ಮೈನಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ using AWB
೬ ನೇ ಸಾಲು:
| birth_name = ಮೈನಾವತಿ
| birth_date = ೨೬ ಜುಲೈ ೧೯೩೫
| birth_place = [[ಭಟ್ಕಳ]], ಮುಂಬೈಮುಂಬಯಿ ಪ್ರಾಂತ್ಯ, ಬ್ರಿಟಿಷ್ ಇಂಡಿಯಾ
| occupation = ನಟಿ
| years_active = ೧೯೫೫-೨೦೧೨
೧೩ ನೇ ಸಾಲು:
| website =
}}
'''ಮೈನಾವತಿ''' ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಮತ್ತು ಕಿರುತೆರೆ ಅಭಿನೇತ್ರಿ. ೧೯೫೦ ಮತ್ತು ೧೯೬೦ರ ದಶಕದಲ್ಲಿ ಸಕ್ರಿಯರಾಗಿದ್ದ ಮೈನಾವತಿ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. '''[[ರಾಯರ ಸೊಸೆ]]'''(೧೯೫೭), '''[[ಅಬ್ಬಾ ಆ ಹುಡುಗಿ]]'''(೧೯೫೯), '''[[ಅನುರಾಧ]]'''(೧೯೬೭), '''[[ಶ್ರೀಕೃಷ್ಣದೇವರಾಯ]]'''(೧೯೭೦) ಮತ್ತು '''[[ಅಳಿಯ ಗೆಳೆಯ]]'''(೧೯೭೧) ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಿಗೆ ಸಮರ್ಥವಾಗಿ ಜೀವ ತುಂಬಿ ಕನ್ನಡ ಪ್ರೇಕ್ಷಕರ ನೆಚ್ಚಿನ ಅಭಿನೇತ್ರಿ ಎನ್ನಿಸಿಕೊಂಡಿದ್ದರು. ತಮಿಳಿನ '''ಬೊಮ್ಮೈ ಕಲ್ಯಾಣಂ'''(೧೯೫೮), '''ಮಾಲಯಿಟ್ಟ ಮಂಗೈ'''(೧೯೫೮) ಮತ್ತು '''ಕುರವಂಜಿ'''(೧೯೬೦) ಮೈನಾವತಿ ಅಭಿನಯದ ಗಮನಾರ್ಹ ಚಿತ್ರಗಳಾಗಿವೆ<ref name="ಮೈನಾ೧">{{cite web|title=ಹಿರಿಯ ನಟಿ ಮೈನಾವತಿ ಇನ್ನಿಲ್ಲ|url=http://www.prajavani.net/news/article/2012/11/11/109030.html|publisher=ಪ್ರಜಾವಾಣಿ}}</ref><ref name="ರಾಜೇಂದ್ರ">{{cite web|title=ಬೆಳ್ಳಿತೆರೆಯ ಹಿರಿಯ ಅಭಿನೇತ್ರಿ ಮೈನಾವತಿ ಇನ್ನಿಲ್ಲ|url=http://kannada.filmibeat.com/news/veteran-actress-mynavathi-dies-at-78-069484.html|publisher=ಫಿಲ್ಮಿ ಬೀಟ್}}</ref><ref name="ಮೈನಾ೨">{{cite web|title=ಹಿರಿಯ ನಟಿ ಮೈನಾವತಿ ಇನ್ನಿಲ್ಲ|url=http://www.justkannada.in/%E0%B2%B9%E0%B2%BF%E0%B2%B0%E0%B2%BF%E0%B2%AF-%E0%B2%A8%E0%B2%9F%E0%B2%BF-%E0%B2%AE%E0%B3%88%E0%B2%A8%E0%B2%BE%E0%B2%B5%E0%B2%A4%E0%B2%BF-%E0%B2%87%E0%B2%A8%E0%B3%8D%E0%B2%A8%E0%B2%BF%E0%B2%B2/|publisher=ಜಸ್ಟ್ ಕನ್ನಡ}}</ref>.
 
==ಆರಂಭಿಕ ಜೀವನ==
೨೦ ನೇ ಸಾಲು:
==ವೃತ್ತಿ ಜೀವನ==
====ಬೆಳ್ಳಿತೆರೆ====
ಸತಿ ಸಕ್ಕು ಚಿತ್ರದ ಚಿಕ್ಕ ಪಾತ್ರದಲ್ಲಿ ಚೊಕ್ಕ ಅಭಿನಯ ನೀಡಿದ ಮೈನಾವತಿ ತಮಿಳಿನ '''ಪೊಣ್ ವಾಯಲ್'''(೧೯೫೪) ಚಿತ್ರದಲ್ಲಿನ ಗಮನಾರ್ಹ ಅಭಿನಯದಿಂದ ಚಿತ್ರರಸಿಕರ ಮನಸೆಳೆದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶ ಗಳಿಸಲಿಲ್ಲ<ref>{{cite web|title=ಪೊಣ್ ವಾಯಲ್ ೧೯೫೪|url=http://www.thehindu.com/todays-paper/tp-features/tp-cinemaplus/ponvayal-1954/article2802184.ece|publisher=ದಿ ಹಿಂದು}}</ref>. ನಂತರದಲ್ಲಿ ಮೈನಾವತಿ ಅಭಿನಯಿಸಿದ ಚಿತ್ರ ತಮಿಳಿನ '''ಎನ್ ಮಗಳ್'''(೧೯೫೫). ಈ ಚಿತ್ರದಲ್ಲಿ ನಾಯಕಿಯಾಗಿ ಶಕ್ತ ಅಭಿನಯ ನೀಡಿದರರೂ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು<ref>{{cite web|title=ಎನ್ ಮಗಳ್ ೧೯೫೫|url=http://www.thehindu.com/features/cinema/cinema-columns/en-magal-1955/article4817408.ece|publisher=ದಿ ಹಿಂದು}}</ref>. '''[[ಪಂಢರೀಬಾಯಿ]]''' ಅವರು ಮುಖ್ಯ ಭೂಮಿಕೆಯಲ್ಲಿದ್ದ '''ಕುಲ ದೈವಂ'''(೧೯೫೬) ಚಿತ್ರದಲ್ಲಿ ಬಾಲ್ಯದಲ್ಲೇ ಗಂಡನನ್ನು ಕಳೆದುಕೊಂಡ ಹುಡುಗಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದರು. ಈ ಚಿತ್ರ ವಾಣಿಜ್ಯಿಕವಾಗಿ ಯಶಸ್ವಿಯಾದದ್ದಲ್ಲದೇ ರಾಷ್ಟ್ರಮಟ್ಟದ ಪುರಸ್ಕಾರ ಪಡೆಯಿತು<ref>{{cite web|title=Blast from the past: Kula Deivam 1956|url=http://www.thehindu.com/features/cinema/blast-from-the-past-kula-deivam-1956/article931300.ece|publisher=ದಿ ಹಿಂದು}}</ref>.
 
'''[[ರಾಜ್ ಕುಮಾರ್]]''' ಮತ್ತು '''[[ಪಂಢರೀಬಾಯಿ]]''' ಮುಖ್ಯ ಭೂಮಿಕೆಯಲ್ಲಿದ್ದ '''[[ಭಕ್ತ ವಿಜಯ]]'''(೧೯೫೬) ಮತ್ತು '''[[ಹರಿಭಕ್ತ]]'''(೧೯೫೬) ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿ ಗಮನ ಸೆಳೆದರು. '''[[ಹರಿಭಕ್ತ]]''' ಚಿತ್ರದಲ್ಲಿ ಋಣಾತ್ಮಕ ಛಾಯೆಯ ವೇಶ್ಯಯ ಪಾತ್ರದಲ್ಲಿ ಪ್ರಶಂಸನೀಯ ಭಾವಾಭಿನಯ ಮತ್ತು ನೃತ್ಯಾಭಿನಯ ನೀಡಿದ ಮೈನಾವತಿ '''[[ಮುತ್ತೈದೆ ಭಾಗ್ಯ]]'''(೧೯೫೬) ಚಿತ್ರದಲ್ಲಿ ನಟಶೇಖರ '''[[ಕಲ್ಯಾಣ್ ಕುಮಾರ್]]''' ಅವರ ನಾಯಕಿಯಾಗಿ ನೀಡಿದ ಲವಲವಿಕೆಯ ಅಭಿನಯ ಪ್ರೇಕ್ಷಕರಿಗೆ ಹಿಡಿಸಿತ್ತು. '''[[ರಾಯರ ಸೊಸೆ]]'''(೧೯೬೭) ಚಿತ್ರದಲ್ಲಿ ವರದಕ್ಷಿಣೆ ಕಿರುಕುಳ ನೀಡಿದ ಮಾವನನ್ನು ತನ್ನ ಸದ್ಗುಣದಿಂದ ಗೆಲ್ಲುವ ಸೊಸೆಯ ಪಾತ್ರದಲ್ಲಿ ಮೈನಾವತಿಯವರದ್ದು ಅಪೂರ್ವ ಅಭಿನಯ. ೧೯೫೯ರಲ್ಲಿ ಬಿಡುಗಡೆಯಾದ '''[[ಅಬ್ಬಾ ಆ ಹುಡುಗಿ]]''' ಚಿತ್ರ ಮೈನಾವತಿಯವರ ವೃತ್ತಿ ಜೀವನದ ಮೈಲಿಗಲ್ಲು. '''[[ವಿಲಿಯಮ್ ಶೇಕ್ಸ್‌ಪಿಯರ್‌]]''' ಅವರ '''ದಿ ಟೇಮಿಂಗ್ ಆಫ್ ಶ್ರೂ''' ನಾಟಕವನ್ನು ಆಧರಿಸಿದ ಈ ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಮನೋಜ್ಞ ಅಭಿನಯ ನೀಡಿದ ಮೈನಾವತಿಯವರು ಈ ಚಿತ್ರದಲ್ಲಿ ಪ್ಯಾಂಟು ಶರ್ಟು ಧರಿಸಿ ಗಮನ ಸೆಳೆದಿದ್ದರು<ref name="ಮೈನಾ೧"/>.
೨೬ ನೇ ಸಾಲು:
ಪ್ರಖ್ಯಾತ ಮಲಯಾಳಂ ನಟ '''[[ಪ್ರೇಮ್ ನಜೀರ್]]''' ಅವರಿಗೆ ನಾಯಕಿಯಾಗಿ '''ಪುದುವಾಯಲ್'''(೧೯೫೭), '''ವಣ್ಣಕ್ಕಿಳಿ'''(೧೯೫೯), '''ಅನ್ಬುಕ್ಕೊರ್ ಅಣ್ಣಿ'''(೧೯೬೦) ಮುಂತಾದ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ ಮೈನಾವತಿಯವರು '''[[ಶಿವಾಜಿ ಗಣೇಶನ್]]''' ಅವರೊಂದಿಗೆ '''ಬೊಮ್ಮೈ ಕಲ್ಯಾಣಂ'''(೧೯೫೮) ಮತ್ತು '''ಕುರವಂಜಿ'''(೧೯೬೦) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಸಮರ್ಥ ಅಭಿನಯ ನಿಡಿದ್ದರು. '''ಮಾಲಯಿಟ್ಟ ಮಂಗೈ'''(೧೯೫೮) ಚಿತ್ರದಲ್ಲಿ ಮೈನಾವತಿ ಅಭಿನಯದ ''ಸೆಂದಮಿಳ್ ತೇನ್ ಮೊಳಿಯಾಲ್...'' ಗೀತೆ ತಮಿಳಿನ ಅಮರ ಮಧುರ ಗೀತೆಗಳಲ್ಲೊಂದಾಗಿದೆ.
 
'''[[ರಾಜ್ ಕುಮಾರ್]]''' ಅಭಿನಯದ '''[[ಅನ್ನಪೂರ್ಣ]]'''(೧೯೬೪) ಮತ್ತು '''[[ಸರ್ವಜ್ಞಮೂರ್ತಿ]]'''(೧೯೬೫) ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ಮೈನಾವತಿ '''[[ಮಹಾಸತಿ ಅನುಸೂಯ]]'''(೧೯೬೫) ಚಿತ್ರದಲ್ಲಿ ಪಾರ್ವತಿಯಾಗಿ ಅಚ್ಚುಕಟ್ಟಾದ ಅಭಿನಯ ನೀಡಿದ್ದರು. '''[[ಸುಬ್ಬಾಶಾಸ್ತ್ರಿ]]'''(೧೯೬೬) ಚಿತ್ರದಲ್ಲಿ ತನ್ನ ತಂದೆಗೆ ಮಂಕು ಬೂದಿ ಎರಚಿ ಆಸ್ಥಿ ಹೊಡೆದುಕೊಳ್ಳಲು ಹೊಂಚು ಹಾಕಿದ್ದ ಲಂಪಟ ಬುದ್ಧಿಯ ಸುಬ್ಬಾಶಾಸ್ತ್ರಿಯ ಅವಗುಣಗಳನ್ನು ತಂದೆ ಎದುರಿಗೇ ಟೀಕಿಸಿ ಅವನ ಕುತ್ಸಿತ ಬುದ್ಧಿಯನ್ನು ಧಿಕ್ಕರಿಸುವ ದಿಟ್ಟ ಹುಡುಗಿ ಸರಸ್ವತಿಯಾಗಿ ಅಮೋಘ ಅಭಿನಯ ನೀಡಿದ ಮೈನಾವತಿ '''[[ಪಂಢರೀಬಾಯಿ]]''' ನಿರ್ಮಾಣದ ಕುಟುಂಬ ಯೋಜನೆಯ ಮಹತ್ವ ಎತ್ತಿ ಹಿಡಿಯುವ ಕತೆಯನ್ನು ಹೊಂದಿದ್ದ '''[[ಅನುರಾಧ]]'''(೧೯೬೭) ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ್ದರು<ref name="ಮೈನಾ೧"/>.
 
೧೯೬೦ರ ದಶಕದ ಕೊನೆಯಲ್ಲಿ ನಾಯಕಿಯ ಪಾತ್ರಕ್ಕೆ ಅವಕಾಶಗಳು ಕಡಿಮೆಯಾದ್ದರಿಂದ ಹಾಸ್ಯ ಪಾತ್ರಗಳತ್ತ ಗಮನ ಹರಿಸಿದ ಮೈನಾವತಿಯವರು '''[[ಅಮ್ಮ]]'''(೧೯೬೮), '''[[ಗಂಡೊಂದು ಹೆಣ್ಣಾರು]]'''(೧೯೬೯), '''[[ಶ್ರೀಕೃಷ್ಣದೇವರಾಯ]]'''(೧೯೭೦) ಮತ್ತು '''[[ಅಳಿಯ ಗೆಳೆಯ]]'''(೧೯೭೧) ಚಿತ್ರಗಳಲ್ಲಿ ಹಾಸ್ಯ ಚಕ್ರವರ್ತಿ '''[[ನರಸಿಂಹರಾಜು]]''' ಅವರಿಗೆ ಸರಿಸಾಟಿಯ ಅಭಿನಯ ನೀಡಿ ಪ್ರೇಕ್ಷಕರಿಂದ ಸೈ ಅನ್ನಿಸಿಕೊಂಡರು. '''[[ಶ್ರೀಕೃಷ್ಣದೇವರಾಯ]]''' ಚಿತ್ರದಲ್ಲಿ ತೆನಾಲಿ ರಾಮಕೃಷ್ಣನ ಮಡದಿಯ ಪಾತ್ರಕ್ಕೆ ನವಿರು ಹಾಸ್ಯದಿಂದ ಜೀವ ತುಂಬಿದ ಪರಿ ಅಮೋಘ. ವಿವಾಹದ ನಂತರ ತಮ್ಮ ವೈಯಕ್ತಿಕ ಜೀವನಕ್ಕೆ ಮಹತ್ವ ಕೊಟ್ಟು ನಟನೆಯಿಂದ ಸುಧೀರ್ಘ ವಿರಾಮ ತೆಗೆದುಕೊಂಡ ಮೈನಾವತಿ '''[[ಮುಗಿಯದ ಕಥೆ]]'''(೧೯೭೬) ಮತ್ತು '''[[ಭಾಗ್ಯವಂತರು]]'''(೧೯೭೭) ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರೂ ಪೂರ್ಣ ಪ್ರಮಾಣದಲ್ಲಿ ಪೋಷಕ ನಟಿಯಾಗಿ ಚಿತ್ರರಂಗಕ್ಕೆ ಮರಳಿದ್ದು ೧೯೯೦ರ ದಶಕದಲ್ಲಿ. '''[[ಒಬ್ಬರಿಗಿಂತ ಒಬ್ಬರು]]'''(೧೯೯೨), '''[[ಚಿರಬಾಂಧವ್ಯ]]'''(೧೯೯೩), '''[[ಭಗವಾನ್ ಶ್ರೀ ಸಾಯಿಬಾಬ]]'''(೧೯೯೩), '''[[ಮಣಿಕಂಠನ ಮಹಿಮೆ]]'''(೧೯೯೩) ಮುಂತಾದ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಉತ್ತಮ ಅಭಿನಯ ನೀಡಿದ್ದರು<ref name="ಮೈನಾ೧"/>.
೧೦೯ ನೇ ಸಾಲು:
| ೧೯೯೨ || ''[[ಒಬ್ಬರಿಗಿಂತ ಒಬ್ಬರು]]'' || || [[ಎ.ಎಂ.ಸಮೀವುಲ್ಲಾ]] || [[ಸುನೀಲ್]], [[ಗುರುದತ್]], ಕಿನ್ನಾರ, [[ವನಿತಾ ವಾಸು]], [[ವಜ್ರಮುನಿ]]
|-
| ೧೯೯೨ || ''[[ನನ್ನ ತಂಗಿ]]'' || || [[ಪೇರಾಲ]] || [[ದೇವರಾಜ್]], [[ಸೌಂದರ್ಯ ]]
|-
| ೧೯೭೧ || ''[[ಪ್ರೇಮ ಸಂಗಮ]]'' || || [[ಭಾರ್ಗವ]] || [[ಅಂಬರೀಶ್]], [[ಮಾಲಾಶ್ರೀ]]
೧೮೮ ನೇ ಸಾಲು:
|-
| ೧೯೫೯ || ''ವಳಿಕಾಟ್ಟಿ'' || || || [[ಪ್ರೇಮ್ ನಜೀರ್]]
|}
 
==ಉಲ್ಲೇಖಗಳು==
೧೯೪ ನೇ ಸಾಲು:
 
{{ಕನ್ನಡ ಚಿತ್ರರಂಗದ ನಾಯಕಿಯರು}}
 
[[ವರ್ಗ:ಭಾರತದ ಚಲನಚಿತ್ರ ನಟಿಯರು]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
[[Categoryವರ್ಗ: ಸಿನಿಮಾ ತಾರೆಗಳು]]
"https://kn.wikipedia.org/wiki/ಮೈನಾವತಿ" ಇಂದ ಪಡೆಯಲ್ಪಟ್ಟಿದೆ