೧೧,೩೯೫
edits
Vikashegde (ಚರ್ಚೆ | ಕಾಣಿಕೆಗಳು) ಚು (added Category:ವಿಕಿಪೀಡಿಯ ಕಾರ್ಯನೀತಿ ಪುಟಗಳು using HotCat) |
ಚು |
||
=== ನಿಯಮಗಳು ===
ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್ಲೋಡ್ ಮಾಡಬಯಸುವ ಕಡತ (ಫೈಲ್) ಕೆಳಗಿನ ನಿಯಮಾವಳಿಗಳನ್ನು ಪಾಲಿಸಬೇಕು.
# '''ಉಚಿತ ಪರ್ಯಾಯ ಕಡತದ ಅಲಭ್ಯತೆ''' - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಉಚಿತ ಕಡತ ಇಲ್ಲದಿದ್ದ ಸಂದರ್ಭದಲ್ಲಿ
# '''ಖಾಸಗಿ ಉದ್ದೇಶಗಳಿಗೆ ತೊಂದರೆಯೊಡ್ಡದಿರುವುದು''' - ವಿಕಿಪೀಡಿಯದಲ್ಲಿ ಬಳಸಿದ ಕಡತದಿಂದ ಮೂಲ ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ವ್ಯಕ್ತಿಗೆ ಅಥವಾ ಸಂಸ್ಥೆಗೆ ಮಾರುಕಟ್ಟೆಯಲ್ಲಿನ ಹಣಕಾಸಿನ ವ್ಯವಹಾರಗಳಲ್ಲಿ ನಷ್ಟವುಂಟಾಗಬಾರದು
# '''ಕನಿಷ್ಠತಮ''' ಬಳಕೆ -
## ವಿಷಯವನ್ನು ತಿಳಿಸಲು ಬೇಕಾಗುವ ಕಡತದ ಕೆಲ ಅಂಶಗಳನ್ನು ಮಾತ್ರ ಬಳಸುವುದು
## ಇಡೀ ಪಠ್ಯವನ್ನು ಬಳಸುವ ಬದಲು ವಿಷಯಕ್ಕೆ ಪೂರಕವಾಗುವ ಕೆಲ ಅಂಶಗಳನ್ನು ಮಾತ್ರ ಬಳಸುವುದು
## ಹೆಚ್ಚಿನ ರೆಸಲೂಶನ್ನ ಚಿತ್ರದ ಬದಲು ಕಮ್ಮಿ ರೆಸಲೂಶನ್ನ ಚಿತ್ರಗಳ ಬಳಕೆ
# '''ಮುದ್ರಣವಾಗಿರುವ ಮಾಹಿತಿ''' - ವಿಕಿಪೀಡಿಯದಲ್ಲಿ ಹಾಕುವ ಮೊದಲು ಆ ಮಾಹಿತಿ ಈಗಾಗಲೇ ಬೇರೆ ಅಂತರಜಾಲ ತಾಣವೊಂದರಲ್ಲಿ/ತಾಣಗಳಲ್ಲಿ ಪ್ರಕಟವಾಗಿರಬೇಕು
# '''ವಿಶ್ವಕೋಶರೂಪದ ಮಾಹಿತಿ''' - ವಿಕಿಯಲ್ಲಿ ಬಳಸುವ ಮಾಹಿತಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು ಈ ಮಾಹಿತಿಗೂ ಅನ್ವಯಿಸುತ್ತವೆ.
# '''ಅಗತ್ಯತೆ''' - ಈ ರೀತಿ ಅಪ್ಲೋಡ್ ಮಾಡಿದ ಕಡತವನ್ನು ಕನಿಷ್ಠ ಒಂದು ಲೇಖನದಲ್ಲಾದರೂ ಬಳಸಬೇಕು
# '''ಅನಿವಾರ್ಯತೆ''' - ಲೇಖನದಲ್ಲಿ ಇರುವ ವಿಷಯಕ್ಕೆ ಪೂರಕವಾಗಿ ಕಡತವಿದ್ದರೆ ಓದುಗನಿಗೆ ವಿಷಯದ ಗ್ರಹಿಕೆ ಸುಲಭವಾಗಿ, ಕಡತವಿಲ್ಲದಿರುವಿಕೆ ವಿಷಯದ ಗ್ರಹಿಕೆಗೆ ತೊಂದರೆಯುಂಟುಮಾಡುವಂತಿದ್ದರೆ ಅಂತಹ ಕಡತಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಬಹುದು
# ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು
## ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು
=== ಕಾರ್ಯನೀತಿಯ ಅನುಷ್ಠಾನ ===
# ಹಕ್ಕುಸ್ವಾಮ್ಯವಿಲ್ಲದ ತತ್ಸಂಬಂಧಿ ಕಡತ ಸಿಕ್ಕಿದಾಗ ಹಕ್ಕುಸ್ವಾಮ್ಯ ಇರುವ ಕಡತ ತೆಗೆದು ಆ ಜಾಗದಲ್ಲಿ ಹಕ್ಕುಸ್ವಾಮ್ಯವಿಲ್ಲದ ಕಡತವನ್ನು ಸೇರಿಸಬೇಕು
#
==ಉಲ್ಲೇಖಗಳು==
|