"ತಮಿಳುನಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಅನಂತರದ ಪಾಂಡ್ಯರ ಕಾಲದಲ್ಲಿ ಗೋಪುರಗಳು ಸಹ ಅನೇಕ ಅಂತಸ್ತುಗಳನ್ನೊಳಗೊಂಡು ಎತ್ತರವಾದುವು. ಪ್ರಾಕಾರಗಳ ಸಂಖ್ಯೆ ಬೆಳೆಯಿತು. ಒಳಗಿನ ಬೇರೆ ಬೇರೆ ದೇವತೆಗಳಿಗೂ ಸ್ತ್ರೀ ದೇವತೆಗಳಿಗೂ ಪ್ರತ್ಯೇಕ ಗುಡಿಗಳನ್ನು ಕಟ್ಟಲಾಯಿತು. ನೂರು ಅಥವಾ ಸಾವಿರ ಕಂಬಗಳ ಮಂಟಪಗಳು ಕಾಣಿಸಿಕೊಂಡುವು. ಚಿದಂಬರಂ, ತಿರುವಣ್ಣಾಮಲೈಗಳ ಆಲಯಗಳನ್ನು ನೋಡಿದಾಗ ಈ ಅಂಶಗಳು ವ್ಯಕ್ತವಾಗುತ್ತವೆ. ಈ ಹೊಸ ಪ್ರವೃತ್ತಿಯ ಫಲವಾಗಿ ವಿಮಾನಗಳಲ್ಲಿ ನಯ ಗೆಲಸ ಕಡಿಮೆಯಾಗಿ, ಅವು ತಮ್ಮ ಪ್ರಾಧಾನ್ಯವನ್ನು ಕಳೆದುಕೊಂಡುವು.
 
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಗೋಪುರಗಳ, ಮಂಟಪಗಳು ಮತ್ತು ಪ್ರಾಕಾರಗಳ ರಚನೆಯಲ್ಲಿ ಇನ್ನಷ್ಟು ಪ್ರಗತಿಯಾಯಿತು. ಇದು ಇಡೀ ತಮಿಳು ನಾಡಿಗೂ ಹಬ್ಬಿತು. ಈ ಘಟ್ಟದ ರಚನೆಗಳ ಉತ್ಕøಷ್ಟ ಉದಾಹರಣೆಗಳನ್ನು ನಾವು ವಿಜಯನಗರದ ರಾಜಧಾನಿಯ ವಿಠಲ, ಹಜಾರ ರಾಮ ಮುಂತಾದ ದೇಗುಲಗಳಲ್ಲೇ ಅಲ್ಲದೆ ಪ್ರಾಂತೀಯ ಪಟ್ಟಣಗಳಾದ ವೆಲ್ಲೂರು, ಕಂಚಿ, ಕುಂಭಕೋಣ, [[ಶ್ರೀರಂಗಂ]], ಮುಂತಾದವುಗಳಲ್ಲಿಯ ದೇವಾಲಯಗಳಲ್ಲೂ ಕಾಣಬಹುದು. ವೆಲ್ಲೂರಿನ ಕಲ್ಯಾಣಮಂಟಪ (15ನೆಯ ಶತಮಾನ), ಚಿದಂಬರಂ ಶ್ರೀರಂಗಂ ತಿರುವಣ್ಣಾಮಲೈಗಳ ಗೋಪುರಗಳು ಗಮನಾರ್ಹ ಉದಾಹರಣೆಗಳು. ಮಂಟಪದಲ್ಲಿಯ ಅಖಂಡ ಶಿಲಾಸ್ತಂಭಗಳು ಕ್ರಮೇಣ ಬೇಟೆಯ ದೃಶ್ಯಗಳು, ಅಲಂಕೃತ ವ್ಯಾಳಗಳು ಮುಂತಾದವುಗಳಿಂದ ಚಿತ್ರಿತವಾದ ಕಲಾಕೃತಿಕಡೆತಗಳಾದುವು. ಈ ಸ್ತಂಭಗಳೇ ಅಲ್ಲದೆ ಶಿಲಾಮಂಟಪಗಳೂ ವಿಶಿಷ್ಟ ಕಲಾಕೃತಿಗಳಾದುವು. ಇವುಗಳಲ್ಲಿರುವ, ಮುಂಜಾಜಿದ, ಎರಡು ಬಾಗುಗಳುಳ್ಳ ಏಣುಗಳೂ (ಕೊಡಂಗೈ) ಅವುಗಳಲ್ಲಿ ತೋರುವ ಕೆತ್ತನೆಯ ಕೆಲಸವೂ ವಿಚಿತ್ರವಾದಂಥವು. ಅವುಗಳ ಅಡಿಯಲ್ಲಿ, ಮರಕ್ಕೆ ಮೊಳೆ ಹೊಡೆದಂತೆ ಅಥವಾ ತಿರುಪುಮೊಳೆ ತಿರುಗಿಸಿದಂತೆ ಕಾಣುವ ಕೆತ್ತನೆಯ ಕೆಲಸವೂ ಅದ್ಭುತವಾದಂಥವು. ಕಲ್ಲಿನ ಕೆಲಸದ ಈ ರೂವಾರಿಗಳು ತಮ್ಮ ಕಾಲದ ಬಡಗಿಗಳನ್ನು ಮೀರಿಸಲು ಯತ್ನಿಸುತ್ತಿದ್ದರೆಂಬುದನ್ನು ತೋರಿಸುವ ಈ ಕಂಡೆತಗಳು ಮರಗೆಲಸಗಳೇಯೋ ಏನೋ ಎಂಬ ಭ್ರಮೆ ಬರಿಸುತ್ತವೆ. ಮುಖ್ಯ ಗುಡಿಯ ಸುತ್ತ ಹೆಚ್ಚು ಹೆಚ್ಚು ಪ್ರಾಕಾರಗಳನ್ನು ನಿರ್ಮಿಸುವ ಪದ್ಧತಿಯಿಂದ ಇಡೀ ವಾಸ್ತುಶಿಲ್ಪ ಸಂಕೀರ್ಣಕ್ಕೆ ಒಂದು ಭವ್ಯತೆಯನ್ನು ದೊರಕಿಸಿ ಕೊಡುವ ಪ್ರಯತ್ನ ಸಫಲವಾಯಿತು. ಕಾವೇರಿ ತೀರದ ಜಂಬುಕೇಶ್ವರಮ್‍ನ ಪಂಚ ಪ್ರಾಕಾರ ಸಂಕೀರ್ಣ, ಶ್ರೀರಂಗದ ಸಪ್ತ ಪ್ರಾಕಾರ ಸಂಕೀರ್ಣ-ಇವು ಈ ಅಮೋಘ ಬೆಳೆವಣಿಗೆಗೆ ಸಾಕ್ಷಿಗಳಾಗಿ ನಿಂತಿವೆ. ಈ ಆಲಯಗಳ ಅತ್ಯಂತ ಹೊರ ಪ್ರಾಕಾರದ ನಾಲ್ಕು ಪ್ರವೇಶದ್ವಾರಗಳ ಮೇಲೂ ಉನ್ನತವಾದ ಗೋಪುರಗಳಿವೆ. ಈ ಬೃಹದ್ಗೋಪುರಗಳನ್ನು ಸಾಮಾನ್ಯವಾಗಿ ರಾಯಗೋಪುರಗಳೆಂದು ಕರೆಯುತ್ತಾರೆ. ಈ ಗೋಪುರಗಳ ನಿರ್ಮಾಣಕ್ಕೆ ಅಗತ್ಯವಾದ ಅಗಾಧವಾದ ಸಾಮಗ್ರಿಯನ್ನೂ ಮಾನವಶಕ್ತಿಯನ್ನೂ ಧರ್ಮನಿಷ್ಠ ಜನರನೇಕರು ಮನ:ಪೂರ್ವಕವಾಗಿ ಒದಗಿಸಿದ್ದರಿಂದಲೂ ಧರ್ಮನಿಷ್ಠ ದೊರೆಗಳು ಅವರಿಗೆ ಸ್ಫೂರ್ತಿ ನೀಡಿದ್ದರಿಂದಲೂ ಇಂಥ ಕಟ್ಟಡಗಳ ನಿರ್ಮಾಣ ಸಾಧ್ಯವಾಯಿತೆನ್ನಬಹುದು. ಹಲವು ಬಗೆಯ ಸಾಮಗ್ರಿಗಳಿಂದಲೂ ಭಾಗಗಳಿಂದಲೂ ಸಂಯೋಜಿತವಾದಂತೆ ತೋರುವಂತೆ ಮಂಟಪಗಳನ್ನೂ ಸ್ತಂಭಗಳನ್ನೂ ಕೊರೆಯುತ್ತಿದ್ದರು. ಕಂಬದ ಬೋದಿಗೆಗಳು ಮೊದಲಿನಂತೆ ಗೆಡ್ಡೆಯಂತಿರುವ ಬದಲು ಬಾಳೆಯ ಹೂವಿನ ಆಕಾರ ತಾಳಿದುವು. ಇವನ್ನು ಪುಷ್ಪ ಬೋದಿಗೆಗಳೆಂದು ಕರೆಯಲಾಗಿದೆ. ಇಸ್ಲಾಂ ವಾಸ್ತುಶಿಲ್ಪದ ಪ್ರಭಾವದಿಂದ ವಿಜಯನಗರದ ಅರಸರು ಮತ್ತು ಅವರ ಮಾಂಡಲಿಕರು ಇಟ್ಟಿಗೆ ಹಾಗೂ ಗಾರೆಗಳನ್ನು ಉಪಯೋಗಿಸಿ ಕಮಾನುಗಳನ್ನು ಕಟ್ಟಲು ಆರಂಭಿಸಿದರು.
 
16-17ನೆಯ ಶತಮಾನಗಳಲ್ಲಿ ಮಧುರೆಯ ನಾಯಕರು ಗೋಪುರ ವಿನ್ಯಾಸಕ್ಕೂ ಕಂಬಗಳ ಕೆತ್ತನೆಯ ಕೆಲಸಕ್ಕೂ ಹೆಚ್ಚಿನ ಪ್ರೋತ್ಸಾಹ ಕೊಟ್ಟರು. ಮಧುರೈ ಮೀನಾಕ್ಷಿ ದೇವಾಲಯ ಈ ಕಲೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಗೋಪುರಗಳಲ್ಲಿ ಅನೇಕ ಗಾರೆಯ ವಿಗ್ರಹಗಳನ್ನು ರಚಿಸಲಾಗಿದೆ. ಹೊರರೇಖೆ ಒಳಬಾಗಿ ತೊನೆದಾಡುವಂತೆ ತೋರುವ ಈ ಗೋಪುರಗಳು ಸುಂದರ ಕೃತಿಗಳು. ಇಂಥದೇ ಶೈಲಿಯನ್ನು ಶ್ರೀವಿಲ್ಲಿಪುತ್ತೂರ್, ತಿರುನೆಲ್ವೇಲಿ ಸುಚೀಂದ್ರಂಗಳಲ್ಲಿ ಕಾಣಬಹುದು. ಆದರೆ ಈ ರಚನೆಗಳು ಮಧುರೈ ಮೀನಾಕ್ಷಿ ದೇವಾಲಯ ಕಲೆಗೆ ಸಾಟಿಯಾಗಲಾರವು.
೧೭,೩೭೪

edits

"https://kn.wikipedia.org/wiki/ವಿಶೇಷ:MobileDiff/755300" ಇಂದ ಪಡೆಯಲ್ಪಟ್ಟಿದೆ