ಅಕ್ಷರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
:'''''ಅಕ್ಕರ''' ಇಲ್ಲಿ ಪುನರ್ನಿರ್ದೇಶಿಸುತ್ತದೆ. '''ವಿದ್ಯೆ''' ಲೇಖನಕ್ಕಾಗಿ [[ವಿದ್ಯೆ|ಇಲ್ಲಿ ನೋಡಿ]].''
[[ಅಕ್ಷರಮಾಲೆ]]ಯಲ್ಲಿ ಬರವಣಿಗೆಯ ರೂಪದಲ್ಲಿರುವ ಒಂದು ಲಿಖಿತ ಅಂಶವೇ '''ಅಕ್ಷರ'''.<ref>http://www.kuvempu.com/lnt3.html</ref> ಅಕ್ಷರಗಳು ಬಿಡಿಬಿಡಿಯಾಗಿರುತ್ತವೆ. [[ವಾಕ್ಯ]]ವೊಂದರಲ್ಲಿ ಹಲವಾರು ಪದಗಳಿರುತ್ತವೆ. [[ಪದ]]ವೊಂದರಲ್ಲಿ ಒಂದಕ್ಕಿಂತ ಹೆಚ್ಚು ಅಕ್ಷರಗಳಿರುತ್ತವೆ. ಅವುಗಳು [[ಸ್ವರ]] ಅಥವಾ [[ವ್ಯಂಜನ]] ಅಕ್ಷರಗಳಾಗಿರಬಹುದು. ಪದವು ಸ್ವರದಿಂದ ಅಥವಾ ವ್ಯಂಜನ ಅಕ್ಷರಗಳಿಂದ ಆರಂಭವಾಗುತ್ತದೆ. ಪ್ರತಿಯೊಂದು ಅಕ್ಷರಗಳು ಒಂದೊಂದು ಸಂಕೇತಗಳು. ಈ ಸಂಕೇತಗಳು ಆಯಾ ಭಾಷೆಯ [[ಲಿಪಿ]]ಗೆ ಅನುಗುಣವಾಗಿ ಬಳಕೆಯಾಗುತ್ತದೆ. ಪ್ರತಿಯೊಂದು ಅಕ್ಷರವನ್ನು ಒಂದು [[ಧ್ವನಿ]] ಎಂದು ಕರೆಯುತ್ತಾರೆ. ಹಾಗಾಗಿ ಅಕ್ಷರಮಾಲೆಯ ಪ್ರತಿಯೊಂದು ಅಕ್ಷರಗಳೂ ಒಂದೊಂದು ಧ್ವನಿಮಾಗಳಾಗುತ್ತವೆ. ಅಕ್ಷರವು ವಾಕ್ಯವೊಂದರ ಅತ್ಯಂತ ಕನಿಷ್ಟತಮ ಘಟಕವೂ ಆಗಬಹುದು. ಉದಾ: '''ಆ''' ಎಂದರೆ '''ಆ ಮನೆ'''. ಇಲ್ಲಿ '''ಆ''' ಅಕ್ಷರ ಒಂದು ಕನಿಷ್ಟತಮ ಘಟಕವೂ ಹೌದು. ಹಾಗೇನೆ '''[[ಆ]]''' ಅಕ್ಷರವು ಒಂದು ಪದದ ಸ್ಥಾನವನ್ನು ಹೊಂದುತ್ತದೆ.
== ಅಕ್ಷರ ಪದನಿಷ್ಪತ್ತಿ ==
'''ಕ್ಷರ''' ಎಂದರೆ ಕ್ಷಯವಾಗು, ನಾಶವಾಗು, ಕ್ಷಯಿಸು, ಮುಗಿಯು ಎಂಬ ಅರ್ಥವನ್ನು ಹೊಂದಿದೆ. '''ಅ+ಕ್ಷರ''' ಎಂದಾಗ ನಾಶವಾಗದ, ಕ್ಷಯಿಸಲಾಗದ ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ.
"https://kn.wikipedia.org/wiki/ಅಕ್ಷರ" ಇಂದ ಪಡೆಯಲ್ಪಟ್ಟಿದೆ