ಗುಂಡರ್ಟ್, ಹರ್ಮನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[ಚಿತ್ರ:Gundert,_Hermann_(1814-1893).jpg|thumb]]
1814-93. [[ಮಲಯಾಳಂ]] ಭಾಷೆ ಮತ್ತು ಸಾಹಿತ್ಯ ಬೆಳೆವಣಿಗೆ ಮತ್ತು ಅದರ ಪ್ರಗತಿಗಾಗಿ ಹೆಚ್ಚಿನ ಕೆಲಸ ಮಾಡಿರುವ ವಿದ್ವಾಂಸ. [[ಜರ್ಮನಿ]]ಯಿಂದ [[ಭಾರತ]]ಕ್ಕೆ ಪಾದ್ರಿಯಾಗಿ ಬಂದ ಈತ ತನ್ನ ಜೀವಿತದ ಬಹು ಮುಖ್ಯ ಭಾಗವನ್ನು ಆ [[ಭಾಷೆ]] ಮತ್ತು ಸಾಹಿತ್ಯಕ್ಕೆ ಮೀಸಲಾಗಿಟ್ಟು ದುಡಿದಿದ್ದಾನೆ. ಮಲೆಯಾಳಿಗಳು ಈತನನ್ನು ಗುರುಸಮಾನನೆಂದು ಗೌರವಿಸುತ್ತಾರೆ.
 
 
ಮಲೆಯಾಳಿ ಭಾಷೆಯಲ್ಲಿರುವ ಅನೇಕ ಪ್ರಥಮಗಳಿಗೆ ಗುಂಡರ್ಟ್ ಕಾರಣನಾಗಿದ್ದಾನೆ. ಈತ ರಚಿಸಿರುವ ಮಲೆಯಾಳಂ-ಇಂಗ್ಲಿಷ್ ನಿಘಂಟು ಶಾಸ್ತ್ರೀಯವೂ ಸಮಗ್ರವೂ ಆಗಿದೆ. ಈತನ ಮಲೆಯಾಳಂ ಭಾಷಾ ವ್ಯಾಕರಣ ಮತ್ತೊಂದು ಅದ್ಭುತ ಸಾಧನೆ. ಮಲೆಯಾಳಂ ಮೊದಲ [[ಭೂಗೋಳಶಾಸ್ತ್ರ]]ದ ಪುಸ್ತಕವನ್ನು ಬರೆದ ಹಾಗೂ ಗಾದೆಗಳನ್ನು ಸಂಗ್ರಹಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಮಲೆಯಾಳಂ ಭಾಷೆಯನ್ನು ಬರೆಯುವಾಗ ಅಗತ್ಯವಾದ ಲೇಖನ ಚಿಹ್ನೆಗಳನ್ನು ಪ್ರಥಮಬಾರಿಗೆ ಬಳಸಿದ ಈತನೇ. ಹಾಗೆಯೇ ಆ ಭಾಷೆಯಲ್ಲಿ ವೃತ್ತಾಂತ ಪತ್ರಿಕೆಗಳನ್ನು ಪ್ರಥಮ ಬಾರಿಗೆ ಹೊರಡಿಸಲು ಪ್ರಯತ್ನಿಸಿದವನೂ ಈತನೇ. ಗುಂಡರ್ಟ್ನ ಕೃತಿಗಳ ಸಂಖ್ಯೆ ಒಟ್ಟು 26 ಎನ್ನಲಾಗಿದೆ. ಮಲೆಯಾಳಂ ಭಾಷೆಯಲ್ಲಿನ ಆಧುನಿಕ ಗದ್ಯ ಒಂದು ನಿರ್ದಿಷ್ಟ ಶೈಲಿಯನ್ನು ಪಡೆದದ್ದು ಈತನಿಂದ ಎನ್ನಲಾಗಿದೆ. ಗುಂಡರ್ಟ್ ಜರ್ಮನಿಯ ವರ್ಟೆನ್ಬರ್ಗ್ ಎಂಬಲ್ಲಿ ಜನಿಸಿದ. ನೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ [[ಶಿಕ್ಷಣ]] ಪಡೆದು, ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸ್ವಿಟ್ಜೆರ್ಲೆಂಡಿನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಪಾದ್ರಿಯಾದ. ನೋರಿಸ್ ಗ್ರೀನೆಜ್ನೊಂದಿಗೆ ಧರ್ಮಪ್ರಚಾರಕ ಮಂಡಲಿಯನ್ನು ಸೇರಿ ಕೆಲಸ ಮಾಡತೊಡಗಿದ. 1836ನೆಯ ಇಸವಿಯಲ್ಲಿ ಮತ ಪ್ರಚಾರಕ್ಕಾಗಿ [[ಜರ್ಮನಿ]]ಯನ್ನು ಬಿಟ್ಟು [[ಭಾರತ]]ಕ್ಕೆ ಬಂದ. ಸಮುದ್ರ ಮಾರ್ಗವಾಗಿ ಭಾರತಕ್ಕೆ ಪ್ರಯಾಣ ಮಾಡುವಾಗಲೇ ಬಂಗಾಳಿ, ಹಿಂದೂಸ್ತಾನಿ ಮತ್ತು [[ತೆಲುಗು]] ಭಾಷೆಗಳನ್ನು ಕಲಿತುಕೊಂಡ. 1836ರಲ್ಲಿ [[ಚೆನ್ನೈ]]ಯನ್ನು ತಲುಪಿದ. ತಿನ್ನೆಲ್ ವೇಲ್ ಮತ್ತು ಚಿತ್ತೂರಿನಲ್ಲಿ ತನ್ನ ಪ್ರಚಾರಕಾರ್ಯವನ್ನು ಆರಂಭಿಸಿದ. ಈ ಅವಧಿಯಲ್ಲಿ [[ತಮಿಳು]] ಭಾಷೆಯನ್ನು ಕಲಿತ. ತಮಿಳು ಭಾಷೆಯಲ್ಲಿಯೂ ಈತ ಒಂದು ಕೃತಿಯನ್ನು ರಚಿಸಿರುವುದಾಗಿ ಹೇಳುತ್ತಾರೆ.
"https://kn.wikipedia.org/wiki/ಗುಂಡರ್ಟ್,_ಹರ್ಮನ್" ಇಂದ ಪಡೆಯಲ್ಪಟ್ಟಿದೆ