ಸದಸ್ಯ:Navamadi.s/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Francis Crick crop.jpg|thumb|ಫ್ರಾನ್ಸಿಸ್ ಕ್ರಿಕ್|frame|325x325px]]
 
== ಫ್ರಾನ್ಸಿಸ್ ಕ್ರಿಕ್ ==
೧೮ ನೇ ಸಾಲು:
ಅಣ್ವಯಿಕ ಜೀವಶಾಸ್ತ್ರ ಹೆಸರಿನ ಶಾಖೆಯ ಬೆಳವಣಿಗೆಯೊಂದಿಗೆ ಇಪ್ಪತ್ತನೇ ಶತಮಾನದಲ್ಲಿ ಆರಂಭ ಕಂಡ ಜೀವ ವಿಜ್ಞಾನ ದಾಪುಗಾಲಿಕ್ಕಿ ಮುಂದಕ್ಕೆ ಸಾಗುತ್ತಿದೆ. ಈ ಶಾಖೆಯಲ್ಲಿನ ಮೂಲ, ಕೇಂದ್ರಿಯ ಪರಿಕಲ್ಪನೆಗಳ ಅನ್ವೇಷಣೆ, ಅನಾವರಣಗಳ ದ್ರಷ್ಟಾರರು ಕ್ರಿಕ್ ಹಾಗೂ ವ್ಯಾಟ್ಸನ್. ಜೀವ ಸೃಷ್ಟಿಯಲ್ಲಿ ಸ್ವಯಂ-ನಕಲಾಗುವ ವಂಶವಾಹಕದ (Genetic) ಸಾಮಾಗ್ರಿಯಾದ ಡಿಎನ್‍ಎ ಎರಡು ಸರ್ಪಿಲಗಳ (Helix) ರೀತಿಯಲ್ಲಿದ್ದು, ಅಡ್ಡಲಾಗಿ ಎಳೆಗಳಿಂದ ಬಂಧಿಸಲ್ಪಟ್ಟಿವೆಯೆಂದು ಕಂಡು ಹಿಡಿದು , ಕ್ರಾಂತಿಕಾರಕ ಬದಲಾವಣೆ ತಂದ ಕ್ರಿಕ್ ಲಂಡನ್‍ನಲ್ಲಿ ಭೌತಶಾಸ್ತ್ರದ ಪದವಿ ಗಳಿಸಿದನು. ಕ್ರಿಕ್ ಆರಂಭಿಕ ಸಂಶೋಧನೆಗಳಿಗೆ ಜಾಗತಿಕ ಯುದ್ದ ಅಡಚಣೆಯಾಯಿತು. ಯುದ್ದ ಕಾಲದಲ್ಲಿ ನೌಕಾಪಡೆಯಲ್ಲಿ ಕ್ರಿಕ್ ಸೇವೆ ಸಲ್ಲಿಸಿದನು. ಯುದ್ದದ ನಂತರ ಜೀವಶಾಸ್ತ್ರದತ್ತ ಆಸಕ್ತಿ ತಳೆದ ಕ್ರಿಕ್ 1949ರಲ್ಲಿ ಕೇಂಬ್ರಿಜ್‍ನ ವೈದ್ಯಕೀಯ ಸಂಶೋಧನಾ ಘಟಕ ಸೇರಿದನು. ಬ್ರಾಗ್ ನಿಂದ ಆರಂಭಿಸಲ್ಪಟ್ಟ ಕ್ಷ-ಕಿರಣ ವಿವರ್ತನ (X-ray Diffraction) ವಿಧಾನಗಳಲ್ಲಿ ನೈಪುಣ್ಯಗಳಿಸಿದ ಕ್ರಿಕ್ , ಅದನ್ನು ಬೈಜಿಕ-ಬಹ್ವಂಗಿಗಳ (Bio-polymer) ರಾಚನಿಕ ಸ್ವರೂಪ ಅರಿಯಲು ಬಳಸಿದನು. ಈ ಕಾಲದಲ್ಲಿ ಬ್ರಾಗ್, ಕ್ಯಾವೆಂಡಿಷ್ ಪ್ರಯೋಗಾಲಯದ ಮುಖ್ಯಸ್ಥನಾಗಿದ್ದನು. 1950ರಲ್ಲಿ ಬ್ರಾಗ್‍ನಿಂದ ಉತ್ತೇಜಿತರಾದ, ಷೆರುಟ್ಜ್ .ಜೆ.ಸಿ. ಕೆಂಡ್ರ್ಯೂ, ವ್ಯಾಟ್ಸನ್, ಎಚ್.ಇ.ಹಕ್ಸ್ಲೆ ಕ್ರಿಕ್ ಹಾಗೂ ಮುಂದೆ ಬ್ರೆನ್ನೆರ್ ಅಣ್ವಯಿಕ ಜೀವಶಾಸ್ತ್ರದಲ್ಲಿ, ಜೀವ ದ್ರವ್ಯಗಳ ರಾಚನಿಕ ವಿಧಾನ ಕಂಡು ಹಿಡಿಯುವಲ್ಲಿ ಜಗತ್ತಿಗೇ ಅಗ್ರಗಾಮಿಗಳಾದರು. ಇದೇ ಪ್ರಯೋಗಾಲಯದಲ್ಲಿ ಬ್ರಾಗ್ ಸ್ಥಾನವನ್ನು ಅಲಂಕರಿಸಿದ್ದ ರುದರ್’ಫೋರ್ಡ್ ಇಪ್ಪತ್ತು ವರ್ಷಗಳ ಹಿಂದೆ ಕಣ ಭೌತಶಾಸ್ತ್ರಕ್ಕೆ ಇದೇ ಚಾಲನೆ ಹಾಗೂ ಮುನ್ನಡೆಯನ್ನು ಒದಗಿಸಿದ್ದುದು ಚಾರಿತ್ರಿಕವಾಗಿ ಗಮನಾರ್ಹ.
 
 
[[ಚಿತ್ರ:A-B-Z-DNA Side View.png|frame|324x324px|ಡಿಎನ್ಎ ರಚನೆ]]
 
===೧೯೫೧-೧೯೫೩:ಡಿಎನ್ಎ ರಚನೆ===