ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
೧೪ ನೇ ಸಾಲು:
* ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ರೇಡಿಯೋ ಕೇ೦ದ್ರವೊಂದನ್ನು ಸ್ಥಾಪಿಸಿದರು. ಆಗ ೧೯೩೫ ರ ಸಮಯ. ಕಾಲೇಜಿನ ಕಾರ್ಯಗಳನ್ನು ಮುಗಿಸಿದ ನಂತರದ ಸಮಯವನ್ನು ಸದುಪಯೋಗ ಮಾಡಲು ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ ಮಾಡಬೇಕು ಎ೦ಬ ಆಸೆ ಹುಟ್ಟಿತು.
* ಡಾ.ಎಂ.ವಿ.ಗೋಪಾಲ ಸ್ವಾಮಿಯವರು ಲಂಡನ್ ಗೆ ಹೋಗಿದ್ದ ಸಮಯದಲ್ಲಿ ಕಡಿಮೆ ವಿದ್ಯುತ್ ಬಳಕೆಯ ಟಾಲ್ ಎಂಬ ಟ್ರಾನ್ಸ್ ಮೀಟರ್ ತಂದು ಕೆಆರ್ಎಸ್ ರಸ್ತೆಯಲ್ಲಿರುವ ತಮ್ಮ ಮನೆ ವಿಠಲ ವಿಹಾರದಲ್ಲಿ ಸ್ಥಾಪಿಸುತ್ತಾರೆ. ಈ ಪ್ರೇಷಕದಿಂದ ೧೯೩೫ ಸೆಪ್ಟೆಂಬರ್ ೧೦ ರಂದು ರೇಡಿಯೋದ ಮೊದಲ ಅಲೆ ಪ್ರಸಾರವಾಗುತ್ತದೆ. ಇದನ್ನು ಕೇಳಲು ಸ್ವತ: ಮೈಸೂರಿನ ಮಹಾರಾಜರು ಕಾಲೇಜಿನ ಅಸೆಂಬ್ಲಿ ಹಾಲಿನಲ್ಲಿ ಹಾಜರಿದ್ದರು.
* ರಾಷ್ಟ್ರ ಕವಿ [[ಕುವೆಂಪು]] ಅವರಿಂದ ಕವನ ವಾಚನದ ಮೂಲಕ ಕಾರ್ಯಕ್ರಮ ಆರಂಭಗೊಂಡಿತ್ತು. ಹೀಗೆ ಏಕ ವ್ಯಕ್ತಿಯೊಬ್ಬರಿಂದ ಆರಂಭವಾದ ದೇಶದ ಮೊದಲ ರೇಡಿಯೋ ಸ್ಟೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ೧೯೪೧ರವರೆಗೆ ಇವರ ಮನೆಯಿಂದಲೇ ಬಾನುಲಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಇಲ್ಲಿ ರೇಡಿಯೋ ೪೯.೪೬ ಮೀಟರ್ ಶಾರ್ಟ್ ವೇವ್ ನಲ್ಲಿ ಹಾಗೂ ೩೧೦ ಮೀಟರ್ ಮೀಡಿಯಂ ವೇವ್ ತರಂಗಾತರಗಳಲ್ಲಿ ಇಲ್ಲಿನ ಪ್ರಸಾರ ಕಾರ್ಯ ನಡೆಯುತ್ತಿತ್ತು.
* ಮನೆಯಲ್ಲಿ ೩೦ ವ್ಯಾಟ್ ನಷ್ಟು ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ ಮೀಟರ್ )ವೊಂದನ್ನು ಸ್ಥಾಪಿಸಿ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ ೬ ರಿಂದ ೮.೩೦ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ ಇದನ್ನು ೨೫೦ ವ್ಯಾಟ್ ಸಾಮರ್ಥ್ಯದ ಪ್ರೇಷಕವಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಇದರಿಂದ ಮೈಸೂರಿನ ಸುತ್ತಮುತ್ತ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗುತ್ತಿತ್ತು.
* ಶಾರ್ಟ್ ವೇವ್ ನಲ್ಲಿನ ಪ್ರಸಾರವನ್ನು ವಾತಾವರಣ ಉತ್ತಮವಿರುವ ಸಮಯದಲ್ಲಿ ಶ್ರೀಲಂಕಾದಲ್ಲಿ, ಹಾಗೆಯೇ ಉತ್ತರ ಭಾರತದಲ್ಲಿಯೂ ಕೇಳಲಾಗುತ್ತಿತ್ತಂತೆ. ಈ ಬಾನುಲಿ ಕೇಂದ್ರವು ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸುವುದರ ಜೊತೆಗೆ ‘ಆಕಾಶವಾಣಿ’ ಎಂಬ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು. ಕರ್ನಾಟಕದ ಹೆಮ್ಮೆಯೆನಿಸಿರುವ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಸ್ಥಾಪಕ ನಿರ್ದೇಶಕರೂ ಗೋಪಾಲಸ್ವಾಮಿಯವರು ಇದನ್ನು ಜನಪ್ರಿಯಗೊಳಿಸಿದರು.
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ