ಬರಾಕ್ ಒಬಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೮ ನೇ ಸಾಲು:
 
== ೨೦೦೯ರ ಸಾಲಿನ ’[[ನೋಬೆಲ್ ಶಾಂತಿಪ್ರಶಸ್ತಿ ವಿಜೇತ]]==
ಅಮೆರಿಕದ ’ಪ್ರಪ್ರಥಮ ಆಫ್ರೋ ಅಮೆರಿಕನ್’ ಮೂಲದ ೪೮ ವರ್ಷ ಪ್ರಾಯದ ಹರೆಯದ ಶ್ರೀ. ಬರಾಕ್ ಒಬಾಮರವರಿಗೆ, ಪ್ರತಿಷ್ಠಿತ, ’[[ನೋಬೆಲ್ ಶಾಂತಿ ಪ್ರಶಸ್ತಿ]],'ಯನ್ನು ಡಿಸೆಂಬರ್, ೧೦ ರಂದು ಓಸ್ಲೋನಲ್ಲಿ ವಿತರಿಸಲಾಯಿತು.<ref>[http://www.nbcnews.com/id/33237202/#.WHzNm_B96s4,Nobel Peace Prize 'a call to action unexpected pick surprises president,world,MSN, Outlook]</ref> ಆ ದಿನವೇ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ, ಅಮೆರಿಕದ ಭಾರತೀಯ, ವೆಂಕಟರಾಮನ್ ರಾಮಕೃಷ್ಣರಿಗೂ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು. ಒಬಾಮ, ಅಧ್ಯಕ್ಷ ಪದವಿಯ ಅಧಿಕಾರದ ಚುಕ್ಕಾಣಿ ಹಿಡಿದ ಕೇವಲ ೯ ತಿಂಗಳಲ್ಲೇ ಈ ಜಾಗತಿಕ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ವೈಯಕ್ತಿಕವಾಗಿ ಅವರಿಗೇ ಅಚ್ಚರಿಯಾಗಿರುವುದಲ್ಲದೆ, ವಿಶ್ವದ ಅನೇಕ ವಲಯಗಳಲ್ಲಿ ಭಾರಿ ಸುದ್ದಿಮಾಡಿದೆ. ’ನೋಬೆಲ್ ಪ್ರಶಸ್ತಿ ಪ್ರದಾನ ಸಮಿತಿ’ಯ ಪ್ರಕಟನೆಯ ಪ್ರಕಾರ, ’ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಬಲವರ್ಧನೆ ಮತ್ತು ಪರಮಾಣು ಪ್ರಸರಣ ತಡೆಗಾಗಿ ಯತ್ನಿಸುತ್ತಿರುವ ಅವರ ಮಹತ್ವದ ಕೊಡುಗೆಗಾಗಿ, ನೋಬೆಲ್ ಶಾಂತಿ ಪ್ರಶಸ್ತಿಗೆ ಅವರನ್ನು ಆಯ್ಕೆಮಾಡಿರುವುದಾಗಿ ತಿಳಿದುಬಂದಿದೆ. ’ನೋಬೆಲ್ ಶಾಂತಿ ಪ್ರಶಸ್ತಿ' ಗೆ ಅರ್ಜಿಸಲ್ಲಿಸಲು ಈ ವರ್ಷದ ಫೆಬ್ರವರಿ ೧ನೇ ತಾರೀಖೇ, ಕಡೆಯ ದಿನವಾಗಿತ್ತು. ಆಗತಾನೇ ಅಧ್ಯಕ್ಷ ಒಬಾಮರವರು, ಅಧಿಕಾರಕ್ಕೆ ಬಂದು ೨ ತಿಂಗಳಾಗಿದ್ದವು. ’ವಿಶ್ವದ ಅತ್ಯುತ್ತಮ ಭವಿಷ್ಯಕ್ಕಾಗಿ ಚಿಂತಿಸಿ ಕಾರ್ಯೋನ್ಮುಖರಾಗಿರುವ ಅತ್ಯಂತ ಅಪರೂಪದ ವ್ಯಕ್ತಿಯಾಗಿರುವ ಒಬಾಮಾರವರು, ದಿಢೀರನೆ ತಮಗೆ ದೊರಕಿದ ಪಾರಿತೋಷಕದ ಬಗೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೊನೆಯ ಗಳಿಗೆಯವರೆಗೆ, ’[[ಶ್ವೇತಭವನ]],’ದ ಉನ್ನತ ಅಧಿಕಾರಿಗಳಿಗೂ ಇದರ ಅರಿವಿರಲಿಲ್ಲ. ’ಝಿಂಬಾಬ್ವೆ ದೇಶದ ಪ್ರಧಾನಿ’, ’[[ಮೋರ್ಗನ್ ತ್ಸವಂಗಿರ್ಯಾ]],’ ಮತ್ತು ಅಫ್ರಿಕಾದ ಮಹಿಳಾ ಹಕ್ಕುಗಳ ಮಾರಾಟಗಾರರೊಬ್ಬರ ಹೆಸರು, ಆಗಾಗ 'ಈ ವರ್ಷದ ನೋಬೆಲ್ ಶಾಂತಿಪ್ರಶಸ್ತಿಗೆ ಅಭ್ಯರ್ಥಿ'ಗಳೆಂದು ಸುದ್ದಿ ಕೇಳಿಬರುತ್ತಿತ್ತು.
 
== 'ನೊಬೆಲ್ ಶಾಂತಿಪ್ರಶಸ್ತಿ-ಪುರಸ್ಕೃತ ೩ ನೇ ಅಧ್ಯಕ್ಷರು' ==
ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಪ್ರಥಮ ಆಫ್ರೋ-ಅಮ್ರಿಕದ ಅಧ್ಯಕ್ಷರಾಗಿರುವ, ಒಬಾಮಾ ಅವರು ಶಾಂತಿ ಪುರಸ್ಕಾರ ಗಳಿಸಿದ ೩ನೆಯ ಅಧ್ಯಕ್ಷರಾಗಿದ್ದಾರೆ. ಇದಕ್ಕೆ ಮೊದಲು, ’[[ಥಿಯೊಡಾರ್ ರೂಸ್ ವೆಲ್ಟ್]],’ ’[[ವುಡ್ರೋ ವಿಲ್ಸನ್]],’ ಅಧ್ಯಕ್ಷರಾಗಿ ಕಾರ್ಯಭಾರ ಮಾಡುತ್ತಿರುವಾಗಲೇ ಪ್ರಶಸ್ತಿ ಪಡೆದಿದ್ದರು. ಆದರೆ, ’[[ಜಿಮ್ಮಿ ಕಾರ್ಟರ್]]’ ರವರು, ಈ ಪ್ರತಿಷ್ಠಿತ ಪಾರಿತೋಷಕವನ್ನು ತಮ್ಮ ಅಧ್ಯಕ್ಷಾವಧಿ ಮುಗಿದ ನಂತರ ಪಡೆದರು.
"https://kn.wikipedia.org/wiki/ಬರಾಕ್_ಒಬಾಮ" ಇಂದ ಪಡೆಯಲ್ಪಟ್ಟಿದೆ