ಗುಡಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Gante_Dere.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧೧ ನೇ ಸಾಲು:
ಮಂಗೋಲಿಯದ ಕಿರ್ಗೀಸರ ಗರ್ ಅಥವಾ ಯೂರ್ಚ್ ಇನ್ನೂ ಅಚ್ಚು ಕಟ್ಟಾದ ಹೆಚ್ಚು ಸೌಕರ್ಯವುಳ್ಳ ಗೃಹರಚನೆ. ಕುಕ್ಕೆ ಕಡ್ಡಿ ಅಥವಾ ವಿಲೊ ಎಂಬ ಬಗೆಯ ಮೆತುಕಡ್ಡಿಗಳಿಂದ ಹೆಣೆದು ಮಾಡಿದ ಭಾಗಗಳನ್ನು ವರ್ತಳಾಕಾರವಾಗಿ ಜೋಡಿಸಿ, ಬಾಗಿಲು ಮತ್ತು ಬಾಗಿಲುವಾಡದೊಡನೆ ನೆಲದ ಮೇಲೆ ಇಡುತ್ತಾರೆ. ಮೇಲೆ ಎರಡು ಸಾಲು ಗಟ್ಟಿ ಕಡ್ಡಿಗಳನ್ನು ಇರಿಸಿ ಶಿಖರದ ಲೋಹದುಂಗುರಕ್ಕೆ ಬಿಗಿಯುತ್ತಾರೆ. ಹೀಗೆ ಒಂದು ದೈತ್ಯ ಮಂಕರಿ ಸಿದ್ಧವಾಗುತ್ತದೆ (ಚಿತ್ರ 9). ತರುವಾಯ ದಪ್ಪ ಫೆಲ್ಟು ಬಟ್ಟೆಯ ಉದ್ದಗಲದ ಹೊದಿಕೆಗಳನ್ನು ಸಮನಾಗಿ ಹೊಂದಿಸಿ, ಹಗ್ಗಗಳಿಂದ ಬಿಗಿದು ಕಟ್ಟಿ ಡೇರೆ ಮನೆಯನ್ನು ತಯಾರಿಸಿಕೊಳ್ಳುತ್ತಾರೆ (ಚಿತ್ರ 10). ಫೆಲ್ಟು ಮೇಲು ಮುಸುಕಿನ ಕೆಳಗಡೆ ಅಂಚುಗಳನ್ನು ಹೊಲಿದು ಕೂಡಿಸಬಹುದು ಅಥವಾ ಅಲ್ಲಲ್ಲಿ ಭಾರದ ಕಲ್ಲು ಹೇರಬಹುದು.
 
 
[[File:Gante Dere.jpg|thumb|ಗಂಟೆ ಡೇರೆ]]
 
ಪಾಶ್ಚಾತ್ಯ ದೇಶಗಳಲ್ಲಿ ಸೈನಿಕರು ಪಯಣಿಗರು ಶೋಧಕರು ಪರ್ವತಾರೋಹಿಗಳು ಸ್ಕೌಟುಗಳು ಇತ್ಯಾದಿ ಪ್ರವಾಸಿಗರಿಗೆ ಸಮಂಜಸವಾದ ಗುಡಾರ ಅತ್ಯಾವಶ್ಯಕ. ಅಲ್ಲದೆ ಔತಣ ಸಮಾರಂಭಗಳಿಗೂ ಮಾರ್ಕೀ ಎಂಬ ಎತ್ತರದ ವಿಶಾಲ ಡೇರೆ ಬಹಳ ಉಪಯುಕ್ತ; ಸುತ್ತ ಎಷ್ಟು ಎತ್ತರಕ್ಕೆ ಬೇಕೊ ಅಷ್ಟು ಕನಾತು ಕಿರುಗೋಡೆಗಳನ್ನು ಕಟ್ಟಿ ಮರೆ ಮಾಡಿಕೊಳ್ಳಬಹುದು. ಬಟ್ಟೆ ಬಾವುಟ ಗೊಂಡೆ ಮುಂತಾದ ಅಲಂಕಾರ ವಸ್ತುಗಳನ್ನು ತೂಗುಬಿಟ್ಟು ಮಾರ್ಕೀಯನ್ನು ಇಷ್ಟಬಂದಂತೆ ಸಿಂಗರಿಸಲು ಬರುತ್ತದೆ. ಅದರ ಕ್ಯಾನ್ವಾಸ್ ಅಥವಾ ಲಿನೆನ್ ಬಟ್ಟೆಗೆ ಬಣ್ಣ ಬಣ್ಣದ ಉದ್ದಪಟ್ಟೆ ಬಳಿಯುವುದೂ ಉಂಟು (ಚಿತ್ರ11).
"https://kn.wikipedia.org/wiki/ಗುಡಾರ" ಇಂದ ಪಡೆಯಲ್ಪಟ್ಟಿದೆ