ಪ್ರೊಟೆರೊಜೋಯಿಕ್ ಕಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
 
ಆದಿಜೀವಯುಗದಲ್ಲಿ ಜೀವಿಗಳು ಇದ್ದುವೆಂಬುದನ್ನು ಸ್ಥಿರಪಡಿಸುವುದಕ್ಕೆ ನಮಗೆ ಸಾಕಾದಷ್ಟು ಆಧಾರ ದೊರಕಿದೆ. ಅತ್ಯಧಿಕ ಪ್ರಮಾಣದಲ್ಲಿ ಸುಣ್ಣಶಿಲೆ ನಿಕ್ಷೇಪ, ಗ್ರಾಫೈಟ್, ಇಂಗಾಲಾಂಶ, ಗ್ಲಾಕೊನೈಟ್ ಪಟ್ಟಿಯಿರುವ ಕಬ್ಬಿಣದ ಅದುರು ನಿಕ್ಷೇಪ ಮತ್ತು ಲ್ಯಾಟರೈಟ್ ಮುಂತಾದ ನಿಕ್ಷೇಪಗಳು ಜೀವಿಗಳು ಇರುವುದನ್ನು ಸಾರುತ್ತವೆ. ಇವೆಲ್ಲ ಅಪ್ರತ್ಯಕ್ಷ ಪ್ರಮಾಣಗಳು. ಈ ಕಾಲದ ಸುಣ್ಣ ಶಿಲೆಯಲ್ಲಿ ಕೆಲವು ಭಾಗವಾದರೂ, ಜೀವಿಗಳ ಅದರಲ್ಲೂ ಆಲ್ಗೇ ಎಂಬ ಸಸ್ಯಗಳ ಕಾರ್ಯಾಚರಣೆಯಿಂದ ಆದಂಥವು ಎಂದು ಕೆಲವರ ವಾದ. ಆದರೆ ಈ ಸುಣ್ಣ ಶಿಲೆಗಳಲ್ಲಿ ಆಲ್ಗೇಗಳ ಅವಶೇಷಗಳಿಲ್ಲ. ಆದ್ದರಿಂದ ಅವು ಜೀವಿಗಳ ಕಾರ್ಯಾಚರಣೆಯಿಂದ ಆದಂಥವೋ ಅಥವಾ ರಾಸಾಯನಿಕ ಕ್ರಿಯೆಯಿಂದ ಆದಂಥವೋ ಎಂಬ ಶಂಕೆ ಇನ್ನೂ ವಿಜ್ಞಾನಿಗಳನ್ನು ಪೀಡಿಸುತ್ತಿದೆ.
 
==ಗ್ರಾಫೈಟ್ ಶಿಲೆ ಬಳ್ಳಿ==
ಗ್ರಾಫೈಟ್ ಶಿಲೆ ಬಳ್ಳಿ ಬಳ್ಳಿಯಾಗಿಯೂ ಕಣವಾಗಿಯೂ ಸಿಗುತ್ತದೆ. ಕೆನಡ ದೇಶದ ಭೂವಿಜ್ಞಾನಿ ಜೆ. ಡಬ್ಲ್ಯು. ಡಾಸನ್ ಗ್ರಾಫೈಟ್ ಪದರವನ್ನು ಕಾರ್ಬ್‍ನಿಫೆರಸ್ ಕಾಲದ (ಇಂಗಾಲಯುಗ) ಕಲ್ಲಿದ್ದಲು ಪದರಗಳಿಗೆ ಹೋಲಿಸಿ ಇಷ್ಟು ಪ್ರಮಾಣದ ಇಂಗಾಲಾಂಶ ಜೀವಿಗಳ ಮೂಲಕ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟಿರುವನು. ಆದರೆ ಗ್ರಾಫೈಟ್ ಶಿಲೆ ಯಾವುದನ್ನು ತೆಗೆದುಕೊಂಡರೂ ಅದು ಜೀವಿಜನಿತವೆಂದು ನಿಖರವಾಗಿ ಪ್ರತಿಪಾದಿಸಲಾಗುವುದಿಲ್ಲ. ಹಾಗೆಯೇ ಪದರವಿರುವ ಕಬ್ಬಿಣದ ಅದುರು, ಮ್ಯಾಂಗನೀಸ್ ಅದುರು ಮತ್ತು ಲ್ಯಾಟರೈಟ್‍ಗಳೂ ಬ್ಯಾಕ್ಟೀರಿಯ ಜೀವಿಗಳ ಕಾರ್ಯಾಚರಣೆಯಿಂದ ನಿಕ್ಷೇಪಗೊಂಡವೆಂದು ಕೆಲವರ ಅಭಿಪ್ರಾಯ. ಆದರೆ ಯಾವ ನಿಕ್ಷೇಪವೂ ನಿರ್ದಿಷ್ಟವಾಗಿ ಹೀಗೆಯೇ ಆದುದು ಎಂದು ಸಮರ್ಥಿಸಲು ಸಾಧ್ಯವಿಲ್ಲ. ಅವು ರಾಸಾಯನಿಕವಾಗಿಯೂ ರೂಪುಗೊಳ್ಳಲು ಸಾಧ್ಯ.
 
==ಆದಿಜೀವಯುಗದ ಶಿಲಾಸಮೂಹ==
ಆದಿಜೀವಯುಗದ ಶಿಲಾಸಮೂಹಗಳಲ್ಲಿ ಜೀವಾವಶೇಷಗಳನ್ನು ಹುಡುಕಲು ಕೆಲವು ಭೂವಿಜ್ಞಾನಿಗಳಿಂದ ಬಹಳ ಪ್ರಯತ್ನ ನಡೆದಿದೆ. 1858ರಲ್ಲಿ ಲೋಗಾನ್, ಕೆನಡಾದ ಲಾರೆನ್ಷಿಯನ್ ನೈಸೆ ಶಿಲೆಯಲ್ಲಿ ಒಂದು ಕುತೂಹಲಕರ ಖನಿಜ ಶೇಖರಣೆಯನ್ನು ಕಂಡುಹಿಡಿದ. ಅದರಲ್ಲಿ ಕ್ಯಾಲಸೈಟ್ ಮತ್ತು ಸರ್‍ಪೆಂಟೈನ್ ಎಂಬ ಖನಿಜಗಳು ಒಂದರಮೇಲೊಂದರಂತೆ ಅನೇಕ ಪಟ್ಟಿಗಳಾಗಿ ನಿಕ್ಷೇಪಗೊಂಡಿದ್ದುವು. ಕ್ಯಾಲಸೈಟ್ ಪ್ರಧಾನವಾಗಿಯೂ ಸರ್‍ಪೆಂಟೈನ್ ಗೂಡುಗಳನ್ನು ತುಂಬಿದಂತಿದ್ದುವು. ಇಂಥ ರಚನೆ ಖನಿಜದಲ್ಲಿರುವುದು ಬಹಳ ವಿರಳ. ಆದುದರಿಂದ ಇದಕ್ಕೆ ಜೀವಿ ಸಂಬಂಧವಿರಬೇಕೆಂದು ಲೋಗನ್ ನಿರ್ಧರಿಸಿದುದಲ್ಲದೆ ಇದಕ್ಕೆ ಒಂದು ಹೊಸ ಹೆಸರನ್ನೂ ಕೊಟ್ಟ (ಇಯೋಜೋವನ್‍ಕೆನಡನ್ಸೀಸ್). ಇದರ ವಿಚಾರವಾಗಿ ಇನ್ನೂ ಹೆಚ್ಚು ವಿವರಗಳನ್ನು ಡಬ್ಲ್ಯು. ಬಿ. ಕಾರ್ಪೆಂಟ್ ವರದಿ ಮಾಡಿದ. ಆದರೆ ಇತರ ವಿದ್ವಾಂಸರು ಇಯೋಜೋವನ್‍ಕೆನಡನ್ಸೀಸ್ ಜೀವಿಜನ್ಯವಾದುದಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಖನಿಜ ಪ್ರಪಂಚದಲ್ಲಿ ಇಯೋಜೋವನ್‍ಕೆನಡನ್ಸೀಸ್‍ನಂಥ ರಚನೆಯಿರುವುದು ಎಲ್ಲೂ ಕಂಡುಬಂದಿಲ್ಲ. ಆದರೆ ಇಷ್ಟು ಚಲನೆಗೂ ರೂಪಾಂತರಕ್ಕೂ ಒಳಗಾದ ಶಿಲಾಸಮೂಹಗಳಲ್ಲಿ ಜೀವಾವಶೇಷಗಳನ್ನು ಕಾದಿರಿಸುವುದೂ ಅಸಂಭವ. ಆದ್ದರಿಂದ ನಿಖರವಾದ ಜೀವಿಸಂಬಂಧ ವಸ್ತುಗಳನ್ನಲ್ಲದೆ ಬೇರಾವುದನ್ನೂ ಅಂಗೀಕರಿಸುವುದು ಸಾಧುವಲ್ಲ.
 
==ಜೇಮ್ಸ್ ಹಾಲ್==
1885ರಲ್ಲಿ ಜೇಮ್ಸ್ ಹಾಲ್ ಆದಿಜೀವಯುಗದ ಶಿಲೆಗಳಲ್ಲಿ ಎಳೆಕೋಸಿನಂಥ ರಚನೆಯನ್ನು ಪ್ರಾಣಿಯ ಅವಶೇಷವೆಂದು ಅಭಿಪ್ರಾಯಪಟ್ಟು ಅದನ್ನು ಕ್ರಿಪ್ಟೊಜೋವಸ್ ಎಂದು ಹೆಸರಿಸಿದ. ಇದೇ ರೀತಿಯ ರಚನೆ ಗ್ರೀನ್‍ಲ್ಯಾಂಡ್ ಮತ್ತು ಗೋಬಿ ಮರುಭೂಮಿ ಪ್ರದೇಶಗಳಲ್ಲಿ ಇರುವುದು ವರದಿಯಾಗಿದೆ. ಈ ರಚನೆಗಳು ಆಲ್ಗೇ ಎಂಬ ಸಸ್ಯದ ಅವಶೇಷವೆಂದು ವಾದಿಸಲಾಗಿದೆ. ವಾಲ್‍ಕಾಟ್ ಈ ಕಾಲದ ಶಿಲಾಸಮುದಾಯಗಳಲ್ಲಿ ಅನೇಕ ರೀತಿಯ ರಚನೆಗಳನ್ನು ವರದಿ ಮಾಡಿದ್ದಾನೆ. ಇತ್ತೀಚೆಗೆ ಭಾರತದ ಕಡಪ ಶಿಲೆಗಳಲ್ಲಿರುವ ಸುಣ್ಣ ಶಿಲೆಗಳಲ್ಲಿ ಎಂ. ಆರ್. ಶ್ರೀನಿವಾಸರಾಯರು ಈ ರೀತಿಯ ರಚನೆಯನ್ನು ವರದಿ ಮಾಡಿದ್ದಾರೆ. ಆದರೆ ಜೀವಕಣ ರಚನೆಗಳು ಇಲ್ಲದಿರುವುದರಿಂದ ಇವುಗಳನ್ನು ಜೀವಾವಶೇಷಗಳೆಂದು ಪರಿಗಣಿಸುವುದು ಬಹಳ ಕಷ್ಟ. ಅಲ್ಲದೆ ಪ್ರಯೋಗಶಾಲೆಗಳಲ್ಲಿ ಇದೇ ರೀತಿಯ ರಚನೆಗಳನ್ನು ರಾಸಾಯನಿಕ ವಿಧಾನಗಳಿಂದ ಉತ್ಪತ್ತಿ ಮಾಡಬಹುದೆಂದು ಲೆನಿಗಾಂಗ್ ತೋರಿಸಿದ್ದಾನೆ. ವಿಂಧ್ಯಶಿಲಾಸಮುದಾಯದಲ್ಲಿ ರಾಮಪುರದ ಹತ್ತಿರ ಕೊಂಬು ವಸ್ತುವಿನ ಇಂಗಾಲಾಂಶದ ಅವಶೇಷಗಳನ್ನು ಹೆಚ್. ಸಿ. ಜೋನ್ಸ್ ವರದಿ ಮಾಡಿದ್ದಾರೆ. ಆದರೆ ಇದನ್ನು ವರ್ಗೀಕರಿಸುವುದು ಬಹಳ ಕಷ್ಟ. ಇವುಗಳ ಜೊತೆಗೆ ಎಂ. ಆರ್. ಸಾಹನೀಯವರು ಕೆಲವು ಹುಳುಗಳ ಜೇಡುಗಳು ಮತ್ತು ಅಚ್ಚನ್ನು ವರದಿ ಮಾಡಿರುತ್ತಾರೆ. ಹೀಗೆ ವಿಂಧ್ಯ ಮತ್ತು ಇತರ ಪ್ರೀ ಕೇಂಬ್ರಿಯನ್ ಕಾಲದಲ್ಲಿ ಜೀವಿಗಳಿದ್ದುವೆಂಬುದಕ್ಕೆ ಅಸ್ಪಷ್ಟ ಅವಶೇಷಗಳು ಅಪ್ರತ್ಯಕ್ಷ ಪ್ರಮಾಣಗಳೂ ದೊರೆತಿವೆ ಎಂಬುದರಲ್ಲಿ ಸಂಶಯವಿಲ್ಲ.
 
==ಪ್ರೊಟೆರೊಜೋಯಿಕ್ ಯುಗಗಳು==
Line ೪೧ ⟶ ೫೦:
ಈ ಯುಗದ ಕಾಲಮಾನ ೧೬೦೦ ರಿಂದ ೧೦೦೦ ದವಹಿಂ. ಈ ಯುಗವನ್ನು ಕ್ಯಾಲಿಮಿಯನ್, ಎಕ್ಟೇಸಿಯನ್ ಮತ್ತು ಸ್ಟೇನಿಯನ್ ಅವಧಿಗಳಾಗಿ ವಿಭಜಿಸಲಾಗಿದೆ. ಇಲ್ಲಿಯ ಪ್ರಮುಖ ಘಟನೆಗಳು ಕೊಲಂಬಿಯ ಮಹಾ ಖಂಡದ ವಿಘಟನೆ ಮತ್ತು ರೊಡಿನಿಯ ಮಹಾ ಖಂಡದ ರೂಪಗೊಳ್ಳುವಿಕೆ. ಈ ಕಾಲಮಾನದಲ್ಲಿ ಲೈಂಗಿಕ ಸಂತಾನೋತ್ಪತ್ತಿ ವಿಕಾಸವಾಯಿತು. ಬಹುಕೋಶ ಜೀವಿಗಳಲ್ಲಿ ಸಾಮೂಹಿಕ ಜೀವನ ಆರಂಭ. ಸ್ಟ್ರೊಮಾಟೊಲೈಟ್‌ಗಳು (ಸಾಗರದ ಸೂಕ್ಷ್ಮಜೀವಿಗಳು ವಿಶೇಷವಾಗಿ ಸೈನೊಬ್ಯಾಕ್ಟಿರಿಯಾಗಳಿಂದ ಆದ ಪದರಗಳ ಪಳಿಯುಳಿಕೆಗಳು) ವಿಕಾಸವಾಗಿ ನಿಯೊಪ್ರೊಟೆರೊಜೋಯಿಕ್ ಯುಗದಲ್ಲಿ ಕಡಿಮೆಯಾಗುತ್ತವೆ. ಈ ಯುಗದಾದ್ಯಂತ ವಾತಾವರಣದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಯಿತು. ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಬಹುಶ ಇಂದಿನ ಮಟ್ಟದ ಶೇ ೧ರಷ್ಟಕ್ಕೆ ಈ ಕಾಲಮಾನದಲ್ಲಿ ಹೆಚ್ಚಿತು. ಮೊದಲ ದೊಡ್ಡ ಮಟ್ಟದ ಬೆಟ್ಟಗಳ ಉಗಮ ಗ್ರೆನ್‌ವಿಲ್ಲೆ ಈ ಕಾಲಮಾನದಲ್ಲಿ ಆಯಿತು.
===ನಿಯೊಪ್ರೊಟೆರೊಜೋಯಿಕ್ ಯುಗ<ref>ಇಂಗ್ಲೀಶ್ ವಿಕಿಪೀಡಿಯ [https://en.wikipedia.org/wiki/Neoproterozoic “Neoproterzoic”] ಪ್ರಾಪ್ತಿಯ ದಿನಾಂಕ 2016-08-17</ref>===
ಈ ಯುಗದ ಕಾಲಮಾನ ೧೦೦೦ ದಿಂದ ೫೪೧ ದವಹಿಂ. ಈ ಕಲ್ಪದ ಕೊನೆಯ ಯುಗ ನಿಯೊಪ್ರೊಟೆರೊಜೋಯಿಕ್‌ನ್ನು ಟೋನಿಯನ್, ಕ್ರಯೊಜೆನಿಯನ್ ಮತ್ತು ಇಡಿಯಕರನ್ ಅವಧಿಗಳಾಗಿ ವಿಭಜಿಸಲಾಗಿದೆ. ಭೂಗೋಳಿಕ ದಾಖಲೆಗಳಲ್ಲಿನ ತೀರ ತೀವ್ರವಾದ ಹಿಮಯುಗವು ಈ ಕಾಲಮಾನದಲ್ಲಿ ನಡೆಯಿತು. ತೀರ ಪ್ರಾಚೀನ ಪ್ರಾಣಿಗಳನ್ನೂ ಒಳಗೊಂಡು ಮೊದಲ ಬಹುಕೋಶ ಜೀವಿಗಳು ಇಡಿಯಕರನ್ ಅವಧಿಯಲ್ಲಿ ದೊರೆಯುತ್ತವೆ. ಈ ಯುಗದ ಆರಂಭದಲ್ಲಿ ಮೀಸೊಪ್ರೊಟೆರೊಜೋಯಿಕ್‌ನಲ್ಲಿ ರೂಪಗೊಂಡ ರೊಡಿನಿಯ ಮಹಾ ಖಂಡವು ಇತ್ತು. ಟೋನಿಯನ್ ಅವಧಿಯಲ್ಲಿ ಇದು ಬಿಡಿ ಬಿಡಿ ಖಂಡಗಳಾಗಿ ವಿಭಜನೆಗೊಂಡಿತು.
 
==ಟಿಪ್ಪಣಿಗಳು ಮತ್ತು ಉಲ್ಲೇಖಗಳು==
{{reflist}}