ಕಸೂತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಬಂಗಾರದ ಕಸೂತಿ ಸಾಮಾನ್ಯವಾಗಿ ಬಟ್ಟೆಯ ಮೇ...
 
೨೪ ನೇ ಸಾಲು:
ಪಂಜಾಬಿನ ಸ್ತ್ರೀಯರು ಸಾಮಾನ್ಯವಾಗಿ ಧರಿಸುತ್ತಿದ್ದ ಫುಲ್‍ಕಾರಿ ಕಸೂತಿಗಳಲ್ಲಿ ಮೊಗಲರ ಪ್ರಭಾವ ಬೀಳುವ ಮೊದಲು ಈ ಕಲೆಯ ಮಾದರಿ ಹೇಗಿತ್ತೆಂಬುದನ್ನು ಕಾಣಬಹುದು. ಇವುಗಳಿಗೆ ವಿಶಿಷ್ಟ ಜ್ಯಾಮಿತಿಯ ಆಕಾರಗಳಿರುತ್ತಿದ್ದವು. ಫುಲ್‍ಕಾರಿ ಕಸೂತಿಯನ್ನು ಎಳೆತುಂಬುವ ಹೊಲಿಗೆಗಳಿಗಾಗಿ ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಹೊಲಿಗೆಗಳು ಬಹಳ ಚಿಕ್ಕವಾಗಿದ್ದು, ಹತ್ತಿರಹತ್ತಿರವಿರುತ್ತಿದ್ದುವು ; ಹೊಲಿಗೆಯ ಮನೆಗಳನ್ನೋ ಸಾಲುಗಳನ್ನೋ ಎಣಿಕೆ ಮಾಡಿ ಅವುಗಳ ನಿರ್ದುಷ್ಟತೆಯನ್ನು ಪರೀಕ್ಷಿಸಲಾಗುತ್ತಿತ್ತು. ಅಮೆರಿಕನ್ ಮತ್ತು ಐರೋಪ್ಯ ಮಾದರಿಗಳನ್ನು ಅನುಸರಿಸಿ ಒಂದು ರೀತಿಯ ಕತ್ತರಿ ಹೊಲಿಗೆ ಕೂಡ ಪ್ರಚಲಿತವಾಗಿತ್ತು. ಇವುಗಳಲ್ಲಿ ಜಮದಾನಿ, ಚಿಕನ್ ಮತ್ತು ಕಸೀದಾ ಮಾದರಿಗಳು ಪ್ರಮುಖವಾಗಿದ್ದವು. ಕಸೀದಾ ಮಾದರಿಯಲ್ಲಿ ಚಿನ್ನದ ಬಣ್ಣದ ರೇಷ್ಮೆಯನ್ನು ಎಳೆತುಂಬಲೂ ಸಾಟಿನ್ ಹೊಲಿಗೆಗಳಿಗಾಗಿಯೂ ಉಪಯೋಗಿಸುತ್ತಿದ್ದರು. ಸಾಂಪ್ರದಾಯಿಕ ಸಮಾರಂಭಗಳಲ್ಲಿ ಚಿನ್ನಬೆಳ್ಳಿಗಳಿಂದ ಕಸೂತಿ ಮಾಡಲಾದ ವಸ್ತ್ರಗಳನ್ನು ಬಹುತೇಕ ಉಪಯೋಗಿಸುತ್ತಿದ್ದರು. ಜೊತೆಗೆ ಮಖಮಲ್ಲು ಮೊದಲಾದ ವಸ್ತ್ರಗಳನ್ನು ಉಪಯೋಗಿಸಿದಾಗ ಅವುಗಳ [[ಸೌಂದರ್ಯ]] ಇನ್ನೂ ಹೆಚ್ಚುತ್ತಿತ್ತು.
==ಉಲ್ಲೇಖಗಳು==
{{Reflist}}
[[ವರ್ಗ:ಕಸೂತಿ]]
"https://kn.wikipedia.org/wiki/ಕಸೂತಿ" ಇಂದ ಪಡೆಯಲ್ಪಟ್ಟಿದೆ