ಅಂತಹ ಕೆಟ್ಟ ಸಾಂಪ್ರ್ದಾಯಗಳನ್ನು ನಿರ್ಮೂಲ್ನ ಮಾಡುವ್ಂತೆ ಕರೆ ಕೊಟ್ಟರು.
 
ತಾಳಿಕೆಟ್ಟು ಅಥವಾ ಮಿನ್ನು ಕೆಟ್ಟು ಅಥವಾ ಕೆಟ್ಟು ಕಲ್ಯಾಣಮ್ ಇದು ಹಿಂದುಳಿದ ವರ್ಗದವರಲ್ಲಿ ದುಂದು ವೆಚ್ಚಕ್ಕೆ ದಾರಿ ಮಾಡಿಕೊಡುವ ಅರ್ಥವಿಲ್ಲದ ಕೆಟ್ಟ ಸಂಪ್ರದಾಯ. ಇಂಥ ಹಲವಾರು ಸಂಪ್ರದಾಯಗಳ್ಲ್ಲಿ ತಾಳಿ ಕಟ್ಟುವ ಆಚರಣೆಯೂ ಒಂದು. ಒಂದು ಹೆಣ್ಣು ಮಗುವಿಗೆ ಸುಮಾರು ೫ ವರ್ಷ ತುಂಬಿದಾಗ ಪ್ರಾಯಕ್ಕೆ ಬರುವ ಮೊದಲೆ ಮಾಡುವ ಅಣಕು ಮದುವೆ ಇದಾಗಿದ್ದು, ಹುಡುಗಿಯ ಕೊರಳಿಗೆ ಒಬ್ಬ ಹುಡುಗ, ಕೆಲವೊಮ್ಮೆ ಯಾರಾದರೂ ಯುವಕನೊಬ್ಬ ತಾಳಿ ಕಟ್ಟುತ್ತಾನೆ. ಭವಿಷ್ಯದಲ್ಲಿ ಮದುವೆ ಮಾಡುತ್ತೇವೆ ಎಂಬುದರ ಸಂಕೇತವಾದ ಈ ಅಣಕು ಮದುವೆಗೆ ಯ್ವುದೇ ಕಾನೂನಿನ ಆಧಾರವಿಲ್ಲ. ಹೀಗೆ ತಾಳಿ ಕಟ್ಟಿದವನೇ ಮದುವೆಯಾಗುತ್ತಾನೆ ಎಂಬ ನಿಯಮವೇನೂ ಇಲ್ಲ. ನಿಜವಾದ ಮದುವೆಗೆ ಮಾಡುವಂತೆ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ.
 
ತಾಳಿ ಕಟ್ಟಿದ ನಂತರ ಹುಡುಗ ಅವನ ಪಾಡಿಗೆ ತನ್ನ ಜೊತೆಗಾರರೊಂದಿಗೆ ಹೋಗುತ್ತಾನೆ. ಆ ಹುಡುಗನಿಗೆ ಹುಡುಗಿಯ ಕಡೆಯವರು ಬೇಕಾದಷ್ಟು ಹಣ್, ಹೊಸ ಬಟ್ಟೆ, ತೆಂಗಿನ ಕಾಯಿಗಳನ್ನು ಕೊಡುತ್ತಾರೆ. ಹಬ್ಬದ ವಾತಾವರಣ, ಭೂಇ ಭೋಜನ, ಉಡುಗೊರೆ ಮುಂತಾದ ಕಾರ್ಯಕ್ರಮಗಳೆಲ್ಲ ವೈಭವದಿಂದಲೆ ನಡೆಯುತ್ತವೆ. ಹುಡುಗಿ ತನ್ನ ತವರು ಮನೆಗೆ ಹೋದಾಗ ತಾಳಿಯನ್ನು ತೆಗೆಯುತ್ತಾರೆ. ಮುಂದೆ ಋತುಮತಿಯಾದ ಬಳಿಕ ವರನನ್ನು ಹುಡುಕಿ ಮೊದ್ಲು ತಾಳಿ ಕಟ್ಟಿದವನೂ ಆಗಬಹುದು, ವ್ಯವಸ್ಥಿತವಾದ ನಿಜ ಮದುವೆಯನ್ನು ಏರ್ಪಡಿಸುತ್ತಾರೆ.
ಈ ಅರ್ಥಹೀನ, ಲಜ್ಜಾಸ್ಪದ ಆಚರಣೆಗಳನ್ನು ಗುರುಗಳು ವಿರೋಧಿಸಿದರು. ಶ್ರೀಮ್ಂತ ಮತ್ತು ಸಂಪ್ರದಾಯಸ್ಥರು ಇದು ಪ್ರತಿಷ್ಟೆಯ ಪ್ರಶ್ನೆ, ನಿಲ್ಲಿಸಿದರೆ ಸಮಾಜಕ್ಕೆ ಕೇಡುಂಟಾಗುತ್ತದೆ ಎಂಬ ವಾದವನ್ನು ಮುಂದಿಟ್ಟರೂ, ಕೇಳ್ದೇ ಗುರುಗಳು ಹೋರಾಟವನ್ನು ಮುಂದುವರಿಸಿದರು. ಎಸ್. ಎನ್. ಡಿ. ಪಿ. ಯೋಗಂ ನ ಮುಖವಾಣಿಯಾದ `ವಿವೇಕೋದಯಂ' ಪತ್ರಿಕೆಯ ಎಲ್ಲ ಸಂಚಿಕೆಗಳಲ್ಲೂ ಈ ಆಚರಣೆಯಿಂದಾಗುವ ಕೆಡುಕುಗಳನ್ನು ಪ್ರಕಟಿಸುತ್ತಲೇ ಬಂದರು.
೧೯೦೬ರಲ್ಲಿ ಚೇರ್ತಲ ತಾಲೂಕಿನ ದೊಡ್ಡ ಶ್ರೀಮಂತನೂ, ಗುರುಗಳ ಭಕ್ತನೂ ಆಗಿದ್ದ ಕೊಚ್ಚು ರಾಮನ್ ವೈದ್ಯರ್ ಎಂಬವರ ಕುಟುಂಬದವರಲ್ಲಿ ಓರ್ವ ಹುಡುಗಿಗೆ ತಾಳಿ ಕಟ್ಟುವ ಸಮಾರಂಭದ ಬಗ್ಗೆ ತಿಳಿದ ಗುರುಗಳು ಬಧಕಗಳ ಬಗ್ಗೆ ವವರಿಸಿ, ಈಗ ಇದನ್ನು ತ್ಯಜಿಸುವುದರಿಂದ ನಮ್ಮವರೆ ಮನಸ್ಸಿಗೆ ನೋವಾದರೂ ಮುಂದಿನ ಪೀಳಿಗೆ ಇದರ ಫಲವನ್ನು ಸಂತೋಷದಿಂದ ಅನುಭವಿಸಲಿ ಎಂದು ಪತ್ರ ಬರೆದರು. ಪತ್ರವನ್ನೋದಿದ ಕೊಚ್ಚು ರಾಮನ್ ವೈದ್ಯರು ತಾನು ಏರ್ಪಡಿಸಲು ನಿರ್ಧರಿಸಿದ ಸಮಾರಂಭವನ್ನು ರದ್ದುಪ್ಡಿಸಿದರು. ಹೀಗೆ ಒಬ್ಬ ವ್ಯಕ್ತಿಯ ಶಾಂತವಾದ ಕೆಲವು ಹಿತೋಪದೇಶದಿಂದ ಸಮಾಜದಲ್ಲಿ ಇಂತಹ ಪರಿವರ್ತನೆ ಯಾಗುವುದಾದರೆ, ಈ ಮಹಾಮಹಿಮನ ಅಸಾಮಾನ್ಯ ಶಕ್ತಿಯ ಅರಿವು ಯಾರಿಗಾದರೂ ಆಗದಿರಲು ಸಾಧ್ಯವೇ?
ಅಂತೆಯೇ ಅಳಿಯ ಸಂತಾನ ಪದ್ಧತಿಯ ಬಾಧಕಗಳನ್ನು ವಿವರಿಸಿ ಅದನ್ನು ತಡೆಹಿಡಿದ ಖ್ಯಾತಿ ಇವರದು. ಸೀಮಂತ ಕಾರ್ಯಕ್ರಮದಲ್ಲಿ ಆಗುವ ದುಂದು ವೆಚ್ಚಕ್ಕೆ ತಡೆ ಹ್ಶಾಕಿದರು. ವಿವಾಹ ವಿಚ್ಛೇದನ ಹಾಗೂ ಪುನರ್ರವಿವಾಹ ಅನಿವಾರ್ಯವಾದಲ್ಲಿ ಮಾಡಿಕೊಳ್ಳಬಹುದು ಎಂದರು. ಬಹು ಪತ್ನಿತ್ವ ಹಾಗೂ ಬಹು ಪತಿತ್ವ ಸಮಾಜಕ್ಕೆ ಹಿತವಲ್ಲ ಎಂದು ಅದಕ್ಕೂ ತಡೆಹಾಕಿದರು. ಸರಳ ವಿವಾಹಕ್ಕೆ ಒತ್ತು ನೀಡಿದರು. ಅಂತ್ಯ ಕ್ರಿಯೆಯಲ್ಲಿ ಮಾಡುವ ದುಂದು ವೆಚ್ಚಕ್ಕೆ ವಿರೋಧ ವ್ಯಕ್ತ ಪ್ಡಿಸಿದರು. ಹೊಸ ದೇವಸ್ಥಾನಗಳ ನಿರ್ಮಾಣವನ್ನು ವಿರೋಧಿಸಿದರು.
==ಮಹಿಳಾ ಶೋಷಣೆಯ ದುಷ್ಟ ಪದ್ಧತಿಯನ್ನು ನಿಲ್ಲಿಸಿದ ಒಂದು ಸನ್ನಿವೇಶ==
 
ಈಳವ ಮತ್ತಿತರ ನಿಮ್ನ ವರ್ಗದ ಸ್ತ್ರೀಯರು ಎದೆ ಭಾಗವನ್ನು ಕುಪ್ಪಸದಿಂದ ಮುಚ್ಚದೆ, ಉಚ್ಚ ಜಾತಿಯವರು ಎದುರಾದಾಗ, ಸೆರಗು ಸರಿಸಿ, ಅವರಿಗೆ ಗೌರವ ತೋರಿಸುವ ಕೆಟ್ಟ ಸಂಪ್ರದಾಯವಿತ್ತು. ಇದೊಂದು ಹೆಣ್ಣಿನ ಶೋಷಣೆಯ ನಿಕೃಷ್ಟ ಪದ್ಧತಿಯೆಂದು, ಗುರುಗಳು ಆ ಕ್ರಮವನ್ನು ನಿಲ್ಲಿಸಲು ಅಪ್ಪಣೆ ಕೊಟ್ಟಿದ್ದರು. ಹೀಗೆ ಗುರುಗಳು ತಾವು ಬೋಡಿಸಿದ ವಿಷಯಗಳನ್ನೆಲ್ಲಾ ಸ್ವತಹ್ ಆಚರಿಸುತ್ತಿದ್ದರು. ತಾವು ಪ್ರತಿಷ್ಟಾಪಿಸಿದ ದೇವಸ್ಥಾನಗಳ ಬಾಗಿಲು ಮಾನವರೆಲ್ಲರಿಗೂ ತೆರೆದಿರಬೇಕೆಂಬುದೇ ಅವರ ಇಚ್ಛೆಯಾಗಿರುತ್ತಿತ್ತು. ಅಂತರ್ಧರ್ಮೀಯ ವಿವಾಹಕ್ಕೂ ಗುರುಗಳು ಪ್ರೋತ್ಸಾಹಿಸಿದ್ದರು.
 
==ನಾರಾಯಣ ಗುರುಗಳ '[[ಜನ್ಮ-ದಿನ]],' ದಬಗ್ಗೆ, ಅವರ ಭಕ್ತಾದಿಗಳ ಭಿನ್ನಾಭಿಪ್ರಾಯಗಳು==
"https://kn.wikipedia.org/wiki/ಶ್ರೀ._ನಾರಾಯಣ_ಗುರು" ಇಂದ ಪಡೆಯಲ್ಪಟ್ಟಿದೆ