ಅಮೆರಿಕದ ಸ್ವಾತಂತ್ರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
೧ ನೇ ಸಾಲು:
ಅಮೆರಿಕದ ಸ್ವಾತಂತ್ರ್ಯಉತ್ತರ ಅಮೆರಿಕದ ಸಂಯುಕ್ತಸಂಸ್ಥಾನ ಸ್ವತಂತ್ರ್ಯ ರಾಷ್ಟ್ರವಾದದ್ದು ಪ್ರಪಂಚದ [[ಇತಿಹಾಸ]]ದಲ್ಲಿ ಒಂದು ಮುಖ್ಯ ಘಟನೆ. ಅಮೆರಿಕನ್ನರು ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದೆ ತಮ್ಮ ಸ್ವಾತಂತ್ರ್ಯವನ್ನು ಪಡೆಯಲು ಒಗ್ಗಟ್ಟಾಗಿ ಹೋರಾಡಿದುದು ಆದರ್ಶಪ್ರಾಯವಾಗಿದೆ. ಫ್ರಾನ್ಸ್ ದೇಶದ ಮಹಾಕ್ರಾಂತಿಗೆ ಇದು ಸ್ಪೂರ್ತಿ ನೀಡಿತು. (20)ನೆಯ ಶತಮಾನದಲ್ಲಿ ಅಮೆರಿಕ ಪ್ರಪಂಚದ ಆಗುಹೋಗುಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿ, ಪ್ರಜಾಪ್ರಭುತ್ವದ ಸಂರಕ್ಷಣೆ ಮತ್ತು ಭದ್ರತೆಗೆ ಸ್ಥಿರವಾದ ಬೆಂಬಲ ಕೊಡುತ್ತಿದೆ. ಅದೇ ಅದರ ಸ್ವಾತಂತ್ರ್ಯದ ಮುಖ್ಯ ಸಂದೇಶ. ಭಾರತದಂತೆಯೇ, ಅಮೆರಿಕಾ ಕೂಡ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಸಾಹತುವಾಗಿತ್ತು. [[ಯುರೋಪ್‌]]ನಲ್ಲಿ 'ಏಳು ವರ್ಷಗಳ ಯುದ್ಧ' ಮುಗಿದ ಮೇಲೆ ಉತ್ತರ ಅಮೆರಿಕಾದಲ್ಲಿ ಫ್ರೆಂಚ್ ಪ್ರಭಾವ ಕಡಿಮೆಯಾಗಿತ್ತು. ಅಮೆರಿಕಾದಲ್ಲಿ ನೆಲೆಯಾಗಿದ್ದ ಜನರಿಗೆ ಸ್ವ ಆಡಳಿತದ ಆಸೆ ಇದ್ದರೂ, ಬ್ರಿಟಿಷ್ ಸೈನ್ಯ, ನೌಕಾದಳ ಅಮೆರಿಕಾವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊ­ಂಡಿತ್ತು. ಈ ಬ್ರಹತ್ ಸೈನ್ಯದ ನಿರ್ವಹಣೆಗಾಗಿ ಬ್ರಿಟಿಷ್ ಸರಕಾರ ಅಮೆರಿಕಾದ ಮೇಲೆ ಹೆಚ್ಚುವರಿ ತೆರಿಗೆಗಳನ್ನು ಹೇರಿತು. ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಅಮೆರಿಕಾವನ್ನು ಪ್ರತಿನಿಧಿಸಲು ಯಾವೊಬ್ಬ ಪ್ರತಿನಿಧಿಯೂ ಇರಲಿಲ್ಲವಾದ ಕಾರಣ, ಅಮೆರಿಕನ್ನರು ನೇರ ಕಾರ್ಯಾಚಾರಣೆಗಿಳಿದರು.
 
1773ರಲ್ಲಿ ಬೊಸ್ಟನ್ ಬಂದರಿನಲ್ಲಿ ಬಂದಿಳಿದ ಹಡಗುಗಳಿದ್ಧ ಟೀ ಹುಡಿಯ ಬಾಕ್ಸ್‌ಗಳನ್ನು ಸಮುದ್ರಕ್ಕೆ ಎಸೆಯುವ ಮೂಲಕ, ಅಮೆರಿಕನ್ನರು ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಈ ಘಟನೆ ಇತಿಹಾ ಸದ ಪುಟಗಳಲ್ಲಿ 'ಬೋಸ್ಟನ್ ಟೀ ಪಾರ್ಟಿ' ಎಂಬ ಹೆಸರಿನಿಂದ ಚಿರಪರಿಚಿತ. ಇದರಿಂದ ಉದ್ರಿಕ್ತಗೊಂಡ ಬ್ರಿಟಿಷ್ ಸರಕಾರ ಮಸಾಚ್ಯುಸೆಟ್ಸ್ಅನ್ನು ಸೈನಿಕ ಆಡಳಿತಕ್ಕೆ ಒಳಪಡಿಸಿತು.
1775ರಲ್ಲಿ ಅಮೆರಿಕನ್ನರು ಜಾರ್ಜ್ ವಾಷಿಂಗ್‌ಟನ್ ರನ್ನು ಅಮೆರಿಕಾ ವಸಾಹತುಗಳ ಮಹಾದಂಡನಾಯಕರೆಂದು ಘೋಷಿಸಿದರು. ಸೋಲೇ ಕಾಣದ ಬ್ರಿಟಿಷ್ ಸೈನ್ಯಕ್ಕೆ ಅಮೆರಿಕನ್ನರು ಸಾಲು ಸಾಲು ಸೋಲಿನ ರುಚಿ ತೋರಿಸಿದರು. 1778ರಲ್ಲಿ ಅಮೆರಿಕಾಕ್ಕೆ ಫ್ರೆಂಚರ ಸಹಾಯಹಸ್ತ ದೊರಕಿ ಆನೆಬಲ ಬಂದತ್ತಾಗಿತ್ತು.
 
ಲೆಕ್ಸಿಂಗ್‌ಟನ್, ಸರಟೋಗಗಳಲ್ಲಿ ಸೋಲು ಅನುಭವಿಸಿದ ಬ್ರಿಟಿಷರಿಗೆ ಆಶಾಕಿರಣವಾಗಿ 1780ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಚಾರ್ಲ್ಸ್‌ಟೌನ್ ಪಟ್ಟಣವನ್ನು ವಶಪಡಿಸಿಕೊಂಡ. ಆದರೆ ಇದು ಅಲ್ಪಕಾಲದ ಯಶಸ್ಸು, 1781ರ ಅಕ್ಟೋಬರ್‌ನಲ್ಲಿ ಕಾರ್ನ್‌ವಾಲಿಸ್ ಯಾರ್ಕ್‌ಟೌನ್ ನಲ್ಲಿ ಅಮೆರಿಕನ್ನರಿಗೆ ಶರಣಾಗತನಾದ. ಯುದ್ಧ ಅಂತ್ಯವಾಗಿದ್ದು 1781ರಲ್ಲೇ ಆದರೂ, ಆರು ವರ್ಷಗಳ ಹಿಂದೆಯೇ ಅಂದರೆ 4 ಜುಲೈ 1776ರಲ್ಲಿಯೇ ಅಮೆರಿಕಾದ 13 ವಸಾಹತುಗಳ ಪ್ರತಿನಿಧಿಗಳು ಅಮೆರಿಕಾದ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿ ಬ್ರಿಟನ್ ಜೊತೆಗಿನ ಎಲ್ಲ ರಾಜಕಿಯ ಸಂಬಂಧಗಳನ್ನು ಕೊನೆಗೊಳಿಸಿದರು. ವಾಷಿಂಗ್‌ಟನ್, ಜೆಫರ್‌ಸನ್ ಮುಂತಾದವರು ಅಮೆರಿಕಾ ಕ್ರಾಂತಿಯ ರೂವಾರಿಗಳು. ಜುಲೈ 4 ಅಮೆರಿಕಾ ಮಾತ್ರವಲ್ಲ ವಿಶ್ವಕ್ಕೆ ಸ್ಪೂರ್ತಿಯಾದ ದಿನ. ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಸೋಲಿಸುವ ಮೂಲಕ, ಅಮೆರಿಕಾದ ಕ್ರಾಂತಿ ಮುಂದೆ ಅನೇಕ ದೇಶಗಳ ಸ್ವಾತಂತ್ರ್ಯ ಸಂಗ್ರಾಮಗಳಿಗೆ ಮಾದರಿಯಾಯಿತು.
 
==ವಸಾಹತುಗಳಲ್ಲಿ ಸಿದ್ಧತೆ==
ರಾಜಕೀಯ ಮತ್ತು ಮತಸಂಬಂಧವಾದ ಕಾರಣಗಳಿಗಾಗಿ ಯೂರೋಪಿನ ಅನೇಕ ಸಾಹಸೀರಾಷ್ಟ್ರಗಳು ಅಮೆರಿಕೆಗೆ ವಲಸೆ ಬಂದು ನೆಲೆಸಲುದ್ಯುಕ್ತವಾದುವು. (15)ನೆಯ ಶತಮಾನದಲ್ಲಿ ಸ್ಪ್ಯಾನಿಷ್, ಇಂಗ್ಲಿಷ್ ಮತ್ತು ಫ್ರೆಂಚ್ ಜನರು ಅಮೆರಿಕದಲ್ಲಿ ವಸಾಹತುಗಳನ್ನು (ಕಾಲೋನಿ) ಸ್ಥಾಪಿಸುತ್ತ ಬಂದರು. ಡಚ್ಚರು ಮತ್ತು ಸ್ವೀಡಿಷ್ ಜನರೂ ಅಲ್ಲಿನ ಕೆಲವು ಭಾಗಗಳಲ್ಲಿ ನೆಲೆಸಿದರು. ಸ್ಪೇನಿನ ಅಧಿಕಾರ ಪಶ್ಚಿಮದಲ್ಲಿ ಕ್ಯಾಲಿಫೋರ್ನಿಯದವರೆಗೂ ವ್ಯಾಪಿಸಿತು. ಫ್ರೆಂಚರು ಕೆನಡದಲ್ಲಿ ನೆಲೆಸಿದರು. ಬ್ರಟಿಷರು ಅಟ್ಲಾಂಟಿಕ್ ಸಮುದ್ರತೀರದ ವರ್ಜಿನಿಯದಲ್ಲಿ ಜೇಮ್ಸ್‍ಟೌನ್ ಎಂಬ ಮೊದಲ ಪಟ್ಟಣವನ್ನು 1607ರಲ್ಲಿ ಸ್ಥಾಪಿಸಿದರು. ಇಂಗ್ಲೆಂಡಿನಿಂದ ಧಾರ್ಮಿಕ ಕಾರಣಕ್ಕಾಗಿ ಅಮೆರಿಕಕ್ಕೆ ಹೊರಟ ಯಾತ್ರಾರ್ಥಿಗಳಾದ ಪಾದ್ರಿಗಳು (ಪಿಲ್‍ಗ್ರಿಮ್ ಫಾದರ್ಸ್) 1620ರಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡು ಮತಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದರು. ಇಂಗ್ಲೀಷರ ವಸಾಹತುಗಳಿಗೆ ಕೆನಡದ ಫ್ರೆಂಚರಿಂದ ಅಪಾಯವಿತ್ತು. ಸಪ್ತವಾರ್ಷಿಕ ಯುದ್ಧದ (1756-1763) ಅನಂತರ ಕೆನಡ ಇಂಗ್ಲಿಷರ ವಶವಾಯಿತು.
Line ೨೫ ⟶ ೩೧:
{{reflist}}
[[ವರ್ಗ:ಅಮೆರಿಕ]]
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ಇತಿಹಾಸ]]