ಕೀಲುರೋಗಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 28 interwiki links, now provided by Wikidata on d:q327657 (translate me)
೩೬ ನೇ ಸಾಲು:
ಕೀಲುರೋಗತಜ್ಞರು [[ಸಂಧಿವಾತ]], ಕೆಲವು ಸ್ವಯಂನಿರೋಧಕ ಕಾಯಿಲೆಗಳು, ಮಾಂಸಖಂಡಾಸ್ಥಿ ನೋವಿನ ಅವ್ಯವಸ್ಥೆಗಳು ಮತ್ತು [[ಆಸ್ಟಿಯೊಪೊರೋಸಿಸ್‌|ಆಸ್ಟಿಯೋಪೋರೋಸಿಸ್ (ಮೂಳೆ ಸವೆತ)]]ಗಳಿಗೆ ಚಿಕಿತ್ಸೆ ನೀಡುತ್ತಾರೆ. ಈ ಕಾಯಿಲೆಯು 200ಕ್ಕೂ ಹೆಚ್ಚು ವಿಧಗಳಲ್ಲಿ ಕಾಣಿಸಿಕೊಳ್ಳುವಂತಹುದಾಗಿದ್ದು ಅವುಗಳಲ್ಲಿ ಕೀಲುರೋಗ ಸಂಧಿವಾತ, [[ಅಸ್ಥಿ ಸಂಧಿವಾತ|ಮೂಳೆಗಳ ಸಂಧಿವಾತ]], ಗೌಟ್, ಲೂಪಸ್, ಬೆನ್ನು ನೋವು, ಮೂಳೆಗಳ ಸವೆತ, ಮತ್ತು ಟೆಂಡಿನೈಟಿಸ್ಗಳೂ ಸೇರಿವೆ. ಇವುಗಳಲ್ಲಿ ಕೆಲವು ಬಹಳ ಗಂಭೀರ ಕಾಯಿಲೆಗಳಾಗಿದ್ದು, ರೋಗದ ಲಕ್ಷಣ ಮತ್ತು ಚಿಕಿತ್ಸಾವಿಧಾನಗಳನ್ನು ಅರಿಯುವುದೇ ಕಷ್ಟವಾಗುತ್ತದೆ. ಅವರು ಮಾಂಸಖಂಡಾಸ್ಥಿ ವ್ಯವಸ್ಥೆಗೆ ಸಂಬಂಧಿತವಾದ ಮೃದು ಟಿಷ್ಯೂಗಳ ಸಮಸ್ಯೆಗಳಿಗೆ, ಕ್ರೀಡಾಸಂಬಂಧಿತ ಮೃದು ಟಿಷ್ಯೂ ಅನ್ಯವಸ್ಥೆಗಳಿಗೆ ಚಿಕಿತ್ಸೆ ನೀಡುತ್ತಾರೆ; ಈ ವಿಶೇಷತೆಯು ಫಿಸಿಯೋಥೆರಪಿ (ದೈಹಿಕ ಚಿಕಿತ್ಸೆ), ದೈಹಿಕ ಔಷಧ ಮತ್ತು ದುರ್ಬಲ ರೋಗಿಗಳ ಪುನರ್ವಸತಿಗಳೊಡನೆ ಪರಸ್ಪರ ಹೆಣೆದುಕೊಂಡಿದೆ. ರೋಗಿಗಳಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳು ಮತ್ತು ಉದ್ಯೋಗಸಂಬಂಧಿತ ಚಿಕಿತ್ಸೆಗಳು ಸಹ ಈ ವಿಶೇಷತೆಯೊಡನೆ ಹಾಸುಹೊಕ್ಕಾಗಿವೆ.
 
ಕೀಲುರೋಗತಜ್ಞರನ್ನು ಪ್ರತಿನಿಧಿಸುವಂತಹ ಹಲವಾರು [[ಅಂತರರಾಷ್ಟ್ರೀಯ ಸಂಸ್ಥೆಗಳು]] ವಿಶ್ವದಾದ್ಯಂತ ಇವೆ. ದ ಅಮೆರಿಕನ್ ಕಾಲೇಜ್ ಆಫ್ ರೂಮಟಾಲಜಿ ( ACR), ದ ಅಸೋಸಿಯೇಷನ್ ಆಫ್ ರೂಮಟಾಲಜಿ ಹೆಲ್ತ್ ಪ್ರೊಫೆಷನಲ್ಸ್ (ARHP), ದ ಯೂರೋಪಿಯನ್ ಲೀಗ್ ಎಗೇನೆಸ್ಟ್ ರೂಮಾಟಿಸಂ (EULAR), ಏಷ್ಯಾ ಪೆಸಿಫಿಕ್ ಲೀಗ್ ಆಫ್ ಅಸೋಸಿಯೇಷನ್ಸ್ ಫಾರ್ ರೂಮಟಾಲಜಿ (APLAR), ಇಂಟರ್ನ್ಯಾಷನಲ್ ಲೀಗ್ ಆಫ್ ಅಸೋಸಿಯೇಷನ್ ಫಾರ್ ರೂಮಟಾಲಜಿ (ILAR) ಪ್ರಮುಖ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗಳಾಗಿದ್ದು, ಈ ವಿಶೇಷತೆಗೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ;
ಈ ಸಂಸ್ಥೆಗಳು ಕೀಲುರೋಗಶಾಸ್ತ್ರದ ಯತ್ನಗಳನ್ನು ಪ್ರಚಾರ ಮಾಡಲು ಮತ್ತು ದೃಢಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ದುಡಿಯುತ್ತಿವೆ. ಅಷ್ಟೇ ಅಲ್ಲದೆ, ಇಡೀ ಜಗತ್ತಿನಲ್ಲಿ ಚೆಲ್ಲಾಪಿಲ್ಲಿಯಾದಂತಿರುವ ಪ್ರತಿಯೊಂದು ದೇಶದ ಕೀಲುರೋಗತಜ್ಞರನ್ನು ಪ್ರತಿನಿದಿಸುವ ಕೀಲುರೋಗಶಾಸ್ತ್ರದ ಸಂಸ್ಥೆಗಳು ಮತ್ತು ಕಾಲೇಜುಗಳು ಇದ್ದು, ಅವುಗಳು ಮೇಲೆ ಕಾಣಿಸಿದಂತಹ ಸಂಸ್ಥೆಗಳನ್ನು ಪ್ರತಿ ದೇಶದಿಂದಲೂ ಪ್ರತಿನಿಧಿಸುತ್ತವೆ. ಕೀಲುರೋಜತಜ್ಞರು ಕೀಲುರೋಗದ ವಿವಿಧ ಕಾಯಿಲೆಗಳಲ್ಲಿ ವಿಶೇಷ ಪರಿಣತಿಯನ್ನು ಪಡೆದ ವೈದ್ಯರು.
 
"https://kn.wikipedia.org/wiki/ಕೀಲುರೋಗಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ