ಸದಸ್ಯ:Guru sam 76/sandbox1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
== ಆರಂಭಿಕ ಜೀವನ ==
ಮ್ಯಾಕ್ಸ್ ಬಾರ್ನ್ ಬ್ರೆಸ್ಲೌ (ಈಗ ರೊಕ್ಲಾ), ಪೋಲೆಂಡ್‍ನಲ್ಲಿ ೧೧ ಡಿಸೆಂಬರ್ ೧೮೮೨ ರಂದು ಜನಿಸಿದ್ದರು. ಅವರು ''ಗುಸ್ತಾವ್ ಬಾರ್ನ್‍''ಗೆ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬರು. ಅವರ ತಂದೆ ಬ್ರೆಸ್ಲೌ ಯುನಿವರ್ಸಿಟಿಯ ಭ್ರೂಣಶಾಸ್ತ್ರ ವಿಷಯದ ಪ್ರೊಫೆಸರ್ ಆಗಿದ್ದರು. ಅವರ ತಾಯಿ ''ಮಾರ್ಗರೆಥೆ''. ೨೯ ಆಗಸ್ಟ್ ೧೮೮೬, ಮ್ಯಾಕ್ಸ್ ನಾಲ್ಕು ವರ್ಷದವನಾಗಿದ್ದಾಗ ಅವರ ತಾಯಿ ನಿಧನರಾದರು. ಆದ್ದರಿಂದ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು.<ref name="family">{{Cite journal | last1 = Born | first1 = G. V. R. | title = The wide-ranging family history of Max Born | doi = 10.1098/rsnr.2002.0180 | journal = Notes and Records of the Royal Society | volume = 56 | issue = 2 | pages = 219–262 | year = 2002 | }}</ref>
 
ಆರಂಭದಲ್ಲಿ ಬ್ರೆಸ್ಲೌ ಕೋನಿಗ್-ವಿಲ್ಹೆಲ್ಮ್-ಜಿಮ್ನಾಷಿಯಂ, ಬ್ರೆಸ್ಲೌದಲ್ಲಿ ಶಿಕ್ಷಣ ಪಡೆದರು; ಆನಂತರ ೧೯೦೧ ರಲ್ಲಿ ಬ್ರೆಸ್ಲೌ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಜರ್ಮನ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಮತ್ತೊಂದು ವಿಶ್ವವಿದ್ಯಾನಿಲಯದಲ್ಲಿ ಸುಲಭವಾಗಿ ಸೇರಲು ಅವಕಾಶ ನೀಡುತ್ತಿತ್ತು, ಆದ್ದರಿಂದ ಅವರು ೧೯೦೨ ರಲ್ಲಿ ಹೈಡೆಲ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಒಂದು ಸೆಮಿಸ್ಟರ್ ಕಳೆದರು ಹಾಗು ೧೯೦೩ ರಲ್ಲಿ ಜ್ಯೂರಿಚ್ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಸೆಮಿಸ್ಟರ್ ಕಳೆದರು. ಬ್ರೆಸ್ಲೌ ವಿಶ್ವವಿದ್ಯಾಲಯದಲ್ಲಿ ಓದುವಾಗ ಅವರು ಗಾಟ್ಟಿಂಗನ್ ವಿಶ್ವವಿದ್ಯಾಲಯ ಬಗ್ಗೆ ಕೇಳಿದರು ಹಾಗೂ ೧೯೦೪ ರ ಏಪ್ರಿಲ್‍ನಲ್ಲಿ ಅಲ್ಲಿಗೆ ಹೋದರು. ಗಾಟ್ಟಿಂಗನ್ ವಿಶ್ವವಿದ್ಯಾಲಯದಲ್ಲಿ ಓದುವಾಗ ಅವರು ಮೂರು ಹೆಸರಾಂತ ಗಣಿತಜ್ಞರ ಪರಿಚಯ ಮಾಡಿಕೊಂಡರು: ಫೆಲಿಕ್ಸ್ ಕ್ಲೈನ್, ಡೇವಿಡ್ ಹಿಲ್ಬರ್ಟ್ ಮತ್ತು ಹರ್ಮನ್ ಮಿಂಕೋವ್ಸ್ಕಿಯ. ಹಿಲ್ಬರ್ಟ್ ಅಸಾಧಾರಣ ಸಾಮರ್ಥ್ಯ ಹೊಂದಿರುವ ಬಾರ್ನ್‍ನನ್ನು ಗುರುತಿಸಿ ಅವರನ್ನು ಉಪನ್ಯಾಸ ಲೇಖಕನ ಬರೆಯಲು ಆಯ್ಕೆ ಮಾಡಿದರು. ಇದರಿಂದ ಅವರು ಬೌದ್ಧಿಕವಾಗಿ ವಿಕಾಸವನ್ನು ಹೊಂದಿದರು. ಹಿಲ್ಬರ್ಟ್ ಬಾರ್ನ್‍ನನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಂಡರು.
"https://kn.wikipedia.org/wiki/ಸದಸ್ಯ:Guru_sam_76/sandbox1" ಇಂದ ಪಡೆಯಲ್ಪಟ್ಟಿದೆ