ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೨ ನೇ ಸಾಲು:
ಕನ್ನಡ ನವೋದಯ ಕಾವ್ಯಕ್ಕೆ ಜಾನಪದವೇ ಮೂಲ ಪ್ರೇರಣೆ ಪ್ರಭಾವ ಎಂಬುದನ್ನು ಸಾಧಿಸಿವುದರೊಂದಿಗೆ ನವೋದಯ ಕಾವ್ಯದ ನಾಲ್ಕನೆಯ ಕೇಂದ್ರವಾಗಿ ಹಲಸಂಗಿಯನ್ನು ಗುರುತಿಸಿ ವಿಸ್ತøತವಾಗಿ ಅಧ್ಯಯನಕ್ಕೆ ಒಳಪಡಿಸಿದ ಡಾ. ಪ್ರಕಾಶ ಗ. ಖಾಡೆಯವರ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ’ ಸಂಶೋಧನ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ 2005 ರಲ್ಲಿ ಪಿಎಚ್.ಡಿ. ಪದವಿ ದೊರೆತಿದೆ. 2007 ರಲ್ಲಿ ಮಹಾ ಪ್ರಬಂಧ ಪ್ರಕಟವಾಗಿ 2010 ರಲ್ಲಿ ಪುನಃ ಮುದ್ರಣ ಕಂಡಿದೆ. ಜಾನಪದ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಡಾ. ಬಿ.ಎಂ.ಹೊಸಮನಿ ಅವರ ‘ವೇಷಗಾರರು ಒಂದು ಅಧ್ಯಯನ’, ಹುನಗುಂದ ಕಾಲೇಜಿನ ಡಾ. ತಿಪ್ಪೇಸ್ವಾಮಿ ಅವರ ‘ಬಳ್ಳಾರಿ ಜಿಲ್ಲೆಯ ಜನಪದ ಗೀತ ಸಂಪ್ರದಾಯಗಳು’, ಡಾ. ಶಂಕರ ಮಾದರ ಅವರ ‘ವಸತಿ ಜಾನಪದ’, ಜಮಖಂಡಿ ಕಾಲೇಜಿನ ಡಾ. ಸದಾಶಿವ ಸಜ್ಜನ ಅವರ ‘ಕ್ರಿಯಾತ್ಮಕ ಜಾನಪದ’, ಮುಧೋಳ ಕಾಲೇಜಿನ ಲಲಿತಾ ಎಂ. ಕಲ್ಯಾಣಶೆಟ್ಟಿ ಅವರ ‘ಜಿ. ಬಿ. ಖಾಡೆ ಸಂಕಲಿತ ಜನಪದ ಸಾಹಿತ್ಯ’ ಸಂಶೋಧನಾ ಪ್ರಬಂಧಗಳು ಗಮನಾರ್ಹವಾಗಿವೆ.
 
ಜಮಖಂಡಿ ಓಲೆಮಠದ ಡಾ. ಚನ್ನಬಸವ ಮಹಾಸ್ವಾಮಿಗಳ ‘ಮೊಗ್ಗೆಯ ಮಾಯಿದೇವ ಒಂದು ಅಧ್ಯಯನ’, ಗುಳೇದಗುಡ್ಡದ ಡಾ. ರಾಜಶೇಖರ ಬಸುಪಟ್ಟದ ಅವರ ‘ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಒಂದು ಅಧ್ಯಯನ’, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರ ‘ಬಸವೋತ್ತರ ಯುಗದ ವಚನ ಸಾಹಿತ್ಯ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧವು ವಚನಕಾರರ ಅಭಿವ್ಯಕ್ತಿ ವಿಧಾನವನ್ನು ಸಂಪ್ರದಾಯ ಮತ್ತು ಅನ್ವಯಿಕ ಹಿನ್ನೆಲೆಯಲ್ಲಿ ವಿಸ್ತøತವಾಗಿ ರೂಪಿಸಲಾಗಿದೆ.ಡಾ. ಬಸವರಾಜ ಹದ್ಲಿ ಅವರ ‘ಬಾಲಲೀಲಾ ಮಹಾಂತ ಶಿವಯೋಗಿಗಳು ಒಂದು ಅಧ್ಯಯನ’, ಡಾ. ಡಿ.ಎಸ್. ಬಾಗಲಕೋಟ ಅವರ ‘ಪ್ರಭುಲಿಂಗ ಲೀಲೆ ಒಂದು ಯೋಗಿಕ ಅಧ್ಯಯನ’, ಡಾ. ಬಿ.ಎಸ್. ಬಿರಾದಾರ ಅವರ ‘ವಚನ ಸಾಹಿತ್ಯ ಪ್ರಕಟಣೆ ಮತ್ತು ಅಧ್ಯಯನ ಪರಂಪರೆ’, ಡಾ. ಜಿ.ಆಯ್. ನಂದಿಕೋಲಮಠ ಅವರ ‘ಕರಸ್ಥಲ ಪರಂಪರೆ ಒಂದು ಅಧ್ಯಯನ ಹಾಗೂ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಬಾದಾಮಿ ತಾಲ್ಲೂಕು ನೀರಬೂದಿಹಾಳ ಗ್ರಾಮದವರಾಗಿರುವ ಡಾ. ಯ.ಮಾ.ಯಕೊಳ್ಳಿ ಹಾಗೂ ಅವರ ಪತ್ನಿ ಡಾ. ಪ್ರೇಮಾ ಯಾಕೊಳ್ಳಿ ಜಿಲ್ಲೆಯ ಅಪರೂಪದ ಡಾಕ್ಟರೇಟ ಪಡೆದ ದಂಪತಿಗಳಾಗಿದ್ದಾರೆ. ಡಾ. ಯ.ಮಾ.ಯಾಕೊಳ್ಳಿ ‘ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು’ ಕುರಿತು ಡಾ. ಪ್ರೇಮಾ ಯಾಕೊಳ್ಳಿ ‘ಕನ್ನಡದಲ್ಲಿ ಯುದ್ದೋತ್ತರ ಭಾರತ ಕಥೆ’ ಕುರಿತು ಜಿಲ್ಲೆಯ ಹಿರಿಯ ಸಂಶೋಧಕರಾದ ಡಾ. ಬಿ.ಆರ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಕೊಂಡು ಪದವಿ ಪಡೆದಿದ್ದಾರೆ. ಡಾ. ಸತ್ಯಾನಂದ ಪಾತ್ರೋಟ ಅವರ ‘ಬರಗೂರು ರಾಮಚಂದ್ರ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂದರ್ಭ’ ಕುರಿತ ಸಂಶೋಧನಾ ಪ್ರಬಂಧವು ‘ಭೂಮಿತತ್ವದ ಸೂತ್ರ’ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಡಾ. ಶಂಭು ಬಳಿಗಾರ ಅವರ ‘ಜೋಳದ ರಾಶಿ ದೊಡ್ಡನಗೌಡರು ಒಂದು ಅಧ್ಯಯನ’, ಡಾ. ಮೈನುದ್ದೀನ ರೇವಡಿಗಾರ ಅವರ ‘ಎನ್ಕೆ ಬದುಕು ಮತ್ತು ಸಾಹಿತ್ಯ ಒಂದು ಅಧ್ಯಯನ, ಡಾ|| ಸದಾನಂದ ಬಿಳ್ಳೂರ ಅವರ ‘ಕೆ.ಜಿ.ಕುಂದಣಗಾರ ಒಂದು ಅಧ್ಯಯನ’, ಡಾ. ಸಂಗಮೇಶ ಮಾಟೋಳ್ಳಿ ಅವರ ‘ದು.ನಿಂ.ಬೆಳಗಲಿ ಅವರ ಬದುಕು ಬರಹ ಒಂದು ಅಧ್ಯಯನ’, ಡಾ. ಮಹಾಂತೇಶ ಹೂಗಾರ ಅವರ ‘ಶಿವಕವಿ ಸಂಗಮೇಶ ಹೊಸಮನಿ ಒಂದು ಅಧ್ಯಯನ’, ಡಾ. ಎಸ್.ಜಿ.ಸಜ್ಜಲಗುಡ್ಡ ಅವರ ‘ಮುದೇನೂರ ಸಂಗಣ್ಣವರ ಬದುಕು ಬರಹ’ ಡಾ. ಸಣ್ಣ ಸಕ್ಕರಗೌಡರ ಅವರ ‘ಡಾ. ಬಿ.ವಿ.ಶಿರೂರ ಅವರ ಬದುಕು-ಬರಹ’ ಡಾ. ಮನೋಹರ ಪೂಜಾರ ಅವರ ‘ಈಶ್ವರ ಸಣಕಲ್ಲರ ಬದುಕು ಬರಹ’, ಡಾ. ಜಿ.ಕೆ. ಹಿರೇಮಠರ ‘ಮಹಾಜಂಗಮ’, ಸಂಶೋಧನಾ ಪ್ರಬಂಧಗಳು ನಾಡಿನ ಸಾಧಕರ ಬದುಕಿನ ವಿಸ್ತøತ ಅನಾವರಣ ಮಾಡಿವೆ. ಜಿಲ್ಲೆಯ ಹಿರಿಯ ಸಂಶೋಧಕರಲ್ಲಿ ಡಾ. ಸಂಗಮೇಶ ಬಿರಾದಾರ ಮುಖ್ಯರು. ‘ವೈಯಾಕರಣ ಎರಡನೆಯ ನಾಗವರ್ಮ’ ಇವರ ಸಂಶೋಧನಾ ಮಹಾಪ್ರಬಂಧ. ಕನ್ನಡ ವ್ಯಾಕರಣ ಮತ್ತು ಛಂದಸ್ಸು ಪ್ರಕಾರದಲ್ಲಿ ಈ ಪ್ರಬಂಧಕ್ಕೆ ಬಹುದೊಡ್ಡದಾದ ಸ್ಥಾನವಿದೆ. ಡಾ. ಬಿ.ಆರ್. ಹಿರೇಮಠ ಡಾ. ಎಂ.ಎಸ್.ಸುಂಕಾಪುರ, ಡಾ. ರಾ.ಯ. ಧಾರವಾಡಕರ, ಡಾ. ಸ.ಸ.ಮಾಳವಾಡ ಈ ಜಿಲ್ಲೆಯಿಂದ ಉದಯಿಸಿದ ಕನ್ನಡದ ಬಹುದೊಡ್ಡ ಸಂಶೋಧಕರು. ಡಾ. ಬಿ.ಕೆ. ಹಿರೇಮಠ ಅವರ ಹಸ್ತಪ್ರತಿಗಳಲ್ಲಿ ಚಿತ್ರಕಲೆ, ಡಾ. ಯಾದಪ್ಪ ಪರದೇಶಿ ಅವರ ಉತ್ತರ ಕರ್ನಾಟಕದಲ್ಲಿ ಭಿತ್ತಿ ಚಿತ್ರಕಲೆ ಡಾ. ಎಸ್.ಸಿ.ಪಾಟೀಲ ಅವರ ‘ಕರ್ನಾಟಕ ಜನಪದ ಚಿತ್ರಕಲೆ’, ಡಾ. ಶೀಲಾಕಾಂತ ಪತ್ತಾರ ಅವರ ‘ಬಾದಾಮಿ ಸಾಂಸ್ಕøತಿಕ ಪರಂಪರೆ’, ಡಾ. ಸಂಗಮೇಶ ಕಲ್ಯಾಣಿ ಅವರ ‘ಬಾಗಲಕೋಟ ಜಿಲ್ಲೆಯ ದೇಶಗತಿ ಮನೆತನಗಳು, ಡಾ. ಶಶಿಕಲಾ ಮೊರಬದ ಅವರ ‘ಜನಪ್ರಿಯ ಮಹಿಳಾ ಕಾದಂಬರಿಗಳು’, ಡಾ. ಸರೋಜಿನಿ ಪಾವಟೆ ಅವರ ‘ಬಾಗಲಕೋಟ ತಾಲೂಕು ಸಾಹಿತ್ಯ, ಸಾಂಸ್ಕøತಿಕ ಅಧ್ಯಯನ, ಡಾ. ಡಿ.ಎಸ್. ದೊಡಮನಿ ಅವರ ‘ಬಾಗಲಕೋಟ ಜಿಲ್ಲಾ ಸಾಹಿತ್ಯ ದರ್ಶನ’ ಡಾ. ಭೀಮನಗೌಡ ಪಾಟೀಲ ಅವರ ‘ಬಾಗಲಕೋಟ ಜಿಲ್ಲೆಯ ರಂಗಭೂಮಿ’ ಡಾ. ಆನಂದ ಪೂಜಾರ ಅವರ ‘ಕರಾವಳಿ ಕರ್ನಾಟಕದ ಕಾವಿ ಚಿತ್ರಕಲೆ, ಡಾ. ಸುರೇಶ ಇಂಗಳಗಿ ಅವರ ಪತ್ರಿಕೋದ್ಯಮಿಯಾಗಿ ಡಾ. ಫ.ಗು. ಹಳಿಕಟ್ಟಿ, ಡಾ. ನಂಜುಂಡಸ್ವಾಮಿ ಅವರ ‘ಮೈಸೂರು ಒಡೆಯರು ಒಂದು ಅಧ್ಯಯನ, ಡಾ. ಡಿ.ಜಿ.ಹಾಜವಗೋಳ ಹಾಗೂ ಡಾ. ಪಿ.ಕೆ. ಖಂಡೋಬಾ ಅವರ ಜನಾಂಗೀಯ ಅಧ್ಯಯನಗಳು, ಡಾ. ಆಶಾರಾಣಿ ಚಿನಗುಂಡಿ ಅವರ ‘ಪಾರಿಜಾತದ ಕೌಜಲಗಿ ನಿಂಗಮ್ಮ’ ಒಂದು ಅಧ್ಯಯನ, ಈ ಮೊದಲಾದವು ಜಿಲ್ಲೆಯ ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಡಾ. ಎಚ್.ಎಂ.ಕೈಲಾಸಲಿಂಗಂ, ಡಾ. ಜಿ. ವೀರಭದ್ರಗೌಡ, ಡಾ. ಸಂತೋಷಕುಮಾರಿ ಅಮೀನಗಡ, ಡಾ. ಪಿ.ಎಸ್.ಕಂದಗಲ್ಲ, ಡಾ. ಅನಸೂಯಾ ಕಾಂಬಳೆ, ಡಾ. ಅನಿತಾ ಗುಡಿ, ಡಾ. ಬಿ.ಬಿ.ಕಡ್ಲಿ, ಡಾ. ಎಂ.ಬಿ.ಒಂಟಿ, ಡಾ. ನಿಂಗಯ್ಯಾ ಒಡೆಯರ, ಡಾ. ಸವಿತಾ ಒಡೆಯರ ಈ ಮೊದಲಾದವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಜಿಲ್ಲೆಯ ಸಂಶೋಧನಾ ಕ್ಷೇತ್ರದ ಅಧ್ಯಯನ ಪ್ರಗತಿಯಲ್ಲಿದೆ, ಸಾಹಿತ್ಯ, ಸಾಂಸ್ಕøತಿಕ ಲೋಕದ ತಿಳುವಳಿಕೆಯನ್ನು ತಮ್ಮ ಅಪಾರ ಪರಿಶ್ರಮ, ಶ್ರದ್ಧೆ, ತಪಸ್ಸು ಹಾಗೂ ಶ್ರಮ ಸಂಸ್ಕøತಿಯಿಂದ ಕಟ್ಟಿಕೊಟ್ಟ ವಿದ್ವತ್ ವಲಯವನ್ನು ಈ ಮೂಲಕ ಅಭಿನಂದಿಸುತ್ತೇನೆ.-ಡಾ.ಪ್ರಕಾಶ ಗ.ಖಾಡೆ
ವಿನೋದ ಸಾಹಿತ್ಯ: ವಿನೋದ ಸಾಹಿತ್ಯಕ್ಕೆ ಬಾಗಲಕೋಟ ಜಿಲ್ಲೆಯ ಕೊಡುಗೆ ಅಪಾರ ರಾವ್ ಬಹಾದ್ದೂರ ಅವರ ಹಾಸ್ಯ ಲೇಖನಗಳು ಇಂದೂ ಕೂಡ ಓದುಗರನ್ನು ಸೆಳೆಯುತ್ತವೆ. ಹಿರಿಯ ಸಾಹಿತಿ ಕತೆಗಾರ ದು.ನಿಂ.ಬೆಳಗಲಿ ಕೂಡ ಹಾಸ್ಯ ಸಾಹಿತ್ಯ ರಚಿಸಿದ್ದಾರೆ. ರಾಮಪುರದ ಜಿ.ಎಸ್.ವಡಗಾಂವಿ ಹಾಸ್ಯದ ಹರಿಗೋಲು ಎಂಬ ಹಾಸ್ಯ ಸಂಕಲನ ಹೊರ ತಂದಿದ್ದಾರೆ. ಬನಹಟ್ಟಿಯ ಮಲ್ಲಿಕಾರ್ಜುನ ಹುಲಗಬಾಳಿ "ಟೊಂಯ್ ಟೊಂಯ್ ಮಾತುಗಳು" ಚಸ್ಮಾ ಚರಿಸ್ಮಾ, ಮುಂತಾದ ಹಾಸ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ನಿವ್ರತ್ತರಾಗಿದ್ದಾರೆ. ಹಾಸ್ಯ ಸಾಹಿತ್ಯಕ್ಕೆ ಹೆಸರಾದವರೆಂದರೆ ರಬಕವಿಯ ಯಶವಂತ ವಾಜಂತ್ರಿ, ಇವರ ಮೊದಲ ಕಥಾ ಸಂಕಲನ 'ಯಾವ ಜನ್ಮದ ಮೈತ್ರಿ' 1990 ರಲ್ಲಿ ಮುದ್ರಣವಾಯಿತು. 1993 ರಲ್ಲಿ" ಮದುವೆಯಾಗಿದೆ ಎಚ್ಚರಿಕೆ" 1995 ರಲ್ಲಿ ಬೋಳು ಸಲಹೆಗಳು, 2003 ರಲ್ಲಿ ಕೂದಲು ಮತ್ತು ಮರ್ಯಾದೆ, 2010ರಲ್ಲಿ "ಕನ್ಯಾನ್ವೇಷಣೆ" ಪ್ರಕಟವಾದ ಪುಸ್ತಕಗಳಾಗಿವೆ. ಧಾರವಾಡ ಆಕಾಶವಾಣಿ ಕೇಂದ್ರದಿಂದ 30 ಕ್ಕೂ ಹೆಚ್ಚು ಹಾಸ್ಯ(ಲಘು)ಭಾಷಣಗಳನ್ನು ಮಾಡಿದ್ದಾರೆ. ಬೆಂಗಳೂರು ದೂರ ದರ್ಶನ ಕೆಂದ್ರದಿಂದ ಇವರು ಬರೆದ ಕಥೆ "ಕೂದಲು ಮತ್ತು ಮರ್ಯಾದೆ" ಟೇಲಿ ಫಿಲ್ಮ ಆಗಿ ಟೇಲಿಕಾಸ್ಟ ಆಗಿದೆ.ಬೆಳಗು ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಉತ್ತಮ ಹಾಸ್ಯ ಭಾಷಣಕಾರರೂ ಆಗಿರುವ ಇವರು ಪತ್ರಕರ್ತರಾಗಿ, ಶಿಕ್ಷಕರಾಗಿ, ಜಮಖಂಡಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಜಾಗ್ರತಿ ಸಮೀತಿಯ ಸದಸ್ಯರಾಗಿ, ರಬಕವಿ ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ,ಬಾಗಲಕೋಟ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದ್ದರೆ.ಬಾಗಲಕೋಟ ಜಿಲ್ಲೆ ಎರಡು ದಶಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ನೋಟ.
 
<nowiki>*</nowiki>ಬಾಗಲಕೋಟ ಜಿಲ್ಲೆ ಎರಡು ದಶಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ನೋಟ(1997-2017).
ಡಾ.ಪ್ರಕಾಶ ಗ.ಖಾಡೆ
 
(ಇದೇ ಅಗಸ್ಟ್ 15,2017 .
Line ೮೧ ⟶ ೮೦:
ಹೊಸ ಜಿಲ್ಲೆ ರಚನೆಯಾಗಿ ಎರಡು ದಶಕಗಳು ಸಂದರೂ ಇಲ್ಲಿ ಸಾಹಿತ್ಯಿಕವಾಗಿ ಇನ್ನೂ ನಡೆಯಬೇಕಾದ ಕೆಲಸಗಳು ಸಾಕಷ್ಟಿವೆ.ಜಿಲ್ಲೆಯಲ್ಲಿ ಹುಟ್ಟಿ ನಾಡಿನಲ್ಲಿಯೇ ಹೆಸರಾಗಿದ್ದ ರಾ.ಯ.ಧಾರವಾಡಕರ,ಕೃಷ್ಣಮೂರ್ತಿ ಪುರಾಣಿಕ,ಡಾ.ಬಿ.ಎಸ್.ಗದ್ದಗಿಮಠ,ಬಿಂದು ಮಾಧವ ಕುಲಕರ್ಣಿ,ಶ್ಯಾಮ ಹುದ್ದಾರ,ಶಂಕರ ಕಟಗಿ ಅವರಂಥ ಗಣ್ಯ ಸಾಹಿತಿಗಳನ್ನು ಸ್ಮರಿಸುವ ಕೆಲಸಗಳಾಗಬೇಕು, ಹನಮಂತ ಹಾಲಿಗೇರಿ,ತಿರುಪತಿ ಭಂಗಿ,ಲಕ್ಷ್ಮಣ ಬದಾಮಿ,ಉಮೇಶ ತಿಮ್ಮಾಪುರ,ಕಲ್ಲೇಶ ಕುಂಬಾರ,ಸುರೇಖಾ ಕುಲಕರ್ಣಿ ಅವರಂಥ ಪ್ರಖರ ಯುವ ಕಥೆಗಾರರ ಕಥೆಗಳನ್ನು ಚಿತ್ರ,ಕಿರುಚಿತ್ರವಾಗಿ ರೂಪಿಸಬೇಕಾಗಿದೆ.ಜಿಲ್ಲೆಯ ಬೆಳಕಿಗೆ ಬಾರದ ತಳಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡಬೇಕಾಗಿದೆ,ಅಂತರ್ಜಾಲ ಮಾಧ್ಯಮದ ಮೂಲಕ ಜಿಲ್ಲೆಯ ಹಿರಿಯ ಮತ್ತು ಯುವ ಲೇಖಕರ ಸಾಹಿತ್ಯವನ್ನು ದಾಖಲಿಸಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿದೆ.ಈ ಕೆಲಸಗಳೂ ನಡೆದಷ್ಟೂ ಜಿಲ್ಲೆ ನಾಡಿನಲ್ಲಿಯೇ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ.
 
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ. 9845500890
 
<nowiki>*</nowiki> ವಿನೋದ ಸಾಹಿತ್ಯ
 
ವಿನೋದ ಸಾಹಿತ್ಯ: ವಿನೋದ ಸಾಹಿತ್ಯಕ್ಕೆ ಬಾಗಲಕೋಟ ಜಿಲ್ಲೆಯ ಕೊಡುಗೆ ಅಪಾರ ರಾವ್ ಬಹಾದ್ದೂರ ಅವರ ಹಾಸ್ಯ ಲೇಖನಗಳು ಇಂದೂ ಕೂಡ ಓದುಗರನ್ನು ಸೆಳೆಯುತ್ತವೆ. ಹಿರಿಯ ಸಾಹಿತಿ ಕತೆಗಾರ ದು.ನಿಂ.ಬೆಳಗಲಿ ಕೂಡ ಹಾಸ್ಯ ಸಾಹಿತ್ಯ ರಚಿಸಿದ್ದಾರೆ. ರಾಮಪುರದ ಜಿ.ಎಸ್.ವಡಗಾಂವಿ ಹಾಸ್ಯದ ಹರಿಗೋಲು ಎಂಬ ಹಾಸ್ಯ ಸಂಕಲನ ಹೊರ ತಂದಿದ್ದಾರೆ. ಬನಹಟ್ಟಿಯ ಮಲ್ಲಿಕಾರ್ಜುನ ಹುಲಗಬಾಳಿ "ಟೊಂಯ್ ಟೊಂಯ್ ಮಾತುಗಳು" ಚಸ್ಮಾ ಚರಿಸ್ಮಾ, ಮುಂತಾದ ಹಾಸ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ನಿವ್ರತ್ತರಾಗಿದ್ದಾರೆ. ಹಾಸ್ಯ ಸಾಹಿತ್ಯಕ್ಕೆ ಹೆಸರಾದವರೆಂದರೆ ರಬಕವಿಯ ಯಶವಂತ ವಾಜಂತ್ರಿ, ಇವರ ಮೊದಲ ಕಥಾ ಸಂಕಲನ 'ಯಾವ ಜನ್ಮದ ಮೈತ್ರಿ' 1990 ರಲ್ಲಿ ಮುದ್ರಣವಾಯಿತು. 1993 ರಲ್ಲಿ" ಮದುವೆಯಾಗಿದೆ ಎಚ್ಚರಿಕೆ" 1995 ರಲ್ಲಿ ಬೋಳು ಸಲಹೆಗಳು, 2003 ರಲ್ಲಿ ಕೂದಲು ಮತ್ತು ಮರ್ಯಾದೆ, 2010ರಲ್ಲಿ "ಕನ್ಯಾನ್ವೇಷಣೆ" ಪ್ರಕಟವಾದ ಪುಸ್ತಕಗಳಾಗಿವೆ. ಧಾರವಾಡ ಆಕಾಶವಾಣಿ ಕೇಂದ್ರದಿಂದ 30 ಕ್ಕೂ ಹೆಚ್ಚು ಹಾಸ್ಯ(ಲಘು)ಭಾಷಣಗಳನ್ನು ಮಾಡಿದ್ದಾರೆ. ಬೆಂಗಳೂರು ದೂರ ದರ್ಶನ ಕೆಂದ್ರದಿಂದ ಇವರು ಬರೆದ ಕಥೆ "ಕೂದಲು ಮತ್ತು ಮರ್ಯಾದೆ" ಟೇಲಿ ಫಿಲ್ಮ ಆಗಿ ಟೇಲಿಕಾಸ್ಟ ಆಗಿದೆ.ಬೆಳಗು ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಉತ್ತಮ ಹಾಸ್ಯ ಭಾಷಣಕಾರರೂ ಆಗಿರುವ ಇವರು ಪತ್ರಕರ್ತರಾಗಿ, ಶಿಕ್ಷಕರಾಗಿ, ಜಮಖಂಡಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಜಾಗ್ರತಿ ಸಮೀತಿಯ ಸದಸ್ಯರಾಗಿ, ರಬಕವಿ ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ,ಬಾಗಲಕೋಟ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದ್ದರೆ.ಬಾಗಲಕೋಟ ಜಿಲ್ಲೆ ಎರಡು ದಶಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ನೋಟ.ಮಾಡಿದ್ದಾರೆ
 
=='''ಇದನ್ನೂ ನೋಡಿ'''==
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ