ಕಜಾಕಸ್ಥಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 205 interwiki links, now provided by Wikidata on d:q232 (translate me)
No edit summary
೬೫ ನೇ ಸಾಲು:
|calling_code = 7
}}
'''ಕಜಾಕಸ್ಥಾನ್''', ({{lang|kk|Қазақстан}}; {{lang|ru|Казахстан}}) ಅಧಿಕೃತವಾಗಿ '''ಕಜಾಕಸ್ಥಾನ್ ಗಣರಾಜ್ಯ''', ಉತ್ತರ ಮತ್ತು ಮಧ್ಯ [[ಯುರೇಶಿಯ]]ದಲ್ಲಿರುವ, ಪ್ರಪಂಚದ ೯ನೇ ಅತ್ಯಂತ ದೊಡ್ಡ ದೇಶ. ಹಿಂದಿನ [[ಸೋವಿಯತ್]] ಒಕ್ಕೂಟಕ್ಕೆ ಸೇರಿದ್ದ 15 ರಾಜ್ಯಗÀಳಲ್ಲಿ ಒಂದು. 1991ರಲ್ಲಿ [[ಸ್ವತಂತ್ರ]] ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿತು. ಮಧ್ಯ [[ಏಷ್ಯ]]ದ ಉತ್ತರ ಭಾಗದಲ್ಲಿರುವ ಇದನ್ನು ಉತ್ತರದಲ್ಲಿ ರಷ್ಯ, ಪುರ್ವಭಾಗದಲ್ಲಿ ಚೀನ, ದಕ್ಷಿಣದಲ್ಲಿ ಕಿರ್ಗಿಸ್ತಾನ ಸಮುದ್ರ ಹಾಗೂ ತುರ್ಖಮೇನಿಸ್ತಾನದ ಕೆಲವು ಪ್ರದೇಶಗÀಳು ಸುತ್ತುವರಿದಿವೆ.
 
==ಕಜಾಕಿಸ್ತಾನ್ ಗಾತ್ರ==
ಕಜಾಕಿಸ್ತಾನ್ ಗಾತ್ರದಲ್ಲಿ ಸಾಕಷ್ಟು ವಿಶಾಲವಾದ ರಾಜ್ಯ. ಸಮಶೀತೋಷ್ಣವಲಯದ ಹುಲ್ಲುಗಾವಲಿನಿಂದ (ಸ್ಟೆಪ್ಪಿಸ್) ಕೂಡಿರುವ ಈ ರಾಷ್ಟ್ರ ಏರಿಳಿತಗಳಿಂದ ಕೂಡಿರುವ ಮೈದಾನಗಳು, ಕಣಿವೆಗಳು ಹಾಗೂ ಪ್ರಸ್ಥಭೂಮಿಗಳನ್ನು ಹೊಂದಿದೆ. ಅಕ್ಷಾಂಶ 44055ದಿ ಉ. ಮತ್ತು ರೇ. 50090ದಿ ಪು.ದಲ್ಲಿ ವಿಸ್ತರಿಸಿರುವ ಈ ರಾಷ್ಟ್ರ 2,717,300 ಚ.ಕಿಮೀ ಭೌಗೋಳಿಕ ಪ್ರದೇಶವನ್ನು ಹೊಂದಿದೆ. ಇದರಲ್ಲಿ 1894 ಚ.ಕಿಮೀ ಕ್ಯಾಸ್ಪಿಯನ್ ಸಮುದ್ರ ಕರಾವಳಿ ತೀರವನ್ನು ಹೊಂದಿದೆ. ರಾಜಧಾನಿ ಆಸ್ಥಾನ (ಜನಸಂಖ್ಯೆ 814,401 (2014)). ಕeóÁಕ್ಸ್ತಾನದ ಜನಸಂಖ್ಯೆ 17,948,816 (2014).<ref>http://archive.suvarnanews.tv/sports/special/kajakistana-valibal-player-sabina-s-beauty-is-become-the-problem-for-the-team..--4894</ref>
 
==ಭೂ ಸಂಪನ್ಮೂಲಗಳು==
ಭೂ ಸಂಪನ್ಮೂಲಗಳು ಕಜಾಕಿಸ್ತಾನದ ಕೃಷಿ ಅಭಿವೃದ್ಧಿಗೆ ಪುರಕವಾಗಿಲ್ಲ. ಅಧಿಕ ಪ್ರಮಾಣದ ಮಣ್ಣಿನ ಸವಕಳಿ, ಅಲ್ಪಮಳೆ, ಒಣಹವೆ, ಅಲ್ಕಲೈನ್ನಿಂದ ಕೂಡಿರುವ ಅಂತರ್ಜಲ ಮೊದಲಾದ ಅಂಶಗಳಿಂದ ಕೃಷಿ ಭೂಮಿ ಸ್ವಾಭಾವಿಕ ಸತ್ತ್ವವನ್ನು ಕಳೆದುಕೊಂಡಿದೆ. ಈ ಕಾರಣದಿಂದ ಸರ್ಕಾರ ವಿಶೇಷ ಮಣ್ಣಿನ ಸಂರಕ್ಷಣೆಯ ಕಾರ್ಯವಿಧಾನಗಳನ್ನು ರೂಪಿಸುತ್ತಿದೆ. ಈ ರಾಷ್ಟ್ರ ಮಧ್ಯ ಸ್ಟೆಪಿ ಹುಲ್ಲುಗಾವಲಿನಲ್ಲಿದ್ದು, ಈ ವಲಯ ಸೈಬೀರಿಯದವರೆಗೆ ಹಂಚಿಕೆಯಾಗಿದೆ. ಈ ಭಾಗದಲ್ಲಿ ಸು. 11,000 ಸಣ್ಣಪುಟ್ಟ ನದಿಗಳು, 7,000 ಸರೋವರಗಳು ಹಾಗೂ ಜಲಾಶಯಗಳಿವೆ. ಅಗಾಧವಾದ ಜಲಸಂಪತ್ತು ಕೃಷಿಗೆ ಮತ್ತು ಶಕ್ತಿ ಸಂಪನ್ಮೂಲವಾಗಿ ಹಾಗೂ ನೌಕಾಯಾನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಭಾಗದ ಕೆಲವು ಪ್ರಮುಖ ನದಿಗಳು: ಇರ್ಟಿಶ್ (1700 ಕಿಮೀ), ಐಷ್ಯ (1400 ಕಿಮೀ), ಯುರಲ್ (1082 ಕಿಮೀ), ಸಿರ್ದರ್ಯ (1400 ಕಿಮೀ), ಲೀ (815 ಕಿಮೀ), ಚೂ (800 ಕಿಮೀ), ಟೊಬೊಲ್ (800 ಕಿಮೀ) ಮತ್ತು ನುರು (978 ಕಿಮೀ).
 
==ಸ್ವಾಭಾವಿಕ ಸಂಪನ್ಮೂಲ==
ಸ್ವಾಭಾವಿಕ ಸಂಪನ್ಮೂಲಗಳ ನಿಕ್ಷೇಪಗಳನ್ನು ಸಾಕಷ್ಟು ಪ್ರಮಾಣದಲ್ಲಿ ಈ ದೇಶ ಹೊಂದಿದೆ. ಕ್ರೋಮಿಯ, ತಾಮ್ರ, ಸೀಸ ಮತ್ತು ಸತು, ಕಲ್ಲಿದ್ದಲು, ಪೆಟ್ರೋಲ್, ಚಿನ್ನದ ನಿಕ್ಷೇಪಗಳು ಪತ್ತೆಯಾಗಿವೆ. ಪೆಟ್ರೋಲ್ ಹಾಗೂ ಸ್ವಾಭಾವಿಕ ಅನಿಲದ ನಿಕ್ಷೇಪ ಸು. 14 ಕಣಿವೆಗಳಲ್ಲಿ ಹಂಚಿಕೆಯಾಗಿರುವುದನ್ನು ಪತ್ತೆಮಾಡಲಾಗಿದೆ. ಅವುಗಳಲ್ಲಿ 160 ಪ್ರದೇಶಗಳಲ್ಲಿ ಇಂಧನ ನಿಕ್ಷೇಪ ಉತ್ಕೃಷ್ಟವಾದುದು ಎಂದು ತಿಳಿದುಬಂದಿದೆ. ಚಿನ್ನದ ನಿಕ್ಷೇಪವನ್ನು ಸು. 300 ಪ್ರದೇಶಗಳಲ್ಲಿ ಶೋಧಿಸಲಾಗಿದ್ದು ಅವುಗಳಲ್ಲಿ 173 ಪ್ರದೇಶಗಳಲ್ಲಿ ಉತ್ತಮ ದರ್ಜೆಯ ನಿಕ್ಷೇಪಗಳಿವೆ. ಪ್ರಸ್ತುತ ಪ್ರಪಂಚದ ಶೇ. 1 ರಷ್ಟನ್ನು ಗಣಿಗಾರಿಕೆಯಿಂದ ಹೊರತೆಗೆಯಲಾಗುತ್ತಿದೆ.<ref>http://www.karavalikarnataka.com/news/fullstory.aspx?story_id=1004&languageid=1&catid=111&menuid=0</ref>
 
==ಕಜಾಕಿಸ್ತಾನ್ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ದೇಶ==
ಕಜಾಕಿಸ್ತಾನ್ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ದೇಶ. ಕರಗಂಡ ಇಲ್ಲಿನ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ಪ್ರದೇಶ. ಇದು ಸು. 3,000 ಚ.ಕಿಮೀ ವಿಸ್ತೀರ್ಣದಲ್ಲಿ ಹರಡಿದೆ. ಇಲ್ಲಿ 34,000 ಮಿ.ಟನ್. ನಿಕ್ಷೇಪವಿದ್ದು ಅದರಲ್ಲಿ 31,000 ಮಿ.ಟನ್ ಉತ್ತಮ ದರ್ಜೆಯ ಆಂತ್ರಸೈಟ್ ಮತ್ತು ಬಿಟುಮಿನಸ್ ಕಲ್ಲಿದ್ದಲು, 3,000 ಮಿ.ಟನ್ ದ್ವಿತೀಯ ದರ್ಜೆಯ ಬಿಟುಮಿನಸ್ ಮತ್ತು ಲಿಗ್ನೈಟ್ ಕಲ್ಲಿದ್ದಲು ದೊರೆಯುತ್ತದೆ. ಇಲ್ಲಿನ ಕಲ್ಲಿದ್ದಲಿನ ನಿಕ್ಷೇಪವು ಪ್ರಪಂಚದ ಶೇ. 3.5 ರಷ್ಟು ಹಾಗೂ ವಿಶ್ವದ 9ನೆಯ ಅತಿದೊಡ್ಡ ಕಲ್ಲಿದ್ದಲಿನ ನಿಕ್ಷೇಪವನ್ನು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಉತ್ತಮ ದರ್ಜೆಯ ಕಲ್ಲಿದ್ದಲು ಇರುವುದರಿಂದ ಗಣಿಗಾರಿಕೆ ಸುಲಭ ಮತ್ತು ಲಾಭದಾಯಕವಾದುದು.2001ರಲ್ಲಿ ಕಜಾಕಿಸ್ತಾನ್ ಪ್ರಪಂಚದ ಒಟ್ಟು ಉತ್ಪಾದನೆಯ ಶೇ. 1.9 ರಷ್ಟು (72.2 ಮಿ.ಟನ್) ಕಲ್ಲಿದ್ದಲು ಉತ್ಪಾದಿಸಿತ್ತು ಹಾಗೂ 44.9 ಮಿ.ಟನ್ಗಳಷ್ಟು ಕಲ್ಲಿದ್ದಲು ದೇಶದಲ್ಲಿ ಬಳಕೆಯಾಗಿತ್ತು. ಅದೇ ವರ್ಷ 27.2 ಮಿ.ಟನ್ (ಶೇ.4) ರಫ್ತುಮಾಡಲಾಗಿತ್ತು.ಬಾಕ್ಸೈಟ್ ಉತ್ಪಾದನೆಯ ಪ್ರಮುಖ ದೇಶಗಳ ಪಟ್ಟಿಯಲ್ಲಿ ಈ ದೇಶ 10ನೆಯ ಸ್ಥಾನದಲ್ಲಿದೆ. 3668 ಸಾವಿರ ಟನ್ (2001) ಉತ್ಪಾದಿಸಿತ್ತು. ಪ್ರಪಂಚದ ಒಟ್ಟು ಬಾಕ್ಸೈಟ್ ಉತ್ಪಾದನೆಯಲ್ಲಿ ಈ ದೇಶವು ಶೇ. 2.6 ರಷ್ಟು ಉತ್ಪಾದಿಸುತ್ತಿದೆ.
 
==ಕಬ್ಬಿಣ ಅದಿರಿನ ನಿಕ್ಷೇಪ==
ಇಲ್ಲಿ ಸಾಕಷ್ಟು ಕಬ್ಬಿಣ ಅದಿರಿನ ನಿಕ್ಷೇಪ ಹಂಚಿಕೆಯಾಗಿದೆ. ಪ್ರಪಂಚದ ಒಟ್ಟು ನಿಕ್ಷೇಪದ ಶೇ. 6.1 ರಷ್ಟನ್ನು (19,000 ಮಿ.ಮೆ.ಟನ್) ಹೊಂದಿದೆ. 2001ರಲ್ಲಿ ಶೇ. 1.5 ಮೆ. ಟನ್ಗಳಷ್ಟು (16 ಮಿ) ಕಬ್ಬಿಣವನ್ನು ಉತ್ಪಾದಿಸಿತ್ತು. ಕಜಾ಼ಕ್ಸ್ತಾನ ಪ್ರಪಂಚದ 9ನೆಯ ಪ್ರಮುಖ ತಾಮ್ರ ಉತ್ಪಾದಿಸುವ ದೇಶ. ಪ್ರಪಂಚದ ಒಟ್ಟು ಉತ್ಪಾದನೆಯಲ್ಲಿ ಶೇ. 3.4 ರಷ್ಟನ್ನು ಪುರೈಸುವುದು (4,70,000 ಟನ್). ಈಗಾಗಲೆ ಈ ರಾಷ್ಟ್ರದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅದಿರು ಪತ್ತೆಯಾಗಿದ್ದು ಸು. 19,000 ಮಿ.ಮೆ.ಟನ್ ನಿಕ್ಷೇಪವಿದೆ ಎಂದು ಅಂದಾಜುಮಾಡಲಾಗಿದೆ. ಈ ನಿಕ್ಷೇಪ ಪ್ರಪಂಚದ ಒಟ್ಟು ನಿಕ್ಷೇಪದ ಶೇ. 6.1 ರಷ್ಟು ಎಂದು ತಿಳಿದುಬಂದಿದೆ. 2001ರಲ್ಲಿ 16 ಮಿ.ಮೆ.ಟನ್ (ಶೇ.1.5) ಕಬ್ಬಿಣವನ್ನು ಉತ್ಪಾದಿಸಲಾಗಿತ್ತು.ಕಜಾಕಿಸ್ತಾನ್ ಸೀಸದ ನಿಕ್ಷೇಪವನ್ನು ಹೊಂದಿರುವ ಪ್ರಪಂಚದ 7ನೆಯ ದೊಡ್ಡ ದೇಶ. ಇಲ್ಲಿನ ನಿಕ್ಷೇಪದ ಮೊತ್ತ 20 ಲಕ್ಷ ಮಿ.ಟನ್. ಮಿ.ಹೆ. (ಶೇ. 1.5) ಪ್ರಪಂಚದ ಒಟ್ಟು ಉತ್ಪಾದನೆಯ ಶೇ. 3.4 ರಷ್ಟನ್ನು ಈ ದೇಶ ಉತ್ಪಾದಿಸುತ್ತಿದೆ. ಹಾಗೂ ಶೇ.3.8ರಷ್ಟು (3,44,000 ಟನ್) ಸತುವನ್ನು ಉತ್ಪಾದಿಸುತ್ತದೆ.
 
==ಕೃಷಿ==
ಗೋದಿ ಕಜಾ಼ಕ್ಸ್ತಾನದ ಮುಖ್ಯಬೆಳೆ. 11.26 ಮಿ.ಹೆ. ಗಳಲ್ಲಿ ಬೆಳೆಯಲಾಗುತ್ತಿದೆ. ವಾರ್ಷಿಕ ಉತ್ಪಾದನೆಯು 11.52 ಮಿ.ಮೆ.ಟನ್ಗಳು. ಈ ರಾಷ್ಟ್ರ ಪ್ರಪಂಚದ ಒಟ್ಟು ಉತ್ಪಾದನೆಯಲ್ಲಿ ಶೇ. 2.1 ರಷ್ಟು ಉತ್ಪಾದಿಸುತ್ತಿದೆ. ಇಲ್ಲಿ ಪ್ರತಿ ಹೆಕ್ಟೇರಿಗೆ 1023 ಕಿಗ್ರಾಂ ಇಳುವರಿ ಸಿಗುತ್ತದೆ. ಗೋದಿ ಸಾಗುವಳಿ ಭೂಮಿಯ ಬಹುಭಾಗವನ್ನು ಆವರಿಸಿಕೊಂಡಿದೆ. ಇಲ್ಲಿ ಸಮಸ್ಟಿ ವ್ಯವಸಾಯ ವ್ಯವಸ್ಥೆ, ವೈಜ್ಞಾನಿಕ ಕೃಷಿವಿಧಾನ ಅನುಸರಿಸುತ್ತಿರುವುದು ಹಾಗೂ ಯಾಂತ್ರೀಕರಣ ಬೇಸಾಯ ಕ್ರಮಗಳು ಗೋದಿ ಬೇಸಾಯಕ್ಕೆ ಪುರಕವಾಗಿವೆ. ವಾಯುಗುಣದ ವಿಷಮ ಪರಿಸ್ಥಿತಿಗಳು ಗೋದಿಯ ಯಶಸ್ವಿಗೆ ಒಮ್ಮೊಮ್ಮೆ ಅಡ್ಡಿಯುಂಟುಮಾಡುವವು. ವಸಂತ ಮತ್ತು ಚಳಿಗಾಲದ ಗೋದಿಗಳೆರಡನ್ನು ಬೆಳೆದರೂ ಉತ್ಪನ್ನದ ಅಧಿಕ ಭಾಗವು ವಸಂತಕಾಲದ ಗೋದಿಯಾಗಿರುತ್ತದೆ. ಪ್ರಪಂಚದ ಪ್ರಮುಖ ಗೋದಿ ರಫ್ತು ಮಾಡುವ ರಾಷ್ಟ್ರಗಳಲ್ಲಿ ಈ ದೇಶ 8ನೆಯ ಸ್ಥಾನ ಹೊಂದಿದೆ. ಈ ದೇಶ 51.4 ಲಕ್ಷ ಟನ್ (ಶೇ. 3.9) ಗೋದಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರವಾನಿಸುತ್ತದೆ.ಈ ದೇಶದ ಜನಸಂಖ್ಯೆ ಬೆಳೆವಣಿಗೆಯ ದರ ಶೇ. 03, ಜನನ ಪ್ರಮಾಣ ಪ್ರತಿ 1000ಕ್ಕೆ 16, ಶಿಶುಮರಣ ಪ್ರಮಾಣ ಪ್ರತಿ 1000 ಕ್ಕೆ 38.3. ಸರಾಸರಿ ಜೀವಿತಾವಧಿ 66.9 ವರ್ಷಗಳು.
 
==ಕಜಾಕಿಸ್ತಾನ್ ದ ರಾಜಧಾನಿ ಅಸ್ತಾನ್==
ಕಜಾಕಿಸ್ತಾನ್ ದ ರಾಜಧಾನಿ ಅಸ್ತಾನ್ (28,82,000). ಇಲ್ಲಿನ ಪ್ರಮುಖ ನಗರಗಳು ಅಲ್ಮಟಿ (10,45,900) ಕರಗಾಂಡ (4,04,600), ಶೈಮ್ಕೆಂಟ್ (3,33,500), ಟಾರಾಜ್ (3,05,700), ಪೌಲೋಡರ್ (2,99,500), ಉಸ್ಟ್‌-ಕಮೆನೊರ್ಸ್ಕೆ (2,88,000) ಮತ್ತು ಅಕ್ಯೊಟೋಬೆ (2,34,400).ಅಧಿಕೃತ ಭಾಷೆ ರಷ್ಯನ್. ಶೇ. 95ರಷ್ಟು ಜನ ರಷ್ಯನ್ ಭಾಷೆಯನ್ನಾಡುವರು. ಶೇ. 64ರಷ್ಟು ಕಜಾರ್ ಭಾಷೆಯನ್ನೂ ಬಳಸುವುದುಂಟು. ರಾಷ್ಟ್ರೀಯತೆಯ ಪ್ರಕಾರ ಶೇ. 53.4 ರಷ್ಟು ಕಜಾ಼ಕ್, ಶೇ. 30 ರಷ್ಟು ರಷ್ಯನ್, ಶೇ. 3.7 ರಷ್ಟು ಉಕ್ರೆನಿಯನ್, ಶೇ. 1.4 ರಷ್ಟು ತಾತರ್, ಶೇ. 1.4 ರಷ್ಟು ವೈಗುರ್ ಹಾಗೂ ಶೇ. 4.9 ರಷ್ಟು ಇತರ ಭಾಷೆಯನ್ನಾಡುವವರು ಇಲ್ಲಿ ನೆಲಸಿದ್ದಾರೆ. ಇಲ್ಲಿನ ಹಣ ಟೆಂಗೆ.ಧಾರ್ಮಿಕವಾಗಿ ಇಸ್ಲಾಂ ಸಂಪ್ರದಾಯವಾದಿಗಳು ಬಹು ಸಂಖ್ಯಾತರಾಗಿದ್ದು, ಒಟ್ಟು ಜನಸಂಖ್ಯೆಯ ಶೇ. 47ರಷ್ಟಿದ್ದಾರೆ. ರಷ್ಯನ್ ಸಂಪ್ರದಾಯದವರು ಶೇ. 44, ಪ್ರಾಟೆಸ್ಟಂಟರು ಶೇ. 2, ಇತರರು ಶೇ. 7 ರಷ್ಟು. ಶೇ. 98ರಷ್ಟು ಸಾಕ್ಷರತೆಯ ಪ್ರಮಾಣವನ್ನು ಈ ದೇಶ ಸಾಧಿಸಿದೆ.
 
==ಆಹಾರ ಬೆಳೆಗಳು==
ಕಜಾಕಿಸ್ತಾನ್ ದ ಪ್ರಮುಖ ಆಹಾರ ಬೆಳೆಗಳು ಓಟ್ಸ್‌, ಮೆಕ್ಕೆಜೋಳ, ಗೋದಿ ಮತ್ತು ಬಾರ್ಲಿ. ಹತ್ತಿ ಇಲ್ಲಿನ ಪ್ರಮುಖ ವಾಣಿಜ್ಯಬೆಳೆ.ಉಣ್ಣೆತಯಾರಿಕೆ, ಪೆಟ್ರೋಲ್ ಸಂಸ್ಕರಣೆ, ಪಶು ಸಂಗೋಪನೆ, ಧಾನ್ಯ ಸಂಸ್ಕರಣೆ, ಸಕ್ಕರೆಗೆಡ್ಡೆ, ತಾಮ್ರ ಕೈಗಾರಿಕೆ, ಕಬ್ಬಿಣ ಮತ್ತು ಉಕ್ಕು. ಇಲ್ಲಿನ ಪ್ರಮುಖ ಕೈಗಾರಿಕೆಗಳು.
 
==ಸಾರಿಗೆ==
ಕಜಾಕಿಸ್ತಾನ್ ಸು. 13,601 ಕಿಮೀ (2002) ಉದ್ದದ ರೈಲು ಸಂಪರ್ಕಜಾಲವನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗಳ ಉದ್ದ 81,331 ಕಿಮೀ. ಸಂಚಾರಕ್ಕೆ ಯೋಗ್ಯವಾದ ರಸ್ತೆಗಳ ಉದ್ದ 77,020 ಕಿಮೀ. ಇತರೆ ರಸ್ತೆಗಳ ಉದ್ದ 4,311 ಕಿಮೀ. ಜಲಸಾರಿಗೆಯ ಉದ್ದ 3,900 ಕಿಮೀ. 2002ರಲ್ಲಿ 10,449 ಮೀ. ಪ್ರಯಾಣಿಕರು ರೈಲು ಪ್ರಯಾಣದ ಸೌಲಭ್ಯ ಪಡೆದಿದ್ದರು. 133,088 ಮಿ.ಟನ್ಗಳಷ್ಟು ಸರಕನ್ನು ಸಾಗಿಸಲಾಗಿತ್ತು.
 
==ಉಲ್ಲೇಖಗಳು==
{{reflist}}
 
[[ವರ್ಗ:ಮಧ್ಯ ಏಷ್ಯಾ]]
"https://kn.wikipedia.org/wiki/ಕಜಾಕಸ್ಥಾನ್" ಇಂದ ಪಡೆಯಲ್ಪಟ್ಟಿದೆ