ರಾಷ್ಟ್ರೀಯ ವರಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
 
ರಾಷ್ಟ್ರೀಯ ವರಮಾನವನ್ನು ವಿವಿಧ [[ಅರ್ಥಶಾಸ್ತ್ರ]]ಜ್ಞರು ವಿವಿಧ ರೀತಿಯಲ್ಲಿ ನಿರೂಪಿಸಿದ್ದಾರೆ. ರಾಷ್ಟ್ರದಲ್ಲಿ ಒಂದು [[ವರ್ಷ]]ದ ಅವಧಿಯಲ್ಲಿ ಉತ್ಪಾದಿಸಿದ ಎಲ್ಲಾ ಸರಕು ಸೇವೆಗಳ ಹಣದ ಮೌಲ್ಯಕ್ಕೆ ರಾಷ್ಟ್ರೀಯ ವರಮಾನವೆಂದು ಕರೆಯುತ್ತಾರೆ.
ಮಾರ್ಷಲ್ ಅವರು ರಾಷ್ಟ್ರೀಯ ವರಮಾನದ ವ್ಯಾಖ್ಯೆಯನ್ನು ಹೀಗೆ ನೀಡಿದ್ದಾರೆ. "ಒಂದು ರಾಷ್ಟ್ರದ ಕಾರ್ಮಿಕರು ಮತ್ತು ಬಂಡವಾಳದಾರರು ಕೂಡಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿ,ಪ್ರತಿವರ್ಷ ಭೌತಿಕ ವಸ್ತುಗಳನ್ನು ಮತ್ತು ಎಲ್ಲಾ ವಿಧವಾದ ಸೇವೆಗಳನ್ನು ಒಂದು ನಿವ್ವಳ ಪ್ರಮಾಣದಲ್ಲಿ ಉತ್ಪಾದಿಸುತ್ತಾರೆ.ಇದೇ ರಾಷ್ಟ್ರದ ನಿಜವಾದ ನಿವ್ವಳ ವಾರ್ಷಿಕ ವರಮಾನವಾಗಿದೆ." ಮಾರ್ಷಲ್ ಅವರು 'ನಿವ್ವಳ' ಶಬ್ದವನ್ನು ಉಪಯೋಗಿಸಿರುವುದು ಮಹತ್ವದಾಗಿದೆ. ಉತ್ಪಾದನೆಯಲ್ಲಿ ಉಪಯೋಸಿದ [[ಬಂಡವಾಳ]] ಸರಕುಗಳ ಸವೆತವನ್ನು ಮತ್ತು ದುರಸ್ಥಿಯ ಹಾಗೂ ಬದಲಾವಣೆಗಳ ವೆಚ್ಚವನ್ನು ಒಟ್ಟು ರಾಷ್ಟ್ರೀಯ ವರಮಾನದಿಂದ ಕಳೆದರೆ ನಿವ್ವಳ ರಾಷ್ಟ್ರೀಯ ವರಮಾನ ಬರುತ್ತದೆ.
ಎ.ಸಿ.ಪೀಗೂ ಅವರು ನೀಡಿದ ರಾಷ್ಟ್ರೀಯ ವರಮಾನದ ವ್ಯಾಖ್ಯೆ ಈ ರೀತಿಯಾಗಿದೆ:"ವಿದೇಶಗಳಿಂದ ಬರುವ ಆದಾಯವನ್ನೊಳಗೊಂಡ ಸಮಾಜದ ಭೌತಿಕ ವರಮಾನವನ್ನು ಹಣದ ರೂಪದಲ್ಲಿ ಅಳೆದಾಗ,ದೊರೆಯುವ ಆದಾಯವೇ ರಾಷ್ಟ್ರೀಯ ವರಮಾನ".ಹೀಗೆ ಪೀಗೂ ಮತ್ತು ಮಾರ್ಷಲ್ ಅವರು ರಾಷ್ಟ್ರೀಯ ವರಮಾನವನ್ನು ಉತ್ಪಾದನೆಯ ಮೂಲಕ ವ್ಯಾಖ್ಯಾನಿಸಿದ್ದಾರೆ.ಆದುದರಿಂದ ಅವರ ವ್ಯಾಖ್ಯೆಗಳ ನಡುವೆ ಸ್ವಾಮ್ಯವನ್ನು ಕಾಣಬಹುದು.
೫೩ ನೇ ಸಾಲು:
# ''ಖಾಸಗಿ ಆಸ್ತಿಯ ಹಕ್ಕು'': ಈ ಅರ್ಥವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಬೇಕಾದಷ್ಟು ಆಸ್ತಿಯನ್ನು ಹೊಂದುವ ಹಕ್ಕಿದ್ದರೂ,ಕೇವಲ ಕೆಲವೇ ಜನರಿಗೆ ಅದನ್ನು ಹೊಂದಲು ಸಾಧ್ಯವಾಗುತ್ತದೆ.ಇಲ್ಲಿ ಬಂಡವಾಳವುಳ್ಳವರು ಅನೇಕ ಮೂಲಗಳಿಂದ ತಮ್ಮ ಆದಾಯ ಮತ್ತು ಆಸ್ತಿ ಅಥವಾ ಸಂಪತ್ತನ್ನು ಹೆಚ್ಚಿಸುತ್ತಾ ಹೋಗುತ್ತಾರೆ.ಅವರು ಸಾಮಾನ್ಯವಾಗಿ ಶ್ರೀಮಂತರು ಗೇಣಿ,ಬಡ್ಡಿ ಮತ್ತು ಲಾಭಗಳ ಮೂಲಕ ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಾ ಹೋಗುತ್ತಾರೆ.ಆದರೆ ಕೇವಲ ಕೂಲಿ ಮತ್ತು ವೇತನ ಪಡೆಯುವ ಕಾರ್ಮಿಕರಿಗೆ ಇದು ಸಾಧ್ಯವಾಗುವುದಿಲ್ಲ.ಅವರು ಶೋಷಣೆಗೆ ಒಳಗಾಗುತ್ತಾರೆ.
# ''ಪಿತ್ರಾರ್ಜಿತ ಆಸ್ತಿಯ ಹಕ್ಕು'': ಈ ಹಕ್ಕಿನಿಂದ ಸಂಪತ್ತು ಮತ್ತು ವರಮಾನಗಳ ಅಸಮಾನತೆಯು ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯುತ್ತಾ ಹೋಗುತ್ತದೆ.ಶ್ರೀಮಂತರ ಮಕ್ಕಳು ಶ್ರೀಮಂತರಾಗಿಯೇ ಮುಂದುವರಿಯುತ್ತಾರೆ.ಬಡ ಮಕ್ಕಳು ಬಡವರಾಗಿ ಉಳಿಯುತ್ತಾರೆ.
# ''ಉದ್ಯೋಗಗಳಲ್ಲಿ ವ್ಯತ್ಯಾಸ'': ವಿವಿಧ ಪ್ರಕಾರದ ಉದ್ಯೋಗಗಳಿಗೆ ವಿವಿಧ ಪ್ರಮಾಣದ ವೇತನ ಶ್ರೇಣಿಗಳುಂಟು.ಕೆಲವು ಉದ್ಯೋಗಗಳಿಗೆ ಅವುಗಳ ಹೊಣೆಗಾರಿಕೆ, ಆಡಳಿತ ಸಾಮರ್ಥ್ಯ,ಶಿಕ್ಷಣದ[[ಶಿಕ್ಷಣ]]ದ ಅರ್ಹತೆ ಮೊದಲಾದವುಗಳ ಮೂಲಕ ಅತಿ ಹೆಚ್ಚಿನ ಪ್ರಮಾಣದ ವೇತನ ಶ್ರೇಣಿ ಇರುತ್ತದೆ.ಇದರಿಂದ ವೇತನದಲ್ಲಿ ವ್ಯತ್ಯಾಸವುಂಟಾಗುತ್ತದೆ.
# ''ವೈಯುಕ್ತಿಕ ಸಾಮರ್ಥ್ಯದಲ್ಲಿ ವ್ಯತ್ಯಾಸ'': ಪ್ರಪಂಚದಲ್ಲಿ ಹುಟ್ಟಿದ ಎಲ್ಲರೂ ಬೌದ್ಧಿಕ ಮತ್ತು ಶಾರೀರಿಕ ಸಾಮರ್ಥ್ಯದಲ್ಲಿ ಸಮನಾಗಿರುವುದಿಲ್ಲ.ಹೀಗೆ ಬೌದ್ಧಿಕ ಮತ್ತು ದೈಹಿಕ ಸಾಮರ್ಥ್ಯದಲ್ಲಿನ ವ್ಯತ್ಯಾಸದಿಂದ ಜನರು ಗಳಿಸುವ ವರಮಾನದಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ.
# ''ಸೌಲಭ್ಯಗಳ ಅವಕಾಶ'': ಸೌಲಭ್ಯಗಳ ಅವಕಾಶ ಎಲ್ಲರಿಗೂ ಒಂದೇ ಪ್ರಮಾಣದಲ್ಲಿ ಲಭಿಸುವುದಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಿದವರು,ಅಧಿಕಾರ ಸ್ಥಾನದಲ್ಲಿರುವವರು,ಪ್ರಭಾವಶಾಲಿಗಳು,ಮತ್ತು ಅವರ ನಿಕಟವರ್ತಿಗಳಿಗೆ ಅಧಿಕ ವರಮಾನವನ್ನು ಗಳಿಸುವ ಅವಕಾಶವಿರುತ್ತದೆ.ಸೌಲಭ್ಯಗಳ ಅವಕಾಶಗಳು ದೊರೆಯದೆ ಬಡವರು ಮಧ್ಯಮವರ್ಗದವರು ಪ್ರತಿಭೆ ಮತ್ತು ದಕ್ಷತೆ ಹೊಂದಿದ್ದರೂ ಸಹ ಹಿಂದುಳಿಯುತ್ತಾರೆ ಹೀಗಾಗಿ ಅವರ ವರಮಾನ ಅತ್ಯಂತ ಕಡಿಮೆಯಾಗುತ್ತದೆ.
"https://kn.wikipedia.org/wiki/ರಾಷ್ಟ್ರೀಯ_ವರಮಾನ" ಇಂದ ಪಡೆಯಲ್ಪಟ್ಟಿದೆ