ಅವೊಗಾಡ್ರೋ ಸಂಖ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಸಣ್ಣ ತಿದ್ದುಪಡಿ
ಚು →‎ಇತಿಹಾಸ: ಲಿಂಕ್
೩ ನೇ ಸಾಲು:
ಅವೊಗಾಡ್ರೋ ಸಂಖ್ಯೆಯ ಇತಿಹಾಸ ಅವೊಗಾಡ್ರೋ ನಿಯಮದ ಇತಿಹಾಸದೊಂದಿಗೆ ಬೆಸೆದು ಕೊಂಡಿದೆ. [[ಅಮೆಡಿಯೋ ಅವೊಗಾಡ್ರೋ]] ಒಂದೇ ತಾಪಮಾನ ಮತ್ತು ಒತ್ತಡದಲ್ಲಿ ಅನಿಲದ ಘನಗಾತ್ರದಲ್ಲಿನ (ವಾಲ್ಯೂಮ್) ಕಣಗಳ ಸಂಖ್ಯೆ ನೇರ ಅನುಪಾತದಲ್ಲಿರುತ್ತದೆ ಎಂದು ಹೇಳಿದ. ಇದು [[ಅವೊಗಾಡ್ರೋ ನಿಯಮ]] ಎಂದು ಪ್ರಸಿದ್ಧಿ ಪಡಿದಿದೆ. ಮುಂದೆ 1909ರಲ್ಲಿ ಜೀನ್ ಪೆರ್ರಿನ್ ಈ ಸಂಖ್ಯೆಯನ್ನು ಅವೊಗಾಡ್ರೋ ನೆನಪಿನಲ್ಲಿ ಅವೊಗಾಡ್ರೋ ಸಂಖ್ಯೆ ಎಂದು ಕರೆಯಲು ಸೂಚಿಸಿದ.<ref>Perrin, Jean (1909). "Mouvement brownien et réalité moléculaire". Annales de Chimie et de Physique. 8e Série. 18: 1–114. Extract in English, translation by Frederick Soddy, From Wikipedia English [[w:Avogadro constant|Avogadro Constant]]</ref> ಜೀನ್ ಪೆರ್ರಿನ್ ತನ್ನ ಪ್ರಯೋಗದಲ್ಲಿ ಕಂಭೋಜ ಮರದ ಅಂಟುರಾಳಗಳಿಂದ ಪಡೆದ ಬ್ರೌನಿಯನ್ ಚಲನೆಯನ್ನು ಅಳೆದ. ಈ ಮೂಲಕ ಅವನು ಐನ್‌ಸ್ಟೀನ್ ಸಿದ್ಧಾಂತಕ್ಕೆ ಪ್ರಾಯೋಗಿಕ ಪುರಾವೆ ಒದಗಿಸಿದ.ಅಲ್ಲದೆ ಅವೊಗಾಡ್ರೋ ಸಂಖ್ಯೆಯನ್ನು ಪಡೆದ ಮತ್ತು ಅಣುಗಳ ಇರುವಿಕೆಗೆ ಸಾಕ್ಷಿ ಒದಗಿಸಿದ. ಈ ಪ್ರಯೋಗಕ್ಕೆ 1926ರಲ್ಲಿ ಅವನಿಗೆ [[ನೊಬೆಲ್ ಪ್ರಶಸ್ತಿ|ನೋಬೆಲ್ ಪ್ರಶಸ್ತಿ]] ಲಭಿಸಿತು.<ref>[https://www.nobelprize.org/nobel_prizes/physics/laureates/1926/press.html Award Ceremony Speech], Nobelprize.org, retrieved 25-01-2017</ref>
 
ಹೆಚ್ಚು ಖಚಿತವಾದ ಅವೊಗಾಡ್ರೋ ಸಂಖ್ಯೆಯನ್ನು ಮಿಲ್ಲಿಕಾನ್‌ನ ಪ್ರಯೋಗದ ನಂತರ ಪಡೆಯಲಾಯಿತು. ರಾಬರ್ಟ್ ಎ. ಮಿಲ್ಲಿಕಾನ್ ಎಲೆಕ್ಟ್ರಾನ್ ಆವೇಶ (ಚಾರ್ಜ್)ವನ್ನು ನೇರವಾಗಿ ಅಳೆಯುವ ಎಣ್ಣೆಯ ಹನಿ ಪ್ರಯೋಗವನ್ನು 1909ರಲ್ಲಿ ರೂಪಿಸಿದ. ಈ ಪ್ರಯೋಗದಲ್ಲಿ ಎಣ್ಣೆಯ ಸಣ್ಣ ಹನಿಗಳನ್ನು ವಿಕಿರಣಗಳ ಮೂಲಕ (ಉದಾಹರಣೆಗೆ [[ಕ್ಷ-ಕಿರಣ|ಎಕ್ಸ್-ರೇ]]) [[ಅಯಾನು|ಅಯಾನೀಕರಿಸಿದ]] ಮತ್ತು ಒಂದು ಹನಿ ಎಷ್ಟು ವೇಗವಾಗಿ ಕೆಳಬೀಳುತ್ತದೆ ಎಂಬುದನ್ನು ಗುರುತಿಸುವ ಮೂಲಕ ಅದರ ದ್ರವ್ಯರಾಶಿಯನ್ನು ಪಡೆಯಬಹುದು. ಹಲವು ಸಲ ಈ ಪ್ರಯೋಗವನ್ನು ಮರುಕಳಿಸಿ ಎಣ್ಣೆಯ ಸಣ್ಣಹನಿಗಳ ಆವೇಶವು ಕನಿಷ್ಠ ಆವೇಶದ ಪೂರ್ಣಾಂಕಗಳಲ್ಲಿ ಇರುತ್ತದೆ ಎಂದು ಗುರುತಿಸಿದ. ಹೀಗೆ [[ಎಲೆಕ್ಟ್ರಾನ್|ಎಲೆಕ್ಟ್ರಾನ್‌ನ]] ಕನಿಷ್ಠ ಆವೇಶವನ್ನು ಪತ್ತೆಹಚ್ಚಲಾಯಿತು. ಇದಕ್ಕೆ ಅವನಿಗೆ 1922ರಲ್ಲಿ ನೋಬೆಲ್ ಬಹುಮಾನ ಲಭ್ಯವಾಯಿತು.<ref>[http://vlab.amrita.edu/?sub=1&brch=195&sim=357&cnt=1 Millikan's oil drop experiment], retrived 25-01-2017</ref><ref>[https://www.britannica.com/science/Millikan-oil-drop-experiment Millikan oil-drop experiment], Physics, Encyclopedia Britannica, retrived 25-01-2017</ref> ಈ ಪ್ರಯೋಗಕ್ಕೂ ಬಹುಮುಂಚೆಯೇ 1833ರಲ್ಲಿ [[ಮೈಕೇಲ್ ಫ್ಯಾರಡೆ|ಫ್ಯಾರಡೆ]] ತಾಮ್ರ ಸಲ್ಪೇಟ್ ದ್ರಾವಣದ ಮೂಲಕ ವಿದ್ಯುತ್ ಹರಿಸಿದಾಗ ಕ್ಯಾಥೋಡ್ ಅಥವಾ ರುಣದ್ವಾರದಲ್ಲಿ ಶೇಕರವಾದ [[ತಾಮ್ರ|ತಾಮ್ರವು]] ಹರಿಸಿದ ವಿದ್ಯುತ್‌ನ ಬಲ ಮತ್ತು ಅದು ಹರಿಸಿದ ಸಮಯದ ಅನುಪಾತದಲ್ಲಿರುತ್ತದೆ ಎಂದು ತೋರಿಸಿಕೊಟ್ಟಿದ್ದ. ಹೀಗಾಗಿ [[ಫ್ಯಾರಡೆ ನಿಯತಾಂಕ|ಫ್ಯಾರಡೆ ನಿಯತಾಂಕವೆಂದರೆ]] ಒಂದು [[ಮೋಲ್]] [[ಎಲೆಕ್ಟ್ರಾನ್|ಎಲೆಕ್ಟ್ರಾನಿನಲ್ಲಿರುವ]] ಅಥವಾ ಒಂದು ಮೋಲ್‌ ವೇಲನ್ಸಿಯ ಅಯಾನಿನಲ್ಲಿರುವ ವಿದ್ಯುತ್ ಆವೇಶ (ಚಾರ್ಜ್) ಮತ್ತು ಇದನ್ನು ಎಲೆಕ್ಟ್ರಾನ್‌ ಚಾರ್ಜ್ ಮತ್ತು ಅವೊಗಾಡ್ರೋ ಸಂಖ್ಯೆಯ ಗುಣಲಬ್ಧವಾಗಿಯೂ ತೋರಿಸ ಬಹುದು.<ref>[https://sizes.com/units/faraday.htm faraday], retrived 25-01-2017</ref><ref>[http://en.citizendium.org/wiki/Faraday_constant Faraday constant], Citizendium, retrived 25-01-2017</ref> ಹೀಗಾಗಿ ಫ್ಯಾರಡೆ ನಿಯತಾಂಕ ಮತ್ತು ಎಲೆಕ್ಟ್ರಾನ್ ಒಂದರ ಆವೇಶ ತಿಳಿದಿದ್ದಲ್ಲಿ ಅವೊಗಾಡ್ರೋ ಸಂಖ್ಯೆಯನ್ನು ಪಡೆಯಬಹುದು. ಗಣಿತೀಯವಾಗಿ ಇದನ್ನು ಹೀಗೆ ತೋರಿಸಬಹುದು:
<div style="font-size: 60%">:<math>N_{\rm A} = \frac{F}{e}</math></div>
ಇಲ್ಲಿ ‌''N<sub>A</sub>'' ‌ಅವೊಗಾಡ್ರೋ ಸಂಖ್ಯೆಯನ್ನೂ; ''F'' ಫ್ಯಾರಡೆ ನಿಯತಾಂಕವನ್ನೂ ಮತ್ತು ''e'' ಎಲೆಕ್ಟ್ರಾನಿನ ಆವೇಶ (ಚಾರ್ಜ್) ತೋರುತ್ತವೆ.
 
==ಇಂದಿನ ವಿಜ್ಞಾನದಲ್ಲಿ==
ವಾಸ್ತವದಲ್ಲಿ ಅವೊಗಾಡ್ರೋ ಸಂಖ್ಯೆಯು ನಮಗೆ ಕಾಣುವಂತಹ ಪ್ರಪಂಚವನ್ನು ಅತಿಸೂಕ್ಷ್ಮ ಕಾಣದ ಅಣು, ಪರಮಾಣು ಪ್ರಪಂಚದೊಂದಿಗೆ ಬೆಸೆಯುತ್ತದೆ.{ರೆ 03} ಅವೊಗಾಡ್ರೋ ಸಂಖ್ಯೆಯ ವಾಸ್ತವ ಬೆಲೆಯನ್ನು ಕೋಡಾಟ ನಾಲ್ಕುವರುಷಗಳಿಗೊಮ್ಮೆ ನಿರ್ಣಯಿಸುತ್ತದೆ. ಇದರ ಸದ್ಯದ ಬೆಲೆ 6.022&nbsp;140&nbsp;857(74)×10<sup>23</sup>.<ref>ಆವರಣದಲ್ಲಿನ ಬೆಲೆಯು ಅನಿಶ್ಚಯತೆಯ ಸೂಚನೆ ನೀಡುತ್ತದೆ. ಹೀಗಾಗಿ ಇದರ ಅರ್ಥ ಬೆಲೆ 6.022&nbsp;140&nbsp;857×10<sup>23</sup>&plusmn;0.000&nbsp;000&nbsp;074 ಎಂದು. ಈ ವಿವರಣೆ ಆವರಣ ಅಥವಾ ಬ್ರ್ಯಾಕೆಟ್‌ನಲ್ಲಿ ಸಂಖ್ಯೆಗಳನ್ನು ಬಳಸಿದ ಎಲ್ಲಕಡೆಯೂ ಅನ್ವಯಿಸುತ್ತದೆ.</ref>
"https://kn.wikipedia.org/wiki/ಅವೊಗಾಡ್ರೋ_ಸಂಖ್ಯೆ" ಇಂದ ಪಡೆಯಲ್ಪಟ್ಟಿದೆ