ಮಹಿಳೆ ಮತ್ತು ಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬೧ ನೇ ಸಾಲು:
*ಅಮೇರಿಕಾದವರು : 26%
<ref>[http://www.prajavani.net/news/article/2016/10/29/448659.html ಅಮೆರಿಕದಲ್ಲೂ ಭಾರತದ ಅಮ್ಮಂದಿರೇ ಸುಶಿಕ್ಷಿತರು!]</ref>
 
==ಕರ್ನಾಟಕದಲ್ಲಿ ಬಾಲ್ಯ ವಿವಾಹ ಮತ್ತು ಪರಿಣಾಮ==
*ರಾಜ್ಯದಲ್ಲಿ ಕಳೆದ ಏಪ್ರಿಲ್‌ನಿಂದ ಈವರೆಗೆ 6,807 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ವಿಶೇಷವೆಂದರೆ, ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಂದಿ (972) ಇದ್ದಾರೆ. ಎರಡನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆ (700) ಇದೆ! ಉಡುಪಿ ಜಿಲ್ಲೆಯಲ್ಲಿ (44) ಇದ್ದು, ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಶೂನ್ಯವಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲೂ ಹದಿನೆಂಟು ವರ್ಷ ತುಂಬುವ ಮೊದಲೇ ಗರ್ಭ ಧರಿಸಿದ ಹದಿಹರೆಯದವರ ಹೆಸರು ಆರೋಗ್ಯ ಇಲಾಖೆಯ ಎಂಸಿಟಿಎಸ್‌ (ಮದರ್ ಚೈಲ್ಡ್‌ ಟ್ರ್ಯಾಕಿಂಗ್‌ ಸಿಸ್ಟಂ) ದಾಖಲೆಗಳಲ್ಲಿ ನೋಂದಣಿ ಆಗಿದೆ.
 
*‘ಹೈ ರಿಸ್ಕ್‌ ಪ್ರೆಗ್ನೆನ್ಸಿ’ (ತೊಡಕಿನಲ್ಲಿರುವ ಗರ್ಭಧಾರಣೆ ಅಥವಾ ಗರ್ಭದಲ್ಲಿರುವ ಶಿಶು ಅಪಾಯದಲ್ಲಿರುವ ಸ್ಥಿತಿ) ಪ್ರಕರಣಗಳಿಗೆ ಸಂಬಂಧಿಸಿ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹದಿಹರೆಯದಲ್ಲಿ ಗರ್ಭ ಧರಿಸಿದವರನ್ನು ಗುರುತಿಸಿದೆ.
*2016 ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ 464 ತಾಯಂದಿರು ಪ್ರಸವ ಸಂದರ್ಭದಲ್ಲೇ ಸಾವಿಗೆ ಶರಣಾಗಿದ್ದಾರೆ. ಈ ಪೈಕಿ ಶೇ 44ರಷ್ಟು (205) ತಾಯಂದಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿಗೀಡಾದರೆ, ಶೇ 27ರಷ್ಟು (125) ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಶೇ 20ರಷ್ಟು (95) ಮಂದಿ ಚಿಕಿತ್ಸೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದ 39 (ಶೇ 8) ತಾಯಂದಿರ ಸಾವು ಮನೆಯಲ್ಲಿ ಸಂಭವಿಸಿದೆ.<ref>[http://www.prajavani.net/news/article/2017/02/05/470269.html ಗರ್ಭವತಿಯರಾದ 6,807 ಬಾಲಕಿಯರು!;5 Feb, 2017]</ref>
 
 
==ನೋಡಿ==
"https://kn.wikipedia.org/wiki/ಮಹಿಳೆ_ಮತ್ತು_ಭಾರತ" ಇಂದ ಪಡೆಯಲ್ಪಟ್ಟಿದೆ