ಲಿಟ್ಮಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ವಿಸ್ತರಣೆ
೯ ನೇ ಸಾಲು:
==ನೈಸರ್ಗಿಕ ಮೂಲಗಳು==
ಅನೇಕ ರೀತಿಯ ಲೈಕೆನ್ ಗಳಲ್ಲಿ ಲಿಟ್ಸಸ್ ಸಿಗುತ್ತದೆ. ಬಣ್ಣಗಳನ್ನು ತೆಗೆಯಲ್ಪಡುವ ಅಂತಹ ಲೈಕೆನ್ ತಳಿಗಳೆಂದರೆ Roccella tinctoria (ದಕ್ಷಿಣ ಅಮೆರಿಕಾ), Roccella fuciformis (ಅಂಗೋಲಾ ಮತ್ತು ಮಡಗಾಸ್ಕರ್, Roccella pygmaea (ಅಲ್ಜೀರಿಯಾ), Roccella phycopsis, Lecanora tartarea (ನಾರ್ವೆ, ಸ್ವೀಡನ್), Variolaria dealbata, Ochrolechia parella, Parmotrema tinctorum, and Parmelia. ಸದ್ಯದ ಪ್ರಮುಖ ಮೂಲಗಳು Roccella montagnei (ಮೊಝಾಂಬಿಕ್) and Dendrographa leucophoea (ಕ್ಯಾಲಿಫೋರ್ನಿಯ)<ref name="roempp"/>
 
==ರಾಸಾಯನಿಕ ವಿವರ==
ಲಿಟ್ಮಸ್ ಮಿಶ್ರಣವು ಹತ್ತರಿಂದ ಹದಿನೈದು ಬಗೆಯ ಬಣ್ಣದ್ರವ್ಯಗಳನ್ನು ಹೊಂದಿದ್ದು ಇದರ CAS ಸಂಖ್ಯೆ 1393-92-6. ಇದರಲ್ಲಿನ ಬಹುಪಾಲು ಅದರಂತದ್ದೇ ಆದ ಸಂಬಂಧಿತ ಮಿಶ್ರಣ ಆರ್ಸೆನ್ ತರದ್ದಾಗಿರುತ್ತದೆ. ಆದರೆ ಪ್ರಮಾಣ ವಿಭಿನ್ನವಾಗಿರುತ್ತದೆ. ಲಿಟ್ಮಸ್‍ನ ಮುಖ್ಯ ಪದಾರ್ಥದ ದ್ರವ್ಯರಾಶಿ ೩೩೦೦ ಆಗಿರುತ್ತದೆ. ಲಿಟ್ಮಸ್ ನಲ್ಲಿ ಕೆಲವು ನಿರ್ದಿಷ್ಟ ಹೆಸರುಗಳನ್ನು ಹೊಂದಿದ ಕೆಲವು ವಿಭಾಗಗಳಿವೆ. ಅವುಗಳಲ್ಲಿ ಕೆಲವೆಂದರೆ erythrolitmin (or erythrolein), azolitmin, spaniolitmin, leucoorcein, and leucazolitmin. Azolitmin . ಇವು ಬಹುತೇಕ ಲಿಟ್ಮಸ್‍ನ ಪರಿಣಾಮಗಳನ್ನೇ ತೋರಿಸುತ್ತವೆ.
 
==ರಾಸಾಯನಿಕ ಕ್ರಿಯೆ==
ಕೆಂಪು ಲಿಟ್ಮಸ್ ದುರ್ಬಲ್ ಡಿಪ್ರೋಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದನ್ನು ಒಂದು ಪ್ರತ್ಯಾಮ್ಲ ವಸ್ತುವಿಗೆ ತೆರೆದಿಟ್ಟಾಗ, ಜಲಜನಕದ ಅಯಾನುಗಳು ಪ್ರತ್ಯಾಮ್ಲದೊಂದಿಗೆ ಪ್ರತಿಕ್ರಿಯಿಸುತ್ತವೆ. ಲಿಟ್ಮಸ್ಸಿನ ಆಮ್ಲದಿಂದ ಉತ್ಪತ್ತಿಯಾದ ಪ್ರತ್ಯಾಮ್ಲ ಧಾತುವು ನೀಲಿ ಬಣ್ಣ ಹೊಂದಿರುತ್ತದೆ. ಪ್ರತ್ಯಾಮ್ಲ (ಆಲ್ಕಲೈನ್) ದ್ರವದಲ್ಲಿ ಅದ್ದಿದ ಕೆಂಪು ಲಿಟ್ಮಸ್ ಕಾಗದವು ನೀಲಿಯಾಗಲು ಇದೇ ಕಾರಣ.
 
==ಬಳಕೆಗಳು==
ಒಂದು ದ್ರವದ ಆಮ್ಲೀಯತೆಯನ್ನು ಪರೀಕ್ಷಿಸುವುದಕ್ಕೆ ಇದು ಪ್ರಮುಖವಾಗಿ ಬಳಕೆಯಾಗುತ್ತದೆ. ನೀರಿನಲ್ಲಿ ಕರಗಬಹುದಾದ ಅನಿಲಗಳ ಆಮ್ಲ ಮತ್ತು ಪ್ರತ್ಯಾಮ್ಲ ಗುಣಗಳನ್ನು ಸಹ ಪರೀಕ್ಷಿಸಬಹುದು. ಅನಿಲವು ನೀರಿನಲ್ಲಿ ಕರಗಿದ ನಂತರ ಲಿಟ್ಮಸ್ ಕಾಗದದ ಬಣ್ಣ ನೀಲಿಯಾಗಬಹುದು. ಉದಾಹರಣೆಗೆ, ನೀರಿನಲ್ಲಿ ಕರಗಿದ ಅಮೋನಿಯ ಅನಿಲವು ಪ್ರತ್ಯಾಮ್ಲ ಗುಣ ಹೊಂದಿದ್ದು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತದೆ.
ಲಿಟ್ಮಸ್ (pH ಸೂಚಕ)
pH 4.5 ಕೆಳಗೆ pH 8.3 ಮೇಲೆ
4.5 ⇌ 8.3
 
ಆಮ್ಲೀಯ ವಾತಾವರಣದಲ್ಲಿ ನೀಲಿ ಬಣ್ಣದ ಲಿಟ್ಮಸ್ ಕಾಗದವು ಕೆಂಪಾಗಿಯೂ, ಪ್ರತ್ಯಾಮ್ಲೀಯ ವಾತಾವರಣದಲ್ಲಿ ಕೆಂಪು ಲಿಟ್ಮಸ್ ಕಾಗದವು ನೀಲಿ ಬಣ್ಣದ್ದಾಗಿಯೂ ಬದಲಾಗುತ್ತದೆ. ಈ ಬಣ್ಣ ಬದಲಾವಣೆಯು pH ಶ್ರೇಣಿ 25 °C (77 °F) ತಾಪಮಾನದಲ್ಲಿ ೪.೫ - ೮.೩ ಯಲ್ಲಿರುತ್ತದೆ. ತಟಸ್ಥ ಲಿಟ್ಮಸ್ ಕಾಗದದ ಬಣ್ಣ ನೇರಳೆಯಾಗಿರುತ್ತದೆ. ಲಿಟ್ಮಸ್ ಅನ್ನು ನೀರಿನಲ್ಲಿ ದ್ರವರೂಪವಾಗಿಯೂ ಪರಿವರ್ತಿಸಿಕೊಂಡು ಇದೇ ಕೆಲಸಕ್ಕೆ ಬಳಸಿಕೊಳ್ಳಬಹುದು.
 
ಆಮ್ಲ-ಪ್ರತ್ಯಾಮ್ಲದ ರಾಸಾಯನಿಕ ಕ್ರಿಯೆಯ ಹೊರತಾಗಿಯೂ ಇತರ ಕ್ರಿಯೆಗಳೂ ಕೂಡ ಲಿಟ್ಮಸ್ಸಿನಲ್ಲಿ ಬಣ್ಣ ಬದಲಾವಣೆಗೆ ಕಾರಣವಾಗಬಲ್ಲವು. ಉದಾಹರಣೆಗೆ ಕ್ಲೋರಿನ್ ಅನಿಲವು ನೀಲಿ ಲಿಟ್ಮಸ್ ಕಾಗದವನ್ನು ಬಿಳಿಯಾಗಿಸುತ್ತದೆ. ಇದು ಬ್ಲೀಚಿಂಗ್ ಪ್ರಕ್ರಿಯೆಯಾಗಿದ್ದು ಹೈಪೊಕ್ಲೋರೈಟ್ ಅನಿಲವು ಕಾರಣ. ಇದರಲ್ಲಿ ಲಿಟ್ಮಸ್ ಕಾಗದವು ಸೂಚಕದ ಪಾತ್ರ ವಹಿಸುವುದಿಲ್ಲ ಮತ್ತು ಈ ಕ್ರಿಯೆಯು ಪೂರ್ವಸ್ಥಿತಿಗೆ ತರಬಲ್ಲದಂತದ್ದಲ್ಲ.
 
==ಉಲ್ಲೇಖಗಳು==
"https://kn.wikipedia.org/wiki/ಲಿಟ್ಮಸ್" ಇಂದ ಪಡೆಯಲ್ಪಟ್ಟಿದೆ