ಬಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೪ ನೇ ಸಾಲು:
 
*ತ್ರಿಹಿತಕರಣ’ ಬಾಲಿಯ ಹಿಂದೂಗಳ ಜೀವನದ ಮುಖ್ಯ ಪದ್ಧತಿ. ಸಮಾಜದ ಜನರು, ಪ್ರಕೃತಿ ಮತ್ತು ದೇವರೊಡನೆ ಶಾಂತಿಯಿಂದ ನಡೆಸುವ ಸಹಜೀವನದಲ್ಲಿ ಹಿತ ಅಡಗಿದೆ ಎಂಬುದು ಇದರ ಅರ್ಥ. ಹಾಗಾಗಿಯೇ ಮನೆಗಳು ಬೇರೆ ಇದ್ದರೂ ಹಬ್ಬ ಸಮಾರಂಭಗಳಲ್ಲಿ ಊರಿಗೆ ಊರೇ ಭಾಗಿಯಾಗುತ್ತದೆ. ಇಡೀ ಹಳ್ಳಿಯೇ ದೊಡ್ಡ ಅವಿಭಕ್ತ ಕುಟುಂಬದಂತೆ! ದೇವರನ್ನು ಕುರಿತು ಭಕ್ತಿಯಿದೆ, ಪ್ರತೀ ಮನೆಯಲ್ಲೂ ದೇಗುಲವಿರುತ್ತದೆ. ಆದರೆ ಒಳಗೆ ಯಾವುದೇ ಮೂರ್ತಿಯಿಲ್ಲ: ದೇವರು, ಹಿರಿಯರು ಶಕ್ತಿ ಸ್ವರೂಪಿಗಳು.
[[File:Pura Tirta Empul, Bali.JPG|thumb|ಪರಮಪವಿತ್ರ ಎಂಪುಲ್-ದೇವಾಲಯ, ತೀರ್ಥ ಎಂಪುಲ್ (ಪವಿತ್ರ ಚಿಲುಮೆ).(Pura Tirta Empul, Bali)]]
 
*ಅವರ ಪೂಜೆಗೆ ದೇವರು, ಹಿರಿಯರ ಆತ್ಮ ಒಲಿದು ಆಗಮಿಸಿ, ಕುಳಿತು, ಹರಸುತ್ತಾರೆ ಎಂಬ ನಂಬಿಕೆಯಿಂದ ಅವರಿಗಾಗಿಯೇ ಪುಟ್ಟ ಜಾಗವನ್ನು ಖಾಲಿ ಇಡಲಾಗುತ್ತದೆ! ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಜನರಿಗೆ ಶಕ್ತಿ ಸಂಕೇತಗಳು. ಹಿರಿಯರು ಮತ್ತು ದೇವರು ಕೂಡಾ ನಿಸರ್ಗದಲ್ಲಿ ಲೀನವಾಗಿದ್ದಾರೆ. ಹಾಗಾಗಿ ಅವುಗಳ ಮೂಲಕ ಎಲ್ಲೆಲ್ಲೂ ಇದ್ದಾರೆ ಎಂದು ಹೇಳುತ್ತಾರೆ. ಆದ್ದರಿಂದಲೇ ಇಲ್ಲಿ ನೀರು, ಕಲ್ಲು, ಮಣ್ಣು ಎಲ್ಲವೂ ಪವಿತ್ರ.
 
*‘ಮೇಲುಕಾಟ್’ತೀರ್ಥಕ್ಷೇತ್ರ ಬಾಲಿಯ ಜನರು ಸಾವಿರಾರು ವರ್ಷಗಳಿಂದ ಸಂದರ್ಶಿಸುತ್ತಿರುವ ಮುಖ್ಯ ಸ್ಥಳ ‘ತೀರ್ಥ ಎಂಪುಲ್’! ಉಬುಡ್ ಗ್ರಾಮದಿಂದ ಅರ್ಧ ತಾಸಿನ ಹಾದಿಯಲ್ಲಿ ಮನುಕಯಾ ಎಂಬ ಪ್ರಾಂತ್ಯದಲ್ಲಿ ‘ತಂಪಕ್ ಸಿರಿಂಗ್’ ಎಂಬ ಪುಟ್ಟ ಪಟ್ಟಣ. ಇಲ್ಲಿದೆ ಪರಮಪವಿತ್ರ ದೇವಾಲಯ, ತೀರ್ಥ ಎಂಪುಲ್ (ಪವಿತ್ರ ಚಿಲುಮೆ)ಇದೆ. ಇಲ್ಲಿನ ಕೊಳದ ಚಿಲುಮೆಯಿಂದ ಸತತವಾಗಿ ಸಿಹಿನೀರು ಚಿಮ್ಮುತ್ತಿದ್ದು ಅದು ಅಮೃತಕ್ಕೆ ಸಮಾನ–ಪವಿತ್ರ ಎಂದು ಬಾಲಿಯ ಜನ ಪರಿಗಣಿಸುತ್ತಾರೆ. ಈ ನೀರಿನ ವಿಧಿವತ್ತಾದ ಸ್ನಾನ, ಪ್ರೋಕ್ಷಣೆ ಮತ್ತು ಸೇವನೆ ಶುದ್ಧೀಕರಣದ ಪ್ರಮುಖ ಘಟ್ಟ.
===ದೇವಾಲಯ===
[[File:Pura Tirta Empul, Bali.JPG|thumb|ಪರಮಪವಿತ್ರ ಎಂಪುಲ್-ದೇವಾಲಯ, ತೀರ್ಥ ಎಂಪುಲ್ (ಪವಿತ್ರ ಚಿಲುಮೆ).(Pura Tirta Empul, Bali)]]
[[File:Bali's Gunung Agung seen at sunset from Gunung Rinjani.jpg|thumb|ದೂರದಲ್ಲಿ ದ್ವೀಪದ ಎತ್ತರದ ಬೆಟ್ಟ -ಸೂರ್ಯಾಸ್ತ. (Bali's Gunung Agung seen at sunset from Gunung Rinjani)]]
*ಈ ದೇವಾಲಯ ಸಂಕೀರ್ಣವನ್ನು ಕ್ರಿ.ಶ 960ರಲ್ಲಿ ವರ್ಮದೇವ ರಾಜವಂಶದ ಆಡಳಿತ ಅವಧಿಯಲ್ಲಿ ಕಟ್ಟಲಾಯಿತು. ಇಲ್ಲಿರುವ ಪವಿತ್ರ ಚಿಲುಮೆಯ ಕುರಿತು ಉಸಾನಾ ಬಾಲಿ ಹಸ್ತಪ್ರತಿಯಲ್ಲಿ ಉಲ್ಲೇಖವಿದೆ.
"https://kn.wikipedia.org/wiki/ಬಾಲಿ" ಇಂದ ಪಡೆಯಲ್ಪಟ್ಟಿದೆ