"ತಮಿಳುನಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
==ಸಾರಿಗೆ ಸಂಪರ್ಕ==
[[File:Looking-down-National-Highway-Chittode-Junction.JPG|thumb|200px|A view of the NH 47 Expressway between Coimbatore and Salem in Tamil Nadu]]
[[File:Chennai airport view 4.jpeg|thumb|200px|[[Chennai International Airport]], one of India's major international airports]]
[[File:Pamban-bridge.JPG|thumb|200px|Pamban road (left) and rail (right) bridges, connecting the Indian mainland with the [[Pamban Island]]]]
ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ ಮಾರ್ಗವಿದ್ದು ಇದರಲ್ಲಿ 60,901, ಕಿ.ಮೀ ಉತ್ತಮ ರಸ್ತೆಯಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ದಕ್ಷಿಣ ಭಾರತದ ಮುಖ್ಯ ವಿಮಾನ ಸಂಪರ್ಕವಾಗಿದೆ. ಸೇಲಂ, ಕೊಯಮತ್ತೂರು, ತಿರುಚಿನಪಳ್ಳಿ, ಮಧುರೆ ವಿಮಾನ ನಿಲ್ದಾಣಗಳಿವೆ. ಚೆನ್ನೈ, ಮಧುರೈ, ತಿರುಚಿನಾಪಳ್ಳಿ, ಕೊಯಂಬತ್ತೂರು ಮತ್ತು ತಿರುನೇಲ್‍ವೇಲಿ ಮುಖ್ಯ ರೈಲು ನಿಲ್ದಾಣಗಳಿದ್ದು ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ತಮಿಳು ನಾಡಿನಲ್ಲಿ 876.03 ಕಿಮೀ. ಬ್ರಾಡ್ ಗೇಜ್ ಮತ್ತು 2,889.05 ಕಿಮೀ. ಮೀಟರ್ ಗೇಜ್ ರೈಲುಮಾರ್ಗಗಳಿವೆ. ದಕ್ಷಿಣ ಭಾರತದಲ್ಲಿ ಬಹಳ ಹೆಚ್ಚಿನ ರೈಲ್ವೆ ಸೌಲಭ್ಯ ಉಳ್ಳ ರಾಜ್ಯ ತಮಿಳು ನಾಡು. ಮದ್ರಾಸಿನೊಂದಿಗೆ ರಾಜ್ಯದ ಎಲ್ಲ ಪ್ರಮುಖ ಕೇಂದ್ರಗಳೂ ಭಾರತದ ಮುಖ್ಯ ನಗರಗಳೂ ರೈಲ್ವೆ ಸಂಪರ್ಕ ಹೊಂದಿವೆ. ದಕ್ಷಿಣ ರೈಲ್ವೆಯ ಮುಖ್ಯ ಕಚೇರಿ ಮದ್ರಾಸಿನಲ್ಲಿದೆ. ಈಗ ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ. ರಸ್ತೆಯಿದ್ದು ಇದರಲ್ಲಿ 60,901 ಕಿ.ಮೀ ಟಾರ್ ಹಾಗೂ ಕಾಂಕ್ರೀಟಿನಿಂದ ಕೂಡಿವೆ. ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ಚೆನ್ನೈ, ತಿರುಚಿನಾಪಳ್ಳಿ, ಮಧುರೈ, ಕೊಯಮತ್ತೂರು ಮತ್ತು ಸೇಲಂಗಳಲ್ಲಿ ವಿಮಾನ ನಿಲ್ದಾಣಗಳಿವೆ. ಚೆನ್ನೈ ಟುಟಿಕೋರಿನ್, ಕುಡಲೂರು ಮತ್ತು ನಾಗಾಪಟ್ಟಣಮ್‍ಗಳಲ್ಲಿ ಬಂದರುಗಳಿವೆ. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪೂರ್ವತೀರದ ಮುಖ್ಯ ಬಂದರೂ ಆಗಿದೆ. ಚೆನ್ನೈ ಜೊತೆಗೆ ನಾಗಪಟ್ಟಿನಮ್, ತುತುಕೋರಿನ್, ಕುಡಲೂರು ಬಂದರುಗಳಿವೆ. (
 
==ಪ್ರಾಗಿತಿಹಾಸ ==
ದಕ್ಷಿಣ ಭಾರತದ ಇತರ ಪ್ರದೇಶಗಳಂತೆ ತಮಿಳು ನಾಡಿನಲ್ಲೂ ಪ್ರಾಗೈತಿಹಾಸಿಕ ಮಾನವನ ಅವಶೇಷಗಳಿವೆ. ತಮಿಳುನಾಡಿನಲ್ಲಿ ಮಾನವ ಎಂದಿನಿಂದ ವಾಸಿಸುತ್ತ ಬಂದಿದ್ದಾನೆಂದು ಹೇಳುವುದು ಸಾಧ್ಯವಿಲ್ಲದಿದ್ದರೂ, ಕಲ್ಲಿನಲ್ಲಿ ಆಯುಧಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದನಿಂದ —ಎಂದರೆ ಮಧ್ಯ ಪ್ಲೀಸ್ಟೊಸೀನ್ ಕಾಲದಿಂದ —ಅವನ ಅಸ್ತಿತ್ವದ ಅವಶೇಷಗಳು ಹೇರಳವಾಗಿ ದೊರಕಿವೆ. 1863ರಲ್ಲಿ ರಾಬರ್ಟ್ ಬ್ರೂಸ್‍ಫೂಟರಿಗೆ ಮದ್ರಾಸಿನ ಹತ್ತಿರ ಪಲ್ಲಾವರಮ್‍ನಲ್ಲಿ ದೊರೆತ ಪುರಾತನ ಶಿಲಾಯುಗಧ ಆಯುಧದಿಂದ ತಮಿಳುನಾಡಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಭಾರತದಲ್ಲೇ ಪ್ರಾಗೈತಿಹಾಸಿಕ ಮಾನವನ ಅವಶೇಷಗಳ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.ಚೆಂಗಲ್‍ಪಟ್ಟು ಜಿಲ್ಲೆಯಲ್ಲಿರುವ ಕೋರ್ತಲಯಾರ್ ನದಿಯ ಪ್ರದೇಶದಲ್ಲಿ, ಈ ನದಿಯ ಹಳೆಯ ದಂಡೆಗಳ ಮೇಲೆ, ಆದಿ ಶಿಲಾಯುಗದ ಕಾಲದಲ್ಲೆ ಮಾನವರು ವಾಸಿಸುತ್ತಿದ್ದರೆಂಬುದು, ಡಿ ಟೆರ್ರ, ವಿ.ಡಿ. ಕೃಷ್ಣಸ್ವಾಮಿ, ಕೆ,ವಿ. ಬ್ಯಾನರ್ಜಿ ಇವರು ಮಾಡಿರುವ ಸಂಶೋಧನೆಗಳಿಂದ ತಿಳಿದುಬಂದಿದೆ. ಇವರು ಬಯಲು ಪ್ರದೇಶದಲ್ಲಿ ಹಾಗೂ ನೈಸರ್ಗಿಕ ಗುಹೆಗಳಲ್ಲಿ ವಾಸಿಸುತ್ತಿದ್ದರು : ಬೇಟೆಯಾಡುವುದು ಮತ್ತು ಗೆಡ್ಡೆ ಗೆಣಸುಗಳನ್ನು ಅಗೆದು ತಿನ್ನುವುದೇ ಇವರ ಮುಖ್ಯ ಕಸುಬಾಗಿತ್ತು. ಇವರು ಕ್ವಾರ್ಟ್‍ಸೈಟ್ ಉಂಡೆಕಲ್ಲಿನ ತಿರುಳಿನಲ್ಲಿ ಮಾಡಿದ ಕೈಗೊಡಲಿ. ಬಾಚಿ ಮತ್ತು ಅಂಡಾಕಾರದ ಆಯುಧಗಳನ್ನು ಉಪಯೋಗಿಸುತ್ತಿದ್ದರು-ಎಂಬುದಾಗಿ ಗೊತ್ತಾಗಿದೆ.ಮಧ್ಯ ಪ್ಲೀಸ್ಟೊಸೀನ್ ಕಾಲದ ಆಯುಧಗಳನ್ನು ದಕ್ಷಿಣ ಭಾರತದ ಇತರ ಸ್ಥಳಗಳಲ್ಲಿ, ದಕ್ಷಿಣ ಆಫ್ರಿಕ ಮತ್ತು ಯೂರೋಪ್‍ನಲ್ಲಿ ದೊರಕುವ ಅಬ್ಬೆವಿಲಿಯನ್ ಮತ್ತು ಅಷೀಲಿಯನ್ ಆಯುಧಗಳ ರೀತಿಯವು. ಈ ಕಾಲದ ನೆಲೆಗಳು ತಮಿಳು ನಾಡಿನ ಹಲವಾರು ಕಡೆಗಳಲ್ಲಿ ದೊರಕಿದ್ದರೂ ಅವುಗಳ ಅಧ್ಯಯನ ಇನ್ನೂ ನಡೆದಿಲ್ಲ.
೧೭,೩೭೪

edits

"https://kn.wikipedia.org/wiki/ವಿಶೇಷ:MobileDiff/755301" ಇಂದ ಪಡೆಯಲ್ಪಟ್ಟಿದೆ