ಗುಡಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Gante_Dere.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
Tent_made_of_cloth.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿ
 
೧ ನೇ ಸಾಲು:
{{Wikify}}
 
 
[[File:Tent made of cloth.jpg|thumb|ಬಟ್ಟೆಯ ಕಿರುಗೋಡೆ ಮತ್ತು ಬಟ್ಟೆಯ ಕದ ಇರುವಂಥಹ ಗುಡಾರ]]
 
ಗುಡಾರಗಳು, ಹಗ್ಗ, ದಪ್ಪ ಬಟ್ಟೆಗಳಿಂದ ಕಟ್ಟಿ ನಿಲ್ಲಿಸಬಹುದಾದ ಮತ್ತು ಸ್ಥಳದಿಂದ ಸ್ಥಳಕ್ಕೆ ಒಯ್ಯಬಹುದಾದ ಹಂಗಾಮಿ ತಂಗುಸಾಧನ. ಡೇರೆ ಎಂದೂ ಕರೆವುದಿದೆ (ಟೆಂಟ್). ಗುಡಾರದ ಮೂಲವನ್ನು ಪ್ರಾಚೀನ ಕಾಲದಿಂದಲೂ [[ಮಾನವ]] ಬುಡಕಟ್ಟುಗಳು ನಿರ್ಮಿಸಿಕೊಳ್ಳುತ್ತ ಉಪಯೋಗಿಸುತ್ತ ಬಂದಿರುವ ಗಾಳಿತಡೆ, ನೆರಳುಮರೆ ಮುಂತಾದವುಗಳಲ್ಲಿ ಕಾಣುತ್ತೇವೆ. ಗಾಳಿತಡೆಗಳು ಹಂಬುರೆಂಬೆಗಳಿಂದ ಸುಲಭವಾಗಿಯೂ ಕ್ಷಿಪ್ರವಾಗಿಯೂ ಎಬ್ಬಿಸಬಲ್ಲಂಥವು. ಇವುಗಳ ಚಾವಣಿಗಳು ಒಪ್ಪಾರವಾಗೂ (ಚಿತ್ರ 1) ಇಪ್ಪಾರವಾಗೂ (ಚಿತ್ರ 2) ಇರುತ್ತವೆ. ಇಪ್ಪಾರವನ್ನು ಕವೆಕೋಲುಗಳಿಂದ ಭದ್ರಗೊಳಿಸಿದರೆ (ಚಿತ್ರ 3) ಮರೆಯೂ ನೆರಳೂ ಹೆಚ್ಚಾಗುತ್ತವೆಂದು ಹೇಳಬೇಕಾಗಿಲ್ಲ. ಹೆಣೆದ ಗರಿಗಳನ್ನು ಚಾವಣಿಗಳ ಮುಚ್ಚಾಗಿ ಬಳಸುವುದು ವಾಡಿಕೆಯಾಗಿದೆ. ಲ್ಯಾಪ್ಲೆಂಡಿನ ಗುಡಿಸಲುಗಳ ದೂಲಗಳ ಮಧ್ಯೆ ಎರೆಮಣ್ಣನ್ನು ಮೆತ್ತಿ ಬಿರುಕಿಲ್ಲದಂತೆ ಮಾಡಿರುತ್ತಾರೆ (ಚಿತ್ರ 4) ಬೆತ್ತದಂಥ ಸಣ್ಣರೆಂಬೆಗಳಿಂದ ಕಟ್ಟಿದ ಗುಡಿಸಲು ತೆರನ ಬಿಡಾರ (ಚಿತ್ರ 5) ಬ್ರಿಟನ್ನಿನ ವಸಾಹತುಗಳಲ್ಲಿ ಇರುತ್ತಿತ್ತು. ಬೆತ್ತ ಅಥವಾ ಬಿದಿರು ದೆಬ್ಬೆಗಳನ್ನು ಕಮಾನಾಗಿ ಬಗ್ಗಿಸಿ, ಎರಡು ಕೊನೆಯನ್ನೂ ನೆಲದೊಳಕ್ಕೆ ಹುದುಗಿಸಿ ಇಟ್ಟು, ಮೇಲೆ ನೀರು ತೂರದ ಮೇಣಗಬಟವನ್ನೊ ರಟ್ಟುಬಟ್ಟೆಯನ್ನೊ ಹೊದಿಸಿ, ಅದರ ಅಂಚುಗಳನ್ನು ದಪ್ಪ ಕಲ್ಲುಗಳ ಮೂಲಕ ನೆಲಕ್ಕೆ ಗುತ್ತಾಗಿ ಹೊಂದಿಸಿಟ್ಟು, ಕಂದಾರೆಯವರೂ ಜಿಪ್ಸಿಗಳೂ ಗಂಗೆಯ ಮಕ್ಕಳೂ ಗುಡಾರ ಮಾಡಿಕೊಳ್ಳುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ (ಚಿತ್ರ 6). ಎಸ್ಕಿಮೊ ಜನರದ್ದು ಇನ್ನೂ ಸರಳವಾದ ಉಪಾಯ. ಕೋಲನ್ನು ನಿಲ್ಲಿಸಿ ಹಗ್ಗವನ್ನು ಎಳೆದು ಚಾವಣಿಯ ಏಣು ಮಾಡಿ, ಅಗಲ ಚಕ್ಕಳವನ್ನು ಮೇಲಿನಿಂದ ಇಕ್ಕಡೆಗೂ ಇಳಿ ಬೀಳಿಸಿ, ಅಂಚಿನ ಮೇಲೆ ಭಾರದ ಕಲ್ಲುಗಳನ್ನಿಟ್ಟು ಮರೆ ಮಾಡಿಕೊಳ್ಳುತ್ತಾರೆ (ಚಿತ್ರ 7).
"https://kn.wikipedia.org/wiki/ಗುಡಾರ" ಇಂದ ಪಡೆಯಲ್ಪಟ್ಟಿದೆ