ಮುಖ್ಯ ಮೆನು ತೆರೆ

ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ [[ತಮಿಳುನಾಡು]], [[ಮಹಾರಾಷ್ಟ್ರ]], [[ಒಡಿಶಾ]], [[ಪುದುಚೇರಿ]], [[ಕರ್ನಾಟಕ]], [[ಕೇರಳ]] ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ [[ತ್ಯಾಗರಾಜ]] ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ.
==ದ್ರಾವಿಡ ಭಾಷೆ==
[[File:Telugu speakers in India.png|thumb|Geographic distribution of Telugu immigrants in light blue, Telugu is native to dark blue.]]
ದ್ರಾವಿಡಭಾಷಾವರ್ಗಕ್ಕೆ ಸೇರಿದ ತೆಲುಗನ್ನು ಆಂಧ್ರಭಾಷೆಯೆಂದು ಕರೆಯುವುದು ಅಷ್ಟು ಸರಿಯಲ್ಲದಿದ್ದರೂ ರೂಢಿಯಲ್ಲಿ ಆ ಹೆಸರೂ ನಿಂತು ಬಿಟ್ಟಿದೆ. ಇದಕ್ಕೇನು ಕಾರಣವೆಂದರೆ ಆಂಧ್ರ ಚಕ್ರಾಧಿಪತ್ಯವೂ ತೆಲುಗು ದೇಶವೂ ಸಮಾನವ್ಯಾಪ್ತಿಯುಳ್ಳವಲ್ಲ. ಚಕ್ರಾಧಿಪತ್ಯದ ಒಂದು ಭಾಗವಾದ ಮಹಾರಾಷ್ಟ್ರ ಎಂದಿಗೂ ತೆಲುಗು ದೇಶದ ಒಂದು ಭಾಗವಾಗಲಿಲ್ಲ. ತೆಲುಗು ದೇಶದ ಭಾಗಗಳಾದ [[ಕಳಿಂಗ]]ದ ಮಧ್ಯ ಮತ್ತು ದಕ್ಷಿಣ ಭಾಗಗಳು ಆಂಧ್ರ ಚಕ್ರಾಧಿಪತ್ಯಕ್ಕೆ ಎಂದೂ ಸೇರಿರಲಿಲ್ಲ. ತೆಲುಗು ದೇಶದಲ್ಲಿ ನೂರಾರು [[ಸಂಸ್ಕೃತ]] ಮತ್ತು ಪ್ರಾಕೃತಿಕ ಪದಗಳು ಬಳಕೆಯಲ್ಲಿವೆ ಮತ್ತು ಇನ್ನೂ ಹೆಚ್ಚಿನ ಪದಗಳು ತೆಲುಗು ಸಾಹಿತ್ಯದಲ್ಲಿ ಪ್ರಯುಕ್ತವಾಗಿವೆ. ಆದರೆ ಈ ಸಾಲ ತೆಗೆದುಕೊಂಡ ಶಬ್ದಗಳಿಂದ, ಇವು ಎಷ್ಟೇ ಇರಲಿ, ನಾಡಿನಲ್ಲಿ ಎಷ್ಟೇ ಹರಡಲಿ, ಭಾಷಾ ಬಾಂಧವ್ಯವನ್ನು ನಿರ್ಧರಿಸಲಾಗದು. ತೆಲುಗು ತೆಲಂಗಾಣದ (ತ್ರಿಲಿಂಗ) ಭಾಷೆ. ಅದು ಈಗಿನ ಆಂಧ್ರ ಪ್ರದೇಶದ ಭಾಷೆಯಾಗಿರುವುದರಿಂದ ಅದರ ಸ್ಥೂಲ ಪರಿಚಯವನ್ನಿಲ್ಲಿ ಮಾಡಿಕೊಡಲಾಗಿದೆ.
==ಬೆಳವಣಿಗೆ==
೧೭,೩೭೧

edits

"https://kn.wikipedia.org/wiki/ವಿಶೇಷ:MobileDiff/755726" ಇಂದ ಪಡೆಯಲ್ಪಟ್ಟಿದೆ