೧೧,೩೯೫
edits
(ಬಹುಮಾಧ್ಯಮ) |
|||
ವಿಕಿಮೀಡಿಯ ಫೌಂಡೇಶನ್ನಿನ [http://freedomdefined.org/Definition ಪರವಾನಗಿ ನಿಯಮ]<ref>https://wikimediafoundation.org/wiki/Resolution:Licensing_policy</ref>ದ ಪ್ರಕಾರ ವಿಕಿಪೀಡಿಯದಲ್ಲಿ ಮುಕ್ತ ಮಾಹಿತಿಯನ್ನು ಮಾತ್ರವೇ ಬಳಸಬಹುದು. ಆದರೆ ವಿಕಿಪೀಡಿಯದ ಬೇರೆ ಬೇರೆ ಸಮುದಾಯಗಳು ಉದಾತ್ತ ಉದ್ದೇಶಗಳಿಗಾಗಿ ಉಚಿತವಲ್ಲದ ಮಾಹಿತಿಯನ್ನೂ ಬಳಸಬಹುದಾದ ಕೆಲವು ಸಂದರ್ಭಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಆ ಸಮುದಾಯಗಳು ಅದಕ್ಕಾಗಿ ವಿನಾಯಿತಿ ನಿಯಮಾವಳಿಗಳನ್ನು (Exemption Doctrine Policy) ಹೊಂದಿರಬೇಕು. ಕನ್ನಡ ವಿಕಿಪೀಡಿಯದ ಒಳ್ಳೆಯ ಉದ್ದೇಶಗಳಿಗೆ ಉಚಿತವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಸ್ಥಳೀಯವಾಗಿ ಅಪ್ಲೋಡ್ ಮಾಡಲು ಅನುವು ಮಾಡಿಕೊಡುವುದೇ ಸದ್ಬಳಕೆ ಕಾರ್ಯನೀತಿಯ ಉದ್ದೇಶವಾಗಿದೆ
ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್ಲೋಡ್ ಮಾಡಬಯಸುವ ಕಡತ (ಫೈಲ್) ಕೆಳಗಿನ ನಿಯಮಾವಳಿಗಳನ್ನು ಪಾಲಿಸಬೇಕು.
# '''ಉಚಿತ ಪರ್ಯಾಯ ಕಡತದ ಅಲಭ್ಯತೆ''' - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಉಚಿತ ಕಡತ ಇಲ್ಲದಿದ್ದ ಸಂದರ್ಭದಲ್ಲಿ
# ಚಿತ್ರಗಳ ಬಳಕೆಗೆ ನಿರ್ಬಂಧ- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.
ಉಚಿತ/ಮುಕ್ತವಲ್ಲದ ಮಾಹಿತಿಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಸದ್ಬಳಕೆಗಾಗಿ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದಾದ ಕೆಲವು ಸಂದರ್ಭಗಳು-
* ಯಾವುದಾದರೊಂದು ಮಾದರಿಯ ಸಂಗೀತವನ್ನು ವಿವರಿಸಲು ಅಥವಾ ಆ ಮಾದರಿಯ ಸಂಗೀತ ಎಂದರೆ ಹೇಗಿರುತ್ತದೆ ಅಂದು ಅರ್ಥ ಮಾಡಿಸಲು ಅಂತಹ ಸಂಗೀತದ ತುಣಕನ್ನು ಸೇರಿಸುವುದು
* ಖ್ಯಾತ ವ್ಯಕ್ತಿಗಳ ಖ್ಯಾತ ಭಾಷಣ ಅಥವಾ ವಾಚನದ ತುಣುಕು
* ಪುಸ್ತಕಗಳ ಮುಖಪುಟ (ಕವರ್ ಪೇಜ್)
* ಕಂಪೆನಿ, ಸಂಸ್ಥೆ, ವಿಶ್ವವಿದ್ಯಾಲಯ, ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಗಳ ಲಾಂಛನ (ಲೋಗೋ)
* ಗತಿಸಿಹೋದ ಮತ್ತು ಜೀವಂತ ಇರುವ ಖ್ಯಾತ ವ್ಯಕ್ತಿಗಳ ಚಿತ್ರ ಹಾಗೂ ಭಾವಚಿತ್ರಗಳು.
ಬಹುಮಾಧ್ಯಮ ಎಂದರೆ ಆಡಿಯೋ, ವಿಡಿಯೋ, ಚಲನಚಿತ್ರ, ಚಿತ್ರಸಂಚಲನೆ ಎಲ್ಲವನ್ನೂ ಒಳಗೊಂಡ ಫೈಲ್ಗಳು. ಕೆಲವು ಉದಾಹರಣೆಗಳು-
* ಯಕ್ಷಗಾನದ ವಿಡಿಯೋ ತುಣುಕು
* ಬಹುಮಾದ್ಯಮ ಸಿ.ಡಿ. ಅಥವಾ ಡಿ.ವಿ.ಡಿ.ಯ ತುಣುಕು. ಉದಅಹರಣೆಗೆ ಹಳೆಗಕನ್ನಡ ಕಲಿಕೆಯ ಬಹುಮಾಧ್ಯಮ ಡಿ.ವಿ.ಡಿ.ಯಿಂದ ಸಂಪಾದಿಸಿ ತೆಗೆದ ಸಣ್ಣ ತುಣುಕು.
== ಸದ್ಬಳಕೆಯ ಮಿತಿಗಳು ==
ಸದ್ಬಳಕೆಗಾಗಿ ಕಡತಗಳನ್ನು (ಫೈಲ್ಗಳನ್ನು) ಕನ್ನಡ ವಿಕಿಪೀಡಿಯಕ್ಕೆ ಸ್ಥಳೀಯವಾಗಿ ಸೇರಿಸುವಾಗ (ಅಪ್ಲೋಡ್ ಮಾಡುವಾಗ) ಕೆಲವು ಮಿತಿಗಳನ್ನು ಹಾಕಿಕೊಳ್ಳಬೇಕು. ಅವುಗಳನ್ನು ಇಲ್ಲಿ ನಮೂದಿಸಲಾಗಿದೆ.
=== ಧ್ವನಿ ===
=== ಕಾರ್ಯನೀತಿಯ ಅನುಷ್ಠಾನ ===▼
* ಧ್ವನಿಯ ತುಣುಕು (ಆಡಿಯೋ ಕ್ಲಿಪ್) ೯೦ ಸೆಕೆಂಡು ಕಾಲಾವಧಿಗಿಂತ ಕಡಿಮೆ ಇರಬೇಕು.
* ಸ್ಟೀರಿಯೋ ಅಥವಾ ಮೋನೋ ಇರಬಹುದು.
* ಸ್ಯಾಂಪಲ್ಇಂಗ್ ರೇಟ್ ೪೪.೧ kHz ತನಕ ಇರಬಹುದು.
* ಕಂಪ್ರೆಶನ್ ೧೯೨ kbps ತನಕ ಇರಬಹುದು.
=== ಚಿತ್ರ (ಇಮೇಜ್) ===
* ಬಣ್ಣ ೨೪ ಬಿಟ್ ತನಕ ಇರಬಹುದು.
* ಚಿತ್ರದ ಗಾತ್ರ ೧೦೦೦ x ೧೦೦೦ ಪಿಕ್ಸೆಲ್ ತನಕ ಇರಬಹುದು.
* ಚಿತ್ರದ ರೆಸೊಲೂಶನ್ ೯೬ ಪಿಕ್ಸೆಲ್/ಇಂಚು ತನಕ ಇರಬಹುದು.
* ಕಡತದ ಗಾತ್ರ (ಫೈಲ್ ಸೈಝ್) ೧ ಮೆಗಾಬೈಟ್ಗಿಂತ (೧೦೨೪ ಕಿಲೋಬೈಟ್) ಕಡಿಮೆ ಇರಬೇಕು
=== ಬಹುಮಾಧ್ಯಮ ===
* ೯೦ ಸೆಕೆಂಡಿಗಿಂತ ಕಡಿಮೆ ಇರಬೇಕು
# ಹಕ್ಕುಸ್ವಾಮ್ಯವಿಲ್ಲದ ತತ್ಸಂಬಂಧಿ ಕಡತ ಸಿಕ್ಕಿದಾಗ ಹಕ್ಕುಸ್ವಾಮ್ಯ ಇರುವ ಕಡತ ತೆಗೆದು ಆ ಜಾಗದಲ್ಲಿ ಹಕ್ಕುಸ್ವಾಮ್ಯವಿಲ್ಲದ ಕಡತವನ್ನು ಸೇರಿಸಬೇಕು
# ಮೇಲೆ ”’ಅನಿವಾರ್ಯತೆ”’ ನಿಯಮದಲ್ಲಿ ಹೇಳಿರುವಂತೆ, ಅಪ್ಲೋಡ್ ಮಾಡಿರುವ ಕಡತವನ್ನು ಯಾವ ಲೇಖನದಲ್ಲೂ ಬಳಸದಿದ್ದರೆ ಅಂತಹ ಕಡತದ ಬಗ್ಗೆ [[ಅರಳಿಕಟ್ಟೆ|ಅರಳಿಕಟ್ಟೆಯಲ್ಲಿ]] ಮತ್ತು ಅಪ್ಲೋಡ್ ಮಾಡಿದವರಿಗೆ ಎಚ್ಚರಿಕೆ ಕೊಟ್ಟು ಅಂತಹ ಕಡತವನ್ನು ಒಂದು ತಿಂಗಳ ನಂತರ ಅಳಿಸಬೇಕು
|