ಅಭಿಜ್ಞಾನ ಶಾಕುಂತಲಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೪೨ ನೇ ಸಾಲು:
ದುರ್ವಾಸ, ಇಂದ್ರ, ಕೌಶಿಕ, ನಾರದ, ಜಯಂತ, ವಿಶ್ವಾವಸು, ಪಿಶುನ, ಮೇನಕೆ.
===ಕಥೆ - ಅಂಕಾನುಕ್ರಮವಾಗಿ===
'''''ಮೊದಲ ಅಂಕ'''''
 
ಹಸ್ತಿನಾಪುರದ ಪುರುವಂಶದ ಅರಸನಾದ ದುಷ್ಯಂತನು ಬೇಟೆಯಾಡುತ್ತಾ, ಮಾಲಿನೀ ತೀರದ ಕಣ್ವ ಋಷಿಯ ಆಶ್ರಮದ ಹತ್ತಿರ ಬರುತ್ತಾನೆ. ಅಲ್ಲಿ ಕಂಡ ಜಿಂಕೆಯೊಂದಕ್ಕೆ ಗುರಿಯಿಡುತ್ತಿದ್ದಾಗ, ವೈಖಾಸನರು ಅಡ್ಡ ಬಂದು ಆಶ್ರಮದ ಮೃಗವನ್ನು ಕೊಲ್ಲಕೂಡದೆಂದು ಹೇಳಿ, ಕಣ್ವಾಶ್ರಮಕ್ಕೆ ಹೋಗಲು ತಿಳಿಸುವರು.
ಕಣ್ವರು ಆಶ್ರಮದಲ್ಲಿರದೆ, ಶಕುಂತಲೆಯ ಪ್ರತಿಕೂಲದೈವಶಮನಾರ್ಥವಾಗಿ ಸೋಮತೀರ್ಥಕ್ಕೆ ಹೋಗಿರುತ್ತಾರೆಂದೂ ತಿಳಿಸುವರು. ದುಷ್ಯಂತನು ಕಣ್ವರಿಗೆ ತನ್ನ ಭಕ್ತಿಯನ್ನು ಅವಳ ಮೂಲಕವೇ ನಿವೇದಿಸಲು ಶಕುಂತಲೆಯನ್ನು ಕಾಣಲು ಮುಂದುವರೆಯುವನು. ಅಲ್ಲಿ ಪ್ರಿಯಂವದೆ ಮತ್ತು ಅನಸೂಯೆಯರೊಡನಿದ್ದ ಶಕುಂತಲೆಯಲ್ಲಿ ಮೋಹಕ್ಕೊಳಗಾಗುತ್ತಾನೆ. ರಾಜನನ್ನು ಕಂಡ ಶಕುಂತಲೆಯೂ ಅನುರಾಗಗೊಳ್ಳುತ್ತಾಳೆ.
 
'''''ಎರಡನೆಯ ಅಂಕ'''''
 
ಆಶ್ರಮದ ಋಷಿಗಳ ಕೋರಿಕೆಯಂತೆ ತೊಂದರೆ ಕೊಡುತ್ತಿರುವ ರಾಕ್ಷಸರಿಂದ ಯಾಗರಕ್ಷಣೆಗಾಗಿ ದುಷ್ಯಂತ ಆಶ್ರಮದಲ್ಲಿಯೇ ಇರಬೇಕಾಗುತ್ತದೆ. ಇದು ಅವನ ಮತ್ತು ಶಕುಂತಲೆಯ ನಡುವಿನ ಪ್ರೇಮವು ಗಾಢವಾಗಲು ಸಹಾಯಕವಾಗುತ್ತದೆ. ಆದರೆ ರಾಜನ ತಾಯಿಯು ಮಾಡಲು ನಿರ್ಧರಿಸಿರುವ ಪುತ್ರಪಿಂಡಪಾಲನವ್ರತಕ್ಕೆ ಅರಮನೆಯಿಂದ ಕರೆಬರುತ್ತದೆ. ತನ್ನ ಪ್ರತಿನಿಧಿಯಾಗಿ ಮಿತ್ರ ಹಾಗೂ ವಿದೂಷಕ ಮಾಢವ್ಯನನ್ನು ಸಪರಿವಾರನಾಗಿ ಕಳುಹಿಸುತ್ತಾನೆ.
 
'''''ಮೂರನೆಯ ಅಂಕ'''''
 
ಯಾಗ ಮುಗಿದ ನಂತರ ವಿರಹವೇದನೆಯಿಂದ ಬಳಲುತ್ತಿರುವ ದುಷ್ಯಂತ ಶಕುಂತಲೆಯರು ಗಾಂಧರ್ವವಿಧಿಯಿಂದ ವಿವಾಹವಾಗುತ್ತಾರೆ. ಶಕುಂತಲೆಯನ್ನು ಬೇಗನೇ ತನ್ನಲ್ಲಿಗೆ ಕರೆಯಿಸಿಕೊಳ್ಳುವೆನೆಂದು ಭಾಷೆಯಿತ್ತು, ಅವಳ ಬೆರಳಿಗೆ ತನ್ನ ನಾಮಾಂಕಿತ ಉಂಗುರವನ್ನು ತೊಡಿಸಿ ರಾಜನು [[ಹಸ್ತಿನಾಪುರ| ಹಸ್ತಿನಾವತಿ]]ಗೆ ಮರಳುತ್ತಾನೆ.
 
'''''ನಾಲ್ಕನೆಯ ಅಂಕ'''''
 
ಆಶ್ರಮದಲ್ಲಿ ದುಷ್ಯಂತನನ್ನೇ ಕುರಿತು ಶಕುಂತಲೆ ಒಬ್ಬಳೇ ಕುಳಿತು ಚಿಂತಿಸುತ್ತಿರುವಾಗ ಅಲ್ಲಿಗೆ ಸುಲಭಕೋಪಿಯಾದ ದುರ್ವಾಸ ಮುನಿಯು ಬರುತ್ತಾನೆ. ಚಿಂತೆಯಲ್ಲಿ ಮೈಮರೆತು, ಆ ಋಷಿಯನ್ನು ಗಮನಿಸದೆ, ಆದರಿಸಲಾಗದೇ ಹೋದ ಶಕುಂತಲೆಗೆ, ‘ಯಾರ ಯೋಚನೆಯಲ್ಲಿ ಮೈಮರೆತಿರುವೆಯೋ, ಅವನು ನಿನ್ನನ್ನು ಮರೆತು ಹೋಗಲಿ’ ಎಂದು ಶಾಪವೀಯುತ್ತಾನೆ. ಅಲ್ಲಿಗೆ ಬಂದ ಪ್ರಿಯಂವದೆಯು, ನಡೆದು ಹೋದ ಅಪ್ರಿಯ ಸಂಗತಿಯನ್ನು ಅರಿತು, ಓಡಿಹೋಗಿ ದುರ್ವಾಸನಿಂದ ‘ಅಭಿಜ್ಞಾನಾಭರಣದರ್ಶನದಿಂದ ಶಾಪವಿಮೋಚನೆಯಾಗುವದು’ ಎಂದು ಪರಿಹಾರವನ್ನು ಪಡೆಯುವಳು.
ಸೋಮತೀರ್ಥದಿಂದ ಮರಳಿ ಬಂದ ಕಣ್ವರು ಶಕುಂತಲೆಯು ಬಸುರಿಯಾಗಿರುವದನ್ನು ತಿಳಿಯುತ್ತಾರೆ. ಅವಳನ್ನು [[ಗೌತಮಿ]], [[ಶಾರ್ಙ್ಗರವ]] ಮತ್ತು ಶಾರದ್ವತರೊಡನೆ ಪತಿಗೃಹಕ್ಕೆಂದು ದುಷ್ಯಂತನಲ್ಲಿಗೆ ಕಳುಹಿಸಿಕೊಡುತ್ತಾರೆ.
 
'''''ಐದನೆಯ ಅಂಕ'''''
 
ದುರ್ವಾಸರ ಶಾಪದ ಪ್ರಭಾವದಿಂದ ದುಷ್ಯಂತನಿಗೆ ಶಕುಂತಲೆಯ ನೆನಪೇ ಆಗದು. ಜ್ಞಾಪಿಸಲು ಮುಂದಾದ ಶಕುಂತಲೆಗೆ ಬೆರಳಲ್ಲಿದ್ದ ಉಂಗುರವು ಕಳೆದುಹೋದದ್ದರ ಅರಿವಾಗುತ್ತದೆ. ಬೇರೆ ಯಾವ ಪ್ರಯತ್ನವೂ ಫಲಕಾರಿಯಾಗುವದಿಲ್ಲ. ದುಷ್ಯಂತನಿಂದ ತಿರಸ್ಕೃತಳಾದ ಅವಳನ್ನು ಗೌತಮಿ ಮತ್ತು ಸಂಗಡಿಗರೂ ಪರಿತ್ಯಜಿಸಿ ಆಶ್ರಮಕ್ಕೆ ಮರಳುತ್ತಾರೆ. ಆಗ ಅವಳ ತಾಯಿಯು ಬಂದು ಅವಳನ್ನು ತನ್ನಲ್ಲಿಗೆ ಕರೆದೊಯ್ಯುತ್ತಾಳೆ.
'''''ಆರನೆಯ ಅಂಕ'''''
 
ಕಣ್ವಾಶ್ರಮದಿಂದ ದುಷ್ಯಂತನ ಅರಮನೆಗೆ ಬರುತ್ತಿರುವಾಗ ದಾರಿಯಲ್ಲಿ ಸಿಕ್ಕ ಶಚೀತೀರ್ಥಕ್ಕೆ ಶಕುಂತಲೆಯು ನಮಸ್ಕರಿಸುತ್ತಿದ್ದಾಗ ಅವಳ ಬೆರಳಿನಿಂದ ರಾಜನಿತ್ತ ಉಂಗುರವು ಜಾರಿ ಬಿದ್ದಿರುತ್ತದೆ. ಅದನ್ನು ಒಂದು ಮೀನು ನುಂಗಿದ್ದು, ಅದನ್ನು ಹಿಡಿದ ಬೆಸ್ತನೊಬ್ಬನು ಆ ಮೀನನ್ನು ಕತ್ತರಿಸಿದಾಗ ಉಂಗುರವು ಸಿಗುತ್ತದೆ. ಅದನ್ನು ಮಾರಲು ರಾಜಧಾನಿಯಲ್ಲಿ ಬೆಸ್ತನು ಪ್ರಯತ್ನಿಸುತ್ತಿದ್ದಾಗ ಅವನನ್ನು ಹಿಡಿದ ನಗರರಕ್ಷಕರು ಉಂಗುರವನ್ನು ದುಷ್ಯಂತನಿಗೆ ಕೊಡುವರು. ಅದನ್ನು ನೋಡುತ್ತಲೇ ದುರ್ವಾಸನ ಶಾಪ ವಿಮೋಚನೆಯಾಗಿ, ಅರಸನಿಗೆ ಶಕುಂತಲೆಯ ನೆನಪೆಲ್ಲಾ ಮರುಕಳಿಸುತ್ತದೆ. ತನ್ನ ಅಪರಾಧಕ್ಕೆ ಪಶ್ಚಾತ್ತಾಪ ಪಡುತ್ತಿರುವಾಗ, ತನ್ನನ್ನು ಪೀಡಿಸುತ್ತಿರುವ ರಾಕ್ಷಸರ ವಿರುದ್ಧ ಯುದ್ಧದಲ್ಲಿ ಸಹಾಯವನ್ನು ಯಾಚಿಸಿ [[ಇಂದ್ರ]]ನಿಂದ ಕರೆಬರುತ್ತದೆ. ದುಷ್ಯಂತನು [[ಸ್ವರ್ಗ]]ಕ್ಕೆ ತೆರಳುತ್ತಾನೆ.
 
'''''ಏಳನೆಯ ಅಂಕ'''''
ಯುದ್ಧದಲ್ಲಿ ಜಯವನ್ನು ಪಡೆದು, ಇಂದ್ರನಿಂದ ವಿಶೇಷವಾಗಿ ಸನ್ಮಾನಿತನಾದ ದುಷ್ಯಂತನು ಸ್ವರ್ಗದಿಂದ ಭೂಮಿಗೆ ಮರಳುತ್ತಿರುವಾಗ ನಡುವೆ ಹೇಮಕೂಟ ಪರ್ವತದಲ್ಲಿರುವ ಮಾರೀಚಾಶ್ರಮದಲ್ಲಿ ನಿಲ್ಲುವನು. ಅವನನ್ನು ಕರೆತಂದ ಇಂದ್ರಸಾರಥಿಯಾದ ಮಾತಲಿಯು, ಮಾರೀಚ ಮುನಿಗಳ ಸಮಯವನ್ನು ತಿಳಿದು ಬರಲು ಹೋಗುವನು. ಅಲ್ಲಿಯೇ ಅಶೋಕವೃಕ್ಷವೊಂದರಡಿಯಲ್ಲಿ ವಿಶ್ರಮಿಸುತ್ತಿದ್ದ ರಾಜನು [[ಸಿಂಹ]]ದ ಮರಿಯೊಂದಿಗೆ ಆಟವಾಡುತ್ತಿರುವ ಬಾಲಕನನ್ನು ನೋಡುವನು. ಅರಸನಿಗೆ ಆ ಹುಡುಗನಲ್ಲಿ ಮಮತೆಯೂ ಕುತೂಹಲವೂ ಉಂಟಾಗುತ್ತದೆ. ಕ್ರಮೇಣ ಅವನು ತನ್ನ ಮಗನೆಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಶಕುಂತಲೆಯನ್ನೂ ಕಾಣುತ್ತಾನೆ. ಮಾರೀಚಮಹರ್ಷಿಗಳ ಸಮ್ಮುಖದಲ್ಲಿ ದುಷ್ಯಂತ ಶಕುಂತಲೆಯರ ಪುನಸ್ಸಮಾಗಮವಾಗುತ್ತದೆ.
 
ಯುದ್ಧದಲ್ಲಿ ಜಯವನ್ನು ಪಡೆದು, ಇಂದ್ರನಿಂದ ವಿಶೇಷವಾಗಿ ಸನ್ಮಾನಿತನಾದ ದುಷ್ಯಂತನು ಸ್ವರ್ಗದಿಂದ ಭೂಮಿಗೆ ಮರಳುತ್ತಿರುವಾಗ ನಡುವೆ ಹೇಮಕೂಟ ಪರ್ವತದಲ್ಲಿರುವ ಮಾರೀಚಾಶ್ರಮದಲ್ಲಿ ನಿಲ್ಲುವನು. ಅವನನ್ನು ಕರೆತಂದ ಇಂದ್ರಸಾರಥಿಯಾದ ಮಾತಲಿಯು, ಮಾರೀಚ ಮುನಿಗಳ ಸಮಯವನ್ನು ತಿಳಿದು ಬರಲು ಹೋಗುವನು. ಅಲ್ಲಿಯೇ ಅಶೋಕವೃಕ್ಷವೊಂದರಡಿಯಲ್ಲಿ ವಿಶ್ರಮಿಸುತ್ತಿದ್ದ ರಾಜನು [[ಸಿಂಹ]]ದ ಮರಿಯೊಂದಿಗೆ ಆಟವಾಡುತ್ತಿರುವ ಬಾಲಕನನ್ನು ನೋಡುವನು. ಅರಸನಿಗೆ ಆ ಹುಡುಗನಲ್ಲಿ ಮಮತೆಯೂ ಕುತೂಹಲವೂ ಉಂಟಾಗುತ್ತದೆ. ಕ್ರಮೇಣ ಅವನು ತನ್ನ ಮಗನೆಂದು ಗೊತ್ತಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಶಕುಂತಲೆಯನ್ನೂ ಕಾಣುತ್ತಾನೆ. ಮಾರೀಚಮಹರ್ಷಿಗಳ ಸಮ್ಮುಖದಲ್ಲಿ ದುಷ್ಯಂತ ಶಕುಂತಲೆಯರ ಪುನಸ್ಸಮಾಗಮವಾಗುತ್ತದೆ.
 
===ಕತೆಯ ಮೂಲ===
*ಸಂಸ್ಕೃತ [[ಮಹಾಭಾರತ]]ದ [[ಆದಿಪರ್ವ]]ದ ಮೊದಲಲ್ಲಿ ಬರುವ ಶಕುಂತಳೋಪಾಖ್ಯಾನವು ಸುಕ್ತಂಕರ್ ಪರಿಷ್ಕರಣದಲ್ಲಿ ಎಂಟು ಅಧ್ಯಾಯಗಳ ಮುನ್ನೂರೈದು ಶ್ಲೋಕಗಳಲ್ಲಿ ನಿರೂಪಿತವಾಗಿದೆ<ref> ಅವಲೋಕನ, ಪುಟ ೮, ಎಚ್ ಎಮ್ ಶಂಕರನಾರಾಯಣರಾವ್, ಬಸವಪ್ಪಶಾಸ್ತ್ರೀ ವಿರಚಿತ ಕರ್ಣಾಟಕ ಶಾಕುಂತಲ ನಾಟಕಂ, ಪ್ರಕಾಶಕ: ಶಾರದಾ ಮಂದಿರ, ರಾಮಾ ಅಯ್ಯರ್ ರಸ್ತೆ, ಮೈಸೂರು, ಸಂಪಾದಿತ ಕೃತಿಯ ಮೊದಲ ಪ್ರಕಾಶನ: ೧೯೭೩</ref>. ಇದೇ ಕಾಳಿದಾಸನ ಅಭಿಜ್ಞಾನ ಶಾಕುಂತಲಕ್ಕೆ ಮೂಲವೆಂದು ಸಾಮಾನ್ಯ ಅಭಿಪ್ರಾಯ.