ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧೦ ನೇ ಸಾಲು:
== ಆಕರಗಳ ಬಳಕೆ ==
ಇರುವ ಆಕರಗಳಿಂದ ಇಲ್ಲಿನ ಮತ್ತು ಇತರ ಮಾಹಿತಿಯ ಬಗೆಗಿನ ನೀತಿಗಳ ಆಧಾರದ ಮೇಲೆ ಮಾಹಿತಿಯನ್ನು ಸಂಶೋಧಿಸಿ ಕ್ರೂಡೀಕರಿಸುವುದು ಮತ್ತು ಸಂಘಟಿಸುವುದು ಒಂದು ವಿಶ್ವಕೋಶದ ಬರೆವಣಿಗೆಯ ಮೂಲಭೂತ ಅಗತ್ಯವಾಗಿದೆ. ಒಳ್ಳೆಯ ಪದ್ಧತಿಯೆಂದರೆ ವಿಷಯದ ಮೇಲೆ ನಂಬಲರ್ಹ ಆಕಾರಗಳನ್ನು ಹುಡುಕಿ ಮತ್ತು ಮಾಹಿತಿಯನ್ನು ಸಂಗ್ರಹರೂಪದಲ್ಲಿ ನಿಮ್ಮದೇ ಪದಗಳಲ್ಲಿ ಹೇಳುವುದು. ಅಲ್ಲದೆ ಲೇಖನದ ಪ್ರತಿ ಹೇಳಿಕೆಯನ್ನೂ ಅದನ್ನು ವಿಷದ ಪಡಿಸುವ ಆಕಾರಗಳಿಗೆ ಆರೋಪಿಸುವುದು ಸಹ ಅಗತ್ಯ. ಮೂಲ ಆಕರಗಳ ಮಾಹಿತಿಯನ್ನು ಅದರ ಅರ್ಥ ಮತ್ತು ಅಂಥರಾರ್ಥಗಳಿಗೆ ಚ್ಯುತಿ ಬರದಂತೆ ಎಚ್ಚರಿಕೆಯಿಂದ ಸಂಗ್ರಹಿಸಬೇಕು. ಆಕರಗಳಲ್ಲಿ ಏನು ಹೇಳಿದೆಯೊ ಅದರಾಚೆ ಹೋಗದಂತೆ ಅಥವಾ ಮೂಲ ಆಕರಗಳ ಉದ್ಧೇಶಕ್ಕೆ ಸಂಗತವಲ್ಲದ ರೀತಿಯಲ್ಲಿ (ಉದಾಹರಣೆಗೆ ಉಲ್ಲೇಖಗಳನ್ನು ಅದರ ಸಂದರ್ಭವನ್ನು ಗಣನೆ ತೆಗೆದುಕೊಳ್ಳದಂತೆ ಉಲ್ಲೇಖಿಸುವುದು) ಬಳಸದಂತೆ ಎಚ್ಚರಿಕೆ ವಹಿಸಿ. ಬೇರೆ ಮಾತುಗಳಲ್ಲಿ '''ಮೂಲಕ್ಕೆ ಚ್ಯುತಿ ಬರದಿರಲಿ'''.
 
ವಿಷಯದ ಮೇಲೆ ಯಾವುದೇ ವಿಶ್ವಾಸಾರ್ಹ ತೃತೀಯ ಪಕ್ಷದ ಆಕರಗಳು ಕಾಣಸಿಗುವುದಿಲ್ಲ ಎಂದಾದರೆ, ವಿಕಿಪೀಡಿಯದಲ್ಲಿ ಅದರ ಬಗ್ಗೆ ಲೇಖನವು ಇರಬಾರದು. ನೀವು ಏನಾದರು ಹೊಸತನ್ನು ಕಂಡುಹಿಡಿದಲ್ಲಿ, ವಿಕಿಪೀಡಿಯ ಇಂತಹ ಆವಿಷ್ಕಾರವನ್ನು ಘೋಷಿಸಲು ಸೂಕ್ತ ಸ್ಥಳವಲ್ಲ.
=== ವಿಶ್ವಾಸಾರ್ಹ ಆಕರಗಳು ===
ಯಾವುದೇ ಮಾಹಿತಿಯನ್ನು ಪ್ರಶ್ನಿಸಲಾಗಿದ್ದರೆ ಅಥವಾ ಪ್ರಶ್ನಿಸುವ ಸಾಧ್ಯತೆ ಇದ್ದರೆ ಅದಕ್ಕೆ ನಂಬಲರ್ಹ ಆಕಾರಗಳ ಬೆಂಬಲವಿರಬೇಕು. ವಿಶ್ವಾಸಾರ್ಹ ಆಕರವಿಲ್ಲದ ಮಾಹಿತಿಯನ್ನು 'ಸ್ವಂತ ಸಂಶೋಧನೆ' ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಸಂಪಾದನೆ ಸ್ವಂತ ಸಂಶೋಧನೆಯಲ್ಲ ಎಂದು ತೋರಿಸಲು ಇರುವ ಒಂದೇ ದಾರಿಯೆಂದರೆ ಆ ಮಾಹಿತಿ ಇರುವ ನಂಬಲರ್ಹ ಪ್ರಕಟಿತ ಮೂಲ ಆಕಾರಗಳನ್ನು ಉಲ್ಲೇಖಿಸುವುದು. ನಂಬಲರ್ಹ ಮಾಹಿತಿಗಳ ಆಕಾರಗಳನ್ನೂ ಅವುಗಳ ಸಂದರ್ಭಕ್ಕೆ ಹೊರತಾಗಿ ನೀವು ಬಳಸಿದರೆ ಅಥವಾ ಅವುಗಳಲ್ಲಿ '''ನೇರ ಮತ್ತು ಸುಸ್ಪಷ್ಟವಾಗಿ''' ಇಲ್ಲದ ನಿರ್ಣಯಗಳನ್ನು ನೀವು ತಲುಪಿದಲ್ಲಿ ನೀವು ಸ್ವಂತ ಸಂಶೋಧನೆ ಮಾಡಿದಿರೆಂದೇ ಅರ್ಥ.
 
 
ಸಾಮಾನ್ಯವಾಗಿ, ಹೆಚ್ಚಿನ ವಿಶ್ವಾಸಾರ್ಹ ಮೂಲಗಳು: