ವಿ.ಸೀ.ಜಿ.ವೆಂಕಟಸುಬ್ಬಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೪ ನೇ ಸಾಲು:
ಅವರ ಮೊದಲ ಗ್ರಂಥವಾದ `ಪಂಪಾಯಾತ್ರೆ'ಯಹಾಳು ಹಂಪೆ ಬಾಳು [[ಹಂಪೆ]]ಯಾಗಿದ್ದ ಕಾಲದ ವೈಭವದ ಚಿತ್ರ ಕಣ್ಮುಂದೆ ಸುಳಿದು ನಮ್ಮನ್ನು ಎಚ್ಚರಿಸುತ್ತದೆ. ಒಂದು ರಸಿಕ ಮನೋಧರ್ಮ ಇಂಥ ಪ್ರವಾಸದಲ್ಲಿ ಆಲೋಚಿಸಬಹುದಾದ ಅನೇಕ ವಿಷಯಗಳು ಇಲ್ಲಿ ಸುಳಿದು ಬರವಣಿಗೆಗೆ ಕಾವು ಬರುತ್ತದೆ; ಓದುಗನು ಬೇರೊಂದು ಪ್ರಪಂಚಕ್ಕೆ ಸಾಗಿಬಂದವವನಾಗುತ್ತಾನೆ.
*ಹಾಡುಗಳಿಗಾಗಿಯೇ ಹುಟ್ಟಿದ `ಗೀತಗಳು' ವಿ.ಸೀ. ಯವರ ಪ್ರಥಮ ಕವನ ಸಂಕಲನ. ಅದರ ಮುನ್ನುಡಿಯನ್ನು ಬಿ.ಎಂ. ಶ್ರೀಕಂಠಯ್ಯನವರು ಬರೆದಿದ್ದಾರೆ. ಅವರ ಮಾತುಗಳು ಇವು : “ಈ ಗೀತಗಳಲ್ಲಿ ಸಂಗೀತ ಕ್ರಮದಲ್ಲಿ ಹಾಡತಕ್ಕವು ಕೆಲವು; ಛಂದಸ್ಸಿಗನುಸಾರವಾಗಿ ಹೇಳತಕ್ಕವು ಕೆಲವು. ಹೊಸ ಛಂದಸ್ಸುಗಳ ಅವಶ್ಯಕತೆಯನ್ನು ತಿಳಿದ ವಿಮರ್ಶಕರು ಇಲ್ಲಿ ಕೆಲವು ಸುಂದರ ರೂಪಗಳನ್ನೂ ಕಾಣಬಹುದಾಗಿದೆ. ಸ್ವತಂತ್ರ ಪ್ರವೃತ್ತಿಯ ಕವಿ ಧೈರ್ಯವಾಗಿ ನಡೆಯಬಹುದಾದ ಮಾತುಗಳನ್ನು 1931ರಲ್ಲಿಯೇ ಪ್ರಥಮ ಕವನಸಂಕಲನದಲ್ಲಿಯೇ ಹೃದಯಂಗಮವಾಗಿ ವಿವರಿಸಿ ನುಡಿದು ಅವರು ಯುವಕರ ಮನಸ್ಸನ್ನು ಗೆದ್ದರು. *`ಪ್ರಶ್ನೆ', `ಚಿತ್ತ', `ಯಾನ', `ಸಮಭೂಮಿ',`ಮಧುಮಾಸ',`ವೀಣಗಾನ',`ಸ್ನೇಹ',`ಕೋಗಿಲೆ' ಮುಂತಾದ ಬಲು ಸೊಗಸಾದ ಕವನಗಳು ಈಗಲೂ ಗಾನಮಾಧುರ್ಯವನ್ನು ಬಿಂಬಿಸುತ್ತಿವೆ; ಭಾವವಿಸ್ತಾರವನ್ನು ಚಿತ್ರಿಸುತ್ತಿವೆ. ಸ್ನೇಹದ ಪೂರ್ಣ ಪ್ರಭಾವವನ್ನು ಚೆನ್ನಾಗಿ ಅರಿತಿದ್ದ, ಬಹು ಗಾಢವಾದ ಸ್ನೇಹವನ್ನು ಪಡೆದಿದ್ದ ಅವರ `ಸ್ವರ್ಗದೊಳಗೀಸ್ನೇಹ ದೊರೆವುದೇನೂ' ಎಂಬ ಸಾಲು ಇಂದಿಗೂ ಅನುರಣವಾಗುತ್ತಿದೆ. ಪ್ರಸಿದ್ಧ ವೈಣಿಕ ವಿದ್ವಾಂಸರಾದ ವೀಣೆ ವೆಂಕಟಗಿರಿಯಪ್ಪನವವರ ವೀಣಾವಾದವನ್ನು ಕೇಳಿ ಬರೆದ `ವೀಣಾಗಾನ' ಬಹು ಅಪರೂಪದ ಕವನ. ಹೀಗೆ ಪ್ರಾರಂಭವಾದ ಕವನರಚನೆ ಕನ್ನಡದ ಕೆಲವು ಅತ್ಯಂತ ಶ್ರೇಷ್ಟವಾದ ಕವನಗಳನ್ನು ಸೃಷ್ಟಿಸಿವೆ.
*`ಮೃಗಶಾಲೆಯ ಸಿಂಹಗಳು', `ಅಭೀ:', `[[ಮನೆ]] ತುಂಬಿಸುವುದು', `ಗಡಿದಾಟು', `ಶಿಲ್ಪಿ', `ಕ್ರೋಧಕೇತನ', `ಕಸ್ಮೈದೇವಾಲಯ', `ಬಾಳಹೆದ್ದಾರಿ', `ಪುರಂದರದಾಸರು'-ಮುಂತಾದ ಅತ್ಯುತ್ತಮ ಕವನಗಳು ವಿ.ಸೀ. ಯವರ ಇತರ ಕವನಸಂಕಲನಗಳಿಂದಲೂ ದೊರೆಯುವ ಮಣಿಗಳು. `ಅದಲು-ಬದಲು' ಕವನ ಸಂಕಲನದ ಮುನ್ನುಡಿಯಲ್ಲಿ ಕಾವ್ಯಮೀಮಾಸೆಯ ತಲಸ್ಪರ್ಶಿಯಾದ ವಿಶ್ಲೇಷಣೆಯಿದೆ. ಸಂಸ್ಕಾರದ ಪರಂಪರೆಯನ್ನು ಗುರುತಿಸಲಾದ ಜನ ಎನೇನೋ ಹೇಳಿ ಹಾರಾಡಬಹುದು. ಕಾವ್ಯದ ಹೃದಯದ ಅನ್ವೇಷಣೆ, ಸೌಂದರ್ಯದ ಸಮೀಕ್ಷೆ ಅಷ್ಟೊಂದು ಸುಲಭವಾಗಿ ಕೈಗತವಾಗುವ ವಸ್ತುವಲ್ಲ ಎಂದಿದ್ದಾರೆ. ಬಹು ನವಿರಾದ ಈ ಬರಹ ಅವರ ಮಾಗಿದ ಪರಿಣತಿಯ ಫಲ.
==ವಿಮರ್ಶಾ ಕೃತಿಗಳು==
ವಿಮರ್ಶೆಯ ಕ್ಷೇತ್ರದಲ್ಲಿ`ಇದಮಿತ್ಥಂ', ಎಂದು ಹೇಳುವುದು ಎಷ್ಟು ದುಷ್ಕರವಾದದೆಂಬುದನ್ನು ಅವರು ಅನೇಕ ಬಗೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಪೂರ್ಣ ತಿಳಿವಳಿಕೆಯಿಂದ ಬಂದ ವಿಮರ್ಶೆಗಳಲ್ಲಿ ಕೂಡ, ಮೃದು-ಉಗ್ರ ಎಂಬ ಮಾರ್ಗಗಳಿರಬಹುದು. ``ಕೃತಿಯ ಸ್ವರೂಪಕ್ಕೆ ಹೊಂದುವಂತೆ ಭಾವಿಸದೆಸೌಹಾರ್ದದಿಂದ ಅನುಭವಿಸುತ್ತಿರುವವರಿಗೆ ಯಾವುದೆಲ್ಲ ಹೊಳೆದು ಪ್ರಕಟವಾಗುವುದೋ, ಯುಕ್ತವೆನಿಸುವುದೋ ಅದೆಲ್ಲ ಅರ್ಥಮಂಡಲ-ಅದೆಲ್ಲ ಬೆಲೆಯ ಕಲ್ಪನೆಯೇ.ಹೊದದ್ದು ಅನುಚಿತ, ವಿರಸ, ಅಸಂಗತ,''
೧೦ ನೇ ಸಾಲು:
*ಇಂಥ ನಿಶಿತವಾದ ಮತಿಯಿಂದಲೆ ಅವರು ರಚಿಸಿರುವ ಎರಡು ಮೂರು ಮುಖ್ಯ ವಿಮರ್ಶಾ ಗ್ರಂಥಗಳು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿರುತ್ತವೆ. `ಕರ್ನಾಟಕ ಕಾದಂಬರಿ', `ಅಭಿಜ್ಞಾನ ಶಾಕುಂತಲ ನಾಟಕ', `ಅಶ್ವತ್ಥಾಮನ್'- ಈ ಮೂರು ಆಯಾ ವಿಷಯವನ್ನೇ ಕುರಿತ ವಿಮರ್ಶೆ, ಅವರ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ರಚಿಸಲಾಗಿದ್ದ `ಆ ಗ್ರಹ' ನಾಟಕ ಇವೆರಡು ಒಂದು ರಸಜೋಡಿ. ಇವುಗಳ ಸ್ವಾರಸ್ಯವನ್ನು ಓದಿ ನೋಡದೆ ಕೇಳಿ ತಿಳಿಯುವುದಸಾಧ್ಯ.
==ನಾಟಕಗಾರರಾಗಿ ವಿ.ಸೀ==
ವಿ.ಸೀ. ನಾಲ್ಕು ಸ್ವಂತ ನಾಟಕಗಳನ್ನೂ ಎರಡು ಇಂಗ್ಲಿಷ್ ನಾಟಕಗಳ ಅನುವಾದಗಳನ್ನೂ ರಚಿಸಿದ್ದಾರೆ. `ಸೊಹ್ರಾಬ್-ರುಸ್ತುಂ' ಮ್ಯಾಥ್ಯೂ ಆರ್ನಾಲ್ಡನ ಕವಿತೆಯ ನಾಟಕ ರೂಪ. `ಆಗ್ರಹ' [[ಭಾರತ|ಭಾರತದ]] ಸೌಪ್ತಿಕಪರ್ವದ ಕಥೆಯ ಅಶ್ವತ್ಥಾಮನನ್ನು ಚಿತ್ರಿಸುವ ರೂಪಕ. `ಚ್ಯವನ' ಆಧುನಿಕ ಜೀವನದ ಸಮಸ್ಯೆಯನ್ನು ಅಧಿಕರಿಸಿ ರಚಿತವಾಗಿರುವ ನಾಟಕ. `ಶ್ರೀಶೈಲ ಶಿಖರ' ಅವರ ಮಿತ್ರರು ಹೇಳಿದ ಕಥೆಯ ರೂಪಾಂತರ. ಒಂದು ಹೆಣ್ಣಿನ ಬಾಳು, ಭಾವನೆಗಳ ಅಂತರವನ್ನು ಚಿತ್ರಸುವ ಈ ನಾಟಕ ಬಹು ಬೆಲೆ ಬಾಳುವ ತತ್ವವನ್ನು ಸಾರುತ್ತದೆ. ಮಾನವಿಯತೆಗೆ ಬೆಲೆ ಕೊಡುವ ಈ ನಾಟಕವೇ ಅವರ ನಾಟಕಗಳಲ್ಲಿ ಅತ್ಯುತ್ತಮವಾದುದು. ಮಿಕ್ಕೆರಡು ಅನುವಾದಗಳಲ್ಲಿ ಅನುವಾದಕನಿಗೆ ಎದುರಾಗುವ ಅನೇಕ ಸಮಸ್ಯೆಗಳನ್ನು ವಿ ಸೀ. ಯವರೂ ಎದುರಿಸಿದ್ದಾರೆ. ಎಷ್ಟು ಸಾರ್ಥಕವಾಗಿದೆ ಈ ಅನುವಾದಗಳು ಎಂಬುದನ್ನು ನಾಟಕ ಪ್ರದರ್ಶನದಲ್ಲಿ ಅಳೆಯಬೇಕು : ಬೆಲೆ ಕಟ್ಟಬೇಕು. ಹಾಗೆಯೇ ಅಭಿಪ್ರಾಯ ಸೂಚುಸುವುದು ಅಷ್ಟು ಉಚಿತವಾಗಿರಲಾರದು.
*ವಿ ಸೀ ಸಂಪಾದಿಸಿದಷ್ಟು ಮಿತ್ರವರ್ಗ ಬೇರೆಯವರಿಗೆ ಇರುವುದು ಸಾಧ್ಯವಿಲ್ಲ. ಅವರ ವ್ಯಕ್ತಿತ್ವದ ಸತ್ಯವೇ ಮೈತ್ರಿಯಿಂದ ಕೂಡಿದ್ದು. ಅವರ ಹಿರಿಯರನ್ನು, ಮಿತ್ರರನ್ನು ಕುರಿತ ಗ್ರಂಥಗಳು: 'ಮಹನೀಯರು' 'ಶಿವರಾಮ ಕಾರಂತರು', 'ಕಾಲೇಜಿನ ದಿನಗಳು'- ಇವುಗಳಲ್ಲಿ ಇರುವ ಚಿತ್ರಪರಂಪರೆ ನೆನಪಿಗೆ ಸದ ಹಸಿರನ್ನು ಕೊಡುತ್ತದೆ.
ಅವರ 'ಹಣಪ್ರಪಂಚ' ಕನ್ನಡ ಬಾಷೆಯಲ್ಲಿ ರಚಿತವಾದ ಅತ್ಯಮೂಲ್ಯವಾದ ಶಾಸ್ತ್ರ ಗ್ರಂಥ.