"ತಮಿಳುನಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ತಮಿಳು ನಾಡಿನಲ್ಲಿ ನವಶಿಲಾಯುಗದವರು ವಾಸಿಸುತ್ತಿದ್ದಂತೆಯೇ ದೊಡ್ಡ ಕಲ್ಲುಗಳ ಗೋರಿಗಳನ್ನು ಕಟ್ಟುವ ಜನಾಂಗದವರು ಬಹುಶಃ ಕರ್ನಾಟಕದಿಂದ ಬಂದರೆಂಬುದು ಪೈಯಂಪಲ್ಲಿ ಉತ್ಖನನದಿಂದ ತಿಳಿದುಬರುತ್ತದೆ. ಇವರು ಕ್ರಿ.ಪೂ. 500ಕ್ಕೆ ಹಿಂದೆ ತಮಿಳು ನಾಡಿಗೆ ಬಂದರೆಂದು ಊಹಿಸಲಾಗಿದೆ. ಈ ಜನರು ತಮ್ಮೊಡನೆ ಕಬ್ಬಿಣದ ಬಳಕೆಯ ಕೌಶಲವನ್ನೂ ಚಕ್ರದ ಮೇಲೆ ಕಪ್ಪು ಕೆಂಪು ಹಾಗೂ ಕಪ್ಪು -ಕೆಂಪುಬಣ್ಣದ ಮಣ್ಣಿನ ಪಾತ್ರೆಗಳನ್ನು ಮಾಡುವ ವಿಧಾನವನ್ನೂ ತಂದರು. ತಮಿಳು ನಾಡಿನಲ್ಲಿ ಕೆರೆಗಳನ್ನು ಕಟ್ಟಿ ಜಮೀನನ್ನು ಸಾಗುವಳಿ ಮಾಡುವ ವಿಧಾನವನ್ನು ಈ ಜನಾಂಗದವರು ಆರಂಭಿಸಿದರೆಂದು ಊಹಿಸಲಾಗಿದೆ. ನವ ಶಿಲಾಯುಗದವರಂತೆಯೇ ಇವರೂ ಮನೆಗಳನ್ನು ಕಟ್ಟಿಕೊಂಡು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ವ್ಯವಸಾಯ, ಮೀನು ಹಿಡಿಯುವುದು-ಇವು ಇವರ ಮುಖ್ಯ ಕಸುಬುಗಳಾಗಿದ್ದುವು.
 
ಇವರ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಶಿಲಾಗೋರಿಗಳು. ಇವರು ನಿರ್ಮಿಸುತ್ತಿದ್ದ ಬೃಹತ್ ಶಿಲಾಗೋರಿಗಳಲ್ಲಿ ನಾನಾ ವಿಧಗಳಿದ್ದುವು. ನಾಲ್ಕು ಅಥವಾ ಹಲವು ಹಲಗೆ ಕಲ್ಲುಗಳನ್ನು ಕೋಣೆಯಾಕಾರದಲ್ಲಿ ಜೋಡಿಸಿ ಅದರಲ್ಲಿ ಅಸ್ಥಿಯನ್ನೋ ಅಸ್ಥಿಯುಳ್ಳ ಗಡಿಗೆಯನ್ನೋ ಇಟ್ಟು ಮೇಲೊಂದು ಹಲಗೆ ಕಲ್ಲನ್ನು ಮುಚ್ಚಿ ಸುತ್ತಲೂ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನಿಟ್ಟು, ಮಧ್ಯದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ತುಂಬುವುದು ಒಂದು ವಿಧ. ಆಳವಾದ ಗುಂಡಿಯಲ್ಲಿ ಆಸ್ಥಿವುಳ್ಳ ಮಣ್ಣಿನ ಪಾತ್ರೆಯನ್ನೂ ಇತರ ವಸ್ತುಗಳನ್ನೂ ಹೂತು ಸುತ್ತಲೂ ಬಂಡೆಕಲ್ಲುಗಳನ್ನು ಇಟ್ಟು ಮಧ್ಯದಲ್ಲಿ ಸಣ್ಣ ಕಲ್ಲುಗಳನ್ನು ತುಂಬುವುದು ಇನ್ನೊಂದು ವಿಧ ಪ್ರಾಣಿಯಾಕಾರದ ಉದ್ದನೆಯ ದೊಡ್ಡ ಬಾನೆಯಲ್ಲಿ ಅಸ್ಥಿ ಮತ್ತು ಇತರ ವಸ್ತುಗಳನ್ನು ಇಟ್ಟು ಹೂತು ಸುತ್ತಲೂ ಬಂಡೆಕಲ್ಲುಗಳನ್ನಿಟ್ಟು ಮಧ್ಯದಲ್ಲು ಸಣ್ಣಕಲ್ಲುಗಳನ್ನು ತುಂಬುವುದು, ಮತ್ತೊಂದು ವಿಧ. ಇಂಥ ಹಲವು ರೀತಿಗಳಿದ್ದುದು ಕಂಡುಬರುತ್ತದೆ. ಸತ್ತವನ ಆತ್ಮಕ್ಕೆ ಮುಂದೆ ಬೇಕಾಗಬಹುದೆಂಬ ನಂಬಿಕೆಯಿಂದ ಮಣ್ಣಿನ ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರ ಮತ್ತಿತರ ಪರ್ದಾಥಗಳನ್ನು ಹಾಗೂ ಅವರ ನಿತ್ಯೋಪಯೋಗದ ವಸ್ತುಗಳನ್ನು ಇಟ್ಟು ಅಲ್ಲಿ ಹೂಳುತ್ತಿದ್ದರು. (ಬಿ.ಎಸ್.ಎ.ಆರ್.)
 
==ಇತಿಹಾಸ==
ತಮಿಳು ನಾಡಿನ ಇತಿಹಾಸ ಬಲು ಪ್ರಾಚೀನವಾದ್ದು. ಭಾಷೆ ವೈಜ್ಞಾನಿಕವಾಗಿ ಭಾರತ ಉಪಖಂಡದಲ್ಲಿ ಇದು ಬಹುಶಃ ಅತ್ಯಂತ ಹಳೆಯ ಭಾಷೆ ಮೊತ್ತ. ಗತ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಸಂಸ್ಕøತಿ ನಾಗರಿಕತೆಗಳ ಭಾಷೆ ಸಾಹಿತ್ಯಗಳೂ ಚಿತ್ರಕಲೆ ವಾಸ್ತುಶಿಲ್ಪಗಳೂ ಸಂಗೀತವೂ ಬೆಳೆದಂತೆ ದೇಶ ಬೇರೆಡೆಯಲ್ಲೆಲ್ಲೂ ಬೆಳೆಯಲಿಲ್ಲ. ಉನ್ನತ ಬೆಳೆವಣಿಗೆ ಹೊಂದಿದ ತಮಿಳು ಭಾಷೆ ಅದರಲ್ಲಿ ಸೃಷ್ಟಿಯಾದ ಅನಶ್ವರ ಸಾಹಿತ್ಯ, ಉದಾತ್ತವಾದ ಗೋಪುರಗಳು, ಮಧುರೈ ಮಹಾಬಲಿಪುರಂ ತಂಜಾವೂರು ಕಾಂಚೀಪುರಗಳಲ್ಲಿ ಕೆತ್ತಲಾದ ಅಮರ ವಾಸ್ತು ಶಿಲ್ಪಗಳು ತಂಜಾವೂರಿನ ಉತ್ಕøಷ್ಟ ಕರಕೌಶಲ, ಭರತನಾಟ್ಯ ಕಲಾವಿದರ ಲಲಿತ ಚಲನೆಗಳು - ಇವು, ಮತ್ತು ಇಂಥ ಹಲವು, ತಮಿಳು ನಾಡಿನ ಸಾಂಸ್ಕøತಿ ಪರಂಪರೆಯ ಅಂಶಗಳು.ತಮಿಳು ನಾಡಿಗೆ ಸಂಬಂಧಿಸಿದಂತೆ ಬೃಹದ್ಬಾರತದ ಇತಿಹಾಸವನ್ನು ದಕ್ಷಿಣ ಭಾರತದ ಇತಿಹಾಸದ ಒಂದು ಉಜ್ವಲ ಅಧ್ಯಾಯವೆಂದು ಪರಿಗಣಿಸಬಹುದು.
೧೭,೩೭೪

edits

"https://kn.wikipedia.org/wiki/ವಿಶೇಷ:MobileDiff/755299" ಇಂದ ಪಡೆಯಲ್ಪಟ್ಟಿದೆ