ಬರಾಕ್ ಒಬಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೩ ನೇ ಸಾಲು:
== ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಪ್ರಪ್ರಥಮ ಅಧ್ಯಕ್ಷ ==
ಇದಕ್ಕೆ ಮೊದಲು ಹಿಂದಿನ ಅಧ್ಯಕ್ಷ ’[[ಜಾರ್ಜ್ ಬುಷ್]]’ <ref>http://www.patheos.com/blogs/deaconsbench/2013/11/white-house-celebrates-diwali/</ref> ರವರು, ದೀಪಾವಳಿಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಆದರೆ ಅವರ ಸಂಗಡಿಗರೊಡನೆ ಹಬ್ಬವನ್ನು ಆಚರಿಸಲಾಗಲಿಲ್ಲ. ೨೦೦೯ರಲ್ಲಿ ಅಧ್ಯಕ್ಷ ಒಬಾಮಾ ರವರು [[ವೈಟ್ ಹೌಸ್]]ನ ಸಿಬ್ಬಂದಿವರ್ಗ ಹಾಗೂ ಭಾರತೀಯ ಸಮುದಾಯದವರೊಂದಿಗೆ ಸೇರಿಕೊಂಡು ದೀಪಾವಳಿಯನ್ನು ಆಚರಿಸಿದ ಪ್ರಪ್ರಥಮ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂ. ನಾರಾಯಣಾಚಾರ್ ದಿಗಲ್ ಕೋಟೆಯವರು ಮಂತ್ರ ಪಠಿಸುತ್ತಿದ್ದಂತೆಯೇ ಅಧ್ಯಕ್ಷ ಒಬಾಮಾ ರವರು ವಿಶ್ವಶಾಂತಿಯ ಪ್ರಾರ್ಥನೆಗೈದು ದೀಪಬೆಳಗಿ ದೀಪಾವಳಿಯ ಶುಭಾಶಗಳನ್ನು ಎಲ್ಲರೊಡನೆ ಹಂಚಿಕೊಂಡರು. ಐತಿಹಾಸಿಕ ಈಸ್ಟ್ ರೂಂನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಒಬಾಮಾರವರು "ಬೆಳಕಿನ ಹಬ್ಬ ದೀಪಾವಳಿಯು, ಕೆಟ್ಟದರ ವಿರುದ್ಧ ಒಳಿತಿನ ವಿಜಯವಾಗಿದೆ. ಮನುಷ್ಯನಲ್ಲಿನ ಅಜ್ಞಾನವನ್ನು ತೊಲಗಿಸುವ ಪರ್ವದಿನ ವಾಗಿದೆ," ಎಂದು ನುಡಿದರು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ೮ ನವೆಂಬರ್ ೨೦೧೦ ಸೋಮವಾರ ಭಾರತದ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ೪೫ ನಿಮಿಷ ಕಾಲ ಭಾಷಣ ಮಾಡಿದರು। ಟೆಲಿಪ್ರಾಂಪ್ಟರ್ ಬಳಸಿ ಬರಾಕ್ ಒಬಾಮ ಭಾಷಣ ಮಾಡಿದರು. ಭಾರತದ ಸಂಸತ್ತಿನಲ್ಲಿ ಇದೇ ಮೊದಲ ಬಾರಿ 'ಟೆಲಿಪ್ರಾಂಪ್ಟರ್' ಬಳಕೆಯಾಯಿತು.
==[[ಒಸಾಮಾ ಬಿನ್ ಲಾಡನ್]] ಹತ್ಯೆ ]]==
ಸನ್ ೨೦೦೧ ರ ಸೆಪ್ಟೆಂಬರ್, ೧೧ರಂದು ಅಮೆರಿಕದ ಮೇಲೆ ಹಲ್ಲೆ ಮಾಡಲು ಆವನ ಸಹಚರರನ್ನು ಬಳಸಿದ್ದ 'ಜಾಗತಿಕ ಆಲ್ ಖಾಯಿದಾ ಸಂಘಟನೆ'ಯ ಭಯೋತ್ಪಾದಕ, [[ಬಿನ್ ಲಾಡನ್]] ಅಮೆರಿಕ ನೇತೃತ್ವದ ಪಡೆ ನಡೆಸಿದ ನಾಟಕೀಯ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೃತನಾಗಿದ್ದಾನೆ.<ref>[http://edition.cnn.com/2013/09/09/world/death-of-osama-bin-laden-fast-facts/ 'Death of Osama Bin Laden Fast Facts', CNN Library,September 5, 2014]</ref> ಮೇ, ೧ನೇ ಭಾನುವಾರ ಮಧ್ಯರಾತ್ರಿಯಲ್ಲಿ ಅಧ್ಯಕ್ಷ ಬರಾಕ್ ಒಬಾಮಅವರು [[ಶ್ವೇತಭವನ]]ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಈ ವಿಷಯವನ್ನು ಬಯಲು ಮಾಡಿದರು. ಪಾಕಿಸ್ತಾನದ ಇಸ್ಲಾಮಾಬಾದ್ ಪ್ರದೇಶದ [[ಅಬುತಾಬಾದ್]] ಎಂಬ ಸ್ಥಳದಲ್ಲಿ ಅಮೆರಿಕ ಸೇನಾಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ [[ಒಸಾಮಾ ಬಿನ್ ಲಾಡೆನ್]] ಮತ್ತು ಅವನ ೨೦ ಮಂದಿ ಆಪ್ತ ಸಹಚರರು ಮೃತಪಟ್ಟಿದ್ದಾರೆ. [[ಒಸಾಮ ಬಿನ್ ಲಾಡೆನ್]] ನ ಮೃತ ಶರೀರವನ್ನು ಸಮುದ್ರದಲ್ಲಿ ದಫನ್ ಮಾಡಿದ್ದಾರೆ. [[ಸದ್ಧಾಮ್ ಹುಸೇನ್]] ತರಹ, ನೆಲದಲ್ಲಿ ಸಮಾಧಿ ಮಾಡಿದ್ದಿದ್ದರೆ, ಅವನ ಅನುಯಾಯಿಗಳು ಅಲ್ಲಿಗೆ ಭೇಟಿ ನೀಡಿ ತಮ್ಮ ಗೌರವವನ್ನು ಸಲ್ಲಿಸುವ ಪ್ರಮೇಯಗಳಿದ್ದವು. ಸನ್ ೨೦೦೧ರ ಸೆಪ್ಟೆಂಬರ್, ೧೧ ರಂದು 'ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್' ಮೇಲೆ ಹಲ್ಲೆಮಾಡಿ ಮಕ್ಕಳು ಹೆಣ್ಣು ಮಕ್ಕಳೂ ಸೇರಿದಂತೆ ಸಾವಿರಾರು ನಾಗರಿಕರನ್ನು ಕೊಂದ ಹಿನ್ನೆಯಲ್ಲಿ ಸುಮಾರು ೧೦ ವರ್ಷಗಳಿಂದ ಅಮೆರಿಕ ಈ ಸಂದರ್ಭಕ್ಕಾಗಿ ಹೊಂಚುಹಾಕಿದ್ದು, ಸಫಲತೆಯನ್ನು 'ಹಾಸಿಲ್' ಮಾಡಿದೆ.<ref>[http://www.bbc.com/news/world-south-asia-13257330 'Osama Bin Laden's death: How it happened', BBC News, 10 September 2012]</ref>
ಒಬಾಮ ತಮ್ಮ 'ವೈಟ್ ಹೌಸ್' ನಲ್ಲಿ, ದೀಪಾವಳಿ ಹಬ್ಬ ಆಚರಿಸಿದರು.
===೨೦೧೫ ರ, ಭಾರತದ ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಬರಾಕ್ ಒಬಾಮ===
ಅಮೆರಿಕದ ಅಧ್ಯಕ್ಷರ ೩ ದಿನಗಳ ಭಾರತದ ಭೇಟಿ ಭಾರತ ಮತ್ತು ಅಮೆರಿಕದ ಸಂಬಂಧಗಳನ್ನು ವೃದ್ಧಿಸುವಲ್ಲಿ ಸಹಕಾರಿಯಾಯಿತು.<ref>[http://epaper.samyukthakarnataka.com/426279/Samyuktha-Karnataka/January-28-2015-Bangalore ಸಂಯುಕ್ತ ಕರ್ನಾಟಕ ಪತ್ರಿಕೆ, ಬೆಂಗಳೂರು ಆವೃತ್ತಿ, ೨೮, ಜನವರಿ,೨೦೧೫,'ರೇಡಿಯೊದಲ್ಲಿ ನಮೋಬಾಮ ಮನದ ಮಾತು']
 
==ಬಾಹ್ಯಸಂಪರ್ಕಗಳು==
* [https://www.youtube.com/watch?v=sMwXTdFcPm0 'ದೀಪಾವಳಿ ಹಬ್ಬದ ಆಚರಣೆಯ ಯೂಟ್ಯೂಬ್']
"https://kn.wikipedia.org/wiki/ಬರಾಕ್_ಒಬಾಮ" ಇಂದ ಪಡೆಯಲ್ಪಟ್ಟಿದೆ