ಸಾವಿನ ಕಣಿವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
[[File:Death Valley turistoj.jpg|thumb|ಸಾವಿನ ಕಣಿವೆ]]
'''ಸಾವಿನ ಕಣಿವೆ''' ( [[ಆಂಗ್ಲ]] ಹೆಸರು '''''ಡೆತ್ ವ್ಯಾಲಿ''''' ) [[ಯು.ಎಸ್.ಎ]] ದ ನೈಋತ್ಯಭಾಗದಲ್ಲಿನ (ಕ್ಯಾಲಿಫೋರ್ನಿಯಾದ ಪೂರ್ವಭಾಗ) ಒಂದು [[ಮರುಭೂಮಿ]] ಪ್ರದೇಶ. ಸಾವಿನ ಕಣಿವೆಯು [[ಉತ್ತರ ಅಮೇರಿಕಾ ಖಂಡ]]ದ ಅತಿ ತಗ್ಗಿನ, ಅತ್ಯಂತ ಒಣ ಮತ್ತು ಅತ್ಯಂತ ಬಿಸಿ ಪ್ರದೇಶವಾಗಿದೆ. ಭೂಮಿಯ ಪಶ್ಚಿಮ ಗೋಲಾರ್ಧದಲ್ಲಿ ಅತ್ಯಂತ ಹೆಚ್ಚಿನ ಉಷ್ಣತೆಯು ( ೫೬.೭ ಡಿ. ಸೆಲ್ಸಿಯಸ್ ಯಾ ೧೩೪ ಡಿ. ಫ್ಯಾರನ್‌ಹೀಟ್) ಸಾವಿನ ಕಣಿವೆಯ ಫರ್ನೆಸ್ ಕ್ರೀಕ್ ಎಂಬ ಸ್ಥಳದಲ್ಲಿ ೧೯೧೩ರಲ್ಲಿ ದಾಖಲಾಯಿತು. ಭೂಮಿಯ ಮೇಲೆ ಅತ್ಯಂತ ಹೆಚ್ಚಿನ ತಾಪಮಾನವು ( ೫೮ ಡಿ. ಸೆಲ್ಸಿಯಸ್ ಯಾ ೧೩೬ ಡಿ. ಫ್ಯಾರನ್‌ಹೀಟ್) [[ಲಿಬ್ಯಾ]] ದೇಶದ ಎಲ್-ಅಜೀಜಿಯಾ ಎಂಬಲ್ಲಿ ೧೯೨೨ರ ಸೆಪ್ಟೆಂಬರ್ ೧೩ ರಂದು ದಾಖಲಾಗಿದೆ. ಸಾವಿನ ಕಣಿವೆಯ ವಿಸ್ತೀರ್ಣ ಸುಮಾರು ೩೦೦೦ ಚದರ ಮೈಲಿಗಳು. ಸಾವಿನ ಕಣಿವೆಯಲ್ಲಿ ದಿನದ ಅತಿ ಹೆಚ್ಚಿನ ತಾಪಮಾನ ೫೦ ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲಕ್ಕಿರುವುದು ಸಾಮಾನ್ಯ. ಬೇಸಗೆಯ ರಾತ್ರಿಗಳಲ್ಲಿ ಸಹ ಅತಿ ಕಡಿಮೆ ತಾಪಮಾನವು ೩೫ ಡಿ. ಗಳಷ್ಟಿರುತ್ತದೆ. ಇಲ್ಲಿ ವಾರ್ಷಿಕ ಸರಾಸರಿ [[ಮಳೆ]] ಸುಮಾರು ಎರಡು ಅಂಗುಲಗಳಷ್ಟು ಮಾತ್ರ. ಇಷ್ಟು ಅಲ್ಪ ಮಳೆ ಬಿದ್ದರೂ ಸಹ ಇಲ್ಲಿನ ನೆಲವು ನೀರನ್ನು ಬೇಗ ಹೀರಿಕೊಳ್ಳುವಲ್ಲಿ ಅಸಮರ್ಥವಾಗಿರುವುದರಿಂದ ಸಾವಿನ ಕಣಿವೆಯಲ್ಲಿ ಹಠಾತ್ [[ಪ್ರವಾಹ]]ಗಳು ಉಂಟಾಗುತ್ತವೆ.<ref>https://www.deathvalley.com</ref>
 
==ಬಾಹ್ಯ ಸಂಪರ್ಕಕೊಂಡಿಗಳು==
"https://kn.wikipedia.org/wiki/ಸಾವಿನ_ಕಣಿವೆ" ಇಂದ ಪಡೆಯಲ್ಪಟ್ಟಿದೆ