ಅಸಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ , ಕೊಂಡಿ ಸೇರ್ಪಡೆ
೫ ನೇ ಸಾಲು:
ಮೈತ್ರೇಯನಾಥನು ಅಸಂಗನಿಗೆ ಕಾಣಿಸಿದನೆಂದು ಹೇಳಲಾದ ಯೋಗಾಚಾರ ಭೂಮಿಶಾಸ್ತ್ರದ ಒಂದು ಪರಿಚ್ಛೇದವಾದ ಬೋಧಿಸತ್ವಭೂಮಿ ಮಾತ್ರ [[ಸಂಸ್ಕೃತ|ಸಂಸ್ಕೃತದಲ್ಲಿ]] ಉಳಿದುಬಂದಿದೆ. ಈ ಗ್ರಂಥ ಅಸಂಗನದೇ ಎಂದು ಟಿಬೆಟ್ ಸಂಪ್ರದಾಯ ಹೇಳುತ್ತದೆ. ಅಸಂಗನ ಗ್ರಂಥಗಳೆಲ್ಲ ಚೀನಿ ಭಾಷೆಯ ಪರಿವರ್ತನೆಗಳಲ್ಲಿ, [[ಟಿಬೆಟ್]] ದೇಶದ ತಾನ್‌ಜೂರ್‌ ಸಂಗ್ರಹದಲ್ಲಿ ಉಪಲಬ್ಧವಿವೆ. ಅವನ ಮಹಾಯಾನ ಸಂಪರಿಗ್ರಹವೆಂಬ ಗ್ರಂಥವನ್ನು ಸಂಸ್ಕೃತ ಭಾಷೆಯಿಂದ [[ಪರಮಾರ್ಥ]]ನು (499-569) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ; ಅವನ ಇನ್ನೊಂದು ಗ್ರಂಥವಾದ ಮಹಾಯಾನಾಭಿಧರ್ಮ ಸಂಗೀತಿಶಾಸ್ತ್ರವನ್ನು [[ಯುವಾನ್‌ಚಾಂಗ್]] 625ರಲ್ಲಿ ಚೀನಿಭಾಷೆಗೆ ಪರಿವರ್ತಿಸಿದ. ವಜ್ರಚ್ಛೇದಿಕಾ ಎಂಬ ಗ್ರಂಥಕ್ಕೆ ಅಸಂಗ ಬರೆದ ಭಾಷ್ಯವನ್ನು [[ಧರ್ಮಗುಪ್ತ]]ವೆಂಬ ಭಿಕ್ಷು (590-616) ಚೀನಿ ಭಾಷೆಗೆ ಅನುವಾದ ಮಾಡಿದ್ದಾನೆ. ಆತ ಅಸಂಗನ ಪಾಂಡಿತ್ಯವನ್ನೂ ಹೊಗಳಿದ್ದಾನೆ; ಅದರಲ್ಲಿ ಅಸಂಗನ ಜೀವಿತಕ್ರಮವೂ ನಿರೂಪಿತವಾಗಿದೆ. [[ವಸುಬಂಧು]]ವಿನ ಮತಪರಿವರ್ತನೆಗೆ ಅಸಂಗನೇ ಕಾರಣನೆಂದು ಈ ಗ್ರಂಥದಿಂದ ತಿಳಿಯುತ್ತದೆ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಬೌದ್ಧ ಧರ್ಮ]]
"https://kn.wikipedia.org/wiki/ಅಸಂಗ" ಇಂದ ಪಡೆಯಲ್ಪಟ್ಟಿದೆ