ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
 
==ಪುರಾತನ ಭಾರತದಲ್ಲಿ ನಾಣ್ಯ==
*ಭಾರತದಲ್ಲಿ[[ಭಾರತ]]ದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣೆಗೆ ಬಂದಿದ್ದು ಕ್ರಿ.ಪೂ 6ನೇ ಶತಮಾನದಲ್ಲಿ (ಸರಿ ಸುಮಾರು ಇದೇ ಅವಧಿಯಲ್ಲಿ ಅತ್ತ ಚೀನಾದಲ್ಲಿ ಮತ್ತು ಮಧ್ಯಪ್ರಾಚ್ಯದ ಲಿಡಿಯಾದಲ್ಲಿ ನಾಣ್ಯಗಳು ಟಂಕಿಸಲು ಆರಂಭಿಸಿದ್ದವು).
 
*ಪುರಾತನ ಭಾರತದಲ್ಲಿದ್ದ ಮಹಾಜನಪದರ ಆಡಳಿತ ([[ಮಗಧ]], [[ಕುರು]], [[ಪಾಂಚಾಲ]], ಸೌರಾಷ್ಟ್ರ ಇತ್ಯಾದಿ) ನಾಣ್ಯಗಳನ್ನು ಚಲಾವಣೆಗೆ ತಂದಿತ್ತು. ಬೆಳ್ಳಿಯನ್ನು ಚಪ್ಪಟೆಯಾಗಿ ತಟ್ಟಿ ಅದರಲ್ಲಿ ಚಿತ್ರಗಳನ್ನು ಅಚ್ಚೊತ್ತಲಾಗಿತ್ತು. ಆ ಕಾಲಕ್ಕೆ ಅದನ್ನು ‘ಪುರಾಣ’, ‘ಕರ್ಷಪಣ’ ಅಥವಾ ‘ಪಣ’ ಎಂದು ಕರೆಯುತ್ತಿದ್ದರಂತೆ. ಈ ನಾಣ್ಯಗಳು ನಿಗದಿತ ತೂಕವನ್ನು ಹೊಂದಿದ್ದವು. ಆದರೆ, ಆಕಾರ ಒಂದೇ ರೀತಿಯಲ್ಲಿರಲಿಲ್ಲ. ನಾಣ್ಯದಲ್ಲಿ ಇದ್ದ ಚಿಹ್ನೆಗಳೆಲ್ಲ ಆಯಾ ರಾಜವಂಶಕ್ಕೆ ಸಂಬಂಧಿಸಿದ್ದಾಗಿತ್ತು.
[[File:MauryanCoin.JPG|right|thumb|ಮೌರ್ಯರಕಾಲದ ಬೆಳ್ಳಿನಾಣ್ಯ 'ರೂಪ್ಯಾರೂಪ' (Rupyarupa),ಆನೆ ಮತ್ತು ಚಕ್ರದ ಚಿಹ್ನೆಯುಳ್ಳದ್ದು. ಕ್ರಿ ಪೂ.3ನೇ ಶತಮಾನದ್ದು. (183x183px)]]
*ನಂತರ ಅಧಿಕಾರಕ್ಕೆ ಬಂದ [[ಮೌರ್ಯರು]] (ಕ್ರಿ.ಪೂ 322–ಕ್ರಿ.ಪೂ185) ನಾಣ್ಯಕ್ಕೆ ಹೊಸ ರೂಪ ನೀಡಿದರು. ಚಿನ್ನ, ಬೆಳ್ಳಿ, ತಾಮ್ರ ಸೇರಿದಂತೆ ಬೇರೆ ಬೇರೆ ಲೋಹಗಳಿಂದ ನಾಣ್ಯಗಳನ್ನು ಆ ಕಾಲದಲ್ಲಿ ತಯಾರಿಸಲಾಗುತ್ತಿತ್ತು. ಮೌರ್ಯರ ಮೊದಲ ರಾಜ [[ಚಂದ್ರಗುಪ್ತ ಮೌರ್ಯನಮೌರ್ಯ]]ನ ಮಂತ್ರಿಯಾಗಿದ್ದ [[ಚಾಣಕ್ಯ]] ಬರೆದಿರುವ ‘ಅರ್ಥಶಾಸ್ತ್ರ’ ಗ್ರಂಥದಲ್ಲಿ ನಾಣ್ಯಗಳ ಬಗ್ಗೆ ಉಲ್ಲೇಖ ಇದೆ. ಬೆಳ್ಳಿ ನಾಣ್ಯಗಳನ್ನು ‘ರುಪ್ಯರೂಪ’ ಎಂದು, ಚಿನ್ನದ ನಾಣ್ಯಗಳನ್ನು ‘ಸುವರ್ಣರೂಪ’ ಎಂದು, ತಾಮ್ರದಿಂದ ಮಾಡಿದ ನಾಣ್ಯವನ್ನು ‘ತಾಮರ ರೂಪ’ ಎಂದೂ, ಸೀಸದಿಂದ ಮಾಡಿದ ನಾಣ್ಯವನ್ನು ‘ಸೀಸರೂಪ’ ಎಂದು ಕರೆಯಲಾಗುತ್ತಿತ್ತು. ಮೌರ್ಯರು ತಮ್ಮ ರಾಜಮನೆತನದ ಮಾನದಂಡಕ್ಕೆ ತಕ್ಕಂತಹ ನಾಣ್ಯಗಳನ್ನು ರೂಪಿಸಿದ್ದರು.
===ಗ್ರೀಕರ ಕಾಲ===
[[File:Heliocles_I_helmetted.jpg|left|thumb|[[Heliocles]] (145-130 BC) ಇಂಡೋ ಬ್ಯಾಕ್ಟ್ರಿಯಾದ ಕೊನೆಯ ರಾಜ ಹೆಲಿಯೊಕ್ಲಿಸ್‍ ಕಾಲದ ನಾಣ್ಯ.]]
 
*ಆ ಬಳಿಕ ದೇಶದಲ್ಲಿ ಅಧಿಪತ್ಯ ಸಾಧಿಸಿದ [[ಗ್ರೀಸ್‌]] ಮೂಲದ ರಾಜರು ನಾಣ್ಯಗಳಲ್ಲಿ ರಾಜ್ಯದ ಮುಖ್ಯಸ್ಥರ ಚಿತ್ರಗಳನ್ನು ಅಚ್ಚೊತ್ತಲು ಆರಂಭಿಸಿದರು. ನಾಣ್ಯದ ಒಂದು ಮುಖದಲ್ಲಿ ರಾಜನ ಚಿತ್ರವಿದ್ದರೆ, ಮತ್ತೊಂದು ಮುಖದಲ್ಲಿ ಆತ ಪೂಜಿಸುತ್ತಿದ್ದ ದೇವರ ಚಿತ್ರವನ್ನು ಬಿಡಿಸಲಾಗುತ್ತಿತ್ತು. ಇಂಡೋ-ಗ್ರೀಕ್‌ ರಾಜರ ವ್ಯಾಪ್ತಿಯಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳಿಂದ ಪ್ರೇರಿತರಾಗಿ, ದೇಶದಲ್ಲಿದ್ದ ಇತರ ಆಡಳಿತ ವಂಶಗಳು, ಬುಡಕಟ್ಟು ಪ್ರದೇಶಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು, ತಮ್ಮದೇ ಆದಂತಹ ನಾಣ್ಯಗಳನ್ನು ತಯಾರಿಸಿ ಚಲಾವಣೆಗೆ ತಂದರು.<ref>ಹಿಂದೂ ದೇಶದ ಚರಿತ್ರೆ:ಇ.ಡಬ್ಳ್ಯು.ಥಾಂಸನ್,ಎಂ.ಎ.ಕ್ರಿಶ್ಚಿಯನ್ ಲಿಟರೇಚರ್ ಫಾರ್ ಇಂಡಿಯಾ ೧೯೫೦ </ref>
 
==ಗುಪ್ತರ ಕಾಲ==
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ