ನಾಲಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ನಾಲಿಗೆ ಪರೀಕ್ಷೆ +++
೧ ನೇ ಸಾಲು:
[[ಚಿತ್ರ:Lgive_lashon.JPG|thumb]]
 
ನಾಲಿಗೆ ಬಾಯಿಯ ಸ್ನಾಯುವಿನ ಅಂಗ.'''ನಾಲಿಗೆ'''ಯು [[ಅಗಿತ|ಅಗಿಯುವುದಕ್ಕಾಗಿ]] [[ಆಹಾರ]]ವನ್ನು ಕುಶಲತೆಯಿಂದ ನಿರ್ವಹಿಸುವ, ಬಹುತೇಕ [[ಕಶೇರುಕ]]ಗಳ [[ಬಾಯಿ]]ಯ ಕೆಳ ಎಲ್ಲೆಯಲ್ಲಿರುವ ಒಂದು [[ಮಾಂಸಲ ಜಲಗ್ರಾಹಕ]]. ಅದು [[ರುಚಿ]]ಯ ಪ್ರಧಾನ [[ಅಂಗ (ಜೀವಶಾಸ್ತ್ರ)|ಅಂಗವಾಗಿದೆ]] ಏಕೆಂದರೆ ಅದರ ಮೇಲ್ಮೈಯ ಬಹುಭಾಗ [[ರುಚಿ ಮೊಗ್ಗು]]ಗಳಿಂದ ಮುಚ್ಚಲ್ಪಟ್ಟಿದೆ. ನಾಲಿಗೆಯ ಮೇಲ್ಮೈಯು ಅನೇಕ [[ಜಿಹ್ವಾ ತೊಟ್ಟು]]ಗಳಿಂದಲೂ ಮುಚ್ಚಲ್ಪಟ್ಟಿದೆ.ನಾಲಿಗೆಯನ್ನು ಆಹಾರವನ್ನು ನುಂಗುವ ಕ್ರಿಯೆಯಲ್ಲಿ ಬಳಸುತ್ತೇವೆ.ಮಾನವನ ನಾಲಿಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು.ಮುಂಭಾಗದಲ್ಲಿ ಓರಲ್ ಭಾಗವೆಂದು ಮತ್ತು ಹಿಂಭಾಗದಲ್ಲಿ ದನಿಯ ಭಾಗವೆಂದು ವಿಂಗಡಿಸಬಹುದು.
[[ಚಿತ್ರ:Tongue-salty.jpg|thumb|ಉಪ್ಪಿನ ಅಂಶವನ್ನು ಗುರುತಿಸಬಲ್ಲ ಸ್ಥಳ]]
Line ೬ ⟶ ೭:
[[ಚಿತ್ರ:Tongue-sweet.jpg|thumb|ಸಿಹಿ ಅಂಶವನ್ನು ಗುರುತಿಸಬಲ್ಲ ಸ್ಥಳ]]
[[ಚಿತ್ರ:Geographic Tongue.jpg|thumb]]
==ನಾಲಿಗೆ ಪರೀಕ್ಷೆ==
 
*ಮೈಗೆ ಹುಷಾರಿಲ್ಲದಿದ್ದಾಗ ವೈದ್ಯರು ನಾಲಿಗೆ ತೋರಿಸಿ ಎಂದು ಹೇಳುವರು. ರೋಗಿಯ ನಾಲಿಗೆಯನ್ನು ಪರಿಶೀಲಿಸುವುದರಿಂದ ರೋಗ ಲಕ್ಷಣಗಳು ಗೋಚರಿಸಿ, ಏನು ಕಾಯಿಲೆ ಎಂದು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಕಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನೂ ಪತ್ತೆ ಹಚ್ಚಬಹುದು.
[[ವರ್ಗ:ಜೀರ್ಣಕಾರಿ ವ್ಯವಸ್ಥೆ]]
==ನಾಲಿಗೆ ಬಣ್ಣ==
ಆರೋಗ್ಯವಂತ ನಾಲಿಗೆ ಗುಲಾಬಿ ಬಣ್ಣದಿಂದ ಕೂಡಿದ್ದು, ಸಣ್ಣಸಣ್ಣ ಗಂಟುಗಳನ್ನು (ಪಾಪಿಲ್ಲೆ) ಹೊಂದಿರುತ್ತದೆ. ನಾಲಿಗೆಗೆ ನೋವಾಗಿದ್ದರೆ, ಅದರ ಬಣ್ಣ ಬದಲಾಗಿದ್ದರೆ ಅದು ರೋಗದ ಸೂಚನೆಯನ್ನು ನೀಡುತ್ತದೆ.
===ಬಿಳಿ ನಾಲಿಗೆ===
*ನಾಲಿಗೆ ಬಿಳಿ ಬಣ್ಣದಿಂದ ಕೂಡಿದ್ದರೆ, ಬಾಯಿಯೊಳಗೆ ಯೀಸ್ಟ್ ಸೋಂಕು ಉಂಟಾಗಿದೆ ಎಂದರ್ಥ. ಸಕ್ಕರೆ ಕಾಯಿಲೆ, ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವವರ ನಾಲಿಗೆ ಬಿಳಿ ಬಣ್ಣದಿಂದ ಕೂಡಿರುತ್ತದೆ. ಕೆಲವೊಮ್ಮೆ ಆ್ಯಂಟಿಬಯಾಟಿಕ್ ಸೇವನೆಯಿಂದಲೂ ನಾಲಿಗೆ ಬಿಳಿ ಬಣ್ಣಕ್ಕೆ ತಿರುಗುವುದುಂಟು.
===ಕೆಂಪು ನಾಲಿಗೆ===
*ತಿಳಿ ಕೆಂಪು ಬಣ್ಣದ ನಾಲಿಗೆ ಆರೋಗ್ಯ ಸೂಚಕ.
*ನಾಲಿಗೆ ಅತಿ ಕೆಂಬಣ್ಣದಿಂದ ಕೂಡಿದ್ದರೆ ಫೋಲಿಕ್ ಆ್ಯಸಿಡ್‌, ವಿಟಮಿನ್ ಬಿ–12 ಕೊರತೆ ಇದೆ ಎಂದರ್ಥ. ಕೆಲವು ಬಾರಿ ತೀವ್ರ ಜ್ವರದಿಂದ ಬಳಲುತ್ತಿರುವಾಗಲೂ ನಾಲಿಗೆ ಕೆಂಬಣ್ಣದಿಂದ ಕೂಡಿರುತ್ತದೆ.
===ತಿಳಿ ಕಪ್ಪು ನಾಲಿಗೆ==
*ಸಿಗರೇಟು ಸೇದುವವರು, ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವವರ ನಾಲಿಗೆ ತಿಳಿ ಕಪ್ಪುಬಣ್ಣದಿಂದ ಕೂಡಿರುತ್ತದೆ. ಇದು ಅನಾರೋಗ್ಯಕರ ಸ್ಥಿತಿಯನ್ನು ಸೂಚಿಸುತ್ತದೆ.
===ಬಾಯಿಯ ಆರೋಗ್ಯದಲ್ಲಿ ನಾಲಿಗೆಯ ಪಾತ್ರ===
*ಬಾಯಿಯ ಆರೋಗ್ಯದಲ್ಲಿ ನಾಲಿಗೆಯದ್ದು ಪ್ರಮುಖ ಪಾತ್ರ. ಹಲ್ಲು, ವಸಡು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ನಾಲಿಗೆ ಸ್ವಚ್ಛವಾಗಿರದಿದ್ದಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟಿ, ಅವು ಬಾಯಿಯ ಮೂಲಕ ಹೊಟ್ಟೆಯೊಳಗೆ ಪ್ರವೇಶಿಸಿ, ಇಡೀ ದೇಹದ ಆರೋಗ್ಯ ವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ.
===ನಾಲಿಗೆಯ ಆರೋಗ್ಯ ಕಾಪಾಡಿಕೊಳ್ಳುವ ಬಗೆ===
*ನಾಲಿಗೆಯಲ್ಲಿ ಬಿಳಿಯಅಗ್ರಲೇಪನವಿದ್ದರೆ ನಾಲಿಗೆಯನ್ನು ಸ್ವಚ್ಛಗೊಳಿಸಲು ‘ಟಂಗ್ ಕ್ಲೀನರ್’ ಬಳಸಬೇಕು. ಇದು ತೆಳುವಾದ ಮೃದುವಾದ ದಾರದಿಂದ ಮಾಡಲ್ಪಟ್ಟಿದ್ದು, ನಾಲಿಗೆಯ ಮೇಲ್ಪದರವನ್ನು ಮೃದುವಾಗಿ ಸ್ವಚ್ಛಗೊಳಿಸುತ್ತದೆ. ನಾಲಿಗೆಯನ್ನು ಸ್ವಚ್ಛಗೊಳಿಸಿದ ಬಳಿಕ ಟಂಗ್ ಕ್ಲೀನರ್ ಅನ್ನು ಬಿಸಿನೀರಿನಲ್ಲಿ ಅದ್ದಿ ತೊಳೆಯಬೇಕು.
*ಮುಂಜಾನೆ ಹಲ್ಲುಜ್ಜಿದ ಬಳಿಕ ನಾಲಿಗೆಯ ಸ್ವಚ್ಛತೆಯ ಕಡೆಗೂ ಗಮನ ಹರಿಸಬೇಕು. ಅಂತೆಯೇ ರಾತ್ರಿ ಮಲಗುವ ಮುನ್ನ ಬಾಯಿ ಮತ್ತು ನಾಲಿಗೆಯನ್ನು ಸ್ವಚ್ಛಗೊಳಿಸಿ ಮಲಗುವುದು ಆರೋಗ್ಯಕ್ಕೆ ಉತ್ತಮ.
===ಉಸಿರಾಟದ ತೊಂದರೆ===
*ಬಾಯಿಯ ಮೂಲಕ ಬ್ಯಾಕ್ಟೀರಿಯಾ ದೇಹದೊಳಗೆ ಸೇರಿ ಶ್ವಾಸಕೋಶಗಳಲ್ಲಿ ಸೋಂಕು ಉಂಟು ಮಾಡುತ್ತದೆ. ಇದರಿಂದ ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳು ಕಾಣಿಸುತ್ತವೆ.
* ಕೆಲವರಿಗೆ ಬಾಯಿ ಹುಣ್ಣುಗಳಾಗುವುದು ಸಹಜ. ಸಾಮಾನ್ಯವಾಗಿ ಔಷಧಿ ಪಡೆದರೆ ಒಂದೆರೆಡು ವಾರಗಳಲ್ಲಿ ಈ ಹುಣ್ಣು ವಾಸಿಯಾಗುತ್ತದೆ. ಬಿ. ವಿಟಮಿನ್‌ ಕೊರತೆ ಇರುವವರಲ್ಲಿ ಬಾಯಿಹುಣ್ಣಾಗುತ್ತದೆ.
* ನಾಲಿಗೆಯಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ನೋವು ಮತ್ತು ಹುಣ್ಣು ಇದ್ದರೆ ಅದು ಬಾಯಿ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
* ಬಾಯಿ ಆರೋಗ್ಯ ಕಾಪಾಡಿಕೊಳ್ಳದಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಸಂಭವ ಹೆಚ್ಚು.
* ಬಾಯಿ ಮತ್ತು ವಸಡಿನಲ್ಲಿ ಸೋಂಕುಳ್ಳ ಮಹಿಳೆಯರಲ್ಲಿ ಅವಧಿಪೂರ್ವ ಶಿಶು ಜನನ ಸಾಧ್ಯತೆ ಇರುತ್ತದೆ.
==ನೋಡಿ==
*[[ಮಾನವನ ಪಚನ ವ್ಯವಸ್ಥೆ]]
*[[ಬಾಯಿಯ ಕ್ಯಾನ್ಸರ್]]
==ಹೊರ ಸಂಪರ್ಕ==
*[http://www.kannadaprabha.com/health-lifestyle/doctors-reconstruct-tongue-with-flesh-from-thigh/2856ತೊಡೆ ಮಾಂಸದಿಂದ ಕ್ಯಾನ್ಸರ್ ರೋಗಿಗೆ ಹೊಸ ನಾಲಿಗೆ]
==ಉಲ್ಲೇಖ==
[[ವರ್ಗ:ಜೀರ್ಣಕಾರಿ ವ್ಯವಸ್ಥೆ]][[ವರ್ಗ:ರೋಗಗಳು]][[ವರ್ಗ:ಆರೋಗ್ಯ]]
<ref>https://en.wikipedia.org/wiki/Tongue</ref>
"https://kn.wikipedia.org/wiki/ನಾಲಿಗೆ" ಇಂದ ಪಡೆಯಲ್ಪಟ್ಟಿದೆ