ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
No edit summary
೬ ನೇ ಸಾಲು:
ನದಿ - ಭೂಖಂಡದ ಯಾ ದ್ವೀಪದ ಮೈಮೇಲೆ ಹರಿಯುವ ನೈಸರ್ಗಿಕ ಮೂಲದ ಜಲಪ್ರವಾಹ (ರಿವರ್). ಸ್ಥಲಾಕೃತಿಕವಾಗಿ ಸಂಬಂಧಿತವಾಗಿರುವ (ಟೋಪೊಗ್ರಾಫಿಕಲಿ ಕನೆಕ್ಟೆಡ್) ನೆಲದ ಹರವಿನಿಂದ ನೀರನ್ನು ಬಸಿಯುವ ನದೀ ವ್ಯವಸ್ಥೆಯ ಭಾಗವೇ ನದಿ. ಈ ಹರವಿಗೆ ನದೀಪಾತ್ರವೆಂದು ಹೆಸರು. ಶಿಲೆಗಳಿಂದ ಯಾ ಮಣ್ಣಿನಿಂದ ಯಾ ಗಿಡಮರ ಹೊದರುಗಳಿಂದ ಆವೃತವಾಗಿರುವ ಮೈಮೇಲೆ ಪಾತವಾಗುವ ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ ಮೇಲಿನ ಪ್ರವಾಹವಾಗಿ ಹರಿದುಹೋಗಬಹುದು ಅಥವಾ ಭೂಗತಪ್ರವಾಹಗಳಾಗಿ ಹರಿಯಬಹುದು.
==ರಚನೆ==
[[File:Melting Toe of Athabasca Glacier.jpg|thumb|right|Melting toe of Athabasca Glacier, [[Jasper National Park]], [[Alberta|Alberta, Canada]]]]
[[File:Loboc river.png|thumbnail|The Loboc River in [[Bohol]], [[Philippines]]]]
[[File:Horseshoe_Bend_TC_27-09-2012_15-34-14.jpg|thumbnail|The Colorado River at [[Horseshoe Bend (Arizona)|Horseshoe Bend]], [[Arizona]]]]
 
ನೆಲದ ಮೇಲೆ ಬಿದ್ದ ನೀರಿನ ಬಹುಭಾಗ ಇಮರಿ ಇಂಗಿಹೋಗುತ್ತದೆ. ಸಾಕಷ್ಟು ಭಾಗ ಸಸ್ಯಗಳ ಮೂಲಕ ಅಲ್ಲದೇ ನೇರ ಆವಿಯಾಗಿ ಮತ್ತೆ ವಾಯುಮಂಡಲವನ್ನು ಸೇರಿ ಪುನಃ ಮಳೆಯಾಗಿ ನೆಲದ ಮೇಲೆ ಬೀಳುತ್ತದೆ. ಈ ನಿರಂತರ ನೈಸರ್ಗಿಕ ಆಟ ಚಕ್ರದಂತೆ ತಿರುಗುತ್ತಿರುವುದು. ಇಮರಿದ ನೀರಿನ ಬಹು ಭಾಗ ನೆಲಮಟ್ಟದಿಂದ ಸಾಕಷ್ಟು ಆಳದಲ್ಲಿ ಶೇಖರವಾಗಿ ಅಂತರ್ಜಲವೆನಿಸುತ್ತದೆ. ಇದು ಚಿಲುಮೆ ಹಾಗೂ ಬಾವಿಗಳ ಮೂಲಕ ನಮಗೆ ದೊರೆಯುವುದು. ಇನ್ನುಳಿದ ಭಾಗ ಇಳಿಜಾರಿರುವ ಕಡೆ ಪ್ರವಹಿಸಿ ಹೊಳೆ ಅಥವಾ ನದಿ ಎನಿಸುತ್ತದೆ. ಹೀಗೆ ನದಿಗೆ ಜೀವಾಧಾರ ಮಳೆ. [[ಮಳೆ]]ಯಿಲ್ಲದೆ ನದಿಯಿಲ್ಲ. ಮಳೆ [[ಭೂಮಿ]]ಯ ಮೇಲೆ ಒಂದೇ ಸಮವಾಗಿ ಬೀಳುವುದಿಲ್ಲ. ಇದಕ್ಕೆ ಹಲವಾರು ಕಾರಣಗಳುಂಟು. [[ಚಿಲಿ]] ದೇಶದ [[ಆಟಕಾಮ ಮರುಭೂಮಿ]]ಯಲ್ಲಿ ನಾಲ್ಕೈದು ವರ್ಷಗಳಿಗೊಮ್ಮೆ ಎಂದೋ ಒಂದು ದಿನ ಹನಿ ಹಾಕುತ್ತದೆ. ಆದರೆ ಅಸ್ಸಾಮಿನ [[ಚಿರಾಪುಂಜಿ]]ಯಲ್ಲಿ ಇಡೀ ವರ್ಷದುದ್ದ ಧಾರಾಕಾರವಾದ ಮಳೆ. ವರ್ಷಕ್ಕೆ ಏನಿಲ್ಲೆಂದರೂ 1500 ಸೆಂ.ಮೀ.ಗಳಷ್ಟು ಮಳೆ. ಇಂಥ ಪ್ರದೇಶದ ನದಿಗಳಲ್ಲಿ ವರ್ಷದ ಉದ್ದಕ್ಕೂ ನೀರು ಹರಿಯುತ್ತಿದ್ದು ಅವು ಜೀವಂತ ನದಿಗಳು ಎನ್ನಿಸಿಕೊಳ್ಳುವುವು. ಪ್ರತಿವರ್ಷವೂ ಬೀಳುವ ಮಳೆಯ ಪ್ರಮಾಣ 91.44 ಸೆಂಮೀ. ಗಳೆನಿಸಿದಲ್ಲಿ ಅದು 13,98,60,000 ಚದರ ಕಿಮೀ ವಿಸ್ತೀರ್ಣದ ಭೂಖಂಡಗಳ ಮೇಲೆ ಬಿದ್ದು ಸುಮಾರು 127.185 ಘನ ಕಿಮೀ.ಗಳಷ್ಟು ಮಳೆಯ ನೀರಿನ ಪ್ರಮಾಣಕ್ಕೆ ಕಾರಣವೆನಿಸುತ್ತದೆ. ಇದರಲ್ಲಿ ಕೇವಲ ಮೂರನೆಯ ಒಂದು ಭಾಗ ಅಂದರೆ ಸುಮಾರು 37,530 ಘನ ಕಿಮೀಗಳಷ್ಟು ನದಿಗಳ ರೂಪದಲ್ಲಿ ಹರಿದು ಸಮುದ್ರವನ್ನು ಸೇರುತ್ತದೆ. ಇನ್ನುಳಿದ 89,655 ಘನ ಕಿಮೀ ನೀರು ಇಂಗಿ ಇಮರುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ವಾರ್ಷಿಕ ಮಳೆಯ ಪ್ರಮಾಣ ಸುಮಾರು 380 ಸೆಂಮೀ. ಇದರಲ್ಲಿ 358 ಸೆಂಮೀ.ಗಳಷ್ಟು ಸಸ್ಯಗಳ ಮೂಲಕ ಅಲ್ಲದೇ ಇಮರಿ ಆವಿಯಾಗಿ ಮತ್ತೆ ವಾಯು ಮಂಡಲವನ್ನು ಸೇರುತ್ತದೆ. ಕೇವಲ 22 ಸೆಂಮೀ.ಗಳಷ್ಟು ನೀರು ಮಾತ್ರ ನದಿಗಳಾಗಿ ಹರಿದು ಕಟ್ಟಕಡೆಗೆ ಸಮುದ್ರವನ್ನು ಸೇರುತ್ತದೆ. ಹೀಗೆ ಹರಿವ ನೀರನ್ನು ನದಿ ಎಂದು ಊಹಿಸಿದಲ್ಲಿ ಅದು ಪ್ರತಿದಿನ 6.3644Χ 1011 ಲೀಟರುಗಳಷ್ಟು ನೀರನ್ನು ಸಮುದ್ರಕ್ಕೆ ಒಯ್ಯುವ ನಿತ್ಯನದಿ ಎನಿಸುತ್ತದೆ. ಈ ದೇಶದ ನದಿಗಳ ಒಟ್ಟು ಉದ್ದ 48,27,000 ಕಿಮೀ.
[[File:NileDelta-EO.JPG|thumb|left|[[Nile River delta]], as seen from Earth orbit. The Nile is an example of a wave-dominated delta that has the classic Greek letter delta (Δ) shape after which river deltas were named.]]
 
[[File:PIA16197 Titan river.jpg|thumb|right|A radar image of a {{convert|400|km|mi|adj=on}} river of methane and ethane near the north pole of Saturn's moon [[Lakes of Titan|Titan]]]]
ನದಿಗಳಿಗೆ ಮಳೆಯ ಪ್ರಮಾಣದ ಜತೆಗೆ ಅವು ಹರಿವ ನೆಲಭಾಗದ ಮೇಲ್ಮೈ ಲಕ್ಷಣವೂ ಅಷ್ಟೆ ಮುಖ್ಯವಾದುದು. ನೆಲದ ಇಳಿಜಾರು ಅತಿಯಾಗಿದ್ದಲ್ಲಿ ನೀರು ಬಲುಬೇಗ ಕೊಚ್ಚಿಹೋಗುತ್ತದೆ. ಹೀಗಾಗಿ ಕಡಿದಾದ ಪರ್ವತ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಬಿದ್ದ ಮಳೆಯ ಅಧಿಕಭಾಗ ರಭಸವಾಗಿ ಇಳಿಜಾರಿನಲ್ಲಿ ಹರಿದುಹೋಗುತ್ತದೆ. ಆದರೆ ಸಮತಟ್ಟಾದ ನೆಲದಲ್ಲಿ ನೂರಕ್ಕೆ ಒಂದು ಭಾಗದಷ್ಟೂ ಹರಿಯುವುದಿಲ್ಲ. ಇದರ ಜತೆಗೆ ಭೂರಚನೆಯೂ ಅಷ್ಟೇ ಮುಖ್ಯ. ನೆಲ ಜಾಳುಜಾಳಾಗಿದ್ದರೆ ಇಮರುವ ನೀರಿನ ಪ್ರಮಾಣ ಅಧಿಕ. ಹೀಗಿರದೆ ನೆಲ ಅಡಕವಾಗಿದ್ದಲ್ಲಿ ನೀರಿನ ಇಮರಿಕೆಗೆ ಅಷ್ಟು ಉತ್ತಮವಾಗಿರಲಾರದು. ನೀರಿನ ಅಧಿಕಭಾಗ ಹರಿದು ಹತ್ತಿರದ ಹಳ್ಳವನ್ನೊ ನದಿಯನ್ನೊ ಸೇರುತ್ತದೆ. ಜೇಡು ಭೂಮಿಗಿಂತ ಮರುಭೂಮಿಯಲ್ಲಿ ನೀರು ಬಲುಬೇಗನೆ ಇಮರಿ ಕಾಣದಾಗುತ್ತದೆ. ಅಂತೆಯೇ ಮಳೆ ಹೆಚ್ಚಾಗಿ ಬೀಳುವ ಪ್ರದೇಶದಲ್ಲಿ ನೆಲ ಹೆಚ್ಚು ತೊಯ್ದಿರುವುದರಿಂದ ಅದು ನೀರನ್ನು ಅಷ್ಟಾಗಿ ಹೀರಿಕೊಳ್ಳದೆ ಅಧಿಕಭಾಗ ಹರಿದುಹೋಗುವುದು. ಮಳೆ ಅಲ್ಪವಾಗಿದ್ದಲ್ಲಿ ನೆಲ ಒಣಗಿದ್ದು ಬಿದ್ದ ನೀರಿನ ಅಧಿಕಭಾಗವನ್ನು ಹೀರಿಕೊಳ್ಳುತ್ತದೆ. ಸಸ್ಯನಿಬಿಡ ಪ್ರದೇಶಗಳಿಗಿಂತ, ಅವು ವಿರಳವಾಗಿರುವ ಮೈದಾನ ಭಾಗಗಳಲ್ಲಿ ಮಳೆಯ ನೀರಿನ ಅಧಿಕಭಾಗ ಹರಿದುಹೋಗುವುದು.
 
Line ೨೨ ⟶ ೨೭:
 
ನದಿಯ ಕಾರ್ಯ ಅದು ಹರಿಯುವ ವೇಗ ಮತ್ತು ಅದರ ನೀರಿನ ಪ್ರಮಾಣವನ್ನು ಅವಲಂಬಿಸಿದೆ. ಇವು ಹೆಚ್ಚಿದಷ್ಟೂ ಆದರೆ ಕ್ರಿಯಾಶಕ್ತಿಯೂ ತೀವ್ರಗೊಳ್ಳುವುದು. ವೇಗ ಮುಖ್ಯವಾಗಿ ಅದು ಹರಿವ ನೆಲಭಾಗದ ಇಳಿಜಾರನ್ನು ಅನುಸರಿಸಿದೆ. ನದಿಯ ಮೂಲದಿಂದ ತೊಡಗಿ ಸಮುದ್ರವನ್ನು ಸೇರುವ ಮುಖದವರೆಗೆ ಪಾತ್ರದ ಮಟ್ಟವನ್ನು ಗುರುತಿಸಿದಲ್ಲಿ ಅದು ಕ್ರಮೇಣ ಕಡಿಮೆ ಆಗುತ್ತ ಹೋಗಿ ಮುಖದ ಭಾಗದಲ್ಲಿ ಸಮುದ್ರಮಟ್ಟಕ್ಕೆ ಸಮವಾಗುತ್ತದೆ. ಇದೇ ನದಿಯ ಇಳಿಜಾರು ಅಥವಾ ಓಟ. ನದಿ ಹರಿಯುವ ಪ್ರತಿ ಏಕಮಾನ ಉದ್ದಕ್ಕೂ ಉಂಟಾಗುವ ತಗ್ಗೇ ಇಳಿಜಾರು. ಇದು ಒಂದೇ ತೆರನಾಗಿರುವುದಿಲ್ಲ.
[[File:Trapped woman on a car roof during flash flooding in Toowoomba 2.jpg|thumb|[[Flash flood]]ing caused by a large amount of rain falling in a short amount of time]]
 
 
 
"https://kn.wikipedia.org/wiki/ನದಿ" ಇಂದ ಪಡೆಯಲ್ಪಟ್ಟಿದೆ