ಉಪಾಧ್ಯಾಯರ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಉಪಾಧ್ಯಾಯರ ಶಿಕ್ಷಣ: ಶಿಕ್ಷಣವೃತ್ತಿಯಲ್ಲಿ ತನ್ನ ಕರ್ತವ್ಯಗಳನ್ನು ಪರಿಣಾಮಕ...
 
ಚು clean up, replaced: ಬೊಂಬಾಯಿ → ಮುಂಬಯಿ (2) using AWB
೧ ನೇ ಸಾಲು:
'''ಉಪಾಧ್ಯಾಯರ ಶಿಕ್ಷಣ''': ಶಿಕ್ಷಣವೃತ್ತಿಯಲ್ಲಿ ತನ್ನ ಕರ್ತವ್ಯಗಳನ್ನು ಪರಿಣಾಮಕಾರಿ ಯಾಗಿ ನಿರ್ವಹಿಸಲು ವ್ಯಕ್ತಿಯೊಬ್ಬನಿಗೆ ಸಾಧ್ಯವಾಗುವಂತೆ ಮಾಡಲು ರೂಪಿಸಿರುವ, ಔಪಚಾರಿಕ ಮತ್ತು ಅನೌಪಚಾರಿಕ ರೀತಿಯ ವಿವಿಧ ಅನುಭವಗಳನ್ನೂ ಚಟುವಟಿಕೆಗಳನ್ನೂ ಒಳಗೊಂಡ, ಕಾರ್ಯಕ್ರಮ ಎಂದರೆ ಅಭ್ಯರ್ಥಿಯನ್ನು ಶಿಕ್ಷಣವೃತ್ತಿಗೆ ಸಿದ್ಧಪಡಿಸುವುದಕ್ಕೂ ಆಗಲೇ ಶಿಕ್ಷಣವೃತ್ತಿಯಲ್ಲಿ ನಿರತರಾಗಿರತಕ್ಕ ಅಧ್ಯಾಪಕರಿಗೆ ಅಗತ್ಯವೆನಿಸುವ ವೃತ್ತಿಸಿದ್ಧತೆಯನ್ನು ದೊರಕಿಸುವುದಕ್ಕೂ ಅನಂತರ ಆ ಕೌಶಲದ ಬೆಳೆವಣಿಗೆಯನ್ನು ಸಾಧಿಸುವುದಕ್ಕೂ ವೃತ್ತಿ ಶಿಕ್ಷಣಸಂಸ್ಥೆ ವ್ಯವಸ್ಥೆಗೊಳಿಸಿರುವ ವಿಧ್ಯುಕ್ತವೆನಿಸುವ ಮತ್ತು ವಿಧ್ಯುಕ್ತವಲ್ಲದ ಎಲ್ಲ ಕಾರ್ಯಕ್ರಮಗಳು.
 
ಜನಾಂಗವೊಂದರ ಸಂಸ್ಕೃತಿಯನ್ನು ಅರಿಯಬೇಕಾದರೆ ಅಲ್ಲಿನ ಶಾಲೆಗೆ ಹೋಗಬೇಕು; ಆ ಜನಾಂಗದ ಭವಿಷ್ಯವನ್ನು ದರ್ಶಿಸಬೇಕಾದರೆ ಅಲ್ಲಿನ ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು - ಎಂದು ಹೇಳುವುದುಂಟು. ಅಂಥ ಕಾರ್ಯಕ್ರಮಗಳ ವಿನ್ಯಾಸವನ್ನು ರೂಪಿಸಿ ಕಾರ್ಯಾಚರಣೆಯನ್ನು ನಡೆಸುವವರು ಅಲ್ಲಿ ಕೆಲಸ ಮಾಡುತ್ತಿರುವ ಉಪಾಧ್ಯಾಯ ಉಪಾಧ್ಯಾಯಿನಿಯರು. ಆದ್ದರಿಂದ ಒಂದು ರಾಷ್ಟ್ರದ ಸಂಸ್ಕೃತಿ, ಅದರ ಭವಿಷ್ಯ ಮತ್ತು ಪುರೋಭಿವೃದ್ಧಿ ಬಹುಮಟ್ಟಿಗೆ ಆ ನಾಡಿನ ಅಧ್ಯಾಪಕರನ್ನು ಅವಲಂಬಿಸಿರುತ್ತದೆ. ಅಂಥ ಪ್ರಮುಖ ಕರ್ತವ್ಯದ ನಿರ್ವಹಣೆಗೆಂದು ನೇಮಕವಾಗುವ ವ್ಯಕ್ತಿಗಳು ಪಡೆಯುವ ವೃತ್ತಿಶಿಕ್ಷಣದ ಸಿದ್ಧಿ ಸಂಸ್ಕಾರಗಳು ಎಂಥ ಪ್ರಮುಖ ವಿಷಯವೆಂಬುದು ಇದರಿಂದ ಸ್ಪಷ್ಟಪಡುತ್ತದೆ.
೬ ನೇ ಸಾಲು:
ಗುರುಕುಲಗಳಿದ್ದ ಕಾಲದಲ್ಲಿ ವಿದ್ಯೆ ಮತ್ತು ಬೋಧನಕ್ರಮಗಳು ಗುರುವಿನಿಂದ ಶಿಷ್ಯರಿಗೆ, ಅವರಿಂದ ಇತರರಿಗೆ ಪಾಂಕ್ತವಾಗಿ ನಡೆದು ಬರುತ್ತಿತ್ತಾದರೂ ಅಧ್ಯಾಪಕರ ವೃತ್ತಿಶಿಕ್ಷಣದಲ್ಲಿ ಪ್ರಾಚೀನವೆನ್ನಬಹುದಾದ ಯಾವ ಪರಂಪರೆಯೂ ಇಲ್ಲ. ಅದು ಕೇವಲ ಎರಡು ಮೂರು ಶತಮಾನಗಳಿಂದ ಮಾತ್ರ ಪ್ರಚಾರಕ್ಕೆ ಬಂದಿರುವ ವಿಷಯ. 17ನೆಯ ಶತಮಾನದಲ್ಲಿ ಇಂಗ್ಲೆಂಡು ಮತ್ತು ಫ್ರಾನ್ಸ್‌ಗಳಲ್ಲಿ ಅಧ್ಯಾಪಕರ ವೃತ್ತಿಶಿಕ್ಷಣದ ಬಗ್ಗೆ ಆಸಕ್ತಿ ಆರಂಭವಾಯಿತೆನ್ನಬಹುದು. ಜರ್ಮನಿಯಲ್ಲಿ 19ನೆಯ ಶತಮಾನದ ಆರಂಭದಲ್ಲಿ ಶಿಕ್ಷಣವನ್ನು ಸಾಮಾಜಿಕ ಅಂಶವನ್ನಾಗಿ ಮಾಡಿ ಶಿಕ್ಷಣಕ್ಕಾಗಿ ರಾಷ್ಟ್ರವ್ಯಾಪಕ ಯೋಜನೆಯನ್ನು ತಯಾರಿಸು ವಾಗ ಅಧ್ಯಾಪಕರ ಶಿಕ್ಷಣಕ್ಕಾಗಿ ನಿರ್ದಿಷ್ಟ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಳ್ಳಲಾಯಿತು. ಜೊತೆಗೆ 1826ರಲ್ಲಿ ಅಧ್ಯಾಪಕರಾಗಿ ನೇಮಿಸಿಕೊಳ್ಳುವ ಮುನ್ನ ಒಂದು ವರ್ಷ ಕಾಲ ಪರೀಕ್ಷಾರ್ಥ ಬೋಧನೆ ಅಗತ್ಯವೆಂದು ಶಾಸನವಾಯಿತು. 1831ರಿಂದ ವೃತ್ತಿಶಿಕ್ಷಣ ಪಡೆಯುವು ದರ ಜೊತೆಗೆ ಅಧ್ಯಾಪಕರಾಗತಕ್ಕವರು ಬೋಧಿಸುವ ವಿಷಯದಲ್ಲೂ ಶಿಕ್ಷಣಶಾಸ್ತ್ರದಲ್ಲೂ ಪರೀಕ್ಷೆಯೊಂದಕ್ಕೆ ಕುಳಿತು ಉತ್ತೀರ್ಣರಾಗಬೇಕೆಂದೂ ನಿಯಮವಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಶತಮಾನದ ಮಧ್ಯಕಾಲದ ವೇಳೆಗೆ ಅಧ್ಯಾಪಕರಿಗೆ ವೃತ್ತಿ ಶಿಕ್ಷಣ ವೀಯಲು ನಾರ್ಮಲ್ ಸ್ಕೂಲುಗಳೆಂಬ ವಿಶಿಷ್ಟಸಂಸ್ಥೆಗಳು ಆರಂಭವಾದವು. ಇಂಗ್ಲೆಂಡಿನಲ್ಲಿ ಆ ಶತಮಾನದ ಆದಿಯಲ್ಲಿ ಪ್ರಚಾರಕ್ಕೆ ಬಂದ ಹಿರೇಮಣಿಗಳ ಬೋಧನಕ್ರಮ ಅಲ್ಲಿನ ಅಧ್ಯಾಪಕರ ವೃತ್ತಿ ಶಿಕ್ಷಣ ಪದ್ಧತಿಗೆ ಒಂದು ರೀತಿಯ ತಳಹದಿಯಾಯಿತೆನ್ನಬಹುದು. ಭಾರತದಲ್ಲಿ ಪ್ರಚಾರದಲ್ಲಿದ್ದ ಈ ಪದ್ಧತಿಯನ್ನು ಇಂಗ್ಲೆಂಡಿನ ಬೆಲ್ ಮತ್ತು ಲ್ಯಾಂಕ್ಯಾಸ್ಟರ್ ಎಂಬವರು ತಮ್ಮ ದೇಶಕ್ಕೆ ತಂದು ಪ್ರಚಾರ ಮಾಡಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಾಠವನ್ನು ತಾವು ತಮ್ಮ ಅಧ್ಯಾಪಕರಿಂದ ಕಲಿತಂತೆ ಬೋಧಿಸುತ್ತಿದ್ದ ಈ ಪದ್ಧತಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಜನಕ್ಕೆ ಶಿಕ್ಷಣವೀಯಲು ತುಂಬ ಅನುಕೂಲವಾಗಿ ತೋರಿತು. ಆದರೆ ಅದು ತನಕ ಕೇವಲ ಓದು ಬರಹ ಲೆಕ್ಕಾಚಾರಗಳನ್ನು ಮಾತ್ರ ಹೇಳಿಕೊಡುತ್ತಿದ್ದ ಶಾಲೆಗಳಲ್ಲಿ ಇತರ ವಿಷಯಗಳ ಬೋಧನೆಯೂ ಸೇರಿಕೊಂಡಿತು. ಅದಕ್ಕಾಗಿ ಅಧ್ಯಾಪಕರಾಗತಕ್ಕವರಿಗೆ ಮೂರರಿಂದ ಆರು ತಿಂಗಳ ಅವಧಿಯ ಒಂದು ರೀತಿಯ ವೃತ್ತಿಶಿಕ್ಷಣವನ್ನು ಲ್ಯಾಂಕ್ಯಾಸ್ಟರ್ ಆರಂಭಿಸಿದರು. ಅನಂತರ 1846ರಲ್ಲಿ ಆ ಶಿಕ್ಷಣದ ತಳಹದಿಯ ಮೇಲೆ ಬ್ಯಾಟರ್ಸೀ ಎಂಬ ಸ್ಥಳದಲ್ಲಿ ಕೇಯಿ ಷೆಟ್ಲ್‌ವರ್ತ್ ಎಂಬಾತ 18 ತಿಂಗಳ ಅವಧಿಯ ಅಧ್ಯಾಪಕರ ವೃತ್ತಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ. ಇದು ಮುಂದೆ ಆ ನಾಡಿನಲ್ಲಿ ಯಥೇಚ್ಛವಾಗಿ ಸ್ಥಾಪನೆಯಾದ ಎರಡು ವರ್ಷದ (ಈಗ ಮೂರು ವರ್ಷ) ಟ್ರೈನಿಂಗ್ ಕಾಲೇಜುಗಳಿಗೆ ಮಾದರಿಯಾಯಿತು.
 
ಭಾರತದಲ್ಲಿ ಅನೇಕ ವರ್ಷಗಳಿಂದಲೂ ಶಾಲೆಯ ಹಿರೇಮಣಿಗಳು ಕಿರಿಯರಿಗೆ ಪಾಠ ಹೇಳಿ ಅನುಭವಗಳಿಸುತ್ತಿದ್ದುದು ಒಂದು ರೀತಿಯ ವೃತ್ತಿಶಿಕ್ಷಣವೇ ಆಗಿತ್ತೆಂದು ಭಾವಿಸಬಹುದಾದರೂ ಆಧುನಿಕ ಸ್ವರೂಪದ ವೃತ್ತಿಶಿಕ್ಷಣ ಇಲ್ಲಿ ಆರಂಭವಾದದ್ದು ಕಳೆದ ಶತಮಾನದ ಮಧ್ಯಕಾಲದ ಅನಂತರವೇ. 19ನೆಯ ಶತಮಾನದ ಪೂರ್ವಾರ್ಧದಲ್ಲಿ ಕ್ರೈಸ್ತಪಾದ್ರಿಗಳು ಬಂಗಾಳ ಮತ್ತು ಬೊಂಬಾಯಿಮುಂಬಯಿ ಪ್ರಾಂತ್ಯಗಳಲ್ಲಿ ಅಧ್ಯಾಪಕರ ತರಬೇತಿ ಕೇಂದ್ರಗಳನ್ನು ತೆರೆದರು. ಮೊದಮೊದಲು ಅಲ್ಲಿ ಕೇವಲ ಕ್ರೈಸ್ತ ಅಧ್ಯಾಪಕರಿಗೆ ಮಾತ್ರ ತರಬೇತಿ ನೀಡುತ್ತಿದ್ದರೂ ಕ್ರಮೇಣ ಇತರರಿಗೂ ಅವಕಾಶ ಕಲ್ಪಿಸಿಕೊಟ್ಟರು. 1854ರಲ್ಲಿ ಈಸ್ಟ್‌ ಇಂಡಿಯ ಕಂಪನಿಯವರಿಗೆ ಭಾರತದ ಆಡಳಿತದ ಸನ್ನದನ್ನು ಮುಂದುವರಿಸುವಾಗ ಕಳಿಸಿದ ವುಡ್ಡರಪತ್ರದಲ್ಲಿ ಬ್ರಿಟಿಷ್ ಸರ್ಕಾರ ಇಲ್ಲಿ ವಿಸ್ತರಿಸುತ್ತಿದ್ದ ಶಿಕ್ಷಣ ಸೌಲಭ್ಯವನ್ನು ಉತ್ತಮ ಪಡಿಸಲು ಅಧ್ಯಾಪಕರ ತರಬೇತಿ ಕೇಂದ್ರಗಳನ್ನು ತೆರೆಯಬೇಕೆಂದು ಸೂಚಿಸಿತು. ಅಂದಿಗಾಗಲೇ ಇಂಗ್ಲೆಂಡಿನಲ್ಲಿ ಪ್ರಚಾರಕ್ಕೆ ಬಂದಿದ್ದ ವಿದ್ಯಾರ್ಥಿ - ಅಧ್ಯಾಪಕರ ಪದ್ಧತಿಯನ್ನೂ ಆಚರಣೆಗೆ ತರುವಂತೆ ಸಲಹೆ ಮಾಡಲಾಗಿತ್ತು. ಸಾಮಾನ್ಯ ಶಿಕ್ಷಣ ಮುಗಿಸಿ ಶಿಕ್ಷಕರಾಗ ಬಯಸುವ ಅಭ್ಯರ್ಥಿಗಳಿಗೆ ವೇತನವನ್ನು ನೀಡಿ ಒಂದು ವರ್ಷಕಾಲ ಪರೀಕ್ಷಾರ್ಥ ಬೋಧನೆಯನ್ನು ಒಂದು ಶಾಲೆಯಲ್ಲಿ ನಡೆಸಿದ ಮೇಲೆ ಸೂಕ್ತವೆಂದು ತೋರಿ ಬಂದರೆ ಅಂಥವರನ್ನು ತರಬೇತಿಗೆ ಆರಿಸಿಕೊಂಡು ಅದನ್ನು ಮುಗಿಸಿದ ಮೇಲೆ ಕೆಲಸಕ್ಕೆ ಸೇರಿಸಿಕೊಳ್ಳು ವುದು ಈ ಪದ್ಧತಿಯಲ್ಲಿ ವಾಡಿಕೆಯಲ್ಲಿತ್ತÄ. ಸ್ವಲ್ಪಕಾಲ ಈ ಪದ್ಧತಿ ಪ್ರಚಾರದಲ್ಲಿದ್ದರೂ ವಿಸ್ತರಿಸುತ್ತಿದ್ದ ಪ್ರಾಥಮಿಕ ಶಿಕ್ಷಣರಂಗಕ್ಕೆ ತಕ್ಕ ಷ್ಟು ಸೂಕ್ತ ರೀತಿಯಲ್ಲಿ ಶಿಕ್ಷಣ ಪಡೆದ ಅಧ್ಯಾಪಕರು ದೊರಕುವುದು ಕಷ್ಟವಾಗಿತ್ತು. ಅನಂತರ 1859ರಲ್ಲಿ ಕಂಪನಿಯಿಂದ ಆಡಳಿತ ಸೂತ್ರವನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಕಳಿಸಿದ ಪತ್ರವೊಂದರಲ್ಲಿ ವುಡ್ಡರ ಪತ್ರದಲ್ಲಿ ಸೂಚಿಸಿದ್ದ ಮೇಲಿನ ಸಲಹೆಯನ್ನು ನಿಧಾನವಿಲ್ಲದೆ ಕಾರ್ಯರೂಪಕ್ಕೆ ತರುವಂತೆ ಆಗ್ರಹದಿಂದ ಸೂಚಿಸಿತು. ಅದರ ಫಲವಾಗಿ ಕೂಡಲೇ ದೇಶದ ಅನೇಕ ಭಾಗಗಳಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರ ತರಬೇತಿಗಾಗಿ ನಾರ್ಮಲ್ ಸ್ಕೂಲುಗಳು ಆರಂಭವಾದವು. ಅಲ್ಲಿ ಅಧ್ಯಾಪಕ ವೃತ್ತಿಗೆ ಸೇರಬಯಸುವ ಅಭ್ಯರ್ಥಿಗಳಿಗೆ ಓದವುದು, ಬರೆಯುವುದು, ಲೆಕ್ಕ, ಚರಿತ್ರೆ, ಭೂಗೋಳ ಮತ್ತು ಬೋಧನಕಲೆ - ಈ ವಿಷಯಗಳಲ್ಲಿ ಶಿಕ್ಷಣವೀಯಲಾಗುತ್ತಿತ್ತು. ಅಲ್ಲಿ ನೀಡುತ್ತಿದ್ದ ಸಾಮಾನ್ಯ (ಸಾಂಸ್ಕೃತಿಕ) ಮತ್ತು ವೃತ್ತಿ ಸಂಬಂಧದ ಶಿಕ್ಷಣ ತೀರ ಕೆಳಮಟ್ಟದ್ದಾಗಿದ್ದರೂ ಬಹುಬೇಗ ಅವು ಜನಪ್ರಿಯವೆನಿಸಿದವು. 1882ರ ಹೊತ್ತಿಗೆ ದೇಶಾದ್ಯಂತ 106 ನಾರ್ಮಲ್ ಸ್ಕೂಲುಗಳು ಏರ್ಪಟ್ಟು ಅವುಗಳಲ್ಲಿ ಸುಮಾರು ನಾಲ್ಕು ಸಹಸ್ರ ಅಭ್ಯರ್ಥಿಗಳು ವೃತ್ತಿ ಶಿಕ್ಷಣ ಪಡೆಯುತ್ತಿದ್ದರು.
 
1882ರಲ್ಲಿ ಭಾರತ ಸರ್ಕಾರ ನೇಮಿಸಿದ ಶಿಕ್ಷಣ ಆಯೋಗ ಅಧ್ಯಾಪಕರ ತರಬೇತಿಯ ಬಗ್ಗೆ ಹೆಚ್ಚಿನ ಉತ್ಸಾಹ ತೋರಿತು. ಪ್ರಾಥಮಿಕ ಶಿಕ್ಷಣಕ್ಕೆ ಒದಗಿಸುವ ಹಣದಲ್ಲಿ ತಕ್ಕಷ್ಟನ್ನು ಮೊದಲು ಅಧ್ಯಾಪಕರ ತರಬೇತಿಗಾಗಿ ತೆಗೆದಿಡಬೇಕೆಂದು ಸಲಹೆ ಮಾಡಿತು. ಆ ಸಲಹೆಯನ್ನನುಸರಿಸಿ ನೂತನವಾಗಿ ಅನೇಕ ನಾರ್ಮಲ್ ಸ್ಕೂಲುಗಳು ಅಸ್ತಿತ್ವಕ್ಕೆ ಬಂದವು. ಅಧ್ಯಾಪಕರ ಸಿದ್ಧತೆಯ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಿತು. ಆ ವೇಳೆಗೆ ಪ್ರಾಥಮಿಕ ಶಿಕ್ಷಣಶಾಲೆಗಳು ಭರದಿಂದ ಹೆಚ್ಚ ತೊಡಗಿದವು. ಆ ಸುಮಾರಿಗೆ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಸರ್ಕಾರಗಳಿಗೆ ವಹಿಸಲಾಯಿತು. ಧನಬಲವಿಲ್ಲದ ಈ ನೂತನ ಆಡಳಿತಸಂಸ್ಥೆ ಅಧ್ಯಾಪಕರ ವೃತ್ತಿಶಿಕ್ಷಣದ ವ್ಯವಸ್ಥೆಯನ್ನು ಅಷ್ಟಾಗಿ ವಿಸ್ತರಿಸಲಿಲ್ಲ.
೧೫ ನೇ ಸಾಲು:
ಲಾರ್ಡ್ ಕರ್ಜನ್ನನ ನೇತೃತ್ವದಲ್ಲಿ ಈ ಶತಮಾನದ ಆದಿಯಿಂದ ಭಾರತೀಯ ಶಿಕ್ಷಣ ಪ್ರಗತಿಯ ತೀವ್ರ ವೇಗದ ನೂತನ ಯುಗವೊಂದಕ್ಕೆ ಕಾಲಿಟ್ಟಿತು. ಅಧ್ಯಾಪಕರ ತರಬೇತಿಯ ಬಗ್ಗೆ ಆತ ಹೆಚ್ಚಿನ ಆಸಕ್ತಿಯನ್ನೂ ಶ್ರದ್ಧೆಯನ್ನೂ ವ್ಯಕ್ತಪಡಿಸಿದ; ವಿಸ್ತರಿಸುತ್ತಿದ್ದ ಪ್ರಾಥಮಿಕ ಶಿಕ್ಷಣರಂಗಕ್ಕೆ ಅಧ್ಯಾಪಕರನ್ನೊದಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ನಾರ್ಮಲ್ ಸ್ಕೂಲ್ಗಳನ್ನು ಆರಂಭಿಸಲು ಕಾರ್ಯತಃ ನೆರವಾದ, ಬಹುಬೇಗ ತರಬೇತಿ ಕಾರ್ಯಕ್ರಮದ ಅವಧಿ ಒಂದರಿಂದ ಎರಡು ವರ್ಷಗಳಿಗೆ ಹೆಚ್ಚಿತು. 1922ರ ವೇಳೆಗೆ ಭಾರತದಲ್ಲಿ 1,072 ನಾರ್ಮಲ್ ಸ್ಕೂಲ್ಗಳೂ 27,000 ವಿದ್ಯಾರ್ಥಿಗಳೂ ಇದ್ದರು. ಅವರಲ್ಲಿ ಹತ್ತು ಸಹಸ್ರಕ್ಕೂ ಮಿಕ್ಕು ಮಹಿಳಾ ಅಭ್ಯರ್ಥಿಗಳು ವೃತ್ತಿ ಶಿಕ್ಷಣ ಪಡೆಯುತ್ತಿದ್ದರು. ಹಲವು ನಾರ್ಮಲ್ ಸ್ಕೂಲ್ಗಳೂ ಕೇವಲ ಅಪ್ಪರ್ ಪ್ರೈಮರಿ ತರಗತಿಗಳನ್ನು ಮುಗಿಸಿದ ಅಭ್ಯರ್ಥಿಗಳನ್ನು ತರಬೇತಿಗೆ ಸೇರಿಕೊಳ್ಳುತ್ತಿದ್ದವು. ಅವರಿಗೆ ಎರಡು ವರ್ಷಗಳ ಅವಧಿಯ ವೃತ್ತಿಸಿದ್ಧತೆ ಸಾಲದೆಂದು ಮೂರು ವರ್ಷಕ್ಕೆ ವಿಸ್ತರಿಸುವ ಯತ್ನವೂ ನಡೆಯುತ್ತಿತ್ತು.
 
ಭಾರತದ ಬೇರೆ ಬೇರೆ ಭಾಗಗಳಲ್ಲಿ ಪ್ರಾಥಮಿಕ ಶಿಕ್ಷಣ ತೀವ್ರ ವೇಗದಿಂದ ವಿಸ್ತರಿಸುತ್ತಿತ್ತು. ಅದಕ್ಕನುಕೂಲಿಸಲು ಅಧ್ಯಾಪಕರ ತರಬೇತಿ ಸಂಸ್ಥೆಗಳೂ ಹೆಚ್ಚಿದ್ದವು. ಆದರೆ ಅಲ್ಲಿ ಅವರಿಗೆ ದೊರಕುತ್ತಿದ್ದ ಶಿಕ್ಷಣ ಪರಿಣಾಮಕಾರಿಯಾಗಿರಲಿಲ್ಲ. ಆದ್ದರಿಂದ ಶಿಕ್ಷಣರಂಗ ವಿಸ್ತರಿಸಿದ್ದರೂ ಶಾಲೆಗಳಲ್ಲಿ ಶಿಕ್ಷಣದ ಮಟ್ಟ ತೀರ ಹಿಂದುಳಿದಿತ್ತು. ಆ ಸುಮಾರಿನಲ್ಲಿ ಎಂದರೆ 1928ರಲ್ಲಿ ನೇಮಕವಾದ ಹರ್ಟಾಗ್ ಶಿಕ್ಷಣ ಸಮಿತಿ ಈ ಅಂಶಗಳನ್ನು ತೀವ್ರವಾಗಿ ಟೀಕಿಸಿ ಪ್ರಾಥಮಿಕ ಶಿಕ್ಷಕರ ಶಿಕ್ಷಣ ಸೂಕ್ತವಾಗಿಲ್ಲ; ಅವರಿಗೆ ದೊರಕುವ ವೃತ್ತಿಶಿಕ್ಷಣ ಏನೇನೂ ಸಾಲದು ಅಲ್ಲದೆ ಪರಿಣಾಮಕಾರಿಯಾಗಿಯೂ ಇಲ್ಲ; ಹಾಗೂ ತಕ್ಕ ಪ್ರಮಾಣದಲ್ಲಿ ತರಬೇತಿ ಪಡೆದ ಅಧ್ಯಾಪಕರೂ ಇಲ್ಲ - ಎಂದು ಸೂಚಿಸಿ ಆ ಬಗ್ಗೆ ರಾಷ್ಟ್ರದ ಗಮನ ಸೆಳೆಯಿತು. ಆಗ ಪ್ರಾಥಮಿಕ ಶಾಲೆಗಳಲ್ಲಿ ಶೇ. 44 ತರಬೇತಿ ಪಡೆದ ಅಧ್ಯಾಪಕರು ಮಾತ್ರ ಇದ್ದರು.
 
ಶಿಕ್ಷಣದ ಮಟ್ಟವನ್ನು ಉತ್ತಮಪಡಿಸುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಸಂಸ್ಥೆಗಳನ್ನು ಆರಂಭಿಸಿದುದರ ಫಲವಾಗಿ ಶಾಲೆಗಳಲ್ಲಿ ತರಬೇತಿ ಪಡೆದ ಅಧ್ಯಾಪಕರ ಸಂಖ್ಯೆ 1937ರ ವೇಳೆಗೆ ಶೇ. 57 ಕ್ಕೇರಿತ್ತು.
ಲಾರ್ಡ್ ಕರ್ಝನ್ ಪ್ರೌಢಶಾಲೆಗಳ ಶಿಕ್ಷಣದ ಮಟ್ಟವನ್ನು ಉತ್ತಮಪಡಿಸಲು ಇಲ್ಲಿನ ಶಿಕ್ಷಕರ ತರಬೇತಿ ವ್ಯವಸ್ಥೆಯನ್ನು ವಿಸ್ತರಿಸಿ ಉತ್ತಮಪಡಿಸುವ ಕಡೆಯೂ ತಕ್ಕ ಷ್ಟು ಗಮನ ನೀಡಿದ್ದಲ್ಲದೆ ಶಿಕ್ಷಣವೃತ್ತಿಗೆ ಸಂಬಂಧಿಸಿದ ಜ್ಞಾನ ಮತ್ತು ಅಭ್ಯಾಸ ಎರಡೂ ಅಧ್ಯಾಪಕರಿಗೆ ಅಗತ್ಯವೆಂದು ಸೂಚಿಸಿ ತರಬೇತಿ ಸಂಸ್ಥೆಗಳು ಶಾಲೆಗಳೊಡನೆ ನಿಕಟ ಸಂಪರ್ಕ ಹೊಂದಿರುವು ದರ ಅಗತ್ಯವನ್ನು ತೋರಿಸಿಕೊಟ್ಟ. ಅವನ ಪ್ರೋತ್ಸಾಹದಿಂದ ಪ್ರೌಢಶಾಲೆಯ ಅಧ್ಯಾಪಕರ ತರಬೇತಿ ಸಂಸ್ಥೆಗಳು ಸಂಖ್ಯೆಯಲ್ಲಿ ಹೆಚ್ಚಿದವು. ಇತರ ತರಬೇತಿ ಕಾಲೇಜುಗಳಿಗೆ ಮಾದರಿ ಯಾಗುವಂಥ ಕಾಲೇಜುಗಳ ಆರಂಭಕ್ಕೂ ಆತ ಕಾರಣನಾದ. 1906ರಲ್ಲಿ ಬೊಂಬಾಯಿಯಲ್ಲಿಮುಂಬಯಿಯಲ್ಲಿ ಆರಂಭವಾದ ಸೆಕೆಂಡರಿ ಟ್ರೈನಿಂಗ್ ಕಾಲೇಜೂ 1908ರಲ್ಲಿ ಕಲ್ಕತ್ತದಲ್ಲಿ ಆರಂಭವಾದ ಡೇವಿಡ್ ಹೇರ್ ಟ್ರೈನಿಂಗ್ ಕಾಲೇಜೂ ಅವುಗಳಲ್ಲಿ ಮುಖ್ಯವಾದವು. ಅವೆಲ್ಲ ಉತ್ತಮ ಅಧ್ಯಾಪಕ ವರ್ಗವನ್ನೂ ಉಪಕರಣಾದಿ ವಸ್ತು ಸಂಪತ್ತನ್ನೂ ಪಡೆದಿದ್ದು ಪ್ರೌಢಶಾಲೆಯ ಅಧ್ಯಾಪಕರ ಶಿಕ್ಷಣದಲ್ಲಿ ಹೊಸ ಮಾದರಿಯನ್ನು ಹಾಕಿಕೊಟ್ಟವು.
 
ಈ ನಡುವೆ ಲಾರ್ಡ್ ಕರ್ಜನ್ ಎಲ್ಲ ಶಾಲೆಗಳೂ ಕೆಲವು ವರ್ಷಗಳೊಳಗಾಗಿ ವೃತ್ತಿ ಶಿಕ್ಷಣ ಪಡೆದ ಅಧ್ಯಾಪಕರನ್ನೇ ನೇಮಿಸಿಕೊಳ್ಳುವಂತಾಗಬೇಕು, ಅರ್ಹತೆಯ ಪ್ರಮಾಣಪತ್ರ ವಿಲ್ಲದವರಿಗೆ ಭೋಧಿಸುವ ಅವಕಾಶವಿರಬಾರದು - ಎಂದು ಅಧಿಕೃತವಾಗಿ ಸೂಚಿಸಿದ (1913). ಖಾಸಗಿ ಶಾಲೆಗಳೂ ಅಂಥ ವೃತ್ತಿಶಿಕ್ಷಣ ಪಡೆದವರನ್ನೇ ನೇಮಿಸಿಕೊಳ್ಳಲೆಂಬ ಉದ್ದೇಶದಿಂದ ತರಬೇತಿ ಸಂಸ್ಥೆಗಳನ್ನು ಏಕಪ್ರಕಾರವಾಗಿ ಹೆಚ್ಚಿಸಿದ. ಪ್ರಾಥಮಿಕ ಶಿಕ್ಷಣವನ್ನು ಅತಿಯಾಗಿ ಟೀಕಿಸಿದ ಹರ್ಟಾಗ್ ಸಮಿತಿ ಪ್ರೌಢಶಿಕ್ಷಣದ ನೂತನ ಸ್ಥಿತಿಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿತ್ತು.
೧೫೪ ನೇ ಸಾಲು:
 
==ಸ್ನಾತಕೋತ್ತರ ಶಿಕ್ಷಣ==
ವಿಸ್ತರಿಸುತ್ತಿರುವ ಶಿಕ್ಷಣದ ಆಡಳಿತ ಕ್ಷೇತ್ರಕ್ಕೂ ಸಂಖ್ಯೆಯಲ್ಲಿ 8 - 10 ಪಟ್ಟು ಹೆಚ್ಚಿರುವ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳಿಗೂ ತಜ್ಞರನ್ನೂ ಅಧ್ಯಾಪಕರನ್ನೂ ಒದಗಿಸುವ ಕಾರ್ಯ ಈಚೆಗೆ ರಾಷ್ಟ್ರದ ಗಮನವನ್ನು ಸೆಳೆದಿದೆ.
 
ಪ್ರೌಢಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳ ಅಧ್ಯಾಪಕರಲ್ಲಿ ಸುಮಾರು ಅರ್ಧದಷ್ಟು ಮಂದಿ ಕೇವಲ ಶಿಕ್ಷಣದ ಪ್ರಥಮ (ಬಿ.ಎಡ್.ಬಿ.ಟಿ. ಅಥವಾ ಎಲ್.ಟಿ) ಪದವಿಯನ್ನು ಮಾತ್ರ ಪಡೆದಿರುತ್ತಾರೆ. ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿಶಿಕ್ಷಣಸಂಸ್ಥೆಗಳ ಅಧ್ಯಾಪಕರಲ್ಲಿ ಸಾಮಾನ್ಯವಾಗಿ ಬಿ.ಎಡ್. ಪದವಿ ಪಡೆದಿದ್ದರೂ ಪ್ರಾಥಮಿಕ ಶಿಕ್ಷಕರ ತರಬೇತಿಯಲ್ಲಿ ವಿಶಿಷ್ಟ ಶಿಕ್ಷಣ ಪಡೆದವರು ಅಪೂರ್ವ, ಶಿಕ್ಷಣಕ್ಷೇತ್ರದಲ್ಲಿ ನೂತನ ರೀತಿಯ ವಿವಿಧ ಕಾರ್ಯಾಚರಣೆಗಳು ಆರಂಭವಾಗಿವೆ. ಅವನ್ನು ನಿರ್ವಹಿಸಲು ಶಿಕ್ಷಣಾಧಿಕಾರಿಗಳೂ ಅಧ್ಯಾಪಕರೂ ಸಿದ್ಧತೆ ಪಡೆದಿರಬೇಕು. ಆದ್ದರಿಂದ ಅಧ್ಯಾಪಕರ ಶಿಕ್ಷಕರೂ ಇತರ ಶಿಕ್ಷಣಾಧಿಕಾರಿಗಳೂ ಬುದ್ಧಿಪರೀಕ್ಷಣ ಮತ್ತು ಮಾಪನ, ಬೆಳೆವಣಿಗೆಯ ಮನೋವಿಜ್ಞಾನ, ಶಿಕ್ಷಣತತ್ತ್ವಶಾಸ್ತ್ರ, ಶೈಕ್ಷಣಿಕ ಸಂಶೋಧನೆ, ಶೈಕ್ಷಣಿಕ ಸಮಾಜ ವಿಜ್ಞಾನ, ಶಿಕ್ಷಣದ ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ವಿಶೇಷ ಶಿಕ್ಷಣ ಪಡೆದಿರುವುದು ಅಗತ್ಯ.
೧೭೪ ನೇ ಸಾಲು:
ವೃತ್ತಿನಿರತ ಅಧ್ಯಾಪಕರ ತರಬೇತಿಯ ಉದ್ದೇಶಗಳಲ್ಲಿ 1. ಉಪಾಧ್ಯಾಯರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಎದುರಿಸಬೇಕಾದ ಸಮಸ್ಯೆಗಳನ್ನು ಬಿಡಿಸಲು ಸಹಾಯಮಾಡುವುದು; 2. ದೇಶ ಹಾಗೂ ವಿದೇಶಗಳ ಶಿಕ್ಷಣಕ್ಷೇತ್ರಗಳಲ್ಲಿ ಆದ ಸುಧಾರಣೆಗಳ ಪರಿಚಯ ಮಾಡಿಕೊಂಡು ಅವುಗಳನ್ನು ತಮ್ಮ ಶಾಲೆಗಳಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಹೇಗೆ ಅಳವಡಿಕೊಂಡು ಅನುಷ್ಠಾನಕ್ಕೆ ತರಬಹುದೆಂಬುದನ್ನು ಮನದಟ್ಟು ಮಾಡಿಕೊಡುವುದು; 3. ತಮ್ಮ ತಮ್ಮ ಐಚ್ಛಿಕ ವಿಷಯಗಳಲ್ಲಿ ಆಳವಾದ ಅಭ್ಯಾಸ ಮಾಡಿ ಆ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಸಂಶೋಧನೆಗಳನ್ನು ತಿಳಿದುಕೊಂಡು ಅವುಗಳಲ್ಲಿ ಬೇಕಾದವುಗಳನ್ನು ತಮ್ಮ ಶಾಲೆಯ ಶಿಕ್ಷಣಕ್ರಮದಲ್ಲಿ ಅಳವಡಿಸಿಕೊಳ್ಳಲು ನೆರವಾಗುವುದು-ಇವು ಮುಖ್ಯವಾದ ಅಂಶಗಳು.
 
ಭಾರತದಲ್ಲಿ ಕೇಂದ್ರ ಶಿಕ್ಷಣಶಾಲೆ 1961ರಲ್ಲಿ ಸ್ವಯಮಾಧಿಕಾರವುಳ್ಳ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿಮಂಡಲವನ್ನು (ಎನ್.ಸಿ.ಇ.ಆರ್.ಟಿ.) ಸಂಘಟಿಸಿತು. ಈ ಸಂಸ್ಥೆ ತನ್ನ ಅಧಿಕಾರ ಕ್ಷೇತ್ರಕ್ಕೆ ಸೇರಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ನಿನ ಮೂಲಕ ಉಚ್ಚ ಶಿಕ್ಷಣವನ್ನುಳಿದು ಶಿಕ್ಷಣದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದೆ. ಇದರ ಅಂಗ ಸಂಸ್ಥೆಗಳಲ್ಲಿ 1. ಶಿಕ್ಷಕರ ತರಬೇತಿ ವಿಭಾಗ, 2. ಕೇಂದ್ರ ಶಿಕ್ಷಣಸಂಸ್ಥೆ,
 
3. ರಾಷ್ಟ್ರೀಯ ಮೂಲ ಶಿಕ್ಷಣಸಂಸ್ಥೆ, 4. ಡೈರೆಕ್ಟರೇಟ್ ಆಫ್ ಫೀಲ್ಡ್‌ ಸರ್ವಿಸಸ್,
೧೮೮ ನೇ ಸಾಲು:
 
ವೃತ್ತಿನಿರತ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಾಪಕರಿಗೆ ಅಗತ್ಯವಿರುವಂತೆ ಅಧ್ಯಾಪಕರ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ-ಶಿಕ್ಷಕರಿಗೂ (ಟೀಚರ್ ಎಜುಕೇಟರ್ಸ್‌) ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಣಾಧಿಕಾರಿಗಳಿಗೂ ಅಗತ್ಯವೆನಿಸುತ್ತದೆ. ಈಚೆಗೆ ಅಂಥ ಸೌಲಭ್ಯಗಳನ್ನು ಒದಗಿಸಲು ವಿಶ್ವವಿದ್ಯಾನಿಲಯಗಳೂ ರಾಜ್ಯ ಶಿಕ್ಷಣಶಾಖೆ ಯವರೂ ದೆಹಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್.ಸಿ.ಇ.ಆರ್.ಟಿ.) ಸಂಸ್ಥೆಯವರೂ ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆರಂಭಿಸಿರು ವರು. ನಡೆಯುತ್ತಿವೆ. ಎಲ್ಲ ರಾಜ್ಯಗಳಲ್ಲೂ ಈ ಕಾರ್ಯಕ್ರಮಗಳು ವ್ಯವಸ್ಥಿತರೂಪದಲ್ಲಿ ನಡೆದರೆ ಒಳ್ಳೆಯದು. (ಎಂ.ಎಚ್.ಎನ್.)
 
 
 
==ಉಲ್ಲೇಖಗಳು==
"https://kn.wikipedia.org/wiki/ಉಪಾಧ್ಯಾಯರ_ಶಿಕ್ಷಣ" ಇಂದ ಪಡೆಯಲ್ಪಟ್ಟಿದೆ