ಸಸ್ಯ ಆಹಾರಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೪ ನೇ ಸಾಲು:
ಸಾರಜನಕವು ಆಮ್ಲಜನಕದೊಡನೆಯೂ, ಜಲಜನಕದೊಡನೆಯೂ ಸಂಯೋಗವಾಗುವುದರಿಂದ ಅನೇಕ ರಾಸಾಯನಿಕ ಸಂಯೋಗದ್ರವ್ಯಗಳು ಹುಟ್ಟುತ್ತವೆ. ನವಾ ಸಾಗರವನ್ನೂ ಸುಣ್ಣವನ್ನೂ ಬೆರೆಸಿ, ಅಂಗೈಯಲ್ಲಿ ಹಾಕಿ ಬೆರಳಿನಿಂದ ತಿಕ್ಕಿದಾಗ ಉತ್ಪತ್ತಿಯಾಗುವ ಘಾಟುಳ್ಳ ಅಮೋನಿಯಾ ಎಂಬ ಅನಿಲವು ಜಲ ಜನಕ ಸಾರಜನಕಗಳೆರಡರ ಸಂಯೋಗದಿಂದುಂಟಾಗುವ ವಸ್ತು. ನೀರು ತನ್ನ ಗಾತ್ರದ ಸುಮಾರು 700 ರಿಂದ 800 ರಷ್ಟು ಈ ಅನಿಲವನ್ನು ಹೀರಿಕೊಳ್ಳಬಲ್ಲದು. ಸಗಣಿ, ಗಂಜಳ, ಎಲೆ, ಕಡ್ಡಿ ಮುಂತಾದ ಸೇಂದ್ರಿಯ ಪದಾರ್ಥಗಳು ಕೊಳೆಯುವಾಗಲೆಲ್ಲಾ ಅಮೋನಿಯವು ಉತ್ಪತ್ತಿಯಾಗುತ್ತಿರುವುದು. ದನದ ಕೊಟ್ಟಿಗೆಗಳಲ್ಲಿ ಸಾಮಾನ್ಯವಾಗಿ ಬರುವ ಘಾಟುವಾಸನೆಗೆ ಈ ಅನಿಲವೇ ಕಾರಣ. ಇದು ವಾಯುವಿಗಿಂತಲೂ ಬಹಳ ಹಗುರವಾಗಿರುವುದರಿಂದ ಬಹುಬೇಗನೆ ವಾಯುಮಂಡಲದಲ್ಲಿ ಬೆರೆತು ಅಲ್ಲಿ ರಾಸಾಯನಿಕ ವಿಯೋಗವನ್ನು ಹೊಂದಿ ನಷ್ಟವಾಗಬಹುದು, ಅಥವಾ ಮಳೆಹನಿಗಳಲ್ಲಿ ಲೀನವಾಗಿ ಮರಳಿ ನೆಲವನ್ನು ಸೇರಬಹುದು. ಅಮೋನಿಯವು ಆಮ್ಲಗಳೊಡನೆ ಸುಲಭವಾಗಿ ಸಂಯೋಗವಾಗಿ ಲವಣಗಳು ಹುಟ್ಟುವುದರಿಂದ , ಈ ಅನಿಲವನ್ನು ನಮಗೆ ಬೇಕಾದಾಗ ಉಪಯೋಗಿಸಿಕೊಳ್ಳುವುದಕ್ಕೆ ಇದು ಒಂದು ಸುಲಭವಾದ ಮಾರ್ಗ. ಅಮೋನಿಯವು ಗಂಧಕಾಮ್ಲದೊಡನೆ ಸೇರಿ ಅಮೋನಿಯಂ ಸಲ್‍ಫೇಟ್ ಎಂಬ ಲವಣವಾಗುತ್ತದೆ. ಇದೊಂದು ಉತ್ತಮವಾದ ಸಸ್ಯಾಹಾರ. ಇದಕ್ಕಾಗಿಯೇ, ಕೊಳೆಯುತ್ತಿರುವ ಗೊಬ್ಬರದ ರಾಶಿಗೆ ಜಿಪ್ಸಂ, ಅನ್ನ ಭೇದಿ ಮುಂತಾದ ಸಲ್ಫೇಟುಗಳನ್ನು ಹಾಕುವುದು ಕೆಲವು ದೇಶಗಳಲ್ಲಿ ರೂಢಿಯಲ್ಲಿರುವುದು. ಈ ರೀತಿಯಲ್ಲಿ ಸುಲಭವಾಗಿ ತಪ್ಪಿಸಿಕೊಂಡುಹೋಗುವ ಅಮೋನಿಯವನ್ನು ನಿರ್ಬಂಧಿಸಿ, ಅದರ ಮೂಲಕ ಸಸಿಗಳಿಗೆ ಆಹಾರವಾಗಿ ಒದಗುವ ಲವಣಗಳನ್ನುಂಟು ಮಾಡಬಹುದು. ಈ ಲವಣಗಳೆಲ್ಲವೂ ನೀರಿನಲ್ಲಿ ಸುಲಭವಾಗಿ ಲೀನವಾಗುವುವು. ಹೊಲಗದ್ದೆಗಳಲ್ಲಿ ಎಲೆ, ಕಡ್ಡಿ, ಬೇರು ಮುಂತಾದ ಸೇಂದ್ರಿಯ ಪದಾರ್ಥಗಳು ಕೊಳೆಯುವುದರಿಂದ ಉತ್ಪತ್ತಿಯಾಗುವ ಅಮೋನಿಯವು ಅಷ್ಟು ಸುಲಭವಾಗಿ ತಪ್ಪಿಸಿಕೊಂಡು ಹೋಗಲಾರದು. ಏಕೆಂದರೆ, ನೆಲದಲ್ಲಿನ ನೀರೂ ಆಮ್ಲಗಳೂ ಅದರೊಡನೆ ಸಂಯೋಗವಾಗಿ ಸಸ್ಯಗಳಿಗೆ ಸುಲಭವಾಗಿ ಆಹಾರವಾಗುವ ಲವಣಗಳಾಗುತ್ತವೆ. ಮೃಗಗಳ ಮಲಮೂತ್ರಗಳಿಂದಲೂ, ಅದರಲ್ಲಿಯೂ ಮುಖ್ಯವಾಗಿ ಮೂತ್ರದಿಂದ, ಅಮೋನಿಯವು ಹೇರಳವಾಗಿ ಉತ್ಪತ್ತಿಯಾಗುತ್ತದೆ. ಆದುದರಿಂದಲೇ. ಆದುದರಿಂದಲೇ ಇವು ಬಹಳ ಒಳ್ಳೆಯ ಗೊಬ್ಬರಗಳಾಗಿರುವುವು.
==ಸಾರಜನಕ ಸಂಯೋಜನೆ==
ಸಾರಜನಕವು ಆಮ್ಲಜನದೊಡನೆಯೂ ಸಂಯೋಗವಾಗಬಲ್ಲದು. ವಾಯು ಮಂಡಲವು ಈ ಎರಡು ಅನಿಲಗಳ ಮಿಶ್ರವಾಗಿದ್ದರೂ, ಇವು ಸುಲಭವಾಗಿ ಒಂದರೊಡನೆ ಬಂದು ಸಂಯೋಗವಾಗದಿರುವುದು ನಮ್ಮ ಪುಣ್ಯವೇ ಸರಿ. ಏಕೆಂದರೆ, ಇವುಗಳ ಸಂಯೋಗದಿಂದುಂಟಾಗುವ ಸಾರಜನಕಾಮ್ಲವು [[ಸಸ್ಯ]] ವರ್ಗಕ್ಕೆ ಬಹಳ ಕೆಡುಕನ್ನುಂಟುಮಾಡುವ ವಸ್ತುವು. ವಾಯುಮಂಡಲದಲ್ಲಿ ಸಾರ ಜನಕವೂ ಆಮ್ಲಜನಕವೂ ಹೇಗೆ ಸಂಯೋಗವಾಗುವವೆಂಬ ವಿಷಯವೂ, ಅಮೋನಿಯವು ಯಾವರೀತಿಯಲ್ಲಿ ಉತ್ಪತ್ತಿಯಾಗುವುದೆಂಬ ವಿಷಯವೂ, ಇನ್ನೂ ನಮಗೆ ಸಂಪೂರ್ಣವಾಗಿ ತಿಳಿಯದಿದ್ದರೂ, ಮೇಘಗಳಲ್ಲಿ ಉಂಟಾಗುವ ಮಿಂಚು, ಮೇಲೆ ಹೇಳಿದ ಅನಿಲಗಳ ಸಂಯೋಗಕ್ಕೆ ಸಹಕಾರಿಯೆಂದು ಧಾರಾಳವಾಗಿ ಹೇಳಬಹುದು.
ಭೂಮಿಯು ಫಲವತ್ತಾದುದೋ ಅಲ್ಲವೋ ಎಂದು ತಿಳಿಯಲು ಅದರ ಮಣ್ಣು ಯಾವ ರೀತಿಯಲ್ಲಿದೆಯೆಂದೂ, ರಸಾಯನಶಾಸ್ತ್ರ ರೀತಿಯಾಗಿ ಅದರಲ್ಲಿ ಯಾವ ಯಾವ ವಸ್ತುಗಳಿರುವುವೆಂದೂ ಮಾತ್ರ ಕಂಡುಹಿಡಿದರೆ ಸಾಲದು. ಏಕೆಂದರೆ, ಈಚೆಗೆ ವ್ಯವಸಾಯಶಾಸ್ತ್ರಜ್ಞರು ಜೀವಾಣುಶಾಸ್ತ್ರವನ್ನು ವಿಶೇಷವಾಗಿ ವ್ಯಾಸಂಗಮಾಡಿ ಆ ಅಣುಗಳಿಂದ ವ್ಯವಸಾಯಕ್ಕಾಗುವ ಉಪಯೋಗ ಅಥವಾ ಕೆಡುಕನ್ನು ಕಂಡುಹಿಡಿದಿರುತ್ತಾರೆ. ಭೂಮಿಯಲ್ಲಿ ಸಸ್ಯ ವರ್ಗಕ್ಕೆ ಸೇರಿದ ಕೋಟ್ಯನುಕೋಟಿ ಜೀವಾಣುಗಳಿರುವುವು, ಇವು ಕಣ್ಣಿಗೆ ಕಾಣುವುದಿಲ್ಲ, ಸೂಕ್ಷ್ಮ ದರ್ಶಕದಿಂದಲೇ ಇವುಗಳ ವ್ಯಾಪಾರವನ್ನೆಲ್ಲಾ ಪರೀಕ್ಷೆ ಮಾಡಬೇಕು. ಒಂದು ಬೊಗಸೆಯ ಮಣ್ಣಿನಲ್ಲಿ ಕೋಟ್ಯಾಂತರವಿರುವುವು, ಇವನ್ನು ‘ಬ್ಯಾಕ್ಟೀರಿಯಾ’ ಎನ್ನುತ್ತಾರೆ. ಇವು ಎಷ್ಟು ಸೂಕ್ಷ್ಮವಾಗಿರುವುವೆಂದರೆ, ಒಭತ್ತುಸಾವಿರ ಅಣುಗಳನ್ನು ಒಂದರ ಪಕ್ಕದಲ್ಲೊಂದಿರುವಂತೆ ಸಾಲಾಗಿ ಇಟ್ಟರೆ ಇದೆಲ್ಲಾ ಒಂದಂಗುಲ ಉದ್ದವಾಗುವುದು. ಈ ಅಣುಗಳು ಅಭಿವೃದ್ಧಿಯಾಗುವುದು ಬಹಳ ಜಾಗ್ರತೆ. ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ಹೀಗೆಯೇ ಹೊಗುತ್ತ ಹೋಗುತ್ತ, ಒಂದು ದಿನದಲ್ಲಿ ಕೋಟ್ಯಾಂತರ ಸಂಖ್ಯೆಯಾಗುವುವು. ಆದರೆ ಇವುಗಳ ಅಭಿವೃದ್ಧಿಗೆ ಪ್ರತಿಬಂಧಕಗಳಾದ ಮತ್ತೆ ಕೆಲವು ಜೀವಾಣುಗಳು ನೆ¯ದಲ್ಲಿರುವುದರಿಂದ ಯಾವ ಅಣುಗಳೂ ಮಿತಿಮೀರಿ ಹೆಚ್ಚುವುದಿಲ್ಲ. ಈ ಅಣುಜಾತಿಗಳಲ್ಲಿ ಹಲವು, ಪೈರುಗಳಿಗೆ ಬಹಳ ಸಹಾಯವಾಗುವುವು. ವಾಯುಮಂಡಲದಲ್ಲಿರುವ ಸಾರಜನಕವನ್ನು ಇವು [[ತಮ್ಮ]] ಆಹಾರಕ್ಕಾಗಿ ಹೀರಿಕೊಂಡು ಹುರುಳಿ, ಅವರೆ, ತೊಗರಿ, ಅಲಸಂಡೆ, ನೆಲಗಡಲೆ ಈ ಜಾತಿಗೆ ಸೇರಿದ ಸಸ್ಯಗಳ ಜಲ್ಲಿ ಬೇರುಗಳಲ್ಲಿ ತಾವು ವಾಸವಾಗಿರುವುದಕ್ಕೋಸ್ಕರ ಸಣ್ಣ ಸಣ್ಣ ಗ್ರಂಥಿಗಳನ್ನು ಕಟ್ಟುತ್ತವೆ. ಈ ಗ್ರಂಥಿಗಳು ಕೆಲವು ವೇಳೇ ಕಡಲೆಯ ಕಾಳಿನ ಗಾತ್ರವಾಗುವುವು. ಈ ಗ್ರಂಥಿಗಳಿರುವ ಸಸ್ಯಗಳಿಗೆ ಬೇರೆ ಸಾರಜನಕವನ್ನು ಕೊಡಬೇಕಾದುದಿಲ್ಲ. ಗಿಡವನ್ನು ಕಿತ್ತಿಮೇಲೆಯೂ ಈ ಬೇರುಗಳು ನೆಲದಲ್ಲಿಯೇ ಇರುವುದರಿಂದ ಮುಂದೆ ಬೆಳೆಯುವ ಸಸ್ಯಗಳಿಗೆ ಬೇಕಾದ ಸಾರಜನಕವು ಭೂಮಿಯಲ್ಲಿ ಹೆಚ್ಚಾಗಿ ಸೇರಿದಂತಾಯಿತು. ನಮ್ಮ ರೈತರಿಗೆ ಈ ಶಾಸ್ತ್ರವಿಷಯವು ತಿಳಿಯದೆ ಇದ್ದರೂ, ಅನುಭವದಿಂದ ಅವರು ಭೂಮಿಯನ್ನು ಹಸನುಮಾಡುವುದಕ್ಕಾಗಿ ಮೊದಲು ಹುರುಳಿಯನ್ನು ಚೆಲ್ಲುತ್ತಾರೆ. ಕೆಲವು ದೇಶಗಳಲ್ಲಿ ಅಲಸಂಡೆ, ಸೆಣಬು ಮೊದಲಾದುವನ್ನು ಹಾಕುವರು. ಮೇಲೆ ಹೇಳಿದ ಅಣುಗಳು ನೆಲದಲ್ಲಿ ಇಲ್ಲದೆ ಹೋದಲ್ಲಿ ಈ ಜಾತಿಯ ಗಿಡಗಳು ಚೆನ್ನಾಗಿ ಬೆಳೆಯಲಾರವು. ಇವಕ್ಕೆ ಬೇಕಾದ ಜಾತಿಯ ಅಣುಗಳನ್ನು ‘ಇನಾಕ್ಯುಲೇರ್ಷ’ ಮೂಲಕ ನೆ¯ಕ್ಕೆ ಹಾಕುವುದರಿಂದ ಅವುಗಳನ್ನು ಅಭಿವೃದ್ಧಿ ಮಾಡಬಹುದು.
ಗೊಬ್ಬರವನ್ನು ಬಿಸಿಲಿಗೂ ಮಳೆಗೂ ಬಿಟ್ಟಲ್ಲಿ ಅದರಲ್ಲಿ ಸಾರಜನಕವು ನಷ್ಟವಾಗುವುದೆಂದು ಹಿಂದೆ ಹೇಳಿದೆಯಷ್ಟೆ. ಹೀಗೆ ಬಿಟ್ಟ ಗೊಬ್ಬರವು ಸಸ್ಯಗಳಿಗೆ ವಿಶೇಷ ಉಪಯೋಗವಾಗಲಾರದು.
==ದನ,ಕುರಿಗಳ ಮಲಮೂತ್ರಗಳಲ್ಲಿರುವ ಸಾರಜನಕದ ಪರಿಮಾಣದ ಪಟ್ಟಿ==
"https://kn.wikipedia.org/wiki/ಸಸ್ಯ_ಆಹಾರಗಳು" ಇಂದ ಪಡೆಯಲ್ಪಟ್ಟಿದೆ