ಭಾರತದಲ್ಲಿ ಗೋಹತ್ಯೆ ನಿಷೇಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೮ ನೇ ಸಾಲು:
==ಕರ್ನಾಟಕದಲ್ಲಿ ಪ್ರಾಣಿಹತ್ಯೆ==
*ಕಸಾಯಿಖಾನೆಗೆ ಜಾನುವಾರು ಮಾರಾಟ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ ವಿವಾದಾತ್ಮಕ ಅಧಿಸೂಚನೆ, ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲೂ ಸದ್ದು ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಹಾಗೂ ಕೃಷಿ ಚಟುವಟಿಕೆಗೆ ಜಾನುವಾರು ಸಾಕುವವರು ಈ ಅಧಿಸೂಚನೆ ಜಾರಿಗೆ ಬರಬೇಕು ಎಂದು ಹೇಳುತ್ತಾರೆ. ಆದರೆ, ರೈತ ಸಮುದಾಯದ ಒಳಿತಿನ ಬಗ್ಗೆ ಚಿಂತಿಸುವವರು ಈ ನಡೆ ಭವಿಷ್ಯದಲ್ಲಿ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ಈ ಭಿನ್ನ ನಿಲುವುಗಳ ಸುತ್ತ ವಿಭಿನ್ನ ವಿಶ್ಲೇಷಣೆಗಳು– ವಿವಾದಗಳು ಹುಟ್ಟಿಕೊಂಡಿವೆ. ಈ ಅಧಿಸೂಚನೆ ರಾಜಕೀಯ, ಸಾಮಾಜಿಕ ಬಿಕ್ಕಟ್ಟು– ಸಾಂಸ್ಕೃತಿಕ ಹಕ್ಕಿನ ಕುರಿತ ಚರ್ಚೆಯ ವಸ್ತುವಾಗಿದೆ. ಮುಂದೆ ಯಾವ ಸ್ವರೂಪ ಪಡೆದುಕೊಳ್ಳಬಹುದು ಎಂದು ಊಹಿಸುವುದು ಕಷ್ಟ.
 
*ಮೇ 23ರಂದು ಹೊರಡಿಸಿರುವ ಈ ಅಧಿಸೂಚನೆಯನ್ನು ಮೂರು ತಿಂಗಳಲ್ಲಿ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಬೇಕು. ಆಡಳಿತಾತ್ಮಕವಾಗಿ ಇದು ಕಷ್ಟದ ಕೆಲಸ. ಏಕೆಂದರೆ, ಅನುಷ್ಠಾನ ವಿಧಾನ ಮತ್ತು ಪ್ರಕ್ರಿಯೆ ಬಹಳ ಸಂಕೀರ್ಣ ಎನ್ನುವುದು ರಾಜ್ಯ ಸರ್ಕಾರದ ಅಭಿಪ್ರಾಯ.
 
*ಈ ಅಧಿಸೂಚನೆಯ ನಿಯಮ 2 (ಇ) ಅಡಿಯಲ್ಲಿ ಜಾನುವಾರುಗಳ ಕುರಿತು ವ್ಯಾಖ್ಯಾನಿಸಲಾಗಿದೆ. ಎಲ್ಲ ಪ್ರಾಣಿಗಳನ್ನು ಈ ನಿಯಮದ ಅಡಿಯಲ್ಲಿ ತಂದು ಹತ್ಯೆ ನಿರ್ಬಂಧಿಸಲಾಗಿದೆ. ಜಾನುವಾರುಗಳಿಂದ ಮನುಷ್ಯರಿಗೆ ಮಾರಣಾಂತಿಕ ರೋಗಗಳು ಹರಡುವ ಸಂದರ್ಭದಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪ್ರಾಣಿಗಳ ವಧೆ ಅನಿವಾರ್ಯ. ರೇಬಿಸ್‌, ಕ್ಷಯ (ಟಿ.ಬಿ), ಬ್ರೂಸೆಲ್ಲೋಸಿಸ್‌, ಆಂಥ್ರಾಕ್ಸ್‌ ಕಾಣಿಸಿಕೊಂಡ ಪ್ರಾಣಿಗಳನ್ನು ಕೊಲ್ಲದೆ ದಾರಿ ಇಲ್ಲ. ಜಾನುವಾರುಗಳಿಗೆ ವಾಸಿಯಾಗದ ಕಾಯಿಲೆ ಮತ್ತು ನೋವಿನ ಸಂದರ್ಭದಲ್ಲಿ ನಿಯಮ 12 (9)ರ ಅಡಿ ಪಶು ನಿರೀಕ್ಷಕರು ದಯಾಮರಣ ನೀಡಬಹುದು ಎಂದು ಹೇಳಲಾಗಿದೆ. ಆದರೆ, ಅವರು ಹೊಂದಿರಬೇಕಾದ ಅರ್ಹತೆಗಳೇನು ಎಂಬ ಪ್ರಶ್ನೆ ಉದ್ಭವಿಸಿದೆ. ರೋಗಪೀಡಿತ ಪ್ರಾಣಿಗಳ ನಿರ್ಮೂಲನೆ ಬಗ್ಗೆಯೂ ಸ್ಪಷ್ಟತೆ ಇಲ್ಲ.