ತಮಿಳುನಾಡು ವಿಧಾನಸಭೆ ಚುನಾವಣೆ, 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೬ ನೇ ಸಾಲು:
===ಶಶಿಕಲಾ ಅಪರಾಧಿ===
*೧೪-೨-೨೦೧೭
ಶಶಿಕಲಾ ವಿರುದ್ಧ ಆದಾಯ ಮೀರಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಶಶಿಕಲಾ ಅಪರಾಧಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.ಇಬ್ಬರು ನ್ಯಾಯಮೂರ್ತಿಗಳ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾ.ಪಿನಾಕಿ ಚಂದ್ರ ಘೋಷ್ ಮತ್ತು ನ್ಯಾ.ಅಮಿತಾಬ್ ರಾಯ್ ಪೀಠ ತೀರ್ಪು ನೀಡಿದೆ. ಬೆಂಗಳೂರು ವಿಶೇಷ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. '''4 ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿ ರೂ. ದಂಡವನ್ನು ವಿಧಿಸಿದ ಸುಪ್ರೀಂ ಕೋರ್ಟ್ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿದೆ.'''<ref>[http://vaarte.com/%E0%B2%B6%E0%B2%B6%E0%B2%BF%E0%B2%95%E0%B2%B2%E0%B2%BE-%E0%B2%85%E0%B2%AA%E0%B2%B0%E0%B2%BE%E0%B2%A7%E0%B2%BF/ February 14, 2017 ದೇಶ, ಪ್ರಮುಖ ಸುದ್ದಿ, ಬ್ರೇಕಿಂಗ್ ನ್ಯೂಸ್, ವಾರ್ತೆ Comments ‘ಶಶಿಕಲಾ ಅಪರಾಧಿ’: ಸಿಎಂ ಕನಸು ಭಗ್ನ]</ref>
==ಎಡಪ್ಪಾಡಿ ಕೆ. ಪಳನಿಸ್ವಾಮಿ ಶಾಸಕಾಂಗ ಪಕ್ಷದ ಹೊಸ ನಾಯಕ==
*Wednesday, February 15th, 2017
*ಸೋಮವಾರ ರಾತ್ರಿ ರೆಸಾರ್ಟ್‌ನಲ್ಲೇ ಉಳಿದಿದ್ದ ಶಶಿಕಲಾ ಅವರು “ಪ್ಲಾನ್‌ ಬಿ’ ಯನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರು. ಅದರಂತೆ, ಮಂಗಳವಾರ ಬೆಳಗ್ಗೆ ತೀರ್ಪು ಪ್ರಕಟವಾಗುತ್ತಿದ್ದಂತೆ, ರೆಸಾರ್ಟ್‌ನಲ್ಲೇ ಶಾಸಕರ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ ಶಶಿಕಲಾ, ತನ್ನ ಅತ್ಯಾಪ್ತ ಹಾಗೂ ಸಚಿವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ಹೊಸ ನಾಯಕನನ್ನಾಗಿ ಆಯ್ಕೆ ಮಾಡಿದರು. ಶಶಿಕಲಾ ಜೈಲು ಸೇರುವ ಕಾರಣ, ಸಿಎಂ ಪಟ್ಟವನ್ನು ಸುಲಭವಾಗಿ ಪಡೆಯಬಹುದು ಎಂದು ಕನಸು ಕಂಡಿದ್ದ ಹಂಗಾಮಿ ಸಿಎಂ ಪನ್ನೀರ್‌ ಸೆಲ್ವಂ ಬಣಕ್ಕೆ ನಿರಾಸೆ.
===ಪನ್ನೀರ್‌ ಸೆಲ್ವಂ ಬಣದಿಂದಲೂ ಭೇಟಿ===
*ಪಳನಿಸ್ವಾಮಿ ಅವರು ರಾಜ್ಯಪಾಲರ ಭೇಟಿಯಾದ ಬೆನ್ನಲ್ಲೇ ಪನ್ನೀರ್‌ ಸೆಲ್ವಂ ಬಣವೂ ವಿದ್ಯಾಸಾಗರ ರಾವ್‌ ಅವರನ್ನು ಭೇಟಿಯಾಗಿ, ಬಹುಮತ ಸಾಬೀತಿಗೆ ಅವಕಾಶ ಕೋರಿತು. ಇನ್ನೊಂದೆಡೆ, ಡಿಜಿಪಿ ಮತ್ತು ಚೆನ್ನೈ ಪೊಲೀಸ್‌ ಆಯುಕ್ತ ಎಸ್‌. ಜಾರ್ಜ್‌ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದರು.
===ರಾಜ್ಯಪಾಲರ ಭೇಟಿಯಾದ ಪಳನಿಸ್ವಾಮಿ===
*ಸಂಜೆ 5.30ರ ವೇಳೆಗೆ ಪಳನಿಸ್ವಾಮಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಚೆನ್ನೈಯ ರೆಸಾರ್ಟ್‌ನಲ್ಲಿ ತಮ್ಮನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ ಶಾಸಕರ ಬೆಂಬಲ ಪತ್ರವನ್ನೂ ಅವರು ರಾಜ್ಯಪಾಲರಿಗೆ ಹಸ್ತಾಂತರಿಸಿದರು. ಜತೆಗೆ, ತನಗೆ 135 ಶಾಸಕರ ಬೆಂಬಲ ವಿದ್ದು, ಸರಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.<ref>[http://malligeytv.com/%E0%B2%AA%E0%B2%B3%E0%B2%A8%E0%B2%BF%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF-%E0%B2%8E%E0%B2%82%E0%B2%AC-%E0%B2%B9%E0%B3%8A%E0%B2%B8-%E0%B2%A6%E0%B2%BE%E0%B2%B3/ ಪಳನಿಸ್ವಾಮಿ ಎಂಬ ಹೊಸ ದಾಳ;Wednesday, February 15th, 2017] </ref>
 
===ವಿಶ್ವಾಸ ಮತ===