ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೦ ನೇ ಸಾಲು:
ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಅನೇಕ ಪ್ರೋಗ್ರಾಮಿಂಗ್ ಭಾಷೆಗಳ ಮೇಲೆ ಆಗಿದೆ. [[ಸೀ ಶಾರ್ಪ್]], [[“ಡಿ”|ಡಿ]], [[ಜಾವಾ]], ಮತ್ತು “ಸಿ” ಭಾಷೆಯ ಹೊಸ ಅವತರಣಿಕೆಗಳ ಮೇಲೆ ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಗುರುತಿಸಬಹುದು.
 
== ಇತಿಹಾಸ ==
ಜಾರ್ನ್ ಸ್ಟ್ರೌಸ್ಟ್ರಪ್ ಎಂಬ ಡೆನ್ಮಾರ್ಕ್ ಮೂಲದ ಕಂಪ್ಯೂಟರ್ ವಿಜ್ಞಾನಿ 1979ರಲ್ಲಿ “ಕ್ಲಾಸ್ ಉಳ್ಳ ಸಿ” (“ಸಿ” ವಿತ್ ಕ್ಲಾಸಸ್) ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನು ರೂಪಿಸಲು ಪ್ರಾರಂಭಿಸಿದ. ಇದೇ ಮುಂದೆ ಸೀ ಪ್ಲಸ್ ಪ್ಲಸ್ ಭಾಷೆಯ ಅಡಿಗಲ್ಲಾಯಿತು. ಹೊಸ ಪ್ರೋಗ್ರಾಮಿಂಗ್ ಭಾಷೆಗೆ ಹುಡುಕಾಟ ಪ್ರಾರಂಭಿಸಿದ್ದು ಏಕೆಂದು ಸ್ಟ್ರೌಸ್ಟ್ರಪ್ ವಿವರಿಸಿದ್ದಾನೆ – “ನಾನು ಪಿಎಚ್.ಡಿ. ಸಂಶೋಧನೆಯಲ್ಲಿ ತೊಡಗಿದ್ದಾಗ “ಸಿಮ್ಯುಲಾ” ([[Simula]]) ಎಂಬ ಭಾಷೆಯ ಅಂಶಗಳು “ಸಿ” ಭಾಷೆಯಲ್ಲಿ ಇದ್ದಿದ್ದರೆ ದೊಡ್ಡ ಗಾತ್ರದ ತಂತ್ರಾಂಶಗಳನ್ನು ಕಟ್ಟಲು ಸುಲಭವಾಗುತ್ತಿತ್ತಲ್ಲವೇ ಎಂದು ಯೋಚಿಸುತ್ತಿದ್ದೆ. ಅಂಥದೊಂದು ಭಾಷೆಯನ್ನು ಪ್ರಯೋಗಕ್ಕೆ ತಂದಾಗ ತಂತ್ರಾಂಶಗಳ ಓಟದ ವೇಗ ತೀರಾ ಕಡಿಮೆಯಾಗಿದ್ದನ್ನು ಗಮನಿಸಿದೆ. ಇದಕ್ಕೆ ತದ್ವಿರುದ್ಧವಾಗಿ [[BCPL]] ಎಂಬ ಭಾಷೆಯಲ್ಲಿ ಕಟ್ಟಿದ ತಂತ್ರಾಂಶಗಳು ವೇಗದಲ್ಲಿ ಮುಂದಿದ್ದರೂ ಆ ಭಾಷೆ ತೀರಾ ಸರಳವಾಗಿದ್ದು ದೊಡ್ಡ ಗಾತ್ರದ ತಂತ್ರಾಂಶಗಳನ್ನು ನಿರ್ಮಿಸಲು ಸೂಕ್ತವಾಗಿರಲಿಲ್ಲ.” ಪಿಎಚ್.ಡಿ. ಅಧ್ಯಯನದ ನಂತರ ಏಟಿ ಅಂಡ್ ಟಿ [[ಬೆಲ್ ಲ್ಯಾಬ್ಸ್]] ಎಂಬ ಪ್ರಯೋಗಾಲಯದಲ್ಲಿ ಉದ್ಯೋಗದಲ್ಲಿ ತೊಡಗಿದ ಸ್ಟ್ರೌಸ್ಟ್ರಪ್ [[ಯೂನಿಕ್ಸ್]] ನಿರ್ವಹಣಾ ವ್ಯವಸ್ಥೆಯ ([[ಆಪರೇಟಿಂಗ್ ಸಿಸ್ಟಂ]]) ತಿರುಳನ್ನು ([[kernel]]) ಅಧ್ಯಯನ ಮಾಡುವುದರಲ್ಲಿ ನಿರತನಾದ. ತನ್ನ ಪಿಎಚ್.ಡಿ. ಅನುಭವದ ಆಧಾರದ ಮೇಲೆ ಅವನು “ಸಿಮ್ಯುಲಾ” ಭಾಷೆಯಲ್ಲಿದ್ದ [[Class]] ಅಥವಾ “ವರ್ಗ” ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಹೊಸದೊಂದು ಪ್ರೋಗ್ರಾಮಿಂಗ್ ಭಾಷೆಯನ್ನು ಅನ್ವೇಷಿಸಿದ. ಇದಕ್ಕೆ “ಸಿ ವಿತ್ ಕ್ಲಾಸಸ್” ಅಥವಾ “ವರ್ಗಗಳುಳ್ಳ ಸಿ” ಎಂದು ಕರೆದ. ಮುಂದೆ ಇದೇ “ಸೀ ಪ್ಲಸ್ ಪ್ಲಸ್” ಭಾಷೆಯಾಗಿ ರೂಪುಗೊಂಡಿತು. ತನ್ನ ಹೊಸ ಭಾಷೆಯ ಅಡಿಗಲ್ಲಾಗಿ “ಸಿ” ಭಾಷೆಯನ್ನು ಆಯ್ದುಕೊಳ್ಳಲು ಕಾರಣ ಅದರ ಜನಪ್ರಿಯತೆ, ವೇಗ ಮತ್ತು ಎಲ್ಲಾ ಸಂದರ್ಭಗಳಲ್ಲೂ ಬಳಸಬಹುದಾದುದು ಎಂಬ ಗುಣಗಳು. ಆದರೆ ಏಡಾ ([[Ada]]), [[ALGOL68]], ಮತ್ತು [[ML]] ಭಾಷೆಗಳಿಂದಲೂ ಸ್ಟ್ರೌಸ್ಟ್ರಪ್ ಅನೇಕ ಅಂಶಗಳನ್ನು ಸ್ವೀಕರಿಸಿದ್ದಾನೆ. <ref name="evolving">{{cite web |url = http://stroustrup.com/hopl-almost-final.pdf|title = Evolving a language in and for the real world: C++ 1991-2006|first = Bjarne|last = Stroustrup}}
 
 
[[File:BjarneStroustrup.jpg|thumb|[[ಜಾರ್ನ್ ಸ್ಟ್ರೌಸ್ಟ್ರಪ್]], ಸೀ ಪ್ಲಸ್ ಪ್ಲಸ್ ಭಾಷೆಯ ಜನಕ]]
"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ