ಬಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೦ ನೇ ಸಾಲು:
 
==ಪವಿತ್ರ ತೀರ್ಥ==
[[File:1 tirtha empul temple.jpg|520px420px|center|thumb|ಇಂಪುಲ್ ದೇವಾಲಯದ ತೀರ್ಥ (tirtha empul temple)]]
*ಬಾಲಿಯಲ್ಲಿ ‘ತೀರ್ಥ ಎಂಪುಲ್’ ಎನ್ನುವ ಚಿಲುಮೆಯೊಂದಿದೆ. ಇದರ ನೀರಲ್ಲಿ ಮೀಯುವುದರಿಂದ, ಮೈ–ಮನಗಳ ಜೊತೆಗೆ ಆತ್ಮವೂ ಶುದ್ಧಿಯಾಗುತ್ತದೆ ಎನ್ನುವುದು ಹಿಂದೂ ಜನರ ನಂಬಿಕೆ. ಇದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಬಾಲಿಯನ್ನರ ಮನೋಧರ್ಮಕ್ಕೆ ಅನುಗುಣವಾಗಿರುವ ನಂಬಿಕೆ. ಇಂಡೋನೇಷ್ಯಾದಲ್ಲಿ ‘ದೇವರ ದ್ವೀಪ’ ಎಂದು ಹೆಸರಾದದ್ದು ಬಾಲಿ. ಆ ದೇವರಿಗೂ ಆಕರ್ಷಕ ಎನಿಸುವಷ್ಟು ಚೆಂದದ ದ್ವೀಪ ಎನ್ನುವ ಬಾಲಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ದೇವಾಲಯಗಳೇ! ಬಾಲಿಯಲ್ಲಿ ಆಚರಿಸುವ ಹಿಂದೂಧರ್ಮಕ್ಕೆ ಆಗಮ ತೀರ್ಥ (ಪವಿತ್ರ ನೀರಿನ ಧರ್ಮ) ಎಂದೇ ಕರೆಯುತ್ತಾರೆ. ನೀರಿಲ್ಲದೇ ಅವರಿಲ್ಲ. ದಿನಕ್ಕೆ ಎರಡು ಬಾರಿ ಸ್ನಾನಮಾಡುವರು. ಅದರೊಂದಿಗೆ ಅವರು ಪ್ರತೀ ಆರು ತಿಂಗಳಿಗೊಮ್ಮೆ ದೇಹ ,ಮನಸ್ಸು, ಆತ್ಮ ಮೂರನ್ನೂ ಸ್ವಚ್ಛಗೊಳಿಸುವ ‘ಮೇಲುಕಾಟ್’ ತೀರ್ಥಸ್ನಾನ ಮಾಡುತಾರೆ.
 
"https://kn.wikipedia.org/wiki/ಬಾಲಿ" ಇಂದ ಪಡೆಯಲ್ಪಟ್ಟಿದೆ