ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೮೪ ನೇ ಸಾಲು:
 
*ಸಂಸ್ಕರಿಸಿದ ಆಹಾರಕ್ಕೆ ಶೇಕಡ 5ರಷ್ಟು, ಬಿಸ್ಕತ್‌ ಮೇಲೆ ಶೇಕಡ 18ರಷ್ಟು, ಬೀಡಿಗೆ ಶೇಕಡ 28ರಷ್ಟು ಜಿಎಸ್‌ಟಿ ದರ ನಿಗದಿಪಡಿಸಲಾಗಿದೆ. ರೂ.500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಜಿಎಸ್‌ಟಿ ದರ ಶೇ 5ರಷ್ಟು ಇರಲಿದೆ. ₹ 500ಕ್ಕಿಂತ ಹೆಚ್ಚಿನ ಬೆಲೆಯ ಪಾದರಕ್ಷೆಗಳ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ದರ ನಿಗದಿಯಾಗಿದೆ. ಸಿದ್ಧ ಉಡುಪುಗಳ ಮೇಲೆ ಶೇಕಡ 12, ಹತ್ತಿ ಬಟ್ಟೆ ಮತ್ತು ಸೋಲಾರ್‌ ಪ್ಯಾನೆಲ್‌ಗಳ ಮೇಲೆ ಶೇಕಡ 5ರಷ್ಟು ಜಿಎಸ್‌ಟಿ ದರ ನಿಗದಿಗೊಳಿಸಲಾಗಿದೆ. ಜುಲೈ 1ರಿಂದ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ.<ref>[http://www.prajavani.net/news/article/2017/06/03/496301.html ಚಿನ್ನಕ್ಕೆ ಶೇಕಡ 3, ಸಂಸ್ಕರಿಸಿದ ಆಹಾರಕ್ಕೆ ಶೇಕಡ 5ರಷ್ಟು ಜಿಎಸ್‌ಟಿ ದರ ನಿಗದಿ;3 Jun, 2017]</ref>
==ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆ==
*ದೇಶದ ಅರ್ಥ ವ್ಯವಸ್ಥೆಯ ಸಮಗ್ರ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಲಿರುವ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು, ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ. ಇಡೀ ದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಈ ಹೊಸ ವ್ಯವಸ್ಥೆ ಪರಿವರ್ತಿಸಲಿದೆ. ಸದ್ಯಕ್ಕೆ ಜಾರಿಯಲ್ಲಿ ಇರುವ ಬಹುಹಂತದ ತೆರಿಗೆ ವ್ಯವಸ್ಥೆ ಕೊನೆಗೊಳ್ಳಲಿದೆ, ಸರಕು ಮತ್ತು ಸೇವೆಗಳ ಬೆಲೆಗಳು ದೇಶದಾದ್ಯಂತ ಒಂದೇ ರೀತಿಯಲ್ಲಿ ಇರಲಿವೆ.
==ತೆರಿಗೆಯ ಹೊರೆ==
*ಸದ್ಯಕ್ಕೆ ವಿವಿಧ ತೆರಿಗೆ ದರಗಳ ಒಟ್ಟಾರೆ ಹೊರೆಯು ಶೇ 25 ರಿಂದ ಶೇ 30ರಷ್ಟು ಇದೆ. ಪ್ರತಿಯೊಂದು ಕುಟುಂಬ ಬಳಸುವ ಆಹಾರ ಧಾನ್ಯ, ಬೇಳೆಕಾಳು, ಮೈದಾ, ಕಡಲೆ ಹಿಟ್ಟು, ಹಾಲು, ಉಪ್ಪು, ತರಕಾರಿ ಮತ್ತು ಹಣ್ಣುಗಳು ಅಗ್ಗವಾಗಲಿವೆ. ಜಿಎಸ್‌ಟಿ ವಿನಾಯಿತಿ ಕೊಟ್ಟ ಕಾರಣಕ್ಕೆ, ಇವುಗಳ ಬೆಲೆಗಳು ಸದ್ಯದ ಬೆಲೆಗಿಂತ ಶೇ 4 ರಿಂದ 5ರಷ್ಟು ಅಗ್ಗವಾಗಲಿವೆ. ಹೊಸ ವ್ಯವಸ್ಥೆಯಲ್ಲಿ, ಸರಕುಗಳು ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಗಳಿಗೆ ದೊರೆಯಲಿವೆ. ಇದು ಆರ್ಥಿಕ ಚಟುವಟಿಕೆಗಳು ಗರಿಗೆದರಲು ತಕ್ಷಣ ಉತ್ತೇಜನ ನೀಡಲಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 1 ರಿಂದ ಶೇ 2ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
 
*ಹೋಟೆಲ್‌ ಉದ್ದಿಮೆ ಮೇಲೆ ಶೇ 12 ರಿಂದ ಶೇ 18ರಷ್ಟು ತೆರಿಗೆ ವಿಧಿಸಲಾಗಿದೆ. ವಾಹನ ತಯಾರಿಕೆ, ಹೋಟೆಲ್‌ ಮತ್ತು ವಿಮೆ ಉದ್ಯಮಗಳ ಪಾಲಿಗೆ ಜಿಎಸ್‌ಟಿ ದರಗಳು ದುಬಾರಿಯಾಗಿ ಪರಿಣಮಿಸಿವೆ. ಮೋಟಾರ್‌ ವಾಹನಗಳು ಅದರಲ್ಲೂ ವಿಶೇಷವಾಗಿ ವಿದ್ಯುತ್‌ ಮತ್ತು ಇಂಧನ ಚಾಲಿತ ಹೈಬ್ರಿಡ್‌ ವಾಹನ, ಪ್ರವಾಸೋದ್ಯಮ ಮತ್ತು ಹೋಟೆಲ್‌ಗಳ ಮೇಲೆ ವಿಧಿಸಿರುವ ತೆರಿಗೆಗಳು ವಹಿವಾಟಿಗೆ ಧಕ್ಕೆ ಒದಗಿಸಲಿವೆ. ಚಿನ್ನ: ಬೆಳ್ಳಿ ಮತ್ತು ವಜ್ರದ ಮೇಲೆ ಶೇ 3ರಷ್ಟು ತೆರಿಗೆ ವಿಧಿಸಲಾಗಿದೆ. ಸದ್ಯಕ್ಕೆ ಚಿನ್ನದ ಮೇಲೆ ಶೇ 1 ರಷ್ಟು ಅಬಕಾರಿ ಸುಂಕ ಮತ್ತು ಹಲವು ರಾಜ್ಯಗಳಲ್ಲಿ ಶೇ 1ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಇದೆ. ಈಗ ಶೇ 3ರಷ್ಟು ಜಿಎಸ್‌ಟಿ ಕಾರಣಕ್ಕೆ ಚಿನ್ನ ಖರೀದಿ ತುಟ್ಟಿಯಾಗಲಿದೆ. ವಿಮೆ, ಆರೋಗ್ಯ, ಕಾರ್‌ ವಿಮೆ ಕಂತುಗಳು ದುಬಾರಿಯಾಗಿ ಪರಿಣಮಿಸಲಿವೆ. ಸದ್ಯಕ್ಕೆ ಶೇ 15ರಷ್ಟು ಇರುವ ತೆರಿಗೆ ದರ ಶೇ 18ಕ್ಕೆ ಏರಲಿದೆ.
===ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರುವ ಉತ್ಪನ್ನಗಳು===
ಪೆಟ್ರೋಲ್‌, ಡೀಸೆಲ್‌, ನೈಸರ್ಗಿಕ ಅನಿಲ, ವಿಮಾನ ಇಂಧನ, ಮದ್ಯ ಮತ್ತು ವಿದ್ಯುತ್‌ –ಈ ಸರಕುಗಳಿಗೆ ಸಂಬಂಧಿಸಿದಂತೆ ಸದ್ಯ ಜಾರಿಯಲ್ಲಿ ಇರುವ ವ್ಯಾಟ್‌ ಮತ್ತು ಕೇಂದ್ರೀಯ ಅಬಕಾರಿ ಸುಂಕಗಳು ಮುಂದುವರೆಯಲಿವೆ.
===ಜಿಎಸ್‌ಟಿಯ ವೈಶಿಷ್ಟ್ಯಗಳು===
* ವರ್ಷಕ್ಕೆ ₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.
* ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.
* ಸರಕು ಮತ್ತು ಸೇವೆಗಳ ತೆರಿಗೆ ದರಗಳು, ನಾಲ್ಕು ಹಂತಗಳಲ್ಲಿ (ಶೇ 5, 12, 18 ಮತ್ತು 28) ನಿಗದಿ.
* ವಿಲಾಸಿ ಸರಕು, ತಂಪು ಪಾನೀಯ ಮತ್ತು ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.
* ಜಿಎಸ್‌ಟಿ ಗರಿಷ್ಠ ದರ ಶೇ 40ರಷ್ಟಕ್ಕೆ ನಿಗದಿ.
==ತುಟ್ಟಿಯಾಗುವ ಸರಕುಗಳು/ ಸೇವೆ==
 
==ಅಗ್ಗವಾಗುವ ಸರಕು ಮತ್ತು ಸೇವೆ==
 
==ನೋಡಿ==