ತಾಮ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
 
[[File:Copper just above its melting point.jpg|left|150px|thumb|Copper just above its melting point keeps its pink luster color when enough light outshines the orange [[incandescence]] color.]]
ಆವರ್ತಕೋಷ್ಟಕದ 1ನೆಯ ಗುಂಪಿನ ಸಂಕ್ರಾಂತಿ ಲೋಹ (ಕಾಪರ್). ಪರಮಾಣು ಸಂಖ್ಯೆ 29. ಪರಮಾಣು ತೂಕ 63.54. ರಾಸಾಯನಿಕ ಪ್ರತೀಕ ಅucu (ಲ್ಯಾಟಿನ್ನಿನ ಕ್ಯುಪ್ರಮ್‍ನಿಂದ, ಅರ್ಥ ಸೈಪ್ರಸ್ ದ್ವೀಪದ ಅದುರು, ಆ ದ್ವೀಪದಲ್ಲಿ ಇದು ವಿಪುಲವಾಗಿ ಆ ದಿನಗಳಂದು ದೊರೆಯುತ್ತಿದ್ದದರಿಂದ). ನೈಸರ್ಗಿಕವಾಗಿ ಲಭಿಸುವ ಸಮಸ್ಥಾನಿಗಳು <sup>63,</sup>Cu ಮತ್ಥು <sup>65</sup>Cu ಎಲಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d10<sup>10</sup> 4s14s<sup>1</sup> ದ್ರವನಬಿಂದು 1083o1083<sup>0</sup> ಅ, ಕುದಿಬಿಂದು 2336o2336<sup>0</sup> ಅ. ಅತ್ಯಂತ ಪ್ರಾಮುಖ್ಯವಿರುವ ಕಬ್ಬಿಣೇತರ (ನಾನ್‍ಫೆರಸ್) ಲೋಹಗಳ ಪೈಕಿ ಒಂದು. ಇದರ ರಾಸಾಯನಿಕ, ಭೌತಿಕ, ವೈದ್ಯುತ ಹಾಗೂ ಯಾಂತ್ರಿಕ ಗುಣಗಳಿಂದಾಗಿ ಮತ್ತು ಇದರ ಸರ್ವ ಸಾಧಾರಣ ಬಾಹುಳ್ಯದಿಂದಾಗಿ ತಾಮ್ರ ಬಲು ಉಪಯುಕ್ತ ಲೋಹ ಎನ್ನಿಸಿದೆ. ಮನುಷ್ಯ ಬಳಕೆಗೆ ತಂದ ಮೊದಲ ಲೋಹಗಳ ಪೈಕಿ ತಾಮ್ರವೂ ಸೇರಿರುವುದು.
 
==ಇತಿಹಾಸ==
ಶಿಲಾಯುಗದ ಕೊನೆಯ ಭಾಗದಲ್ಲಿ (ಕ್ರಿ. ಪೂ. ಸು. 10,000) ತಾಮ್ರದ ಶೋಧವಾಗಿರಬಹುದು. ಆ ವೇಳೆಗೆ ಬದುಕಿದ್ದ [[ನವಶಿಲಾಯುಗ]]ದ ಮಾನವ ಕ್ರಿ. ಪೂ. ಸು. 8000ರ ಹೊತ್ತಿಗೆ ತಾಮ್ರವನ್ನು ಮೊದಲ ಬಾರಿಗೆ ಬಳಕೆಗೆ ತಂದನೆಂದು ಅಂದಾಜು ಮಾಡಲಾಗಿದೆ. ಪ್ರಕೃತಿಯಲ್ಲಿ ಮುಕ್ತ ಲೋಹಸ್ಥಿತಿಯಲ್ಲಿ ದೊರೆಯುವ ತಾಮ್ರವನ್ನು ಈ ಮಾನವ ಉಪಯೋಗಿಸಿ ಹಲವಾರು ಒರಟು [[ಹತ್ಯಾರು]]ಗಳನ್ನು ತಯಾರಿಸಿರಬಹುದು. ಕುಟ್ಟಿ, ತಟ್ಟಿ, ಎಳೆದು ನಿರ್ಮಿಸಿದ ಈ ಬಗೆ ಬಗೆಯ ಹತ್ಯಾರುಗಳ ಉಜ್ಜ್ವಲ ಕೆಂಬಣ್ಣ ಅತ್ಯಂತ ಆಕರ್ಷಕವಾಗಿದ್ದುದರಿಂದ ತಾಮ್ರ ಬಲು ಬೆಲಯುಳ್ಳ ಪದಾರ್ಥವೆಂದು ಆ ದಿನಗಳಂದು ಪರಿಗಣಿಸಲ್ಪಟ್ಟದ್ದು ಸಹಜವೇ ಆಗಿದೆ. ಹೀಗಾಗಿ ಈ ಲೋಹದ ವ್ಯಾಪಕ ಅನ್ವೇಷಣೆ ಅಂದಿನ ಮಾನವನ ಗೀಳಾಯಿತು. ತಾಮ್ರದ ನಿಕ್ಷೇಪಗಳ ಶೋಧನೆಗಳಾಗಿ ಮಾಡಿದ ಪ್ರಯತ್ನಗಳ ಫಲವಾಗಿ (ಕ್ರಿ. ಪೂ. ಸು. 6000) ತಾಮ್ರವನ್ನು ಕಾಸಿ ಕರಗಿಸಿ ಬಳಿಕ ಬೇಕಾದ ಆಕಾರಕ್ಕೆ ಎರಕ ಹುಯ್ಯಬಹುದು ಎಂಬ ತಿಳಿವಳಿಕೆ ಮೂಡಿತು. ಇದರ ಮುಂದಿನ ಹೆಜ್ಜೆ ತಾಮ್ರಯುತ ಶಿಲೆಗೂ ಲೋಹತಾಮ್ರಕ್ಕೂ ಇರುವ ಸಂಬಧದ ಅರಿವು. ತಾಮ್ರಯುತ ಶಿಲೆಯ ಪುಡಿಯನ್ನು ಕಾಸಿ ದೊರೆವ ದ್ರವಪದಾರ್ಥದಿಂದ ಲೋಹ ತಾಮ್ರವನ್ನು ಪಡೆಯಬಹುದು ಎನ್ನುವ ಜ್ಞಾನ ಮೂಡಿದಾಗ [[ಲೋಹವಿದ್ಯೆ]] (ಮೆಟಲರ್ಜಿ) ಮೈದಳೆಯಿತು. ತಾಮ್ರ ವಸ್ತುಗಳ ನಿರ್ಮಾಣದಲ್ಲಿ ಸಾಕಷ್ಟು ಮುಂದುವರಿದಿದ್ದಂಥ ರಾಷ್ಟಗಳೆಂದರೆ [[ಈಜಿಪ್ಟ್]] (ಕ್ರಿ, ಪೂ. ಸು. 5000), ಸಿನಾಯ್ ಪರ್ಯಾಯ ದ್ವೀಪ (ಕ್ರಿ, ಪೂ. ಸು. 3800) ಮತ್ತು [[ಭಾರತ]] (ಕ್ರಿ, ಪೂ. ಸು.2500).ತಾಮ್ರವು ಪ್ರಥಮ ಮಾನವ ನಿರ್ಮಿತ ಮಿಶ್ರಲೋಹ.ಇದನ್ನು ಕ್ರಿ.ಪೂ ೩೫೦೦ರಲ್ಲಿ ನಿರ್ಮಿಸಲಾಗಿತ್ತು ಎಂದು ನಂಬಲಾಗಿದೆ.<ref name="EncBrit">{{cite book |editor1-last=McHenry |editor1-first=Charles |title=The New Encyclopedia Britannica |date=1992 |publisher=Encyclopedia Britannica, Inc. |location=Chicago |isbn=0-85229-553-7 |page=612 |volume=3 |edition=15}}</ref> ತಾಮ್ರವನ್ನು [[ತವರ]]ದೊಡನೆ (ಟಿನ್) ಮಿಶ್ರಮಾಡಿದಾಗ ದೊರೆಯುವ ಮಿಶ್ರ ಲೋಹಕ್ಕೆ [[ಕಂಚು]] ಎಂದು ಹೆಸರು. ಇದರ ಅಸ್ತಿತ್ವ ಕ್ರಿ, ಪೂ. ಸು. 3700 ರ ವೇಳೆಗೆ ಬಂದಿತ್ತು ಎಂಬುದಕ್ಕೆ ಈಜಿಪ್ಪಿನ ಪಿರಮಿಡ್‍ಗಳಲ್ಲಿ ನಿದರ್ಶನ ದೊರೆತಿದೆ. ಈಜಿಪ್ಪಿನಲ್ಲಿ ಕಂಚಿನ ಯುಗ ಹೀಗೆ ತೊಡಗಿತು. ಆದರೆ ಆ ಮೊದಲೇ [[ಏಷ್ಯ]]ದ ಕೆಲವಡೆಗಳಲ್ಲಿ [[ಕಂಚಿನಯುಗ]] ಪ್ರಾರಂಭವಾಗಿತ್ತು ಎಂದು ತಿಳಿದಿದೆ.
"https://kn.wikipedia.org/wiki/ತಾಮ್ರ" ಇಂದ ಪಡೆಯಲ್ಪಟ್ಟಿದೆ