ಮಿಸ್ಸಿಸಿಪ್ಪಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಇನ್ನಷ್ಟು ಮಾಹಿತಿ ಸೇರಿಸಲಾಗಿದೆ
೧೦೫ ನೇ ಸಾಲು:
 
ಮಿಸ್ಸಿಸಿಪ್ಪಿ ನದಿತಟದಲ್ಲಿ ಬಹಳ ಹಿಂದಿನಿಂದಲೂ ಸ್ಥಳೀಯ ಅಮೇರಿಕನ್ನರು ವಾಸಿಸುತ್ತಿದ್ದರು. ಅವರಲ್ಲಿ ಬಹಳಷ್ಟು ಜನಾಂಗಗಳು ಬೇಟೆಗಾರರಾಗಿದ್ದರು. ಆದರೆ ಮೌಂಡ್ ಬೋಲ್ಡರ್ ಮುಂತಾದ ಜನಾಂಗಗಳು ವ್ಯವಸಾಯವನ್ನೂ ಸಹ ಕರಗತ ಮಾಡಿಕೊಂಡಿದ್ದರು. ೧೬ನೇ ಶತಮಾನದಲ್ಲಿ ಯುರೋಪಿಯನ್ನರ ಆಗಮನಾದಿಯಾಗಿ ನದಿ ತಟದ ಜೀವನಶೈಲಿಯಲ್ಲಿ ಬಹಳ ಬದಳಾವಣೆಗಳಾದವು. ಮೊದಲಿಗೆ ಪರಿಶೋದಕರಾಗಿ ಬಂದ ಯುರೋಪಿಯನ್ನರು ತದನಂತರ ತಮ್ಮ ವಸಾಹಾತು ಶಾಹಿಯನ್ನು ಅಮೇರಿಕಾದಲ್ಲಿ ಶುರು ಮಾಡಿದರು. ಮಿಸ್ಸಿಸಿಪ್ಪಿ ನದಿಯನ್ನು ಮೊದಲಿಗೆ ಹೊಸ ಸ್ಪೈನ್, ಹೊಸ ಫ಼್ರಾನ್ಸ್ ಮತ್ತು ಅಮೇರಿಕಾದ ಗಡಿಯಾಗಿ ಪರಿಗಣಿಸುತ್ತಿದ್ದರು. ನಂತರ ಯುರೋಪಿಯನ್ನರ ವಸಾಹತುಶಾಯಿಯು ಇನ್ನುಳಿದ ಅಮೇರಿಕಾ ಭೂಬಾಗಕ್ಕೂ ವಿಸ್ತರಿಸಿದ ನಂತರ ಮಿಸ್ಸಿಸಿಪ್ಪಿ ನದಿಯು ಬಹುಮುಖ್ಯ ಜಲ ಸಾರಿಗೆಯ ಮಾರ್ಗವಾಗಿ ಮಾರ್ಪಟ್ಟಿತು.
 
ಮಿಸ್ಸಿಸಿಪ್ಪಿ ನದಿಯು ಅನೇಕ ಖನಿಜಯುಕ್ತ ಹೂಳನ್ನು ಪರ್ವತ ಪ್ರದೇಶಗಳಿಂದ ತಂದು ಕೆನ್ಟುಕಿ, ಟೆನ್ನಿಸ್ಸಿ, ಮಿಸ್ಸೌರಿ ಮತ್ತು ಅರ್ಕನ್ಸಸ್ ರಾಜ್ಯಗಳ ಮೂಲಕ ಹಾದು ಹೋಗುತ್ತ ತನ್ನ ಇಕ್ಕೆಲಗಳಲ್ಲು ಹರಡಿ ಫಲವತ್ತಾದ ಕೃಷಿಗೆ ಯೋಗ್ಯ ಭೂಮಿಯನ್ನು ಸ್ರುಷ್ಟಿಸಿದೆ. ಮಿಸ್ಸಿಸಿಪ್ಪಿ ನದಿಯು ಜಲಸಾರಿಗೆಯ ಮುಖ್ಯ ನದಿಯಾದ್ದರಿಂದ, ಅಮೇರಿಕಾದ ಅಂತರ್ಯುದ್ದದ ಸಂದರ್ಭದಲ್ಲಿ, ಅಮೇರಿಕಾ ಒಕ್ಕೂಟಕ್ಕೆ ಮಿಸ್ಸಿಸಿಪ್ಪಿ ನದಿಯನ್ನು ವಶಪಡಿಸಿಕೊಂಡಿದ್ದು ಗೆಲುವಿಗೆ ಒಂದು ಬಹುಮುಖ್ಯ ಕಾರಣವಾಯಿತು. ತದನಂತರ ಅನೇಕ ದೊಡ್ಡ ನಗರಗಳು ನದಿ ತಪ್ಪಲಿನಲ್ಲಿ ನಿರ್ಮಾಣಗೊಂಡವು. ಇಪ್ಪತ್ತನೇ ಶತಮಾನದ ಮೊದಲನೇ ದಶಕದಲ್ಲಿ ಅನೇಕ ದೊಡ್ಡ ಅಣೆಕಟ್ಟುಗಳು, ನಾಲೆಗಳು, ಸೇತುವೆಗಳೂ ಮಿಸ್ಸಿಸಿಪ್ಪಿ ನದಿಗೆ ನಿರ್ಮಾಣಗೊಂಡವು.
 
ಆಧುನಿಕತೆಯ ಹೆಸರಿನಲ್ಲಿ ನದಿಯ ತಟದಲ್ಲಿ ಅಭಿವೃದ್ದಿಯು ಹೆಚ್ಚಾದಂತೆ, ಅನೇಕ ತ್ಯಾಜವಸ್ತುಗಳು ನದಿಸೇರಿ, ನದಿಯ ಪರಿಸರದ ಮೇಲೂ ಬಹಳ ಪರಣಾಮವಾಗಿದೆ. ಅತಿ ಮುಖ್ಯವಾಗಿ ವ್ಯವಸಾಯಿಕ ತ್ಯಾಜ್ಯಗಳು ಅತಿ ಹೆಚ್ಚು ಪ್ರಮಾಣದಲ್ಲಿ ನದಿ ಸೇರಿ ಮೆಕ್ಸಿಕನ್ ಕೊಲ್ಲಿಯಲ್ಲಿ ಹೂಳು ಹೆಚ್ಚಾಗಿ ನದಿ ಸಮುದ್ರ ಸೇರದಾಗದಂತಾಗಿದೆ. ಈ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ನದಿ ಪತ ಬದಲಿಸುವ ಸೂಚನೆಗಳು ಕಾಣುತ್ತಿವೆ. ಈ ರೀತಿ ಏನಾದರೂ ಆದರೆ ಲೂಸಿಯಾನ ರಾಜ್ಯದ ಆರ್ಥಿಕತೆಗೆ ಭಾರಿ ಹೊಡೆತ ಬೀಳುತ್ತದೆ. 
"https://kn.wikipedia.org/wiki/ಮಿಸ್ಸಿಸಿಪ್ಪಿ_ನದಿ" ಇಂದ ಪಡೆಯಲ್ಪಟ್ಟಿದೆ