ಹನುಮಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೫ ನೇ ಸಾಲು:
[[ಚಿತ್ರ:Hanuman in Terra Cotta.jpg|right|thumb|ಹನುಮಂತ]]
 
ಹನುಮಂತ<ref>http://dictionary.reference.com/browse/hanuman</ref> [[ಹಿಂದೂ ಧರ್ಮ|ಹಿಂದೂ]] ಧರ್ಮಗ್ರಂಥಗಳಲ್ಲೊಂದಾದ [[ರಾಮಾಯಣ]]ದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ [[:ವರ್ಗ:ಹಿಂದೂ ದೇವತೆಗಳು|ಹಿಂದು ದೇವತೆಗಳಲ್ಲಿ]] ಒಬ್ಬ. '''ವಾಯುಪುತ್ರ''', '''ಕಪಿವೀರ'''ನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು [[ಅಂಜನಾದೇವಿ|ಅಂಜನಾದೇವಿಯ]] ಮಗ ಮತ್ತು [[ರಾಮ]]ನ ಪರಮಭಕ್ತ. [[ಶಕ್ತಿ]]ಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.
 
ಹನುಮಂತ [[ಕಿಷ್ಕಿಂಧಾ|ಕಿಷ್ಕಿಂಧೆಯಲ್ಲಿ ]] [[ಸುಗ್ರೀವ]]ನ ಜೊತೆಯಲ್ಲಿರುತ್ತಾನೆ. [[ಸೀತಾ|ಸೀತೆಯನ್ನು]] ಹುಡುಕಿಕೊಂಡು [[ರಾಮ]] ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ [[ಸೀತಾ|ಸೀತೆಯು]] [[ಲಂಕಾ|ಲಂಕೆಯಲ್ಲಿರುವ]] ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.<ref>http://www.rambhakt.in/his-role-in-ramayana</ref>
 
[[ಚಿತ್ರ:Lord Hanuman statue Tagarapuvalasa Visakhapatnam.jpg|thumbnail|right|ಧ್ಯಾನಸ್ಥ ಸ್ವರೂಪ]]
೪೫ ನೇ ಸಾಲು:
 
 
ರಾಮಾಯಣ ಕಥೆಯಲ್ಲಿ ಹನುಮಂತನ ಪ್ರವೇಶವಾಗುವುದು ಕಿಷ್ಕಿಂಧಾಕಾಂಡದಲ್ಲಿ. 'ಕಿಷ್ಕಿಂಧೆ' ಎಂದರೆ ನಮ್ಮ ಕನ್ನಡ ನಾಡಿನ ಹಂಪೆಯ ಪ್ರದೇಶ. ಇಲ್ಲಿಂದ ಮುಂದೆ ಹನುಮನ ಸಾಧನೆಯ ಪ್ರಭಾವ ವಿಶೇಷವಾಗಿದೆ. ಆತನ ದೇಹಬಲ, ಮನೋಬಲ, ಬುದ್ಧಿಬಲ, ತಪೋಬಲ, ಯೋಗಶಕ್ತಿ ಎಲ್ಲವೂ ಕಂಡುಬರುವುದು ಇಲ್ಲಿಯೇ. ರಾಮಚಂದ್ರ ವನವಾಸಕ್ಕೆ ಬರಲು ಕೈಕೆ-ಮಂಥರೆಯರು ಹೇಗೆ ಕಾರಣರೋ ಹಾಗೆ ಆಂಜನೇಯ ರಾಮಚಂದ್ರನ ಆಗಮನಕ್ಕಾಗಿ ಅಂತರಂಗದಲ್ಲಿ ಹಾರೈಸುತ್ತಿದ್ದನಂತೆ. ಭಗವಂತ ಭಕ್ತನ ಹಾರೈಕೆಯನ್ನು ಈಡೇರಿಸಲು ಪ್ರತ್ಯಕ್ಷವಾಗುವಂತೆ ರಾಮಚಂದ್ರ ಆಂಜನೇಯನಿಗೆ ಕಂಡ. ಶ್ರೀರಾಮನ ಸಂದರ್ಶನವಾಗುವುದಕ್ಕೆ ಒಂದೆರೆಡು ದಿನ ಮುಂಚಿತವಾಗಿ ಆಂಜನೇಯ ಬೆಟ್ಟದ ಮೇಲೆ ಧ್ಯಾನ ಮಗ್ನನಾಗಿದ್ದ. ನಂತರ ಕಣ್ದೆರೆದು ನೋಡಿದರೆ ದೂರದಲ್ಲಿ ಪಂಪಾ ಸರೋವರದ ತೀರದಲ್ಲಿ ನಡೆದುಬರುತ್ತಿರುವ ನರಾಕೃತಿಗಳನ್ನು ಕಂಡನಂತೆ. ಹಾಗೆಯೇ, ರಾಮ ಬೆಟ್ಟದ ತುದಿಯನ್ನು ದಿಟ್ಟಿಸಿ ನೋಡಿ ಹೇಳುತ್ತಾನೆ. "ಲಕ್ಶ್ಮಣಾ, ಇಲ್ಲಿಯೋ ಎಲ್ಲಿಯೋ ಕಾಣೆ! ಆದರೆ ನನ್ನ ಮನಸ್ಸಿಗೆ ಸುಳಿದಿದೆ ಇಲ್ಲಿಯೇ ನನ್ನ ಬಾಳ ಗೆಳೆಯನನ್ನು ಕಾಣುವೆನೆಂದು". ಕೊನೆಗೆ ಎದುರಿಗಿದ್ದ ಕಲ್ಬಂಡೆಯನ್ನು ಉದ್ದೇಶಿಸಿ ಆಂಜನೇಯನನ್ನು ಎಚ್ಚರಿಸಿ ಎಬ್ಬಿಸುತ್ತಾನೆ. ಇಬ್ಬರೂ ಪರಸ್ಪರ ನೋಡಿದರು. ಒಂದಾದರು. [[ರಾಮ]]-ಆಂಜನೇಯ ಎಂಬ ಎರಡು ನದಿಗಳು ಕೂಡಿ ಒಂದಾಗಿ ಮುಂದುವರಿದಂತೆ ಆಯಿತು. ರಾಮ ಮೊದಲ ನೋಟದಲ್ಲೇ ಆಂಜನೇಯನ ಹಿರಿಮೆ ತಿಳಿದ. ಅವನ ಶುದ್ಧವಾದ ಮಾತು, ಮಿತ ಭಾಷೆ, ಶಾಂತ ಸ್ವಭಾವ, ಬ್ರಹ್ಮಚರ್ಯದ ತೇಜಸ್ಸು ಕಂಡು ರಾಮನಿಗೆ ಅಚ್ಚರಿ. ಆಂಜನೇಯನೇ ರಾಮನಿಗೆ ಕಿಷ್ಕಿಂದೆಯನ್ನು ಪರಿಚಯಿಸಿ, ರಾಮಾ ಸುಗ್ರೀವರಿಗೆ ಸಖ್ಯ ಉಂಟಾಗುವಂತೆ ಮಾಡುತ್ತಾನೆ.
 
'ಸೀತಾನ್ವೇಷಣೆ' ಆಂಜನೇಯನ ಬಹುಮುಖ್ಯ ಸಾಹಸಗಳಲ್ಲೊಂದು. ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಯನೊಬ್ಬನದೇ ಒಂದು ತೂಕ. ಕುವೆಂಪು [[ರಾಮಾಯಣ ದರ್ಶನಂ|ರಾಮಾಯಣ ದರ್ಶನ]]ದಲ್ಲಿ ಈ ಭಾಗ ಬಹಳ ಸುಂದರವಾಗಿ ಬರುತ್ತದೆ. ಸುಗ್ರೀವ, ಆಂಜನೇಯನನ್ನು 'ನೀನು ನಮ್ಮ ಕುಲದ ಕಣ್ಣು, ಸಾಹಸದ ಧೈರ್ಯ, ಎಲ್ಲವೂ. ವಾಯುಪುತ್ರನಾದ್ದರಿಂದ ನೀನು ಚಲಿಸದ ಪ್ರದೇಶವೇ ಇಲ್ಲ. ಮೂರು ಲೋಕಗಳಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ' ಎಂದು ಕೊಂಡಾಡಿ ಸೀತಾನ್ವೇಷಣೆಗೆ ಕಳುಹಿಸುತ್ತಾನೆ.
 
ಸೀತೆಯನ್ನು ಅರಸುತ್ತಾ ಹೋದಂತೆ ಸಂಪಾತಿಯಿಂದ, ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಬಚ್ಚಿಟ್ಟಿರುವ ಸುದ್ದಿ ತಿಳಿಯುತ್ತದೆ. ಲಂಕೆಗೆ ಹೋಗುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಆಗ ಜಾಂಬವಂತ ಈ ಮಹಾಕಾರ್ಯಕ್ಕೆ ಆಂಜನೇಯನೇ ಸಮರ್ಥನೆಂದು ಹೇಳುತ್ತನೆ. ಉಳಿದ ಕಪಿವೀರರೆಲ್ಲಾ ಸಮುದ್ರ ಲಂಘನಕ್ಕೆ ತಮ್ಮತಮ್ಮ ಸಾಮರ್ಥವೆಷ್ಟು ಎಂದು ಜಂಭದ ಮಾತಾಡುತ್ತಿರುವಾಗ, ಆಂಜನೇಯ ಒಂದು ಬಂಡೆಯ ಮೇಲೆ ಕುಳಿತು ಕಣ್ಣಿನಲ್ಲೇ ಸಮುದ್ರದ[[ಸಮುದ್ರ]]ದ ದೂರವನ್ನು, ತನ್ನ ಸಾಮರ್ಥ್ಯವನ್ನು ಅಳೆಯುತ್ತಿದ್ದನಂತೆ. ಆಗ ಜಾಂಬವಂತ
 
 
''ಯೋಗಿ ನೀನಭ್ಯಾಸದಿಂದೆಯುಂ ತಪದಿಂದೆ, ಮೇಣ್''
 
''ಬ್ರಹ್ಮಚರ್ಯದ[[ಬ್ರಹ್ಮಚರ್ಯ]]ದ ಮಹಿಮೆಯಿಂದಷ್ಟಸಿದ್ಧಿಗಳ್''
 
''ನಿನಗಿಷ್ಟ ಕಿಂಕರರಲಾ, ಹನುಮಂತ ದೇವಾ ನೀಂ''
೭೫ ನೇ ಸಾಲು:
ಬಾಲ್ಯದಲ್ಲೇ ಪ್ರಾಬುದ್ಧನಾದ ಆ೦ಜನೇಯ ಉತ್ತರ ದೇಶದಿ೦ದ ದಕ್ಷಿಣ ಕಡೆಗೆ ಬರುವ ಅಗಸ್ತ್ಯಮನಿಯನ್ನು ನೋಡುತ್ತಾನೆ. ಆದರೆ ಆಂಜನೇಯನ ತೇಜಸ್ವನ್ನು ಕ೦ಡಾಗ ಅಗಸ್ತ್ಯರಿಗೇ ಆಶ್ಚರ್ಯವಾಗುತ್ತದೆ. ಆ೦ಜನೇಯ ಕೇಳುತ್ತಾನೆ, 'ಪುಣ್ಯಭೂಮಿಯೆ೦ದು ಹೆಸರಾದ ಉತ್ತರ ಭಾರತವನ್ನು ತೊರೆದು ಬರಲು ಕಾರಣವೇನು' ಎಂದು. ಅದಕ್ಕೆ ಅವರು "ದಕ್ಷಿಣದ ಭಾಷೆಗಳ ಸತ್ಯ ಸೌಂದರ್ಯಗಳ ಹೃದಯವನ್ನು ಪಿಡಿದಾಡುವ ಹುಚ್ಚು ಹಂಬಲ ನನ್ನನಿತ್ತಲು ಸೆಳೆಯಿತು" ಎಂದು ಹೇಳುತ್ತಾರೆ. ಅಗಸ್ತ್ಯರಂತಹ ಖುಷಿಗಳು ಈ ನಾಡಿನ ಭಾಷೆ, ಸಂಸೃತಿಗಳನ್ನು ತಿಳಿಯಬೇಕೆಂದು ಹೇಳುವಲ್ಲಿ ಈ ನಾಡಿನ ಹಿರಿಮೆ ವ್ಯಕ್ತವಾಗುತ್ತದೆ.
 
ಈ ಕಾವ್ಯದಲ್ಲಿ ಬೇರೆ ರಾಮಾಯಣಗಳಲ್ಲಿ ಅಪೂರ್ವವಾದ ಒಂದು ದೃಶ್ಯವಿದೆ. ಲಂಕೆಯ ಯುದ್ಧ ಮುಗಿಯುತ್ತಿದಂತೆ ಸೀತಾ ರಾಮ ಲಕ್ಷ್ಮಣರು[[ಲಕ್ಷ್ಮಣ]]ರು ಭರತನಿಗೆ ನೀಡಿದ್ದ ವಾಗ್ದಾನ ಈಡೇರಿಸಲು (೧೪ ವರ್ಷಗಳ ನಂತರ ಮರಳಿ ಅಯೋಧ್ಯೆಗೆ ಬರುವುದಾಗಿ) ನಂದಿಗ್ರಾಮಕ್ಕೆ ಬರುತ್ತಿದ್ದಾರೆ. ಆದರೆ ಬರುವಾಗ ಅವರು ತಮಗಾಗಿ ಸೇವೆ ಮಾಡಿದ ವಾನರವೀರರಿಗೆ ತಮ್ಮ ಕೃತಜ್ನತೆಯನ್ನು ಸಲ್ಲಿಸಬೇಕಾದುದು ಅವರ ಕರ್ತವ್ಯವಾಗಿತ್ತು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. 'ಲೋಕದಲ್ಲಿ ಮಾನವರಿಗೆ ಕೃತಜ್ನತೆ ಎಂಬುದೇ ಪರಮ ಮೌಲ್ಯ'. ಎಂದು ಭಾವಿಸಿದ ರಾಮ. ಅಯೋಧ್ಯೆಯಲ್ಲಿ ರಾಮನ ಪಟ್ಟಭಿಷೇಕ ಮುಗಿದ ಮೇಲೆ ಸೀತಾ ಲಕ್ಷ್ಮಣರ ಸಮೇತ ಕಿಷ್ಯಂಧೆಗೆ ಬರುತ್ತಾನೆ. ಅಲ್ಲಿ ಸೀತಾ ರಾಮ ಲಕ್ಶ್ಮಣರಿಗೆ ಸಂಭ್ರಮದ ಸ್ವಾಗತವಿತ್ತು. ಆದರೆ ಸುಗ್ರೀದ ಸಹ ಅಧಿಕಾರ ಬಂದೊಡನೆ ಸಾನಮತ್ತನಾಗಿ, ಕಾಮಿನೀಲೋಲನಾಗಿ ಮೆರೆಯುತ್ತಿದ. ಇದನ್ನು ಕಂಡ ಲಕ್ಶ್ಮಣನಿಗೆ ದುಃಖವಾಗುತ್ತದೆ. ಆದರೆ ಆಂಜನೇಯ ಬ್ರಹ್ಮಚಾರಿಯಾಗಿ ಮೆರೆದವನು. ಕಿಷ್ಯಂಧೆಯ ಅರಮನೆಯ ವಿಲಾಸ ವಿಕೃತಿಗಳನ್ನು ಮನ್ನಿಸುವಂತೆ ಕೇಳಿಕೋಳುತ್ತಾನೆ. ಎಲ್ಲ ದೇಶದಲ್ಲೂ ಹೀಗೆಯೇ ಅಲ್ಲವೆ. ಇಡೀ ಭರತ ಖಂಡದ ದೃಶ್ಯವೇ ಇಂದಿಗೂ ಹೀಗೆಯೇ ಆಗಿದೆ ಎನ್ನುತ್ತಾರೆ ಕವಿ.
 
ಈ ಕಾವ್ಯದಲ್ಲಿ ಬಹಳ ವಿಶೇಷವಾದದ್ದು ಏನೆಂದರೆ ಆಂಜನೇಯ ಮತ್ತು ಕನ್ನಡನಾಡು. ಇದು ಕನ್ನಡ ಸಂಸ್ಕೃತಿಯ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿದೆ. ಕನ್ನಡ ನಾಡಿನ ಸೌಂದರ್ಯ, ಅನನ್ಯಪ್ರೇಮ, ಕಾಡು, ಬೆಟ್ಟ, ನದಿಗಳು, ಹಿರಿಯರ ನಡೆನುಡಿ-ಸ್ನೇಹ, ಕಾರ್ಯ ಸಾಧನೆ ಇವೆಲ್ಲವು ಆಕರ್ಷಸುತ್ತದೆ.
 
ಆಂಜನೇಯನನ್ನು ಇಲ್ಲಿ ಮುಖ್ಯವಾಗಿ 'ಕನ್ನಡದ ಕುವರ'ನೆಂದೇ ವರ್ಣಿಸುತ್ತಾರೆ. ಕರುನಾಡ ಸಂಸ್ಕ್ರತಿಯ ಸಾರಸ್ವರುಪ, ಕರುನಾಡು ಕಣ್ಮಣಿ, ಕರುನಾಡ ಸಂಸ್ಕ್ರತಿಯ ಸಂವರ್ಧನ- ಹೀಗೆ ಹನುಮಂತನನ್ನು ಎಷ್ಟು ಬಣ್ಣಿಸಿದರೂ ಕವಿಗೆ ತೃಪ್ತಿಯಿಲ್ಲ. ಆಂಜನೇಯನ ವ್ಯಕ್ತಿತ್ವ ಅದೆಷ್ಟು ಎತ್ತರದಲ್ಲಿದೆ ಎಂಬುದನ್ನು-ಅರಿಯಲು ಆಂಜನೇಯ ಸೀತೆಯ ಬಗ್ಗೆ ತೋರಿದ ಮಾತೃಪ್ರೇಮವೇ ಉದಹರಣೆಯಾಗಿದೆ. ಆಂಜನೇಯನಿಗೆ ಸೀತೆಯ ಬಗ್ಗೆ ಪರಮಭಕ್ತಿ, ಮಾತೃಪ್ರೇಮ. ಹೆಣ್ಣನ್ನು ಭೋಗದ ದೃಷ್ಠಿಯಿಂದ ಕಾಣುವ ಸಮಾಜದಲ್ಲಿ ಆಂಜನೇಯ ಅದೆಷ್ಟು ಗೌರವದಿಂದ ಹೆಣ್ಣನ್ನು ನೋಡಿದ ಎನ್ನುವುದೇ ಅವನ ಹಿರಿಮೆ. ಒಮ್ಮೆಯಂತೂ ಸೀತೆಯನ್ನು ಕಂಡ ಆಂಜನೇಯ ಮಗುವಾಗಿ ಅವಳ ತೊಡೆಯ ಮೇಲೆ ಮಲಗಬೇಕೆಂದು ಬಯಸಿದನಂತೆ. ರೂಪರಾವರ್ತನ ವಿದ್ಯೆಯನ್ನು ಪಡೆದಿರುವ ಆಂಜನೇಯ ತನ್ನ ರೂಪವನ್ನು ಕಿರಿದಾಗಿಸಿಕೊಂಡು ಶಿಶುವಾಗಿ ಸೀತೆಯ ತೊಡೆಯ ಮೇಲೆ ಮಲಗಿ ಆಕೆಯ ಮುಖವನ್ನು ಮಾತೃಪ್ರೇಮದಿಂದ ನೋಡತೊಡಗಿದ. ಮಹಾಯೋಗಿಯಾದವನು ವಾತ್ಸಲ್ಯವೆಂದ ಸುಧೆಯನ್ನು ಸವಿಯುತ್ತಾ ತೊದಲು ನುಡಿಯಲ್ಲಿ ಅಮ್ಮ ಅಮ್ಮ ಎಂದು ನುಡಿದನಂತೆ. ಈ ಸನ್ನಿವೇಶದಲ್ಲಿ ಸೀತೆಯು ಮೈಮರೆತಳು. ತಾನು ಲೋಕಮಾತೆ, ರಾಮಚಂದ್ರನ ಪತ್ನಿ, ಅಯೋಧ್ಯೆಯ[[ಅಯೋಧ್ಯೆ]]ಯ ರಾಣಿ ಎನ್ನುವುದನ್ನೆಲ್ಲ ಮರೆತು ಕೇವಲ ಒಬ್ಬ ತಾಯಿಯಾಗಿ ಆ ಶಿಶುವನ್ನು ಅಕ್ಕರೆಯಿಂದ ಎತ್ತಿ ಮುದ್ದಾಡಿದಳು ನಲಿದಳು. ಇದನ್ನು ಕಂಡ ರಾಮ ಹೇಳುತ್ತಾನೆ, 'ಜನ ಮನೆ ಮನೆಗಳಲಿ ಈ ವೀರ ಮಾರುತಿಯಂತೆ ಸ್ನೇಹ-ಪ್ರೀತಿ-ಸಾಹಸ ಎಲ್ಲ ಗುಣಗಳನ್ನು ಪಡೆದ ಮಕ್ಕಳು ಬೆಳೆಯಲಿ' ಎಂದು ಹೇಳುತ್ತಾ ಅವನ್ನು ಮಾರುತಿಯನ್ನು ಬಾಚಿ ತಬ್ಬಿದನಂತೆ.
 
ಈ ಕಾವ್ಯದ ಮೂಲಕ [[ಕವಿ]] ಹೇಳುತ್ತಾರೆ. ಆಂಜನೇಯ ಭಕ್ತನೆಂದರೆ ಭಕ್ತ, ವೀರವಿರಕ್ತ, ಪರಮಜ್ನನಿ, ಅಮ್ಮನ ಅಕ್ಕರೆಯ ಕಂದ, ಕರುನಾಡ ಕುವರ. ಜೀವನದ ಎಲ್ಲ ಮಹಾ ಮೌಲ್ಯಗಳ ಗಣಿ ಇವನು ಎಳೆತನದಲ್ಲಿ ತುಂಟಾಟವಾಡಿದ. ಅನಂತರ ಆಕಾಶದೆತ್ತರಕ್ಕೆ ಬೆಳೆದ ವ್ಯಕ್ತಿತ್ವ, ಲೋಕದ ಶೋಕವನ್ನು ನಾಶಮಾಡಿದವನು. ಲೋಕದಲ್ಲಿ ಶುದ್ಧವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನು ನಿದರ್ಶನ. ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ. ಎಲ್ಲ ದೇವರುಗಳಿಗಿಂತ ಮೇಲೆ ಸ್ಥಾನ ನೀಡಿದೆ. ಈತನ ಚರಿತ್ರೆಯಲ್ಲಿ ಬರುವ ಅದ್ಭುತಗಳನ್ನು ಅರ್ಥ ಮಾಡಿಕೊಂಡರೆ ನಾವೂ ಪವಿತ್ರರಾಗುತ್ತೇವೆಂದೇ ಹೇಳುತ್ತಾರೆ.
 
ಇಂತಹ ಆಂಜನೇಯನ್ನು ಹೃದಯದೊಳಗೆ ಇಟ್ಟುಕೊಂಡು ಪೂಜಿಸಬೇಕಂತೆ ಏಕೆಂದರೆ
೧೧೯ ನೇ ಸಾಲು:
=='''ಹನುಮಂತನ ಪ್ರಮುಖ ದೇವಸ್ಥಾನಗಳು'''==
 
* [[ಬೆಂಗಳೂರು|ಬೆಂಗಳೂರಿನ]] [[ಮಹಾಲಕ್ಷ್ಮಿ ಬಡಾವಣೆ]]ಯಲ್ಲಿನಬಡಾವಣೆಯಲ್ಲಿನ ಹನುಮಂತನ ಬೃಹತ್ ಪ್ರತಿಮೆಯಿರುವ '''ಶ್ರೀ ಆಂಜನೇಯ ದೇವಸ್ಥಾನ'''.<ref>http://wikimapia.org/61138/Prasanna-Veeranjaneya-Swami-Temple-Mahalakshmi-Layout</ref>
* [[ಬೆಂಗಳೂರು|ಬೆಂಗಳೂರಿನ]] ಮೈಸೂರು ರಸ್ತೆಯಲ್ಲಿರುವ '''ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ'''.<ref>http://www.bengaloorutourism.com/gali-anjaneya-temple.php</ref>
* [[ಬೆಂಗಳೂರು|ಬೆಂಗಳೂರಿನ]] ಜಯನಗರ ೯ನೇ ಬ್ಲಾಕಿನಲ್ಲಿರುವ '''ರಾಗಿಗುಡ್ಡದ''' '''ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ'''.<ref>http://www.ragigudda.org/</ref>
* [[ರಾಮನಗರ]] ಜಿಲ್ಲೆಯ [[ಚನ್ನಪಟ್ಟಣ]]ದ ದೇವರಹೊಸಹಳ್ಳಿಯ '"ಶ್ರೀ ಸಂಜೀವರಾಯಸ್ವಾಮಿ ದೇವಸ್ಥಾನ'''.
* [[ರಾಮನಗರ]] ಜಿಲ್ಲೆಯ '''"ಕೆಂಗಲ್ ಹನುಮಂತರಾಯಸ್ವಾಮಿ ದೇವಸ್ಥಾನ"'''.<ref>http://www.hindu-blog.com/2013/06/kengal-hanuman-temple-channapatna.html</ref>
* [[ಕೋಲಾರ]] ಜಿಲ್ಲೆಯ [[ಮಾಕಿರೆಡ್ಡಿಪಲ್ಲಿ]]ಯಲ್ಲಿರುವಮಾಕಿರೆಡ್ಡಿಪಲ್ಲಿಯಲ್ಲಿರುವ '''ಮುತ್ತುರಾಯ ಸ್ವಾಮಿ ದೇವಸ್ಥಾನ"'.
* [[ಬಿಜಾಪುರ]] ಜಿಲ್ಲೆಯ [[ಯಲಗೂರು]] ಆಲಮಟ್ಟಿ ಹತ್ತಿರ '''ಯಲಗೂರೇಶ ಸ್ವಾಮಿ ದೇವಸ್ಥಾನ'''.
* [[ಮಂತ್ರಾಲಯದ ಹತ್ತಿರ]] ಪಂಚಮುಖಿ ಆಂಜನೇಯ (ರಾಮಾಯಣ) ದೇವಸ್ಥಾನ.
* [[ಮಂಡ್ಯ ]] ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಚಟ್ಟೇನಹಳ್ಳಿ ಗ್ರಾಮದ '''ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ'''.
* [[ಕನಕಪುರ]] ತಾಲ್ಲೂಕು '''ಕುರುಬರಹಳ್ಳಿ ಬಸವಾಂಜನೇಯ (ಬಿಸಿಲಪ್ಪ) ಸ್ವಾಮಿ ದೇವಸ್ಥಾನ'''.
* [[ಚಿಕ್ಕಬಳ್ಳಾಪುರ]] ಜಿಲ್ಲೆಯ ಚಿಕ್ಕಬಳ್ಳಾಪುರ ನಗರದಲ್ಲಿರುವ '''ಶ್ರೀ ಜೀವಾಂಜೀನೇಯಸ್ವಾಮಿ ದೇವಸ್ಥಾನ'''.
* ತುಮಕುರು ಜಿಲ್ಲೆಯ [[ಗೂಳೂರು]] ಗ್ರಾಮದ '''ಶೂಲದ ಹನುಮಂತರಾಯಸ್ವಾಮಿ ದೇವಸ್ಥಾನ"'.
* ತುಮಕುರು ಜಿಲ್ಲೆಯ [[ಎಡೆಯುರು]] ಗ್ರಾಮದ '''ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ'''.
* ದಾವಣಗೆರೆ ಜಿಲ್ಲೆಯ [[ದಾಗಿನಕಟ್ಟೆ]]ಯದಾಗಿನಕಟ್ಟೆಯ ಚನ್ನಗಿರಿ ತಾ|| '''ಶ್ರೀ ಆಂಜನೇಯಸ್ವಾಮಿ ದೇವಸ್ಥಾನ'''.
* [[ದಾವಣಗೆರೆ]] ಜಿಲ್ಲೆಯ ಕುಂದುರಿನ '''ಶ್ರೀ ಆಂಜನೇಯಸ್ವಾಮಿ ದೇವಸ್ಥಾನ"'.<ref>http://www.holidayiq.com/Sri-Anjaneya-Swamy-Temple-Davangere-Sightseeing-965-11783.html</ref>
* [[ಚಿತ್ರದುರ್ಗ]] ಜಿಲ್ಲೆ [[ಚಳ್ಳಕೆರೆ]] ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿ ಬಳಿಯಿರುವ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನ.
"https://kn.wikipedia.org/wiki/ಹನುಮಂತ" ಇಂದ ಪಡೆಯಲ್ಪಟ್ಟಿದೆ