"ವಾಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[File:Vali, the Monkey King killed by Rāma..jpg|thumb|ವಾಲಿ.]]
'''ವಾಲಿ'''ಯು [[ರಾಮಾಯಣ|ರಾಮಾಯಣದಲ್ಲಿ]]ದಲ್ಲಿ ಕಿಷ್ಕಿಂದೆಯ [[ವಾನರ]] ರಾಜ. ವಾಲಿಯು [[ಇಂದ್ರ|ಇಂದ್ರನ]] ಮಗ ಹಾಗೂ [[ಸುಗ್ರೀವ|ಸುಗ್ರೀವನ]] ಅಣ್ಣ. ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ [[ಅಂಗದ]] ಇವನ ಮಗ. ಇವನ ಮಡದಿ ತಾರಾ.
 
ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು [[ಶಿವ|ಶಿವನಿಂದ]] ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.
 
ವಾಲಿಯನ್ನು (ಸಂಸ್ಕೃತದ ಮೂಲ ಪದ '''ವಾಲಿನ್''') ಹಲವಾರು ಭಾರತೀಯ ಭಾಷೆಗಳಲ್ಲಿ ಬಾಲಿ ಎಂದು ಕರೆಯಲಾಗುತ್ತದೆ. ವಾಲಿಗೆ ಇನ್ನಿತರ ಹೆಸರುಗಳು [[ಇಂಡೋನೇಷ್ಯಾ|ಇಂಡೋನೇಷಿಯನ್]] ಭಾಷೆ: ಸುಬಾಲಿ, ಮಲೆ ಭಾಷೆ: ಬಾಲ್ಯ, ಯುವಾನ್: ಬಾರಿ, ಥಾಯ್: ಫಾಲಿ ಮತ್ತು ಲಾವೊ: ಪಾಲಿಕನ್.
 
==ಬಾಹ್ಯ ಸಂಪರ್ಕಗಳು==
೨೨೦

edits

"https://kn.wikipedia.org/wiki/ವಿಶೇಷ:MobileDiff/778759" ಇಂದ ಪಡೆಯಲ್ಪಟ್ಟಿದೆ