ಶ್ರೀ. ನಾರಾಯಣ ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
 
==ನಾರಾಯಣರ ಜನನ, ಬಾಲ್ಯ ಮತ್ತು ಸಮಾಜ ಸೇವೆ==
ಕೇರಳದ '[[ತೀಯಾ ಸಮಾಜ]],' ದವರಾದ '[[ಮದನ್ ಆಸನ್]],' ಹಾಗೂ '[[ಕುಟ್ಟಿ ಅಮ್ಮಾಳ್]],' ಎಂಬ ದಂಪತಿಗಳಿಗೆ ಜನಿಸಿದರು. ಆಗ ಕೇರಳದಲ್ಲಿ ಅನೇಕ ಜಾತಿಪಂಥಗಳಿದ್ದವು. ಮೇಲ್ಜಾತಿ, ಕೆಳಜಾತಿ, ಅಸ್ಪೃಷ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಹರಿದು ತಿನ್ನುತ್ತಿದ್ದವು. ಆಗ ರು ಪಣತೊಟ್ಟು ತಮ್ಮ ಜೀವನದ ಧ್ಯೇಯವೆಂದು ಶಪಥಮಾಡಿದರು. ದೇವರ ಹೆಸರಿನಲ್ಲಿ ಪ್ರಾಣಿಹತ್ಯೆ ಅವರಿಗೆ ಸರಿಬೀಳಲಿಲ್ಲ. ಹೀಗೆ ಸಮಾಜದ ವಿರೋಧಾಭಾಸಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮಗಳು, ಆಂದೋಳನೆಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನಗಳಲ್ಲಿ ಅನುಮತಿಕೊಡಲು ಅವರು ಬೇಡಲಿಲ್ಲ. ಅಥವಾ ಹಿಂಸಾಚಾರದ ಚಳುವಳಿಗಳನ್ನೂ ನಡೆಸದೆ, ತಾವೇ ದೇವಾಲಯಗಳನ್ನು ಸ್ಥಾಪಿಸುವುದರಮೂಲಕ ಒಂದು ಹೊಸ-ಅನನ್ಯ-ಆಲೋಚನಾಕ್ರಮವನ್ನು ಹುಟ್ಟುಹಾಕಿದರು. ಕೇರಳದಾದ್ಯಂತವೂ ಸುಮಾರು ೬೦ ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದರು.<ref>{{cite news|title=Elavumthitta - the birthplace of Sivagiri pilgrimage|url=http://www.thehindu.com/news/national/kerala/elavumthitta-the-birthplace-of-sivagiri-pilgrimage/article4270267.ece|accessdate=19 October 2014|agency=The Hindu|date=4 January 2013}}</ref><ref>{{cite news|last1=Bhattacharya|first1=Sabyasachi|title=The Other Tagore|url=http://www.frontline.in/static/html/fl2827/stories/20120113282702200.htm|accessdate=9 February 2015|work=Frontline|issue=Volume 28 - Issue 27|date=31 December 2011}}</ref>
 
ಶಿವಗಿರಿಯಿಂದ ೪೫ ಕಿಲೋಮೀಟರ್ ಉತ್ತರಕ್ಕೆ ತಿರುವನಂತಪುರದಿಂದ ೧೨ ಕಿಲೋಮೀಟರ್ ದೂರದ ಉತ್ತರಪೂರ್ವ ಸೀಮೆಯಲ್ಲಿರುವ ಚೆಂಬಳಾಂತಿ ಗ್ರಾಮದಲ್ಲಿ ನಾರಾಯಣ ಗುರುಗಳು ಜನಿಸಿದರು. ಅವರು ಹುಟ್ಟಿ ಬೆಳೆದ ಮನೆಯನ್ನು ಇಂದಿಗೂ ಸುರಕ್ಷಿತವಾಗಿ ಕಾಯ್ದಿರಿಸಲಾಗಿದೆ. ನಾರಾಯಣ ಗುರು ಹುಟ್ಟಿದ್ದು 18-8-1854ರಂದು ಅವರ ಹೆತ್ತವರ ಕುರಿತಾಗಿ ಗುರು ನಟರಾಜರು ಈ ಕೆಳಗಿನ ವಿವರಗಳನ್ನು ಕೊಡುತ್ತಾರೆ: `` ಆ ಹಳ್ಳಿಯಲ್ಲಿ ೧೮೫೫ರ ಸುಮಾರಿಗೆ ಒಂದು ಕೃಷಿ ಕುಟುಂಬ ಬಾಳಿತ್ತು. ತಂದೆ ಮಾದನ್ ಆಶನ್. ಆಶನ್ ಕೇವಲ ಕೃಷಿಕರಷ್ಟೇ ಆಗಿರಲಿಲ್ಲ. ಅವರು ಖಗೋಲಶಾಸ್ತ್ರ, ಆಯುರ್ವೇದದಲ್ಲಿ ತಜ್ನರಾಗಿದ್ದರು. ಆಶನ್ ಎಂದರೆ ಆಚಾರ್ಯ ಎಂಬರ್ಥ. ವಾರಕ್ಕೊಮ್ಮೆ ಅವರ ಮನೆಯ ಚಾವಡಿಯಲ್ಲಿ ಹಳ್ಳಿಯ ಜನ ಮಾದನ್ ಆಶನ್ ಅವರ ರಾಮಾಯಣ, ಮಹಾಭಾರತ ಪ್ರವಚನವನ್ನು ಕೇಳಲು ನೆರೆಯುತ್ತಿದ್ದರು. ನಾರಾಯಣ ಗುರುವನ್ನು ಮುದ್ದಿನಿಂದ `ನಾಣು' ಎಂದು ಕರೆಯುತ್ತಿದ್ದರು.ಕೇರಳದಲ್ಲಿ ಸಾಂಪ್ರದಾಯಿಕ ಕಲಿಕೆ ಎಂದರೆ ಸಂಸ್ಕ್ರತವನ್ನು ಕಲಿಯುವುದಾಗಿತ್ತು. ನಾರಾಯಣ ಗುರು ಸುಲಭವಾಗಿ ಸಂಸ್ಕ್ರತ ಭಾಷೆ ಮತ್ತು ವ್ಯಾಕರಣವನ್ನು ಕಲಿತ. `ಸಿದ್ಧ ರೂಪಮ್',`ಬಾಲಪ್ರಭೋದಮ್', ಮತ್ತು ಅಮರ ಕೋಶವನ್ನು ಕಲಿತ. ನಾಣುವು ಸಂಸ್ಕ್ರತ ಮತ್ತು ಮಲೆಯಾಳಮ್ ಮಾತ್ರ ಚೆನ್ನಾಗಿ ಕಲಿತಿದ್ದನಲ್ಲದೆ ತಮಿಳನ್ನೂ ಚೆನ್ನಾಗಿ ಕಲಿತನು. ಸ್ವಪ್ರಯತ್ನದಿಂದ ತಮಿಳಿನ ಶ್ರೇಷ್ಠ ಗ್ರಂಥಗಳಾದ `ತೋಲ್ಕಾಪ್ಪಿಯನ್', `ನನ್ನುಲ್', `ಸಿಲಪ್ಪದಿಕಾರಮ್', `ಮನಿಮೇಕಲಮ್', `ತಿರುಕ್ಕುರಲ್', ಮತ್ತು `ತಿರುವಾಚಕಮ್', ಅಭ್ಯಸಿಸಿದನು.
 
===ಮದುವೆ ಮತ್ತು ಸಂಸಾರ ತ್ಯಾಗ===
ವಿಚಿತ್ರ ಎಂದರೆ ನಾಣು ಸ್ವಾಮಿಯ ಮನಸ್ಸನ್ನು ಅರಿಯದ ಸಂಬಂಧಿಕರು ಅವನಿಗೆ ಮದುವೆಯಾಗುವಂತೆ ಒತ್ತಾಯಿಸಿದರು. ನಾಣು ರಾಮಕೃಷ್ಣ ಪರಮಹಂಸರು ಶಾರದಾ ದೇವಿಯನ್ನು ಮದುವೆಯಾದಂತೆ ಮದುವೆಯಾದ್ರು. ಆ ಕಾಲದಲ್ಲಿ ವರನ ಸಹೋದರಿಯು ವಧುವಿಗೆ `ಪುತವಾ',ಅಂದ್ರೆ ವಧುವಿನ ಬಟ್ಟೆಗಳು, ಕೊಡುವ ಸಂಪ್ರದಾಯವಿತ್ತು. ನಾರಾಯಣ ಗುರುಗಳು ಮದುವೆಗೆ ತಾನೇ ಸ್ವತಃ ಹೋಗಲಿಲ್ಲ. ಮದುವೆ ೧೮೮೨ರ್ಲ್ಲಿ ಆಯಿತು. ಸಂಸಾರ್ ಬಂಧನವನ್ನು ಹರಿದುಕೊಂಡು ಹೋಗಲು ಮದುವೆ ಒಂದು ಅಡ್ಡಿಯಾಗಲಿಲ್ಲ. ಗುರು ಹೇಳಿದರು:``ನಾವು ಈ ಜಗತ್ತಿಗೆ ಯಾವುದೋ ಒಂದು ಉದ್ದೇಶಕ್ಕೆ ಬಂದಿದ್ದೇವೆ. ನನಗೆ ನನ್ನ ಕೆಲಸ ಮಾಡಲಿದೆ. ನಿನಗೆ ನಿನ್ನ ಕೆಲಸ ನಿರ್ವಹಿಸಲಿದೆ. ನನ್ನ ದಾರಿಯಲ್ಲಿ ನಾನು ಹೋಗುತ್ತೇನೆ. ನಿನ್ನ ದಾರಿಯಲ್ಲಿ ನೀನು ಹೋಗು. ಎಂದು ಹೆಂಡತಿಗೆ ಹೇಳಿ, ತಮ್ಮ ಹಳ್ಳಿಯನ್ನೂ, ತನ್ನ ಜನರನ್ನೂ ತ್ಯಜಿಸಿದರು.
 
==ಸುಮಾರು ೬೦ ದೇವಾಲಯಗಳ ಸ್ಥಾಪನೆ==
ಹಾಗೆ ಅವರು ಶುರುಮಾಡಿದ ಮೊಟ್ಟಮೊದಲ, '[[ಲಿಂಗ ಪ್ರತಿಷ್ಠಾಪನೆ]],' ೧೮೮೮ ರಲ್ಲಿ, '[[ಅರವೀಪುರಂ]],' ಎಂಬ ಪ್ರದೇಶದಲ್ಲಿ, ನಡೆಯಿತು. ೧೯೨೧ ರಲ್ಲಿ ಮತ್ತೊಂದು ಹೊಸ ವಿಧಾನವನ್ನು ಜನರ ಸಮ್ಮುಖದಲ್ಲಿ ತಂದರು. ಸಮಾಜದ ವರ್ಗಗಳನ್ನೆಲ್ಲಾ ಒಂದೆಡೆ ಸೇರಿಸಿ, 'ಮಿಶ್ರ ಭೋಜನ,' ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದ ವೀರಸಂತನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು '[[ಸಹೋದರ ಸಮ್ಮೇಳನ]],' ದ ಏರ್ಪಾಡಿನ ಮೂಲಕ ಸಾಧ್ಯವಾಯಿತು. ಅಸ್ಪೃಷ್ಯರನ್ನು ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಂಘಟಿಸಿ, ಪರೋಪಕಾರವೇ ತಮ್ಮ ಜೀವನದ ಧ್ಯೇಯವೆಂದು ಸಾರಿದರು. ಕೆಲವರು ಮತಾಂತರ, ಇದಕ್ಕೆ ಸಮಾಧಾನವೆನ್ನುವ ಮಾತಾಡಿದರು. ಆದರೆ, ನಾರಾಯಣರು, ಇದಕ್ಕೆ ಒಪ್ಪಲಿಲ್ಲ. '[[ಆಲ್ವಾಯಿ]]', ಯೆಂಬಲ್ಲಿ , ಫೆಬ್ರವರಿ, ೧೯೨೪ ರಲ್ಲಿ, ೨ ದಿನಗಳ '[[ಸರ್ವಧರ್ಮಗಳ ಸಮ್ಮೇಳನ]],' ವನ್ನು ಆಯೋಜಿಸಿದರು. ನಾರಾಯಣಗುರುಗಳಿಗೆ '[[ಬ್ರಹ್ಮ ವಿದ್ಯಾಲಯ,]]' ವೆಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ, ಸರ್ವಧರ್ಮಗಳ ಬಗ್ಗೆ, ಅಧ್ಯಯನ ಮಾಡುವ ಒಂದು ಅಭಿಯಾನವನ್ನು ಪ್ರಾರಂಭಿಸಬೇಕೆಂಬ ಮಹದಾಶೆಯಿತ್ತು. ಆದರೆ, ಅದು, ಅವರ ಜೀವಿತದಲ್ಲಿ ಸಾಕಾರಗೊಳ್ಳಲಿಲ್ಲ. ಗುರುಗಳ ಮರಣದ ಬಳಿಕ, ಅವರ ಹಿಂಬಾಲಕರು ಆ ಕನಸನ್ನು ಸಾಕಾರಗೊಳಿಸಿದರು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸಮಾಡಿ ಅಪಾರ ಅನುಭವಗಳನ್ನು ಹೊಂದಿ ಹೋದೆಡೆಯಲ್ಲೆಲ್ಲಾ ವಿಶ್ವ ಮಾನವತ್ವವನ್ನು ಬೋಧಿಸಿದರು. ಸನ್ಯಾಸಿಗಳು, ಮಹರ್ಷಿಗಳ ಜೊತೆಗೆ ಸಂಪರ್ಕವನ್ನಿಟ್ಟುಕೊಂಡಿದ್ದರು. ಅವರು ಹೇಳುತ್ತಿದ್ದ ವಾಕ್ಯಗಳು ಇಂದಿಗೂ ಅತ್ಯಂತ ಅರ್ಥಗರ್ಭಿತವಾಗಿವೆ. " ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು ; ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ" ಆದ್ದರಿಂದ ದೇಶಸೇವೆ, ಮತ್ತು ಈಶಸೇವೆಗಳ ಸಮನ್ಯವೇ ನಮ್ಮ ಗುರಿಯಾಗಿರಬೇಕೆಂದು ತಮ್ಮ ಜೀವನದುದ್ದಕ್ಕೂ ಒತ್ತಿ-ಒತ್ತಿ ಹೇಳುತ್ತಿದ್ದರು.<ref>{{cite web|title=Stamps 1947-2000|url=http://postagestamps.gov.in/Stamps_List.aspx|website=Postage Stamps|publisher=India Post|accessdate=7 June 2015}}</ref><ref>{{cite web|title=All registered stamps issued by Sri Lanka: LK032.09|url=http://www.wnsstamps.post/en/stamps/LK032.09|website=Universal Postal Union|accessdate=12 May 2015}}</ref>
"https://kn.wikipedia.org/wiki/ಶ್ರೀ._ನಾರಾಯಣ_ಗುರು" ಇಂದ ಪಡೆಯಲ್ಪಟ್ಟಿದೆ