ಸ್ಮಾರ್ತ ಸಂಪ್ರದಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಸ್ಮಾರ್ತ ಸಂಪ್ರದಾಯ''' ಎಲ್ಲ ಪ್ರಮುಖ ಹಿಂದೂ ದೇವತೆಗಳನ್ನು ಬ್ರಹ್ಮನ್‍ನ ರ...
 
No edit summary
೧ ನೇ ಸಾಲು:
[[ಚಿತ್ರ:Ganesha_pachayatana.jpg|thumb|ಸ್ಮಾರ್ತರ ಐದು ಪ್ರಧಾನ ದೇವತೆಗಳು]]
'''ಸ್ಮಾರ್ತ ಸಂಪ್ರದಾಯ''' ಎಲ್ಲ ಪ್ರಮುಖ ಹಿಂದೂ ದೇವತೆಗಳನ್ನು [[ಬ್ರಹ್ಮನ್]]‍ನ ರೂಪಗಳೆಂದು ಸ್ವೀಕರಿಸುವ, ಮುಖ್ಯವಾಗಿ ಬ್ರಾಹ್ಮಣರಿಂದ ರಚಿತವಾದ ಒಂದು ಶಾಸ್ತ್ರಾನುಸಾರಿಯಾದ [[ಹಿಂದೂ ಧರ್ಮ|ಹಿಂದೂ]] "ಕುಟುಂಬ ಸಂಪ್ರದಾಯ" ಅಥವಾ ಪಂಥ. ''ಸ್ಮಾರ್ತ'' ಶಬ್ದವು, ಅಕ್ಷರಶಃ "ನೆನಪಿನಲ್ಲಿಟ್ಟುಕೊಂಡದ್ದು" ಎಂಬ ಅರ್ಥ ಕೊಡುವ, ಮಾನವ ಬರಹಗಾರಿಕೆಯದ್ದು ಎಂದು ಪರಿಗಣಿಸಲಾಗಿರುವ, ಹಿಂದೂ [[ಧರ್ಮ|ಧಾರ್ಮಿಕ]] [[ಧರ್ಮಗ್ರಂಥ|ಗ್ರಂಥದ]] ಒಂದು ನಿರ್ದಿಷ್ಟ ಮಂಡಲವಾದ, ''ಸ್ಮೃತಿ'' ಶಬ್ದದಿಂದ ಹುಟ್ಟಿಕೊಂಡಿದೆ. ಸಂಪೂರ್ಣವಾಗಿ ದೈವಿಕ ಮೂಲದ್ದು ಎಂದು ನಂಬಲಾಗಿರುವ, [[ಶ್ರುತಿ]]ಗೆ ಹೋಲಿಸಿದರೆ ಅವು ಕಡಿಮೆ ಅಧಿಕಾರಯುಕ್ತವಾಗಿವೆ.
 
'''ಸ್ಮಾರ್ತ ಸಂಪ್ರದಾಯ''' [[ಪುರಾಣ]] ಶೈಲಿಯ ಸಾಹಿತ್ಯದೊಂದಿಗೆ ಬೆಳೆದು ವಿಸ್ತರಿಸಿದ [[ಹಿಂದೂ ಧರ್ಮ]]ದ ಚಳುವಳಿ. ಈ ಪೌರಾಣಿಕ ಧರ್ಮ ಐದು ದೇವತೆಗಳಿರುವ ಐದು ದೇಗುಲಗಳ ದೇಶೀಯ ಪೂಜೆಗೆ ಗಮನಾರ್ಹವಾಗಿದೆ, ಎಲ್ಲ ಐದು ದೇವತೆಗಳನ್ನು ಸಮಾನವಾಗಿ ಕಾಣಲಾಗುತ್ತದೆ - [[ವಿಷ್ಣು]], [[ಶಿವ]], [[ಗಣೇಶ]], [[ಸೂರ್ಯ]], ಮತ್ತು [[ದೇವಿ]] (ದುರ್ಗೆ). ಸ್ಮಾರ್ತ ಸಂಪ್ರದಾಯ ಹೆಚ್ಚು ಹಳೆಯ ಶ್ರೌತ ಸಂಪ್ರದಾಯದಿಂದ ಭಿನ್ನವಾಗಿದೆ, ಏಕೆಂದರೆ ಶ್ರೌತ ಸಂಪ್ರದಾಯವು ವಿಸ್ತಾರವಾದ ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳನ್ನು ಆಧರಿಸಿತ್ತು. ಸ್ಮಾರ್ತ ಸಂಪ್ರದಾಯವು [[ಅದ್ವೈತ ವೇದಾಂತದೊಂದಿಗೆ]] ಹೊಂದಿಕೆಯಾಗುತ್ತದೆ, ಮತ್ತು [[ಆದಿ ಶಂಕರ]]ರನ್ನು ತನ್ನ ಸ್ಥಾಪಕ ಅಥವಾ ಸುಧಾರಕನೆಂದು ಪರಿಗಣಿಸುತ್ತದೆ.
 
[[ವರ್ಗ:ಹಿಂದೂ ಪಂಥಗಳು]]
"https://kn.wikipedia.org/wiki/ಸ್ಮಾರ್ತ_ಸಂಪ್ರದಾಯ" ಇಂದ ಪಡೆಯಲ್ಪಟ್ಟಿದೆ